ತೆಲುಗು (Tollywood) ನಟ ಮಹೇಶ್ ಬಾಬು (Mahesh Babu)ಎಂದರೆ ಸಾಕು ಅವರ ಸುಂದರವಾದ ಮುಖ, ಮುಗ್ದ ನಗು ಮತ್ತು ಪಟ-ಪಟನೆ ಮಾತಾಡುವ ಶೈಲಿ ಅಭಿಮಾನಿಗಳ ಕಣ್ಮುಂದೆ ಬರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಸ್ಪುರದ್ರೂಪಿ ನಟರ ಸಾಲಿನಲ್ಲಿ ಮಹೇಶ್ ಬಾಬು ಮೊದಲಿನ ಸಾಲಿನಲ್ಲಿ ಇರುತ್ತಾರೆ ಅಂತ ಹೇಳಬಹುದು. ಮಹೇಶ್ ಬಾಬು ಅವರು ಬಾಲಿವುಡ್ (Bollywood) ನಟಿ ನಮ್ರತಾ ಶಿರೋಡ್ಕರ್ (Namrata Shirodkar) ಅವರನ್ನು ಪ್ರೀತಿಸಿ ಮದುವೆಯಾಗಿದ್ದು (Love Marriage) ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ. ನೋಡಲು ತುಂಬಾನೇ ಸುಂದರವಾಗಿರುವ ನಟ ಮಹೇಶ್ ಬಾಬು ಅವರಿಗೆ ಬಹಳಷ್ಟು ಹುಡುಗಿಯರು ಅಭಿಮಾನಿಗಳಾಗಿದ್ದರೂ, ಅವರು ಮಾತ್ರ ನಮ್ರತಾ ಅವರನ್ನೇ ಪ್ರೀತಿಸಿ ಮದುವೆಯಾದರು.
2013ರಲ್ಲಿ ಟೈಮ್ಸ್ ಆಫ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ‘ಮೋಸ್ಟ್ ಡಿಸೈರಬಲ್ ಮ್ಯಾನ್ ಇನ್ ಇಂಡಿಯಾ’ ಪ್ರಶಸ್ತಿಗೆ ಭಾಜನರಾದ ಮಹೇಶ್ ಬಾಬು ಅವರು ಮದುವೆ ಅಂತ ಆದ್ರೆ ನಮ್ರತಾ ಅವರನ್ನೇ ಅಂತ ಪ್ರೀತಿಸಿ ಮದುವೆಯಾದರು. ಈ ಪ್ರಣಯ ಪಕ್ಷಿಗಳು ತಮ್ಮ ಮಧ್ಯೆ ಇರುವ ಪ್ರೀತಿಯ ಬಗ್ಗೆ ಎಷ್ಟು ಗಂಭೀರವಾಗಿದ್ದರು ಅಂತಾನೆ ಹೇಳಬಹುದು. ಮದುವೆಯಾಗಿ ಇಷ್ಟು ವರ್ಷಗಳೇ ಕಳೆದರೂ ಸಹ ಯಾವುದೇ ವೈವಾಹಿಕ ಸಮಸ್ಯೆಗಳಿಗೆ ಸಿಲುಕದೇ ಒಳ್ಳೆಯ ಗಂಡ ಅಂತ ಅನ್ನಿಸಿಕೊಂಡಿರುವುದಂತೂ ನಿಜ. ಇವರನ್ನು ಟಾಲಿವುಡ್ ನ ಸಂಭಾವಿತ ವ್ಯಕ್ತಿ ಎಂದು ಸಹ ಕರೆಯಲಾಗುತ್ತದೆ.
ಮಹೇಶ್ ಬಾಬು - ನಮ್ರತಾ ಇಬ್ಬರು ಕ್ಯೂಟ್ ಕಪಲ್
ಮಹೇಶ್ ಬಾಬು ಮತ್ತು ನಮ್ರತಾ ದಂಪತಿಗಳು ಆಗಾಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮಿಬ್ಬರ ಜೋಡಿ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಒಟ್ಟಿನಲ್ಲಿ ಇವರಿಬ್ಬರದು ಒಂದು ಸುಮಧುರವಾದ ದಾಂಪತ್ಯ ಅಂತನೇ ಹೇಳಬಹುದು.
ಫ್ಲೈಟ್ ನಲ್ಲಿ ಹೋಗುವಾಗ ಫೋಟೋ ಕ್ಲಿಕ್ಕಿಸಿಕೊಂಡಿರುವ ಮಹೇಶ್-ನಮ್ರತಾ
ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಇಬ್ಬರು ತಮ್ಮ ರಜಾದಿನಗಳನ್ನು ಕಳೆಯಲು ಬೇರೆ ದೇಶಕ್ಕೆ ಹೋಗುವಾಗ ವಿಮಾನದಲ್ಲಿ ಸಹ ತಮ್ಮ ಪತ್ನಿ ನಾಚುವಂತೆ ಆಕೆಯ ಹಣೆಗೆ ಕಿಸ್ ಮಾಡಿದ್ದಾರೆ ಮಹೇಶ್ ಬಾಬು.
ಫ್ಯಾಮಿಲಿ ಹಾಲಿಡೇಸ್ ಗೆ ಹೋಗ್ತಾರೆ ಈ ದಂಪತಿಗಳು
ಪ್ರಿನ್ಸ್ ಮಹೇಶ್ ಮತ್ತು ಪತ್ನಿ ನಮ್ರತಾ ಇಬ್ಬರು ತಮ್ಮ ಮುದ್ದಾದ ಮಕ್ಕಳೊಂದಿಗೆ ವಿದೇಶಕ್ಕೆ ಫ್ಯಾಮಿಲಿ ಹಾಲಿಡೇಸ್ ಗೆ ಹೋಗಿದ್ದರು. ಈ ವೇಳೆ ನ್ಯೂಯಾರ್ಕ್ ನಗರದ ರಸ್ತೆಯ ಮೇಲೆ ಇಬ್ಬರು ದಂಪತಿಗಳು ನಿಂತು ಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.
ಹೀಗೆ ಸ್ವಿಟ್ಜರ್ಲ್ಯಾಂಡ್ ಗೆ ರಜಾ ದಿನಗಳನ್ನು ಕಳೆಯಲು ಹೋದಾಗ, ದಂಪತಿ ಒಬ್ಬರನ್ನೊಬ್ಬರು ತಬ್ಬಿಕೊಂಡು ನಿಂತಿರುವ ಫೋಟೋವನ್ನು ನೋಡಬಹುದು.
ಆಗಾಗ್ಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ ಈ ದಂಪತಿಗಳು
ಈ ದಂಪತಿಗಳು ಆಗಾಗ್ಗೆ ಸೆಲ್ಫಿಯನ್ನು ಸಹ ಕ್ಲಿಕ್ಕಿಸಿಕೊಳ್ಳುತ್ತಾರೆ. ಇದರಲ್ಲಿ ವಿಶೇಷತೆ ಏನಪ್ಪಾ ಅಂದ್ರೆ ಇಬ್ಬರು ಒಂದೇ ಬಣ್ಣದ ಟೀ-ಶರ್ಟ್ ಗಳನ್ನು ಹಾಕಿಕೊಂಡು ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಮಕ್ಕಳೊಂದಿಗೆ ಊಟಕ್ಕೆ ಹೋಗಿದ್ದ ಮಹೇಶ್- ನಮ್ರತಾ
ನಮ್ರತಾ ಮತ್ತು ಮಹೇಶ್ ಬಾಬು ತಮ್ಮ ಇಬ್ಬರು ಮಕ್ಕಳಾದ ಗೌತಮ್ ಮತ್ತು ಸಿತಾರಾ ಜೊತೆಗೂಡಿ ಹೊರಗೆ ಹೊಟೇಲ್ಗಳಿಗೆ ರೆಸ್ಟೋರೆಂಟ್ಗಳಿಗೆ ಊಟಕ್ಕೆ ಹೋಗುತ್ತಾರೆ.
ಮಹೇಶ್ ಕೆನ್ನೆಗೆ ಚುಂಬಿಸಿದ ನಮ್ರತಾ
ಇವರಿಬ್ಬರ ಒಂದು ಹಳೆಯ ಫೋಟೋದಲ್ಲಿ ಮಹೇಶ್ ಕೆನ್ನೆಗೆ ಮುದ್ದಾಗಿ ನಮ್ರತಾ ಚುಂಬಿಸಿರುವುದನ್ನು ಸಹ ನಾವು ಒಂದು ಫೋಟೋದಲ್ಲಿ ನೋಡಬಹುದು. ಅಷ್ಟೇ ಅಲ್ಲದೇ ಮಹೇಶ್ ಸಹ ತನ್ನ ಮಡದಿಯ ಕೆನ್ನೆಗೆ ಕಿಸ್ ಮಾಡಿರುವುದನ್ನು ಸಹ ಒಂದು ಫೋಟೋದಲ್ಲಿ ನೋಡಬಹುದು. ಈ ಹಿಂದೆ ಸಹ ಅನೇಕ ಸಮಯದಲ್ಲಿ ಇಬ್ಬರು ದಂಪತಿಗಳು ಒಂದೇ ರೀತಿಯ ಉಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ