Mahesh Babu 27: ಮಹೇಶ್ ಬಾಬು ಅಭಿನಯಿಸಲಿರುವ ಹೊಸ ಸಿನಿಮಾದ ಟೈಟಲ್​ ಲೀಕ್​: ಗರಂ ಆದ ಪ್ರಿನ್ಸ್​..!

Sarkar Vaari Pata: ಮಹೇಶ್​ ಬಾಬು ಅವರು ತಮ್ಮ ತಂದೆ ಕೃಷ್ಣ ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾ ಪ್ರಕಟಿಸಲಿದ್ದಾರೆ ಅನ್ನೋ ಸುದ್ದಿ ಕಳೆದ ಒಂದು ತಿಂಗಳಿನಿಂದ ಹರಿದಾಡುತ್ತಿದೆ. ಇದೇ ತಿಂಗಳ 31ರಂದು ಪ್ರಿನ್ಸ್ ಅವರ ತಂದೆಯ ಹುಟ್ಟುಹಬ್ಬ. ಅಂದು ನಿರ್ದೇಶಕ ಪರಶುರಾಮ್​ ಅವರೊಂದಿಗೆ ಮಾಡಲಿರುವ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸರ್ಪ್ರೈಸ್​ ಕೊಡಲು ಕಾತರದಿಂದ ಇದ್ದರು ಪ್ರಿನ್ಸ್​.

ಮಹೇಶ್ ಬಾಬು

ಮಹೇಶ್ ಬಾಬು

  • Share this:
ಮಹೇಶ್​ ಬಾಬು ಸರಿಲೇರು ನೀಕೆವ್ವರು ಸಿನಿಮಾದ ನಂತರ ಮತ್ತಾವುದೇ ಚಿತ್ರಕ್ಕೆ ಓಕೆ ಮಾಡಿರುವ ಕುರಿತು ಅಧಿಕೃತ ಸುದ್ದಿ ಹೊರ ಬಿದ್ದಿಲ್ಲ. ಆದರೆ ಅವರ ಕೈಯಲ್ಲಿ ಈಗಾಗಲೇ 2-3 ಚಿತ್ರಗಳಿವೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಪರಶುರಾಮ್​, ರಾಜಮೌಳಿ ಹೀಗೆ ನಿರ್ದೇಶಕರ ಹೆಸರುಗಳೊಂದಿಗೆ ಮಹೇಶ್​ ಬಾಬು ಹೆಸರು ಸಹ ಕೇಳಿ ಬರುತ್ತಿದೆ.

ಮಹೇಶ್​ ಬಾಬು ಅವರು ತಮ್ಮ ತಂದೆ ಕೃಷ್ಣ ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾ ಪ್ರಕಟಿಸಲಿದ್ದಾರೆ ಅನ್ನೋ ಸುದ್ದಿ ಕಳೆದ ಒಂದು ತಿಂಗಳಿನಿಂದ ಹರಿದಾಡುತ್ತಿದೆ. ಇದೇ ತಿಂಗಳ 31ರಂದು ಪ್ರಿನ್ಸ್ ಅವರ ತಂದೆಯ ಹುಟ್ಟುಹಬ್ಬ. ಅಂದು ನಿರ್ದೇಶಕ ಪರಶುರಾಮ್​ ಅವರೊಂದಿಗೆ ಮಾಡಲಿರುವ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸರ್ಪ್ರೈಸ್​ ಕೊಡಲು ಕಾತರದಿಂದ ಇದ್ದರು ಪ್ರಿನ್ಸ್​.

Mahesh Babu is upset because his new movie Title sarkar vaari pata has been leaked,
ಮಹೇಶ್​ ಬಾಬು ಹಾಗೂ ನಿರ್ದೇಶಕ ಪರಶುರಾಮ್​


 

ಆದರೆ ಈಗಾಗಲೇ ಆ ಸಿನಿಮಾದ ಟೈಟಲ್​ ಲೀಕ್​ ಆಗಿದೆ. ಅದು ಸರ್ಕಾರ್​ ವಾರಿ ಪಾಟ ಎಂಬ ಸಿನಿಮಾ. ಪರಶುರಾಮ್​ ನಿರ್ದೇಶನದಲ್ಲಿ ಮಹೇಶ್​ ಬಾಬು ನಟಿಸಲಿರುವ ಚಿತ್ರ ಇದಾಗಿದೆ. ಅಪ್ಪನ ಹುಟ್ಟುಹಬ್ಬಕ್ಕೆ ಎರಡೇ ದಿನ ಬಾಕಿ ಇರುವಾ ಹೀಗಾಗಿರುವುದರಿಂದ ಮಹೇಶ್​ ಬಾಬು ಗರಂ ಆಗಿದ್ದಾರಂತೆ.

ಇದನ್ನೂ ಓದಿ: Rashmika Mandanna: ಮತ್ತೊಮ್ಮೆ ಟ್ರೋಲಿಗರಿಗೆ ಪರೋಕ್ಷವಾಗಿ ಚಾಟಿ ಬೀಸಿದ ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ..!

ಸಿನಿಮಾದ ಪಿಆರ್​ ತಂಡವನ್ನು ಟೈಟಲ್​ ಲೀಕ್ ಆದ ಕಾರಣಕ್ಕೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರಂತೆ ಮಹೇಶ್​ ಬಾಬು. ಈ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Mahesh Babu is upset because his new movie Title sarkar vaari pata has been leaked,
ಮಹೇಶ್​ ಬಾಬು ಹಾಗೂ ನಿರ್ದೇಶಕ ಪರಶುರಾಮ್​


ಟೈಟಲ್​ ಲೀಕ್ ಆದಂತೆ ಸಿನಿಮಾದ ಪೋಸ್ಟರ್ ಸಹ ಆಗಬಾರದು ಎಂದು ಎಚ್ಚರಿಸಿರುವ ಮಹೇಶ್​ ಬಾಬು ಇನ್ನು ಮುಂದೆ ಇದು ಮರುಕಳಿಸದಂತೆ ನೋಡಿಕೊಳ್ಳಿ ಎಂದಿದ್ದಾರಂತೆ. ಇನ್ನು ಈ ಸಿನಿಮಾ ಕತೆ ಸಹ ಲೀಕ್​ ಆಗಿರುವುದಾಗಿ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಪರಶುರಾಮ್​ ಬ್ಯಾಂಕ್​ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಭಾರೀ ವಂಚನೆ ಕುರಿತಾಗಿ ಕತೆ ಬರೆದಿದ್ದಾರಂತೆ. ಈ ಸುದ್ದಿಯೂ ಈಗ ಗುಟ್ಟಾಗಿ ಉಳಿದಿಲ್ಲ. ಈ ಎಲ್ಲ ವಿಷಯಗಳಿಂದಾಗಿ ಈ ತಾಳ್ಮೆಯಿಂದ ಇರುತ್ತಿದ್ದ ಪ್ರಿನ್ಸ್​ ಮಹೇಶ್​ ಬಾಬು ಅವರ ನೆಮ್ಮದಿ ಹಾಳಾಗಿದೆಯಂತೆ.

ಇದನ್ನೂ ಓದಿ: ರಸ್ತೆಯಲ್ಲಿ ಡ್ಯಾನ್ಸ್​ ಮಾಡಿ ಹಣ ಸಂಪಾದಿಸಿದ್ದರಂತೆ ಸಾರಾ ಅಲಿ ಖಾನ್​..!

 Kareena Kapoor: ಕರೀನಾರ ಇನ್​ಸ್ಟಾಗ್ರಾಂನಲ್ಲೂ ಸ್ಟಾರ್ ಕಿಡ್​ ತೈಮೂರ್​ನದ್ದೇ ದರ್ಬಾರ್​..!

First published: