HBD Sitara: 8ನೇ ವಸಂತಕ್ಕೆ ಕಾಲಿಟ್ಟ ಪ್ರಿನ್ಸೆಸ್​ ಸಿತಾರಾ: ಮಗಳಿಗಾಗಿ ಮಹೇಶ್​ ಬಾಬು ಕೊಟ್ರು ಈ ಸರ್ಪ್ರೈಸ್

HBD Sitara: ಪ್ರಿನ್ಸ್​ ಮಹೇಶ್ ಬಾಬು ಹಾಗೂ ನಮ್ರತಾರ ಮುದ್ದಿನ ಮಗಳು ಸಿತಾರಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 8ನೇ ವಸಂತಕ್ಕೆ ಕಾಲಿಟ್ಟ ಮಗಳಿಗೆ ಪ್ರಿನ್ಸ್, ಸಾಮಾಜಿಕ ಜಾಲತಾಣದಲ್ಲಿ​ ಪ್ರೀತಿ ತುಂಬಿದ ಪೋಸ್ಟ್​ ಮಾಡುವುದರೊಂದಿಗೆ ಮನೆಯಲ್ಲೂ ಸಖತ್ ಸರ್ಪ್ರೈಸ್​ ಕೊಟ್ಟಿದ್ದಾರೆ.

Anitha E | news18-kannada
Updated:July 20, 2020, 8:47 PM IST
HBD Sitara: 8ನೇ ವಸಂತಕ್ಕೆ ಕಾಲಿಟ್ಟ ಪ್ರಿನ್ಸೆಸ್​ ಸಿತಾರಾ: ಮಗಳಿಗಾಗಿ ಮಹೇಶ್​ ಬಾಬು ಕೊಟ್ರು ಈ ಸರ್ಪ್ರೈಸ್
ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹೇಶ್​ ಬಾಬು ಮಗಳು ಸಿತಾರಾ
  • Share this:
ಟಾಲಿವುಡ್​ ಸ್ಟಾರ್ ಕಿಡ್ಸ್​ನಲ್ಲಿ ಅತಿಹೆಚ್ಚು ಖ್ಯಾತಿ ಪಡೆದಿರುವುದು ಪ್ರಿನ್ಸ್​ ಮಹೇಶ್​ ಬಾಬು ಅವರ ಮಗಳು ಸಿತಾರಾ. ಯೂಟ್ಯೂಬ್​ನಲ್ಲಿ ತನ್ನದೇ ಆದ ಚಾನೆಲ್​ ಮಾಡಿಕೊಂಡು ಸೆಲೆಬ್ರಿಟಿಗಳ ಸಂದರ್ಶನ ಮಾಡುವ ಸಿತಾರಾ, ಸಾಮಾಜಿಕ ಜಾಲತಾಣದಲ್ಲೂ ಸಖತ್​ ಸಕ್ರಿಯವಾಗಿರುತ್ತಾರೆ. 

ಪ್ರಿನ್ಸ್​ ಮಹೇಶ್ ಬಾಬು ಹಾಗೂ ನಮ್ರತಾರ ಮುದ್ದಿನ ಮಗಳು ಸಿತಾರಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 8ನೇ ವಸಂತಕ್ಕೆ ಕಾಲಿಟ್ಟ ಮಗಳಿಗೆ ಪ್ರಿನ್ಸ್, ಸಾಮಾಜಿಕ ಜಾಲತಾಣದಲ್ಲಿ​ ಪ್ರೀತಿ ತುಂಬಿದ ಪೋಸ್ಟ್​ ಮಾಡುವುದರೊಂದಿಗೆ ಮನೆಯಲ್ಲೂ ಸಖತ್ ಸರ್ಪ್ರೈಸ್​ ಕೊಟ್ಟಿದ್ದಾರೆ.

ಕಳೆದ ಒಂದು ವಾರದಿಂದ ನಮ್ರತಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಗಳ ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭಿಸಿದ್ದರು. ಅದಕ್ಕಾಗಿ ಒಂದರ ಹಿಂದೆ ಒಂದು ಪೋಸ್ಟ್​ಗಳನ್ನೂ ಮಾಡುತ್ತಿದ್ದರು.


ಮಗಳಿಗೆ ಇಷ್ಟು ಬೇಗ 8 ವರ್ಷವಾಯಿತಾ ಎಂದು ಆಶ್ಚರ್ಯದಿಂದ ಪೋಸ್ಟ್​ ಬರೆಯಲು ಆರಂಭಿಸಿರುವ ಮಹೇಶ್​ ಬಾಬು, ನೀನು ಎಂದೂ ಊಹಿಸದಷ್ಟು ಪ್ರೀತಿಸುತ್ತೇನೆ ಎಂದು ಸಖತ್​ ಕ್ಯೂಟ್​ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
ಲಾಕ್​ಡೌನ್​ನಿಂದಾಗಿ ಇದೇ ಮೊದಲ ಸಲ ಸಿತಾರಾ ಹುಟ್ಟುಹಬ್ಬವನ್ನು ಮನೆಯಲ್ಲೇ ಆಚರಿಸಲಾಗುತ್ತಿದೆ. ಮನೆಯಲ್ಲೇ ಕೇಕ್​ ಕತ್ತರಿಸಿ, ಲಂಚ್​ ಹಾಗೂ ಡಿನ್ನರ್​ ಎಲ್ಲರೂ ಒಟ್ಟಿಗೆ ಮಾಡಲಿದ್ದೇವೆ ಎಂದು ನಮ್ರತಾ ಪೋಸ್ಟ್​ ಮಾಡಿದ್ದಾರೆ. ಕೊರೋನಾ ಲಾಕ್​ಡೌನ್​ನಿಂದಾಗಿ ಸಿತಾರಾ ಈ ಸಲ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡರೂ, ಅವರಿಗೆ ಸಿಗಬೇಕಾದ ಎಲ್ಲ ಸರ್ಪ್ರೈಸ್​ಗಳೂ ಸಿಕ್ಕಿವೆ.

Suicide Or Murder: ಸೂಯಿಸೈಡ್​ ಆರ್ ​ಮರ್ಡರ್​ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ಪಾತ್ರಧಾರಿ ಹೇಗಿದ್ದಾರೆ ನೋಡಿ..!


ಮಹೇಶ್​ ಬಾಬು ಹಾಗೂ ನಮ್ರತಾ ಪ್ರೀತಿಸಿ ವಿವಾಹವಾಗಿದ್ದು. 2005 ಫೆ. 10ರಂದು ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೆ ನಮ್ರತಾ ತಮ್ಮ ಅರಿಶಿಣ ಶಾಸ್ತ್ರದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Veerappan Web Series: ಮತ್ತೆ ವೀರಪ್ಪನ್​ ಪಾತ್ರದಲ್ಲಿ ನಟ ಕಿಶೋರ್​: ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಲಿದೆ ವೆಬ್​ ಸಿರೀಸ್​..!
Published by: Anitha E
First published: July 20, 2020, 8:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading