Mahesh Babu: ರಾಜಕೀಯ ಪ್ರವೇಶ ಕುರಿತು ಮೌನ ಮುರಿದ ಪ್ರಿನ್ಸ್​ ಮಹೇಶ್​ ಬಾಬು

Mahesh Babu: ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಅವರು ರಾಜಕೀಯಕ್ಕೆ ಸೇರಲಿದ್ದಾರೆ. ಅದಕ್ಕಾಗಿಯೇ ಅವರು ಭರತ್ ಅನೆ ನೇನು ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಅವರ ರಾಜಕೀಯ ಪ್ರವೇಶಕ್ಕೆ ಹಾಕಲಾದ ಬುನಾದಿ ಎನ್ನಲಾಗುತ್ತಿತ್ತು. ಅದರಂತೆ ಮಹರ್ಷಿ ಸಿನಿಮಾ ಬಂದಾಗಲೂ ಇಂತಹದ್ದೇ ಮಾತುಗಳು ಟಾಲಿವುಡ್​ ಅಂಗಳದಲ್ಲಿ ಹರಿದಾಡಿದ್ದವು. ಈ ಎಲ್ಲ ಸುದ್ದಿಗಳಿಗೂ ಈಗ ಪ್ರಿನ್ಸ್​ ಉತ್ತರ ಕೊಟ್ಟಿದ್ದಾರೆ.

Anitha E | news18-kannada
Updated:September 4, 2019, 1:16 PM IST
Mahesh Babu: ರಾಜಕೀಯ ಪ್ರವೇಶ ಕುರಿತು ಮೌನ ಮುರಿದ ಪ್ರಿನ್ಸ್​ ಮಹೇಶ್​ ಬಾಬು
ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು
  • Share this:
ಚಿತ್ರರಂಗವಿರಬಹುದು ಅಥವಾ ರಾಜಕೀಯ ಇರಬಹುದು... ಯಾರಾದರೂ ಒಂದು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಎಂದರೆ ಅವರಿಗೆ ಆಯ್ಕೆ ಮಾಡಿಕೊಂಡ ರಂಗದ ಬಗ್ಗೆ ಆಸಕ್ತಿ ಹಾಗೂ ಒಲವಿರಬೇಕು. ಪ್ರಿನ್ಸ್​ ಮಹೇಶ್​ ಬಾಬು ಅವರಿಗೆ ಸಿನಿಮಾ ರಂಗದ ಬಗ್ಗೆ ಇರುವ ಒಲವಿನ ಬಗ್ಗೆ ಮಾತನಾಡುವಂತಿಲ್ಲ.

​ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ರಾಜಕೀಯಕ್ಕೆ ಸೇರಲಿದ್ದಾರೆ ಅನ್ನೋ ಸುದ್ದಿ ತುಂಬಾ ದಿನಗಳಿಂದ ಹರಿದಾಡುತ್ತಿತ್ತು.. ಅದಕ್ಕಾಗಿಯೇ ಅವರು 'ಭರತ್ ಅನೆ ನೇನು' ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಮಹೇಶ್​ ರಾಜಕೀಯಕ್ಕೆ ಎಂಟ್ರಿ ಕೊಡಲೆಂದೇ ಮಾಡಿದ್ದಾರೆ ಎನ್ನಲಾಗುತ್ತಿತ್ತು.

happy birthday mahesh babu upcoming film sarileru neekevvaru first look release today
'ಸರಿಲೇರು ನಿಕೆವ್ವರು' ಚಿತ್ರದಲ್ಲಿ ಮಹೇಶ್​ ಬಾಬು


ಅದರಂತೆ 'ಮಹರ್ಷಿ' ಸಿನಿಮಾ ಬಂದಾಗಲೂ ಇಂತಹದ್ದೇ ಮಾತುಗಳು ಟಾಲಿವುಡ್​ ಅಂಗಳದಲ್ಲಿ ಹರಿದಾಡಿದ್ದವು. ಆದರೆ ಈ ಎಲ್ಲ ಸುದ್ದಿಗಳಿಗೂ ಈಗ ಪ್ರಿನ್ಸ್​ ಉತ್ತರ ಕೊಟ್ಟಿದ್ದಾರೆ.

ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಹೇಶ್​ ಬಾಬು ತಮ್ಮ ರಾಜಕೀಯ ಪ್ರವೇಶದ ಕುರಿತಂತೆ ಮಾತನಾಡಿದ್ದಾರೆ. ರಾಜಕೀಯ ಪ್ರವೇಶದ ಸುದ್ದಿಯನ್ನು ಅಲ್ಲಗಳೆದಿರುವ ಪ್ರಿನ್ಸ್​, 'ನಾನು ಮಾಡುವ ಒಂದೇ ಒಂದು ಕೆಲಸ ಅಭಿನಯಿಸುವುದು. ನಾನು ಬಾಲ ಕಲಾವಿದನಾಗಿದ್ದವನು. ಶಾಲಾ ದಿನಗಳಲ್ಲಿ ಬೇಸಿಗೆ ರಜೆಯಲ್ಲಿ ಅಭಿನಯಿಸುತ್ತಿದ್ದೆ. ಶಾಲೆಗೆ ಬಂಕ್​ ಮಾಡಿ ಶೂಟಿಂಗ್​ಗೆ ಹಾಜರಾಗಿದ್ದೂ ಇದೆ. ಹೀಗಿರುವಾಗಲೇ ಶಾಲೆಯ ಒಂದು ವರ್ಷ ಹಾಳಾಯಿತು., ಆಗ ನನ್ನ ತಂದೆ ನನಗೆ ಮೊದಲು ವಿದ್ಯಾಭ್ಯಾಸ ಮುಗಿಸಿ, ನಂತರ ಅಭಿನಯಿಸುವಂತೆ ಹೇಳಿದ್ದರು. ನಾನು ಅದಕ್ಕೆ ಒಪ್ಪಿದ್ದೆ. ಆಗಿನಿಂದ ನನಗೆ ಗೊತ್ತಿರುವ ಒಂದೇ ಒಂದು ವಿಷಯವನ್ನು ಬದಲಾಯಿಸಿಕೊಳ್ಳುವುದಿಲ್ಲ' ಎಂದು ಮಹೇಶ್​ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ 'ಪೈಲ್ವಾನ್'​ ಅಬ್ಬರ: ಕಿಚ್ಚನನ್ನು ಕೊಂಡಾಡಿದ  ಪಾರುಲ್​ ಯಾದವ್​..!

ಮಹೇಶ್​ ಬಾಬು 4 ವರ್ಷದವರಾಗಿದ್ದಾಗ ಟಾಲಿವುಡ್​ಗೆ ಎಂಟ್ರಿ ಕೊಟ್ಟರು. ನಂತರ ಅವರು 15 ವರ್ಷದವರಾಗುವರೆಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ನಂತರ ವಿದ್ಯಾಭ್ಯಾಸಕ್ಕೆಂದು ಬ್ರೇಕ್​ ಪಡೆದಿದ್ದ ಪ್ರಿನ್ಸ್​ 25ನೇ ವಯಸ್ಸಿನಲ್ಲಿ ಮತ್ತೆ ನಾಯಕ ನಟನಾಗಿ ಬಣ್ಣದ ಲೋಕಕ್ಕೆ ಮರಳಿದರು.'ಮಹರ್ಷಿ' ಯಶಸ್ಸಿನ ನಂತರ ಪ್ರಿನ್ಸ್​ ಈಗ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ರಶ್ಮಿಕಾ ನಾಯಕಿಯಾಗಿರುವ ಈ ಚಿತ್ರ ಮುಂದಿನ ವರ್ಷ ಅಂದರೆ 2020ರ ಆಗಸ್ಟ್​ 15ಕ್ಕೆ ತೆರೆ ಕಾಣಲಿದೆ.

Regina Cassandra: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಎವರು ಸಿನಿಮಾ ಖ್ಯಾತಿಯ ಹಾಟ್​ ನಟಿ ರೆಜಿನಾ..!


First published: September 4, 2019, 12:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading