Mahesh Babu: ಮಗ ಗೌತಮ್ ಟಾಲಿವುಡ್​ ಎಂಟ್ರಿ ಕುರಿತು ಪೋಸ್ಟ್​ ಮಾಡಿದ ಮಹೇಶ್​ ಬಾಬು..!

Gautham Tollywood Entry: ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡುವುದರೊಂದಿಗೆ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ಸಹ ಕೊಟ್ಟರು. ಅದು ಅಭಿಮಾನಿಗಳೊಂದಿಗೆ ಕೊಂಚ ಸಮಯ ಕಳೆಯುವುದು. ಅದು ವರ್ಚ್ಯುವಲ್​ ಆಗಿ ಫ್ಯಾನ್ಸ್​ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವುದು.

ಮಗ ಗೌತಮ್​ ಜೊತೆ ಮಹೇಶ್​ ಬಾಬು

ಮಗ ಗೌತಮ್​ ಜೊತೆ ಮಹೇಶ್​ ಬಾಬು

  • Share this:
ಮಹೇಶ್​ ಬಾಬು ನಿನ್ನೆ ಅಂದರೆ ಮೇ 31ರಂದು ತಮ್ಮ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ. ಅಂದೇ ಅವರ ಹೊಸ ಸಿನಿಮಾ 'ಸರ್ಕಾರ್​ ವಾರಿ ಪಾಟ' ಚಿತ್ರದ ಪೋಸ್ಟರ್​ ಸಹ ಬಿಡುಗಡೆ ಮಾಡಿದ್ದಾರೆ. 

ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡುವುದರೊಂದಿಗೆ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ಸಹ ಕೊಟ್ಟರು. ಅದು ಅಭಿಮಾನಿಗಳೊಂದಿಗೆ ಕೊಂಚ ಸಮಯ ಕಳೆಯುವುದು. ಅದು ವರ್ಚ್ಯುವಲ್​ ಆಗಿ ಫ್ಯಾನ್ಸ್​ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವುದು.

Mahesh Babu first time spoke about his Son Gautham's entry to Tollywood 
'ಸರ್ಕಾರ್​ ವಾರಿ ಪಾಟ' ಚಿತ್ರದ ಪೋಸ್ಟರ್​


ನಿನ್ನೆ ಸಂಜೆ 5ರಿಂದ ಇನ್​ಸ್ಟಾಗ್ರಾಂನಲ್ಲಿ ಪ್ರಿನ್ಸ್​ ಅಭಿಮಾನಿಗಳು ತಮ್ಮಿಷ್ಟದ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಮಹೇಶ್​ ಬಾಬು ಅವರ ಬಗ್ಗೆ ತಿಳಿಯದ ಸಾಕಷ್ಟು ವಿಷಯಗಳ ಕುರಿತಾಗಿ ಫ್ಯಾನ್ಸ್​ ಕೇಳಿ ತಿಳಿದುಕೊಂಡಿದ್ದಾರೆ.

ಬಿಡುವಿನ ವೇಳೆ ಮಹೇಶ್ ಬಾಬು ಸಿನಿಮಾ ನೋಡುವುದು, ಓದುವುದು, ನಾಯಿಗಳೊಂದಿಗೆ ಆಡುವುದು ಹಾಗೂ ಮಕ್ಕಳೊಂದಿಗೆ ಕಾಲ ಕಳೆಯುತ್ತಾರಂತೆ.


ಮಹೇಶ್​ ಬಾಬುರ ಮೊದಲ ಕ್ರಶ್​


ಮಹೇಶ್​ ಬಾಬು ಅವರ ಇಷ್ಟದ ಹಾಲಿವುಡ್​ ಸಿನಿಮಾ ನಟರು, ಇಷ್ಟದ ಬಣ್ಣ, ಮಾಡಿದ ಅಡುಗೆ, ಮೊದಲ ಕ್ರಶ್​, ಬೆಸ್ಟ್​ ಫ್ರೆಂಡ್​ ಹೀಗೆ ಅವರ ಸಾಕಷ್ಟು ವೈಯಕ್ತಿಕ ವಿಷಯಗಳ ಬಗ್ಗೆ ಅಭಿಮಾನಿಗಳು ಕೇಳಿ ತಿಳಿದುಕೊಂಡಿದ್ದಾರೆ.

ಫೇವರಿಟ್​ ಮಾರ್ವೆಲ್​ ಹೀರೋ


ಮಹೇಶ್​ ಬಾಬುಗೆ ಮಾರ್ವೆಲ್​ ಸಿನಿಮಾಗಲ್ಲಿ ಇಷ್ಟವಾದ ಪಾತ್ರಗಳು ಐರನ್​ ಮ್ಯಾನ್​ ಹಾಗೂ ಹಲ್ಕ್​ ಅಂತೆ. ಪ್ರಿನ್ಸ್​ಗೆ ಇಷ್ಟವಾದ ಬಣ್ಣ ನೀಲಿ. ಅವರಿಗೆ ಕಾಫಿ ಅತ್ಯಂತ ಪ್ರಿಯವಂತೆ. ಮಕ್ಕಳಿಗೆ ಮ್ಯಾಗಿ ಮಾಡಿ ತಿನ್ನಿಸಿದ್ದಾರಂತೆ. ಮೊದಲ ಕ್ರಶ್​ ಹಾಗೂ ಬೆಸ್ಟ್​ ಫ್ರೆಂಡ್​ ನಮ್ರತಾ ಶಿರೋಡ್ಕರ್​ ಅಂತೆ.

ಗೌತಮ್​ ಟಾಲಿವುಡ್​ ಎಂಟ್ರಿ

ಒಬ್ಬರು ಅಭಿಮಾನಿ ಪ್ರಿನ್ಸ್​ ಮಗ ಗೌತಮ್​ ಟಾಲಿವುಡ್​ ಎಂಟ್ರಿ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಚಾಣಕ್ಷತನದಿಂದ ಉತ್ತರಿಸಿರುವ ಮಹೇಶ್​, ಮಗನಿಗೆ ಸಿನಿ ರಂಗಕ್ಕೆ ಬರಲು ಇಷ್ಟವಿದೆ ಎಂದೆನಿಸುತ್ತದೆ. ಆದರೆ ಅದಕ್ಕೆ ಕಾಲವೇ ಉತ್ತರಿಸಲಿದೆ ಎಂದಿದ್ದಾರೆ.

ಮಗನ ಟಾಲಿವುಡ್​ ಎಂಟ್ರಿ ಬಗ್ಗೆ ಮಹೇಶ್ ಬಾಬು​ ಪ್ರತಿಕ್ರಿಯೆ


 

ರಾಜಮೌಳಿ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿರುವುದಾಗಿಯೂ ಪ್ರಿನ್ಸ್ ಹೇಳಿಕೊಂಡಿದ್ದಾರೆ. ಅಭಿಮಾನಿಗಳು ಕೇಳಿರುವ ಪ್ರಶ್ನೆಗಳಿಗೆ ಮಹೇಶ್​ ಉತ್ತರ ಕೊಟ್ಟಿದ್ದು, ಅವುಗಳನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದಾರೆ.

50ನೇ ವಯಸ್ಸಿನಲ್ಲೂ ಬೋಲ್ಡ್​ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದ ನಟಿ ಶ್ರೀದೇವಿ..!

First published: