Rashmika Mandanna: ಸಿನಿಮಾ ಆರಂಭಕ್ಕೂ ಮೊದಲೇ ಕೋಟಿಗೆ ಮಾರಾಟವಾಯ್ತು ರಶ್ಮಿಕಾರ ಚಿತ್ರದ ಪ್ರಸಾರ ಹಕ್ಕು​

ಗೀತ ಗೋವಿಂದಂ ಸಿನಿಮಾ ಹಿಟ್​ ಆದ ನಂತರ ಮತ್ತೆ ವಿಜಯ್​ ದೇವರಕೊಂಡ ಜತೆಗೆ ಡಿಯರ್​ ಕಾಮ್ರೆಡ್​ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳು ತೆರೆಗಪ್ಪಳಿಸಲಿದೆ. ಹೀಗಿರುವಾಗಲೇ ರಶ್ಮಿಕಾಗೆ ಪ್ರಿನ್ಸ್​ ಮಹೇಶ್​ ಬಾಬು ಜತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು, ಆ ಸಿನಿಮಾದ ಟಿವಿ ರೈಟ್ಸ್​ ಈಗಾಗಲೇ ಕೋಟಿ ಕೋಟಿಗೆ ಮಾರಾಟ ವಾಗಿದೆ. 

Anitha E | news18
Updated:June 28, 2019, 1:45 PM IST
Rashmika Mandanna: ಸಿನಿಮಾ ಆರಂಭಕ್ಕೂ ಮೊದಲೇ ಕೋಟಿಗೆ ಮಾರಾಟವಾಯ್ತು ರಶ್ಮಿಕಾರ ಚಿತ್ರದ ಪ್ರಸಾರ ಹಕ್ಕು​
ಪ್ರಿನ್ಸ್​ ಮಹೇಶ್​ ಬಾಬು ಹಾಗೂ ರಶ್ಮಿಕಾ ಮಂದಣ್ಣ
  • News18
  • Last Updated: June 28, 2019, 1:45 PM IST
  • Share this:
ರಶ್ಮಿಕಾ ಮಂದಣ್ಣ ಒಂಥರಾ ಲಕ್ಕಿ ಸ್ಟಾರ್​ ಎಂದರೆ ತಪ್ಪಾಗದು. ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಗೆ ಅವರು ಮಾಡಿದ ಸಿನಿಮಾಗಳಲ್ಲಿ ನೆಲಕಚ್ಚಿದ ಚಿತ್ರಗಳು ಇಲ್ಲ ಎನ್ನಬಹುದು. ಈಗ ರಶ್ಮಿಕಾರ ಲಕ್​ ಬಗ್ಗೆ ಮಾತು ಎಕೆ ಅಂತೀರಾ..? ಇಲ್ಲಿದೆ ಆಸಕ್ತಿಕರ ವಿಷಯ ಓದಿ...

ಕನ್ನಡದಲ್ಲಿ 'ಕಿರಿಕ್​ ಪಾರ್ಟಿ' ಸಿನಿಮಾದ ಮೂಲಕ ರಂಗೀನ್​ ದುನಿಯಾಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಚಲೋ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ನೆಲೆ ಕಂಡುಕೊಂಡರು. ಮಾಡಿದ್ದು ಒಂದೇ ಸಿನಿಮಾ ಎನ್ನುವ ಹೊತ್ತಿಗೆ ಸಾಲು ಸಾಲು ಸಿನಿಮಾಗಳ ಆಫರ್​ ಅವರ ಕೈ ಸೇರಿತ್ತು. ಅದರಂತೆ ಒಂದರ ಹಿಂದೆ ಒಂದರಂತೆ ಅವರ ಸಿನಿಮಾಗಳು ಹಿಟ್​ ಸಹ ಆಗಿತ್ತು.

Rashmika mandanna and Maheshbabu
ರಶ್ಮಿಕಾ ಮಂದಣ್ಣ ಹಾಗೂ ಪ್ರಿನ್ಸ್​ ಮಹೇಶ್​ ಬಾಬು


'ಗೀತ ಗೋವಿಂದಂ' ಸಿನಿಮಾ ಹಿಟ್​ ಆದ ನಂತರ ಮತ್ತೆ ವಿಜಯ್​ ದೇವರಕೊಂಡ ಜತೆಗೆ 'ಡಿಯರ್​ ಕಾಮ್ರೆಡ್​' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳು ತೆರೆಗಪ್ಪಳಿಸಲಿದೆ. ಹೀಗಿರುವಾಗಲೇ ರಶ್ಮಿಕಾಗೆ ಪ್ರಿನ್ಸ್​ ಮಹೇಶ್​ ಬಾಬು ಜತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು, ಆ ಸಿನಿಮಾದ ಟಿವಿ ರೈಟ್ಸ್​ ಈಗಾಗಲೇ ಕೋಟಿ ಕೋಟಿಗೆ ಮಾರಾಟ ವಾಗಿದೆ.

ಹೌದು, ಅನಿಲ್​ ರಾವಿಪುಡಿ ನಿರ್ದೇಶನದಲ್ಲಿ ಬರಲಿರುವ 'ಸರಿಲೇರು ನಿಕೆವ್ವರು' ಸಿನಿಮಾದಲ್ಲಿ ರಶ್ಮಿಕಾ , ಪ್ರಿನ್ಸ್​ ಜತೆ ಅಭಿನಯಿಸಲಿದ್ದು, ಈ ಚಿತ್ರ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಕೇವಲ ಮುಹೂರ್ತ ಮುಗಿಸಿಕೊಂಡಿರುವ ಈ ಚಿತ್ರಕ್ಕೆ ನಿರ್ದೇಶಕ ಅನಿಲ್​ ಕತೆ ಸಿದ್ದ ಮಾಡಿಕೊಂಡಿದ್ದಾರೆ.

ಈ ಚಿತ್ರದ ಚಿತ್ರೀಕರಣ ಇನ್ನೂ ಆರಂಭವಾಗಬೇಕಿದ್ದು, ಅದಾಗಲೇ ಜೆಮಿನಿ ಟಿವಿ ಅವರು 16.5 ಕೋಟಿಗೆ ಪ್ರಸಾರದ ಹಕ್ಕನ್ನು ಖರೀದಿಸಿದ್ದಾರಂತೆ. ಮಹೇಶ್​ ಬಾಬು ಅಭಿನಯದ ಮಹರ್ಷಿ ನಿನ್ನೆಯಷ್ಟೆ ಯಶಸ್ವಿ 50 ದಿನಗಳನ್ನು ಪೂರೈಸಿದ್ದು, ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸುತ್ತಿದೆ.

sarileru neekevvaru
'ಸರಿಲೇರು ನಿಕೆವ್ವರು' ಸಿನಿಮಾದ ಮುಹೂರ್ತ ಕಾರ್ಯಕ್ರಮ
ಆದರೆ ರಶ್ಮಿಕಾರನ್ನು ಮಹೇಶ್​ ಬಾಬು ಅವರಿಗೆ ನಾಯಕಿಯಾಗಿ ಆಯ್ಕೆ ಮಾಡಿರುವುದು, ಪ್ರಿನ್ಸ್​ ಅಭಿಮಾನಿಗಳನ್ನು ಕೆರಳಿಸಿದೆ. ಈ ಕುರಿತು ಮಹೇಶ್​ ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ಸಹ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ಮಹೇಶ್​ ಅಭಿನಯದ 'ಮಹರ್ಷಿ' ಚಿತ್ರದ ಪ್ರಸಾರದ ಹಕ್ಕು 12 ಕೋಟಿಗೆ ಮಾರಾಟವಾಗಿತ್ತು. ಇನ್ನು 'ಸರಿಲೇರು ನಿಕೆವ್ವರು' ಜುಲೈ 5ರಿಂದ ಚಿತ್ರೀಕರಣ ಆರಂಭಿಸಲಿದೆ.

ವೈರಲ್​ ಆಗುತ್ತಿವೆ ಕ್ರೇಜಿಸ್ಟಾರ್​ ನಾಯಕಿಯಾಗಿದ್ದ ಸ್ನೇಹಾರ ಲೆಟೆಸ್ಟ್​ ಚಿತ್ರಗಳು..!

First published: June 28, 2019, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading