ಟಾಲಿವುಡ್ ಸ್ಟಾರ್ (Tollywood) ಮಹೇಶ್ ಬಾಬು (Mahesh Babu) ಮತ್ತು ಕೀರ್ತಿ ಸುರೇಶ್ (Keerthi Suresh) ನಟನೆಯ 'ಸರ್ಕಾರು ವಾರಿ ಪಾಟ' (Sarkaru Vaari Paata) ಸಿನಿಮಾಗೆ ಮೊದಲ ದಿನ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಾರ ಬಿಡುಗಡೆಯಾಗಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ (Most Excepted) ಸಿನಿಮಾಗಳಲ್ಲಿ 'ಸರ್ಕಾರು ವಾರಿ ಪಾಟ' ಕೂಡ ಒಂದು. ಟಾಲಿವುಡ್ ಸೂಪರ್‌ಸ್ಟಾರ್ (Tollywood Super) ಸಿನಿಮಾದ ಕಲೆಕ್ಷನ್ ಮೇಲೆ ಎಲ್ಲರೂ ಕಣ್ಣಿಟ್ಟಿದ್ದರು. ಆದರೆ, ಸಿನಿಮಾ ಉತ್ತಮ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿತ್ತು. ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರಲಿಲ್ಲ. ಮಹೇಶ್ ಬಾಬು ಯಾಕೆ ಈ ರೀತಿಯ ಸಿನಿಮಾ ಮಾಡಿದ್ದಾರೆ ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾ (Social Media) ದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಮಹೇಶ್ ಬಾಬು ಚೆನ್ನಾಗಿ ಅಭಿನಯಿಸಿದ್ದಾರೆ. ಸಿನಿಮಾ ಕಥೆ ಕೂಡ ಚೆನ್ನಾಗಿದೆ. ಆದರೆ, ಸ್ಕ್ರೀನ್ ಪ್ಲೇಯಲ್ಲಿ ಎಡವಿದ್ದಾರೆ.
ಮೊದಲ ದಿನ 36.01 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ!
ಸೂಪರ್ ಸ್ಟಾರ್ ಮಹೇಶ್ ಬಾಬು ತುಂಬಾ ದಿನಗಳ ನಂತರ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ್ದಾರೆ. ಹಾಗಿದ್ರೆ ಸರ್ಕಾರು ವಾರಿ ಪಟ ಸಿನಿಮಾ ಮೊದಲ ದಿನ ಗಳಿಸಿದೆಷ್ಟು? ಮುಂದೆ ಇದೆ ನೋಡಿ..ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಸಿನಿಮಾ 36.01 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಇದೀಗ ಈ ಸಿನಿಮಾ ಯಾವಾಗ ಒಟಿಟಿಯಲ್ಲಿ ಬರುತ್ತೆ ಎಂದು ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಅದಕ್ಕೆ ಉತ್ತರ ಕೂಡ ಸಿಕ್ಕಿದೆ. ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಸಿನಿಮಾ ಯಾವಾಗ ಒಟಿಟಿಗೆ ಬರುತ್ತಿದೆ ಅಂತ ಮುಂದೆ ಇದೆ ನೋಡಿ..
ಜೂನ್ ತಿಂಗಳಲ್ಲಿ ಒಟಿಟಿಯಲ್ಲಿ ಸಿನಿಮಾ ರಿಲೀಸ್!
ಸಿನಿಮಾದಲ್ಲಿ ನೆಗೆಟಿವ್ ಅಂಶಗಳೇ ಜಾಸ್ತಿ ಇವೆ ಎಂಬ ಮಾತು ಕೇಳಿಬಂದರೂ ಕೂಡ ಸಿನಿಮಾ ತಂಡ ಸಕ್ಸಸ್ ಪಾರ್ಟಿ ಮಾಡಿ ಟ್ರೋಲ್ಗೆ ಒಳಗಾಗಿತ್ತು. ಜೂನ್ 10 ಅಥವಾ ಜೂನ್ 24ರಂದು 'ಸರ್ಕಾರು ವಾರಿ ಪಾಟ' ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂಬ ಮಾಹಿತಿ ದೊರೆತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಈ ಹಿಂದೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅವರನ್ನು ಹಾಕಿಕೊಂಡು 'ಗೀತ ಗೋವಿಂದಂ'ನಂತಹ ಭರ್ಜರಿ ಹಿಟ್ ಸಿನಿಮಾವನ್ನು ನೀಡಿದ್ದ ನಿರ್ದೇಶಕ ಪರಶುರಾಮ್, ಇದೇ ಮೊದಲ ಬಾರಿಗೆ ಮಹೇಶ್ ಬಾಬು ಜೊತೆಗೆ ಕೆಲಸ ಮಾಡಿದ್ದರು.
ಇದನ್ನೂ ಓದಿ: ಇದಪ್ಪಾ ವರಸೆ ಅಂದ್ರೆ, ಈ ಸ್ಟಾರ್ ನಟನನ್ನೇ ಮದ್ವೆಯಾಗ್ಬೇಕು ಅಂತ ಗಲಾಟೆ ಮಾಡಿದ ನಟಿ!
ಸರ್ಕಾರು ವಾರಿ ಪಾಟ ಅಮೇಜಾನ್ ಪ್ರೈಮ್ ಪಾಲು!
ಬಹುತೇಕ ಜೂನ್ 10ರಂದೇ ಅಮೇಜಾನ್ ಪ್ರೈಮ್ನಲ್ಲಿ ಸರ್ಕಾರು ವಾರಿ ಪಾಟ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಕೀರ್ತಿ ಸುರೇಶ್ ಈ ಸಿನಿಮಾ ಮೂಲಕ ಗೆಲುವಿನ ನಗೆ ಬೀರಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳಿಕೊಂಡಿದ್ದರು. ಚಿತ್ರತಂಡ ಹೇಳುತ್ತಿರುವ ಕಲೆಕ್ಷನ್ ರಿಪೋರ್ಟ್ ನಕಲಿ ಎಂದು ವಾದ ಮಾಡುತ್ತಿದ್ದಾರೆ ನೆಟ್ಟಿಗರು. 'ಇದು ಸರ್ಕಾರು ವಾರಿ ಪಾಟ ಅಲ್ಲ, ಸರ್ಕಾರು ವಾರಿ ಫೇಕ್..' ಎನ್ನುತ್ತಿದ್ದಾರೆ.
ಇದನ್ನೂ ಓದಿ: IPL Final ಪಂದ್ಯದಲ್ಲೂ ರಾಕಿ ಭಾಯ್ ಹವಾ! ಕೆಜಿಎಫ್ 2 ಸಾಂಗ್‌ಗೆ ರಣವೀರ್ ಸಿಂಗ್ ಸಖತ್ ಸ್ಟೆಪ್
'ಸರ್ಕಾರು ವಾರಿ ಪಾಟ' ಮೊದಲರ್ಧ ಸಖತ್ ಇಷ್ಟಪಡುವ ಆಡಿಯೆನ್ಸ್‌ಗೆ ಸೆಕೆಂಡ್ ಹಾಫ್ ಅಷ್ಟು ಇಷ್ಟವಾಗಿಲ್ಲ. ಸಖತ್ ಬೋರ್ ಆಗುತ್ತದೆ ಎಂದು ಕೆಲವರು ಹೇಳಿದ್ದಾರೆ. ಫ್ಯಾನ್ಸ್‌ಗೆ ಇಷ್ಟವಾಗಬಹುದೇನೋ, ಆದರೆ ಸಿನಿಪ್ರೇಕ್ಷಕರಿಗೆ ಅಷ್ಟಕ್ಕಷ್ಟೇ ಎಂಬ ಉತ್ತರ ಸಿಕ್ಕಿತ್ತ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ