Mahesh Babu: ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾದ ಮಹೇಶ್ ಬಾಬು... ನೀವು ನಿಜವಾಗಲೂ ಹೀರೋ ಸರ್​..!

ಶಸ್ತ್ರಚಿಕಿತ್ಸೆಯ ನಂತರ ಕೂಡ ಮಕ್ಕಳ ಆರೈಕೆಗಾಗಿ ತಾವೇ ಸ್ವತಃ ಹಣವನ್ನು ನೀಡುವ ಮಹೇಶ್ ಬಾಬು ಮಕ್ಕಳು ಸುರಕ್ಷಿತರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.

ಸೂಪರ್ ಸ್ಟಾರ್ ಮಹೇಶ್ ಬಾಬು

ಸೂಪರ್ ಸ್ಟಾರ್ ಮಹೇಶ್ ಬಾಬು

  • Share this:
ಸಿನಿ ರಂಗದಲ್ಲಿ (Film Industry) ಅದೆಷ್ಟೋ ಸ್ಟಾರ್ ನಟರು ಹೆಸರು ಕೀರ್ತಿ ಸಂಪಾದಿಸಿ ಸ್ಟಾರ್ ಪಟ್ಟವನ್ನು ಅಲಂಕರಿಸಿದ್ದರೂ ಸಮಾಜ ಕಲ್ಯಾಣ (Social Welfare) ಕಾರ್ಯಗಳಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಕನ್ನಡ ಸಿನಿ ರಂಗವನ್ನೇ ತೆಗೆದುಕೊಳ್ಳುವುದಾದರೆ ದಿ. ಪುನೀತ್ ರಾಜ್‌ ಕುಮಾರ್, (Puneeth rajkumar) ಶಿವರಾಜ್‌ಕುಮಾರ್, (Shivrajkumar) ಯಶ್ ಹೀಗೆ ಅನೇಕ ನಟರು ಮಕ್ಕಳ, ಹಿರಿಯ ನಾಗರಿಕರ ಹಾಗೂ ಬಡ ಜನರ ಕಲ್ಯಾಣಕ್ಕಾಗಿ ಅನೇಕ ಸೇವಾ ಸಂಸ್ಥೆಗಳನ್ನು (Organizations) ನಿರ್ಮಿಸಿದ್ದಾರೆ.

ಪುಟ್ಟ ಕಂದನ ಶಸ್ತ್ರಚಿಕಿತ್ಸೆಗೆ ನೆರವಾದ ಮಹೇಶ್ ಬಾಬು:
ಇದೀಗ ಟಾಲಿವುಡ್‌ನ ಸೂಪರ್ ಸ್ಟಾರ್ ಮಹೇಶ್ ಬಾಬು ಬರೇ ಸಿನಿ ರಂಗದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಸೂಪರ್ ಸ್ಟಾರ್ ಆಗಿದ್ದಾರೆ. ಸಿನಿಮಾದಲ್ಲಿ ತಮ್ಮ ಸುಂದರ ನೋಟ ಹಾಗೂ ಮಾಸ್ ಸ್ಟೈಲ್‌ನಿಂದ ಅಭಿಮಾನಿ ಬಳಗವನ್ನೇ ಸಂಪಾದಿಸಿಕೊಂಡಿರುವ ಮಹೇಶ್ ಬಾಬು ನಿಜ ಜೀವನದಲ್ಲಿ ಕೂಡ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ನೀವು ನಂಬಲೇಬೇಕು.

ಹೌದು ತೆರೆಮರೆಯಲ್ಲಿಯೇ ಸಮಾಜ ಸೇವೆಗಳನ್ನು ನಡೆಸುತ್ತಿರುವ ಮಹೇಶ್ ಬಾಬು ಹಾಗೂ ಅವರ ಪತ್ನಿ ನಮ್ರತಾ ಶಿರೋಡ್ಕರ್ ಆಶ್ರಮಗಳು, ಶಾಲೆಗಳನ್ನು ನಡೆಸುತ್ತಿದ್ದಾರೆ ಅಂತೆಯೇ ಸಾಕಷ್ಟು ಬಡವರು ಹಾಗೂ ನಿರಾಶ್ರಿತರ ನೆರವಿಗೆ ಮಹೇಶ್ ಬಾಬು ಮುಂದಾಗಿದ್ದಾರೆ. ಇದೀಗ ಬಂದ ಸುದ್ದಿಯಂತೆ ಮಹೇಶ್ ಬಾಬು ಒಂದು ತಿಂಗಳ ಮಗುವಿನ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ತಾವೇ ಭರಿಸಿದ್ದು ಮಗುವಿನ ಪ್ರಾಣ ಕಾಪಾಡಿದ್ದಾರೆ.

ಇದನ್ನೂ ಓದಿ: Private Jet: ಯಾವ್ಯಾವ ನಟರ ಬಳಿ ಪ್ರೈವೇಟ್​ ಜೆಟ್​ ಇದೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್​ ಡಿಟೇಲ್ಸ್​!

ಮಾಹಿತಿ ಹಂಚಿಕೊಂಡ ಪತ್ನಿ ನಮೃತಾ ಶಿರೋಡ್ಕರ್:
ಒಂದು ತಿಂಗಳ ಮಗುವಿಗೆ ತುರ್ತು ಸಂಕೀರ್ಣ ಹೃದಯದ ಶಸ್ತ್ರಚಿಕಿತ್ಸೆಯಾಗಿರುವ ಆಟ್ರಿಯಲ್ ಸ್ವಿಚ್‌ಗೆ ಒಳಗಾಗಬೇಕಾಗಿದ್ದು ಮಹೇಶ್ ಬಾಬು ಮಗುವಿನ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ. ಮಗುವಿನ ಆರೋಗ್ಯ ಇದೀಗ ಸ್ಥಿರವಾಗಿದ್ದು ಮಗು ಮನೆಗೆ ಮರಳಿದೆ ಎಂಬುದಾಗಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಮಹೇಶ್ ಬಾಬು ಅವರ ಪತ್ನಿ ನಮೃತಾ ಶಿರೋಡ್ಕರ್ ಈ ಕುರಿತು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. ಮಗು ಹಾಗೂ ಪೋಷಕರ ಚಿತ್ರವನ್ನು ನಟಿ ಹಂಚಿಕೊಂಡಿದ್ದು ಮಗುವಿನ ಹೆಸರು ಸಿರಿಶಾ ಎಂದಾಗಿದ್ದು ಆಂಧ್ರ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು ಮಗುವಿನ ಪ್ರಾಣ ಉಳಿಸಿದ್ದಾರೆ ಎಂದು ನಟಿ ಬರೆದುಕೊಂಡಿದ್ದಾರೆ.

1000 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಳ ವೆಚ್ಚಭರಿಸಿದ ನಟ:
ಮಹೇಶ್ ಬಾಬು 1000 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಳ ವೆಚ್ಚವನ್ನು ತಾವೇ ಭರಿಸಿದ್ದು ಮಕ್ಕಳ ಜೀವ ಉಳಿಸಿದ್ದಾರೆ. 45 ರ ಹರೆಯದ ನಟ ಲಿಟಲ್ ಹಾರ್ಟ್ಸ್ ಫೌಂಡೇಶನ್ ಮತ್ತು ಆಂಧ್ರ ಆಸ್ಪತ್ರೆಗಳೊಂದಿಗೆ ಸಹಭಾಗಿತ್ವದಲ್ಲಿ ಗಂಭೀರ ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಸಾವಿರಾರು ಪುಟ್ಟ ಮಕ್ಕಳ ಚಿಕಿತ್ಸೆಗಳನ್ನು ತಾವೇ ಭರಿಸಿದ್ದು ಅವರ ಉಳಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ಕೂಡ ಮಕ್ಕಳ ಆರೈಕೆಗಾಗಿ ತಾವೇ ಸ್ವತಃ ಹಣವನ್ನು ನೀಡುವ ಮಹೇಶ್ ಬಾಬು ಮಕ್ಕಳು ಸುರಕ್ಷಿತರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ನಿಸ್ಸಂದೇಹವಾಗಿ ನಿಸ್ವಾರ್ಥ ಹೃದಯವನ್ನು ಹೊಂದಿರುವ ಮಹೇಶ್ ಬಾಬು ಕೊನೆಯದಾಗಿ ಸರಿಲೇರು ನೀಕೆವರು ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದನ್ನು ಎಫ್‌2 ಖ್ಯಾತಿಯ ಅನಿಲ್ ರವಿಪುಡಿ ನಿರ್ದೇಶಿಸಿದ್ದರು.

ಇದನ್ನೂ ಓದಿ: Mahesh Babuಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಈ ಖ್ಯಾತ ಡೈರೆಕ್ಟರ್​? ಯಾರು ಗೊತ್ತಾ?

ಪ್ರಸ್ತುತ ಹೊಸ ಹೊಸ ಚಿತ್ರಗಳಲ್ಲಿ ಕೂಡ ಕಾರ್ಯನಿರತರಾಗಿರುವ ಮಹೇಶ್ ಬಾಬು ‘ಗೀತ ಗೋವಿಂದಂ’ ಚಿತ್ರ ಖ್ಯಾತಿಯ ಪರಶುರಾಮ್ ನಿರ್ದೇಶನದ ಬಹು ನಿರೀಕ್ಷಿತ ಬಿಗ್ ಬಜೆಟ್ ಚಿತ್ರವಾದ ‘ಸರಕಾರು ವಾರಿ ಪಾಠ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಮೊದಲ ಭಾಗವನ್ನು ಸುಮಾರು ಒಂದು ತಿಂಗಳ ಕಾಲ ದುಬೈನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ನಾಯಕಿಯಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇಷ್ಟೇ ಅಲ್ಲದೆ ಮಹೇಶ್ ಬಾಬು ಕೈಯಲ್ಲಿ ಹಲವಾರು ಚಿತ್ರಗಳಿದ್ದು ಖ್ಯಾತ ಚಿತ್ರ ನಿರ್ದೇಶಕರಾದ ತ್ರಿವಿಕ್ರಮ ಶ್ರೀನಿವಾಸ್ ಹಾಗೂ ರಾಜಮೌಳಿಯವರ ಹಲವಾರು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಪ್ರಸ್ತುತ ನಟ ಕೋವಿಡ್ ಪಾಸಿಟಿವ್‌ನಿಂದ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.
Published by:vanithasanjevani vanithasanjevani
First published: