Mahesh Babu: 30 ವರ್ಷಗಳ ಹಿಂದೆ ಟಾಲಿವುಡ್​ ಪ್ರಿನ್ಸ್​: ಮಹೇಶ್ ಬಾಬು ಬಾಲ್ಯದ ಫೋಟೋ ಈಗ ವೈರಲ್​..!

Vijayashanthi: ಸರಿಲೇರು ನೀಕೆ್ವರು ಸಿನಿಮಾದ ಮೂಲಕ ಲೇಡಿ ಅಮಿತಾಭ್​ ವಿಜಯಶಾಂತಿ ಮತ್ತೆ ಸಿನಿಮಾಗೆ ರೀಎಂಟ್ರಿ ಕೊಡುತ್ತಿದ್ದಾರೆ. 30 ವರ್ಷಗಳ ಬಳಿಕ ಮಹೇಶ್ ಬಾಬು ಈ ಚಿತ್ರದಲ್ಲಿ ವಿಜಯಶಾಂತಿ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತಾಗಿ ಪ್ರಿನ್ಸ್​ ಮಾಡಿರುವ ಆಸಕ್ತಿಕರ ಟ್ವೀಟ್​ ಇಲ್ಲಿದೆ.

Anitha E | news18-kannada
Updated:September 13, 2019, 8:26 AM IST
Mahesh Babu: 30 ವರ್ಷಗಳ ಹಿಂದೆ ಟಾಲಿವುಡ್​ ಪ್ರಿನ್ಸ್​: ಮಹೇಶ್ ಬಾಬು ಬಾಲ್ಯದ ಫೋಟೋ ಈಗ ವೈರಲ್​..!
30 ವರ್ಷಗಳ ಹಿಂದೆ ನಟಿ ವಿಜಯಶಾಂತಿ ಅವರೊಂದಿಗೆ ಮಹೇಶ್ ಬಾಬು ತೆಗೆಸಿಕೊಂಡ ಫೋಟೋ
  • Share this:
ಈ ವರ್ಷ 'ಮಹರ್ಷಿ' ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ನಟ ಮಹೇಶ್​ ಬಾಬು ಸದ್ಯ ಮತ್ತೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅನಿಲ್​ ರಾವಿಪುಡಿ ನಿರ್ದೇಶನದ 'ಸರಿಲೇರು ನಿಕೆವ್ವರು' ಸಿನಿಮಾದಲ್ಲಿ ಮಹೇಶ್ ​ಸೇನಾಧಿಕಾರಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ವಿಶೇಷತೆ ಅಂದರೆ ವಿಜಯಶಾಂತಿ.

ಹೌದು, ಈ ಸಿನಿಮಾ ಮೂಲಕ ಮತ್ತೆ ಟಾಲಿವುಡ್​ ಲೇಡಿ ಅಮಿತಾಭ್​ ವಿಜಯಶಾಂತಿ ಸಿನಿಮಾಗೆ ಮರಳುತ್ತಿದ್ದಾರೆ. ಅದರಲ್ಲೂ ಮಹೇಶ್​ ಬಾಬು ಹಾಗೂ ವಿಜಯಶಾಂತಿ ತೆರೆ ಹಂಚಿಕೊಳ್ಳುತ್ತಿರುವುದು ಈ ಚಿತ್ರದ ಹೈಲೈಟ್​.

happy birthday mahesh babu upcoming film sarileru neekevvaru first look release today
'ಸರಿಲೇರು ನಿಕೆವ್ವರು' ಚಿತ್ರದಲ್ಲಿ ಮಹೇಶ್​ ಬಾಬು


ಇತ್ತೀಚೆಗಷ್ಟೆ ನಟಿ ವಿಜಯಶಾಂತಿ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಪ್ರಿನ್ಸ್​ ಟ್ವಿಟರ್​ನಲ್ಲಿ ವಿಜಯಶಾಂತಿ ಅವರ ಕುರಿತಾಗಿ ಒಂದು ಟ್ವೀಟ್​ ಮಾಡಿದ್ದಾರೆ. 30 ವರ್ಷಗಳ ನಂತರ ನಾನು ಮತ್ತೆ ವಿಜಯಶಾಂತಿ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.



ಅಷ್ಟೇ ಅಲ್ಲ ಅವರೊಂದಿಗೆ 30 ವರ್ಷಗಳ ಹಿಂದೆ ತೆಗೆಸಿಕೊಂಡಿದ್ದ ಚಿತ್ರವನ್ನೂ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. 30 ವರ್ಷಗಳ ಹಿಂದೆ 'ಕೊಡುಕು ದಿದ್ದಿನ ಕಾಪುರಂ' ಸಿನಿಮಾದಲ್ಲಿ ಮಹೇಶ್​ ಹಾಗೂ ವಿಜಯಶಾಂತಿ ತಾಯಿ ಮಗನಾಗಿ ಅಭಿನಯಿಸಿದ್ದರು.

ಇದನ್ನೂ ಓದಿ: Kichcha Sudeep: ತಾಳ್ಮೆ ಕಳೆದುಕೊಳ್ಳದ ಕಿಚ್ಚ ಸುದೀಪ್ ಟಾಲಿವುಡ್​ ಡಾರ್ಲಿಂಗ್​ ಬಗ್ಗೆ ಹೀಗೆ ಟ್ವೀಟ್​ ಮಾಡಿದ್ದೇಕೆ​..!

ಮಹೇಶ್​ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ವಿಜಯಶಾಂತಿ, ವರ್ಷಗಳೇ ಕಳೆದರೂ, ಮಹೇಶ್​ ಅವರ ಗುಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರ ಹೃದಯ ತುಂಬಾ ಕ್ಯೂಟ್​ ಆಗಿದೆ ಎಂದು ಹೊಗಳಿಕೆಗಳ ಸುರಿಮಳೆ ಗೈದಿದ್ದಾರೆ.



ಇನ್ನು ವಿಜಯಶಾಂತಿ ಅವರು 1989ರಲ್ಲಿ ಮಹೇಶ್​ ಜತೆ ತೆರೆ ಹಂಚಿಕೊಳ್ಳುವ ಮೊದಲೇ 1980ರಲ್ಲಿ ವಿಜಯ ನಿರ್ಮಲಾ ನಿರ್ದೇಶನದಲ್ಲಿ ಮಹೇಶ್ ತಂದೆ ಕೃಷ್ಣಾ ಅವರೊಂದಿಗೆ ಸಿನಿಮಾ ಮಾಡುವ ಮೂಲಕ ಸಿನಿ ಜೀವನಕ್ಕೆ ಕಾಲಿಟ್ಟಿದ್ದರಂತೆ. 'ಕಿಲಾಡಿ ಕೃಷ್ಣುಡು' ಸಿನಿಮಾ ಮೂಲಕ ವಿಜಯಶಾಂತಿ ತಮ್ಮ ಸಿನಿ ವೃತ್ತಿ ಆರಂಭಿಸಿದ್ದರಂತೆ. ಇದು ಅವರ ಜೀವನದ ದೊಡ್ಡ ಅಮೂಲ್ಯವಾದ ಸಂಪತ್ತು ಎಂದು ವಿಜಯಶಾಂತಿ ಬರೆದುಕೊಂಡಿದ್ದಾರೆ.

ಇನ್ನು 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಮಹೇಶ್​ ಬಾಬು ಸೇನಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದರೆ, ಅವರಿಗೆ ಜೊತೆಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಇನ್ನು ವಿಜಯಶಾಂತಿ ಅವರು ಮೆಡಿಕಲ್​ ಕಾಲೇಜಿನ ಪ್ರೊಫೆಸರ್​ ಪಾತ್ರಕ್ಕೆ ಜೀವತುಂಬಲಿದ್ದಾರೆ ಎನ್ನಲಾಗುತ್ತಿದೆ.

Radhika Apte: ರಾಧಿಕಾ ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸಲು ಇದೇ ಕಾರಣವಂತೆ..!


First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...