ಟಾಲಿವುಡ್ ಸ್ಟಾರ್ (Tollywood) ಮಹೇಶ್ ಬಾಬು (Mahesh Babu) ಮತ್ತು ಕೀರ್ತಿ ಸುರೇಶ್ (Keerthi Suresh) ನಟನೆಯ 'ಸರ್ಕಾರು ವಾರಿ ಪಾಟ' (Sarkaru Vaari Paata) ಸಿನಿಮಾಗೆ ಮೊದಲ ದಿನ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಾರ ಬಿಡುಗಡೆಯಾಗಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ (Most Excepted) ಸಿನಿಮಾಗಳಲ್ಲಿ 'ಸರ್ಕಾರು ವಾರಿ ಪಾಟ' ಕೂಡ ಒಂದು. ಟಾಲಿವುಡ್ ಸೂಪರ್‌ಸ್ಟಾರ್ (Tollywood Super) ಸಿನಿಮಾದ ಕಲೆಕ್ಷನ್ ಮೇಲೆ ಎಲ್ಲರೂ ಕಣ್ಣಿಟ್ಟಿದ್ದರು. ಮಹೇಶ್ ಬಾಬು ಅವರ ಬಾಲಿವುಡ್ (Bollywood) ಹೇಳಿಕೆಯ ಬಳಿಕ ತೆರಿಗೆ ಬಂದ ಬಂದ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಹಿಂದಿ ಮಂದಿಯನ್ನು ಕೆರಳಿಸಿದ್ದ ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟ ಸಿನಿಮಾ ಹೇಗಿರಲಿದೆ, ಪ್ರೇಕ್ಷಕರ ಪ್ರತಿಕ್ರಿಯೆ ಏನು, ಎಂದು ಕಾತರದಿಂದ ಕಾಯುತ್ತಿದ್ದರು. ಮೊದಲ ದಿನ ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ.
ಸರ್ಕಾರು ವಾರಿ ಪಾಟ ಮೊದಲ ದಿನ ಗಳಿಸಿದ್ದೆಷ್ಟು?
ಸೂಪರ್ ಸ್ಟಾರ್ ಮಹೇಶ್ ಬಾಬು ತುಂಬಾ ದಿನಗಳ ನಂತರ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ್ದಾರೆ. ಹಾಗಿದ್ರೆ ಸರ್ಕಾರು ವಾರಿ ಪಟ ಸಿನಿಮಾ ಮೊದಲ ದಿನ ಗಳಿಸಿದೆಷ್ಟು? ಮುಂದೆ ಇದೆ ನೋಡಿ..ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಸಿನಿಮಾ 36.01 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ನೀಡಿರುವ ಮಾಹಿತಿ ಪ್ರಕಾರ ಆಂಧ್ರಪ್ರದೇಶದಲ್ಲಿ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ ಎಂದಿದ್ದಾರೆ. ಚಿತ್ರತಂಡವೇ ಅಧಿಕೃತವಾಗಿ ಹೇಳಿರುವ ಪ್ರಕಾರ, 'ಸರ್ಕಾರು ವಾರಿ ಪಾಟ' ಮೊದಲ ದಿನ ವಿಶ್ವಾದ್ಯಂತ ಬರೋಬ್ಬರಿ 75 ಕೋಟಿ ರೂ. ಗಳಿಕೆ ಮಾಡಿದ್ಯಂತೆ.
ಆದ್ರೆ ನೆಟ್ಟಿಗರು ಹೇಳೋದು ಬೇರೆ!
ಸರ್ಕಾರು ವಾರಿ ಪಾಟ ಸಿನಿಮಾ ನಿರ್ದೇಶಕ ಪರಶುರಾಮ್ ಸಾರಥ್ಯದಲ್ಲಿ ಮೂಡಿಬಂದಿದೆ. ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಕೀರ್ತಿ ಸುರೇಶ್ ಈ ಸಿನಿಮಾ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಚಿತ್ರತಂಡ ಹೇಳುತ್ತಿರುವ ಕಲೆಕ್ಷನ್ ರಿಪೋರ್ಟ್ ನಕಲಿ ಎಂದು ವಾದ ಮಾಡುತ್ತಿದ್ದಾರೆ ನೆಟ್ಟಿಗರು. 'ಇದು ಸರ್ಕಾರು ವಾರಿ ಪಾಟ ಅಲ್ಲ, ಸರ್ಕಾರು ವಾರಿ ಫೇಕ್..' ಎನ್ನುತ್ತಿದ್ದಾರೆ.
ಇದನ್ನೂ ಓದಿ: ಮನೆಯಲ್ಲೇ ಕೂತು ನೋಡಿ 'ಆರ್ಆರ್ಆರ್'! ತಾರಕ್ ಹುಟ್ಟುಹಬ್ಬದ ದಿನವೇ ಒಟಿಟಿಗೆ ಎಂಟ್ರಿ
ಸೆಕೆಂಡ್ ಹಾಫ್ ಸಿಕ್ಕಾಪಟ್ಟೆ ಸ್ಲೋ ಎಂದ ವಿಮರ್ಶಕರು!
'ಸರ್ಕಾರು ವಾರಿ ಪಾಟ' ಮೊದಲರ್ಧ ಸಖತ್ ಇಷ್ಟಪಡುವ ಆಡಿಯೆನ್ಸ್‌ಗೆ ಸೆಕೆಂಡ್ ಹಾಫ್ ಅಷ್ಟು ಇಷ್ಟವಾಗಿಲ್ಲ. ಸಖತ್ ಬೋರ್ ಆಗುತ್ತದೆ ಎಂದು ಕೆಲವರು ಹೇಳಿದ್ದಾರೆ. ಫ್ಯಾನ್ಸ್‌ಗೆ ಇಷ್ಟವಾಗಬಹುದೇನೋ, ಆದರೆ ಸಿನಿಪ್ರೇಕ್ಷಕರಿಗೆ ಅಷ್ಟಕ್ಕಷ್ಟೇ ಎಂಬ ಉತ್ತರ ಸಿಕ್ಕಿದೆ. ಅಲ್ಲದೆ, ಕೆಲವು ಕಡೆ ಪ್ರೇಕ್ಷಕರ ಸಂಖ್ಯೆ ಮೊದಲ ದಿನವೇ ಕಡಿಮೆ ಇತ್ತು. ಆದ್ದರಿಂದ ಇದು ಫೇಕ್ ರಿಪೋರ್ಟ್ ಅಂತ ಟ್ವೀಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Bollywood ಗೆ ನನ್ನ ಮೆಂಟೈನ್ ಮಾಡೋ ಅಷ್ಟು ಕೆಪಾಸಿಟಿ ಇಲ್ಲ! ಟೈಮ್ ವೇಸ್ಟ್ ಮಾಡಲ್ಲ ಎಂದ ತೆಲುಗು ಸೂಪರ್ ಸ್ಟಾರ್
ಬಾಲಿವುಡ್ಗೆ ನನ್ನ ಮೆಂಟೈನ್ ಕೆಪಾಸಿಟಿ ಇಲ್ಲ ಎಂದ ನಟ!
'ಬಾಲಿವುಡ್ ಸಿನಿಮಾಗಳಿಂದ ನನಗೆ ತುಂಬಾ ಆಫರ್‌ಗಳು ಬರುತ್ತಿದೆ. ಆದರೆ, ಅವರಿಗೆ ನನಗೆ ಸಂಭಾವನೆ ಕೊಡುವ ಕೆಪಾಸಿಟಿ ಇಲ್ಲ. ನನ್ನ ಖರೀದಿ ಮಾಡಲು ಅವರ ಬಳಿ ಹಣವಿಲ್ಲ ಎಂದು ನನಗೆ ಅನಿಸುತ್ತದೆ. ಹೀಗಾಗಿ ಸುಮ್ಮನೆ ಕಾದು ಸಮಯ ವ್ಯರ್ಥ ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಎಲ್ಲವೂ ಸಿಗುತ್ತಿದೆ. ಇಲ್ಲಿನ ಅಭಿಮಾನಿಗಳ ಪ್ರೀತಿ ನನಗೆ ದೊಡ್ಡದು. ಸದಾ ಸಿನಿಮಾ ಮಾಡಬೇಕು ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಅಷ್ಟೇ ನನ್ನ ಗುರಿ. ನನ್ನ ಕನಸು ನನಸು ಆಗುತ್ತಿದೆ ಇದಕ್ಕಿಂತ ಸಂತೋಷ ಬೇಕಾ?'ಎಂದು ಮಹೇಶ್ ಬಾಬು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ