Mahesh Babu: ಮಹೇಶ್ ಬಾಬು ಸಿನಿಮಾದಲ್ಲಿ ಮಗಳು ಸಿತಾರಾ ಮಸ್ತ್ ಸ್ಟೆಪ್! ಥೇಟ್​ ಅಪ್ಪನ ಹಾಗೆ ಎಂದ ಫ್ಯಾನ್ಸ್​

ವಿಶೇಷವೆಂದರೆ ಈ ಹಾಡಿನ ಮೂಲಕ ಮಹೇಶ್ ಬಾಬು ಅವರ ಮಗಳು ಸಿತಾರಾ(Sitara)ಮೊದಲ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಇದೊಂದು ಅದ್ಭುತವಾಗಿ ಸ್ಟೆಪ್(Step) ಹಾಕಬಹುದಾದ ಗೀತೆಯಾಗಿದ್ದು ತಮನ್(Taman) ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸಿತಾರ, ಮಹೇಶ್​ ಬಾಬು

ಸಿತಾರ, ಮಹೇಶ್​ ಬಾಬು

  • Share this:
ಕಳೆದ ಭಾನುವಾರ(Sunday) ತೆಲುಗಿ(Telugu)ನ ಖ್ಯಾತ ನಟ ಪ್ರಿನ್ಸ್ ಮಹೇಶ್ ಬಾಬು(Mahesh Babu) ಅವರ ಅಭಿಮಾನಿಗಳಿಗೆ ಮರೆಯಲಾರದ ದಿನವಾಗಿತ್ತು. ಏಕೆಂದರೆ ಅಂದು 'ಸರಕಾರು ವಾರಿ ಪಾಟಾ' (Sarkaru Vaari Paata)ಚಿತ್ರ ತಂಡವು ಅವರ ಅಭಿಮಾನಿಗಳಿಗಾಗಿ "ಪೆನ್ನಿ"(Penny) ಎಂಬ ಶೀರ್ಷಿಕೆಯ ಸಂಗೀತ ವಿಡಿಯೋ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಈ ಹಾಡಿನ ಮೂಲಕ ಮಹೇಶ್ ಬಾಬು ಅವರ ಮಗಳು ಸಿತಾರಾ(Sitara)ಮೊದಲ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಇದೊಂದು ಅದ್ಭುತವಾಗಿ ಸ್ಟೆಪ್(Step) ಹಾಕಬಹುದಾದ ಗೀತೆಯಾಗಿದ್ದು ತಮನ್(Taman) ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪೆನ್ನಿ ಹಾಡಿನ ಮೂಲಕ ಸಿನಿರಂಗಕ್ಕೆ ಸಿತಾರಾ ಎಂಟ್ರಿ!

ನಕಾಶ್ ಅಜೀಜ್ ಅವರಿಂದ ಪೆನ್ನಿ ಎಂದು ಗೀತೆಯನ್ನು ಹಾಡಲಾಗಿದ್ದು ಇದು 'ಸರಕಾರು ವಾರಿ ಪಾಟಾ' ಚಿತ್ರದಲ್ಲಿ ಮಹೇಶ್ ಬಾಬು ಅವರ ಪಾತ್ರ ಹೇಗಿರಲಿದೆ ಎಂಬುದರ ಸಂಕ್ಷಿಪ್ತ ರೂಪವಾಗಿದೆ ಎಂದು ಬಣ್ಣಿಸಲಾಗುತ್ತಿದೆ. ಈ ಗೀತೆಯು ಮಹೇಶ್ ಬಾಬು ಅವರಿಗೆ ಅತ್ಯಂತ ಹತ್ತಿರವಾಗಿದೆ ಎಂತಲೇ ಹೇಳಬಹುದು. ತಮ್ಮ ಮಗಳು ಪ್ರಥಮ ಬಾರಿಗೆ ಪರದೆಯ ಮೇಲೆ ಪ್ರದರ್ಶನ ನೀಡುತ್ತಿರುವುದರ ಬಗ್ಗೆ ಹೆಮ್ಮೆ ಪಟ್ಟ ತಂದೆ ಮಹೇಶ್ ಬಾಬು ಅವರು ಟ್ವೀಟ್ ಮಾಡುತ್ತ "ಇದಕ್ಕಿಂತ ಮತ್ತಿನ್ನೇನೂ ಹೆಮ್ಮೆಯಿಲ್ಲ" ಎಂದು ಬರೆದುಕೊಂಡಿದ್ದರೆ ಅತ್ತ ಮಗಳು ಸಿತಾರಾ ಅವರೂ ಸಹ "ಇದರ ಚಿತ್ರೀಕರಣ ತುಂಬ ಮಜವಾಗಿತ್ತು" ಎಂದು ಟ್ವೀಟ್ ಮಾಡಿದ್ದಾರೆ.

ಸಿತಾರಾ ಬಾನ್​ ಕಿಲ್ಲರ್​ ಎಂದ ಮಹೇಶ್​ ಪತ್ನಿ!

ಈ ಮಧ್ಯೆ ಮಹೇಶ್ ಬಾಬು ಅವರ ಪತ್ನಿ ಹಾಗೂ ಸಿತಾರಾ ಅವರ ತಾಯಿಯಾದ ಚಿತ್ರ ಅಭಿನೇತ್ರಿಯಾಗಿದ್ದ ನಮೃತಾ ಶಿರೋಡ್ಕರ್ ಅವರು ತಮ್ಮ ಮಗಳಲ್ಲಿರುವ ಎಲ್ಲರನ್ನೂ ಕ್ಷಣದಲ್ಲೇ ಆಕರ್ಷಿಸುವಂತಹ ಅದ್ಭುತ ಪ್ರತಿಭೆಯನ್ನು ಕೊಂಡಾಡುತ್ತ, "ಅವಳೊಬ್ಬ ಬಾರ್ನ್ ಕಿಲ್ಲರ್ ಎಂದೇ ನಾನು ಕರೆಯುತ್ತೇನೆ" ಎಂದು ಬಣ್ಣಿಸಿದ್ದಾರೆ.ಮಹೇಶ್ ಬಾಬು ಅವರ ಅಭಿನಯದ ಈ ಚಿತ್ರವನ್ನು ಪರಶುರಾಮ್ ಪೆಟ್ಲಾ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಮಹೇಶ್ ಬಾಬು ಅವರನ್ನು ಹೊರತುಪಡಿಸಿದರೆ, ಕೀರ್ತಿ ಸುರೇಶ್, ವೆನ್ನೆಲ್ಲಾ ಕಿಶೋರ್ ಹಾಗೂ ಸುಬ್ಬರಾಜು ಅವರು ಅಭಿನಯಿಸಿದ್ದಾರೆ. ಈಗಾಗಲೇ ಕೀರ್ತಿ ಸುರೇಶ್ ಅವರ ಲುಕ್ ಅನ್ನು ಪರಿಚಯಿಸುವ 'ಕಲಾವತಿ' ಎಂಬ ಗೀತೆಯನ್ನು ಬಿಡುಗಡೆ ಮಾಡಲಾಗಿದ್ದು, ಅದು ಟಾಪ್ ಗೀತೆಯಾಗಿ ಪಡ್ಡೆ ಹುಡುಗರ ನೆಚ್ಚಿನ ಹಾಡಾಗಿ ಮುಂದುವರೆದಿದೆ.

ಇದನ್ನೂ ಓದಿ: ತಾಯಿಯಾಗುತ್ತಿರುವ ವಿಚಾರ ಹಂಚಿಕೊಂಡ ಸೋನಮ್ ಕಪೂರ್! ಖುಷಿ ಕ್ಷಣದ ಫೋಟೋ ಇಲ್ಲಿದೆ ನೋಡಿ

ಮೇ 12ಕ್ಕೆ ಮಹೇಶ್​ ಬಾಬು ಸಿನಿಮಾ ರಿಲೀಸ್​!

ಮೈತ್ರಿ ಮೂವಿ ಮೇಕರ್ಸ್ ಹಾಗೂ 14 ರೀಲ್ಸ್ ಪ್ಲಸ್ ಬ್ಯಾನರ್‌ಗಳ ಅಡಿಯಲ್ಲಿ ನವೀನ್ ಯರ್ನೇನಿ, ವೈ. ರವಿ ಶಂಕರ್, ರಾಮ್ ಅಚಂತಾ ಹಾಗೂ ಗೋಪಿಚಂದ್ ಅಚಂತಾ ಅವರು ಜಂಟಿಯಾಗಿ ಹಣ ಹೂಡಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಎಲ್ಲ ಕಾರ್ಯಗಳು ಭರದಿಂದ ಸಾಗಿದ್ದು ಮೇ 12ಕ್ಕೆ ಚಿತ್ರವು ಜಗತ್ತಿನಾದ್ಯಂತ ತೆರೆ ಕಾಣಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇಂದೇ ಅಪ್ಪಳಿಸಿದ 'ತೂಫಾನ್', ಧೂಳೆಬ್ಬಿಸುತ್ತಿದೆ 'ಕೆಜಿಎಫ್‌ 2' ಫಸ್ಟ್ Lyrical Song

ಈ ನಡುವೆ ಮಹೇಶ್ ಬಾಬು ಅವರು ತಮ್ಮ ಮುಂದಿನ ಚಿತ್ರವನ್ನು ತ್ರಿವಿಕ್ರಮ್ ಜೊತೆ ಮಾಡಲಿದ್ದಾರೆಂದು ತಿಳಿದುಬಂದಿದೆ. ಈ ಚಿತ್ರದ ಮೂಲಕ ಮಹೇಶ್ ಬಾಬು ಅವರು ಮತ್ತೊಮ್ಮೆ ತಮ್ಮ ಸಹ ಕಲಾವಿದೆಯಾದ ಪೂಜಾ ಹೆಗ್ಡೆ ಅವರೊಂದಿಗೆ ನಟನೆ ಮಾಡಲಿದ್ದಾರೆ. ಈ ಮುಂಚೆ ಮಹರ್ಷಿ ಎಂಬ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ಪೂಜಾ ಹೆಗ್ಡೆ ಒಟ್ಟಾಗಿ ಕಾಣಿಸಿಕೊಂಡಿದ್ದರು.
Published by:Vasudeva M
First published: