Mahesh Babu: ರಾಜಮೌಳಿ ನಿರ್ದೇಶನದಲ್ಲಿ ರಾಮಾಯಣ: ಮಹೇಶ್​ ಬಾಬು ರಾಮನಂತೆ..!

Mahesh Babu As Lord Rama: ಪ್ರಿನ್ಸ್​ಗೆ ಪರಶುರಾಮ್​ ಹೇಳಿರುವ ಕತೆ ತುಂಬಾ ಇಷ್ಟವಾಗಿದ್ದು, ಸಿನಿಮಾಗೆ ಓಕೆ ಹೇಳಿದ್ದಾರಂತೆ. ಸದ್ಯ ಲಾಕ್​ಡೌನ್​ ಇರುವ ಕಾರಣದಿಂದ ಈ ಚಿತ್ರದ ಚಿತ್ರೀಕರಣ ಮುಂದಕ್ಕೆ ಹೋಗಿದ್ದು, ಅಕ್ಟೋಬರ್​ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೇ 31ಕ್ಕೆ ಅಪ್ಪನ ಹುಟ್ಟುಹಬ್ಬದಂದು ಈ ಸಿನಿಮಾ ಬಗ್ಗೆ ಮಹೇಶ್​ ಪ್ರಕಟಿಸಲಿದ್ದಾರಂತೆ.

Anitha E | news18-kannada
Updated:May 27, 2020, 5:29 PM IST
Mahesh Babu: ರಾಜಮೌಳಿ ನಿರ್ದೇಶನದಲ್ಲಿ ರಾಮಾಯಣ: ಮಹೇಶ್​ ಬಾಬು ರಾಮನಂತೆ..!
ಮಹೇಶ್​ ಬಾಬು ಹಾಗೂ ರಾಜಮೌಳಿ
  • Share this:
ಮಹೇಶ್​ ಬಾಬು 'ಸರಿಲೇರು ನೀಕೆವ್ವರು' ಸಿನಿಮಾದ ನಂತರ ಮಹೇಶ್ ಬಾಬು ಯಾವುದೇ ಹೊಸ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಪರಶುರಾಮ್​  ಅವರೊಂದಿಗೆ ಹೊಸ ಸಿನಿಮಾಗೆ ಓಕೆ ಮಾಡಿದ್ದಾರಂತೆ. ಹೀಗೆಂದು ಪರಶುರಾಮ್​ ಅವರೇ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಪ್ರಿನ್ಸ್​ಗೆ ಪರಶುರಾಮ್​ ಹೇಳಿರುವ ಕತೆ ತುಂಬಾ ಇಷ್ಟವಾಗಿದ್ದು, ಸಿನಿಮಾಗೆ ಓಕೆ ಮಾಡಿದ್ದಾರಂತೆ. ಸದ್ಯ ಲಾಕ್​ಡೌನ್​ ಕಾರಣದಿಂದ ಈ ಚಿತ್ರದ ಚಿತ್ರೀಕರಣ ಮುಂದಕ್ಕೆ ಹೋಗಿದ್ದು, ಅಕ್ಟೋಬರ್​ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೇ 31ಕ್ಕೆ ಅಪ್ಪನ ಹುಟ್ಟುಹಬ್ಬದಂದು ಈ ಸಿನಿಮಾ ಬಗ್ಗೆ ಮಹೇಶ್​ ಪ್ರಕಟಿಸಲಿದ್ದಾರಂತೆ.

Mahesh Babu to announce his upcoming film with SS Rajamouli on the eve of father Krishna birthday
ರಾಜಮೌಳಿ, ಮಹೇಶ್​​ ಬಾಬು


ಇದರ ಜೊತೆಗೆ ಮಹೇಶ್​ ಬಾಬು ಸ್ಟಾರ್​ ನಿರ್ದೇಶಕ ರಾಜಮೌಳಿ ಅವರೊಂದಿಗೆ ಒಂದು ಸಿನಿಮಾ ಮಾಡಲಿರುವ ವಿಷಯ ಗೊತ್ತೇ ಇದೆ. ಈ ಬಗ್ಗೆ ರಾಜಮೌಳಿ ಅವರು ಟಿವಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಇನ್ನು ಆರ್​ಆರ್​ಆರ್ ಚಿತ್ರದ ಕೆಲಸಗಳು ಮುಗಿಯದ ಕಾರಣ, ಇದಾದ ನಂತರವೇ ಮಹೇಶ್​ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಬಾಬು ರಾಮನ ಅವತಾರದಲ್ಲಿರುವ ಫೋಟೋವೊಂದು ವೈರಲ್​ ಆಗುತ್ತಿದೆ. ಮಹೇಶ್​ ಬಾಬು ಅಭಿಮಾನಿಯೊಬ್ಬರು ಈ ಚಿತ್ರವನ್ನು ಡಿಸೈನ್​ ಮಾಡಿದ್ದು, ಅದು ಈಗ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.



ರಾಜಮೌಳಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ರಾಮಾಯಣ ಹಾಗೂ ಮಹಾಭಾರತದ ಮೇಲೆ ಸಿನಿಮಾ ಮಾಡುವಂತೆ ಅಭಿಮಾನಿಗಳು ಒತ್ತಾಯ ಮಡುತ್ತಿದ್ದಾರೆ. ಅದರ ಬೆನ್ನಲ್ಲೇ ಮಹೇಶ್ ಬಾಬು ರಾಮನ ಅವತಾರದಲ್ಲಿರುವ ಫೋಟೋ ವೈರಲ್​ ಆಗುತ್ತಿದ್ದು, ಪ್ರಿನ್ಸ್​ ಅಭಿಮಾನಿಗಳು ರಾಮನ ಪಾತ್ರಕ್ಕೆ ಮಹೇಶ್ ಸರಿಯಾದ ಆಯ್ಕೆ ಎನ್ನುತ್ತಿದ್ದಾರೆ.

 

Kangana Ranaut: 48 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಕಂಗನಾರ ಈ ಪ್ರೊಡಕ್ಷನ್​ ಹೌಸ್​..!

First published: May 27, 2020, 5:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading