• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Mahesh Babu: ಮಹೇಶ್​ ಬಾಬು ನೋಡಿ ಕಂಟೆಂಟ್​ ಕ್ರಿಯೇಟರ್ ಗಪ್ ಚುಪ್ - ನಿಹಾರಿಕಾ ರಿಯಾಕ್ಷನ್ ಹೇಗಿತ್ತು​ ನೋಡಿ

Mahesh Babu: ಮಹೇಶ್​ ಬಾಬು ನೋಡಿ ಕಂಟೆಂಟ್​ ಕ್ರಿಯೇಟರ್ ಗಪ್ ಚುಪ್ - ನಿಹಾರಿಕಾ ರಿಯಾಕ್ಷನ್ ಹೇಗಿತ್ತು​ ನೋಡಿ

ನಿಹಾರಿಕಾ ಮತ್ತು ಮಹೇಶ್​ ಬಾಬು

ನಿಹಾರಿಕಾ ಮತ್ತು ಮಹೇಶ್​ ಬಾಬು

Niharika N.M: ಇದೇ ಸಮಯಕ್ಕೆ ನಿಹಾರಿಕಾ ಮುಂದೆ ಮತ್ತೊಬ್ಬರು ಬಂದು ನಿಲ್ಲುತ್ತಾರೆ. ಅವರ ಬಳಿ ಸಹ ನಿಹಾರಿಕಾ ಜಗಳ ಮಾಡಲು ಹೋಗುತ್ತಾರೆ. ಆ ವ್ಯಕ್ತಿ ತಿರುಗಿ ನೋಡಿದರೆ ಅದು ಮಹೇಶ್​ ಬಾಬು.

  • Share this:

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳು (Social Media) ಹೆಚ್ಚು ಪ್ರಭಾವ ಬೀರುತ್ತದೆ. ಇದರಿಂದ ಕೇವಲ ಮನರಂಜನೆ (Entertainment) ಮಾತ್ರವಲ್ಲದೇ, ಜೀವನವನ್ನು ರೂಪಿಸಿಕೊಂಡವರು ಬಹಳಷ್ಟು ಜನ. ಸುಮಾರು 2 ರಿಂದ 3 ವರ್ಷಗಳಿಂದ ಆರಂಭವಾದ ಈ ಕಂಟೆಂಟ್​ ಕ್ರೀಯೆಟಿಂಗ್ (Content Creating) ಎನ್ನುವ ಹೊಸ ದಾರಿ, ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ವಿನೂತನ ಪ್ರಯೋಗಗಳ ಮೂಲಕ ಜನರಿಗೆ ಮನರಂಜನೆ ನೀಡಿದವರು ಹಲವಾರು ಜನ.  ರೋಸ್ಟರ್ಸ್, ರೀಲ್ಸ್ ಸ್ಟಾರ್ಸ್, ಸೋಷಿಯಲ್​ ಮೀಡಿಯಾ ಸ್ಟಾರ್ಸ್​ ಅಬ್ಬಾ ಇವರಿಗೆ ವಿಭಿನ್ನ ಹೆಸರುಗಳು ಇದೆ. ಮೊದ ಮೊದಲು ಕೇವಲ ಮನರಂಜನೆಯ ದೃಷ್ಟಿಯಿಂದ ಆರಂಭವಾದ ಈ ಹವ್ಯಾಸ ಇದೀಗ ಅಭ್ಯಾಸವಾಗಿದೆ. ಕೆಲವರಿಗೆ ಇದೇ ಜೀವನ ಕೂಡ.


ಕಂಟೆಂಟ್​ ಕ್ರಿಯೇಟರ್​ಗಳದ್ದೆ ಹವಾ


ಉದಾಹರಣೆಗೆ ಹಿಂದಿಯ ಕಂಟೆಂಟ್​ ಕ್ರಿಯೇಟರ್ ಆಶೀಶ್​ ಚಂಚಲ್ಲಾನಿ, ಯೂಟ್ಯೂಬ್​ ಹಾಗೂ ಫೇಸ್​ಬುಕ್​ನಲ್ಲಿ ವಿಡಿಯೋ ಮಾಡಿ ಹಾಕುತ್ತಿದ್ದ ಸಾಮಾನ್ಯ ಯುವಕ, ಇದೀಗ ಕ್ಯಾನ್​ ಸಿನಿಮೋತ್ಸವದಲ್ಲಿ ಸಹ ಭಾಗಿಯಾಗುವ ಮಟ್ಟಿಗೆ ಬೆಳೆದಿದ್ದಾರೆ. ಹಾಗೆಯೇ ಇವುಗಳ ಪ್ರಭಾವದಿಂದ ಹಲವಾರು ಬದಲಾವಣೆಗಳಾಗಿವೆ. ಅದರಲ್ಲೂ ಸಿನಿಮಾ ಪ್ರಚಾರದ ವಿಚಾರದಲ್ಲಿ ಈ ಸೋಷಿಯಲ್ ಮೀಡಿಯಾ ಬಹಳ ಪ್ರಭಾವ ಬೀರಿದೆ.  ಮೊದಲೆಲ್ಲ ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳು ಮತ್ತು ಚಿತ್ರದ ಕಲಾವಿದರು ಮಾತ್ರ ಪೋಸ್ಟ್ ಹಾಕುವುದು, ಅಥವಾ ಅವರ ಖಾತೆಯಲ್ಲಿ ವಿಡಿಯೋ ಮಾಡಿ ಹಾಕುವುದನ್ನ ಮಾಡುತ್ತಿದ್ದರು, ಆದರೆ ಈಗ ಎಲ್ಲವೂ ಬದಲಾಗಿದೆ. ಈ ಕಂಟೆಂಟ್​ ಕ್ರಿಯೇಟರ್​ಗಳು ಸಿನಿಮಾ ಪ್ರಚಾರದ ಪ್ರಮುಖ ಭಾಗ ಎನ್ನಬಹುದು.


ಹೌದು, ನೀವು ಬಾಲಿವುಡ್​ನ ಹಲವಾರು ಚಿತ್ರಗಳನ್ನು ಗಮನಿಸಿ, ಅವರು ಬಿಡುಗಡೆಯ ಸಮಯದಲ್ಲಿ ಈ ಕಂಟೆಂಟ್​ ಕ್ರಿಯೇಟರ್​ಗಳನ್ನು ಬಳಸಿಕೊಂಡು ಜನರ ಬಳಿ ತಲುಪುವ ಪ್ರಯತ್ನ ಮಾಡುತ್ತಾರೆ. ಮೊನ್ನೆಯಷ್ಟೇ ಆಯುಷ್ಮಾನ್ ಖುರಾನಾ ಕೂಡ ತಮ್ಮ ಚಿತ್ರದ ಪ್ರಚಾರಕ್ಕೆ ಇದನ್ನು ಬಳಸಿದ್ದರು. ಇದೀಗ ದಕ್ಷಿಣದಲ್ಲಿ ಸಹ ಈ ಅಭ್ಯಾಸ ಆರಂಭವಾಗಿದೆ.  ಪ್ರಖ್ಯಾತ ಕಂಟೆಂಟ್​ ಕ್ರಿಯೇಟರ್ ಆದ ನಿಹಾರಿಕಾ ಎನ್​ ಎಂ ದಕ್ಷಿಣದ ಸ್ಟಾರ್ ಜೊತೆ ಸಿನಿಮಾ ಪ್ರಚಾರದ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆ ಮಾಡಿರುವ ವಿಡಿಯೋವೊಂದು ಬಹಳ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಗೆ ಮಸ್ತ್ ಮಜಾ ನೀಡಿದೆ.

View this post on Instagram


A post shared by Niharika Nm (@niharika_nm)

ಇದೇ ಜೂನ್ 3 ರಂದು  ಮೇಜರ್ ಸಿನಿಮಾ ತೆರೆಗೆ ಬರುತ್ತದೆ. ಅದರ ಪ್ರಚಾರಕ್ಕೆ ಸಹ ಈಗ ಹೊಸ ಮಾರ್ಗ ಅನುಸರಿಸಿದ್ದು, ಆದಿಶೇಷ ನಿಹಾರಿಕ ಜೊತೆ ವಿಡಿಯೋ ಮಾಡಿದ್ದು, ಅದಕ್ಕೆ ಮಹೇಶ್​ ಬಾಬು ಕೂಡ ಸಾಥ್ ನೀಡಿದ್ದಾರೆ.  ಮುಂಬೈ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನವನ್ನು ಆಧರಿಸಿ ಈ ಮೇಜರ್ ಚಿತ್ರ ಮಾಡಲಾಗಿದ್ದು, ಇದೇ ಜೂನ್​ 3 ರಂದು ಬಿಡುಗಡೆಯಾಗುತ್ತಿದೆ.  ಆ ದಾಳಿಯಲ್ಲಿ ಹಲವಾರು ಜನರ ಬದುಕನ್ನು ಉಳಿಸಿ, ಜೀವವನ್ನು ಮುಡುಪಾಗಿಟ್ಟ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಈ ಚಿತ್ರ ಮಾಡಲಾಗಿದ್ದು, ಇದೀಗ ಅವರು ಪ್ರಚಾರ ಮಾಡುತ್ತಿರುವ ವಿಧಾನ ಫುಲ್ ಟ್ರೆಂಡ್​ ಆಗುತ್ತಿದೆ.


ಇದನ್ನೂ ಓದಿ: ಬೇಬಿ ಬಂಪ್ ಫೋಟೋ ಶೇರ್ ಮಾಡಿದ ಸೋನಮ್ ಕಪೂರ್, ಸಾವರಿಯಾ ಬೆಡಗಿಗೆ ಅಭಿಮಾನಿಗಳಿಂದ ವಿಶ್​ಗಳ ಸುರಿಮಳೆ


ವಿಡಿಯೋದಲ್ಲಿ ಏನಿದೆ?


ಒಂದು ಸಿನಿಮಾ ಥಿಯೇಟರ್​, ಅಲ್ಲಿ ಟಿಕೆಟ್​ ಪಡೆಯಲು ನಿಹಾರಿಕಾ ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಆಗ ಇದ್ದಕ್ಕಿದ್ದ ಹಾಗೆ , ಅವರ ಮುಂದೆ ಹಲವಾರು ಜನ ಬಂದು ನಿಲ್ಲುತ್ತಾರೆ. ಇದು ನಿಹಾರಿಕಾಗೆ ಗೊಂದಲ ಉಂಟು ಮಾಡುತ್ತದೆ. ಇದರ ನಡುವೆ ಆದಿಶೇಷ ಅವರು ಸಹ ಬಂದು ನಿಲ್ಲುತ್ತಾರೆ.  ಇದರಿಂದ ಕೋಪಗೊಳ್ಳುವ ನಿಹಾರಿಕಾ ನಿಮಗೆ ಲೈನ್​ ಇರುವುದು ಕಾಣುವುದಿಲ್ಲವಾ?  ಈ ರೀತಿ ಮಧ್ಯ ಬಂದು ನಿಲ್ಲುತ್ತೀರಲ್ಲ, ಅತಿಯಾಗಿ ವರ್ತನೆ ಮಾಡಬೇಡಿ. ಇದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಆಗ ಆದಿಶೇಷ ಸುಮ್ಮನೆ ಹಿಂದೆ ಹೋಗಿ ನಿಲ್ಲುತ್ತಾರೆ.


ಇದೇ ಸಮಯಕ್ಕೆ ನಿಹಾರಿಕಾ ಮುಂದೆ ಮತ್ತೊಬ್ಬರು ಬಂದು ನಿಲ್ಲುತ್ತಾರೆ. ಅವರ ಬಳಿ ಸಹ ನಿಹಾರಿಕಾ ಜಗಳ ಮಾಡಲು ಹೋಗುತ್ತಾರೆ. ಆ ವ್ಯಕ್ತಿ ತಿರುಗಿ ನೋಡಿದರೆ ಅದು ಮಹೇಶ್​ ಬಾಬು. ತಕ್ಷಣ ಮಹೇಶ್​ ಬಾಬು ಅವರನ್ನು ನೋಡಿ, ನಿಹಾರಿಕಾ ಶಾಕ್ ಆಗಿ ಬಾಯಿಗೆ ಬೀಗ ಹಾಕಿಕೊಳ್ಳುತ್ತಾರೆ. ಅಲ್ಲದೇ ನೀವು ಎಲ್ಲಿ ನಿಲ್ಲುತ್ತೀರೋ ಅಲ್ಲಿಂದಲೇ ಲೈನ್​ ಸ್ಟಾರ್ಟ್​ ಎನ್ನುತ್ತಾರೆ ನಿಹಾರಿಕಾ. ಇದು ಬಹಳ ಮಜಾವಾಗಿದ್ದು, ಸುಮಾರು 7 ಲಕ್ಷಕ್ಕೂ ಹೆಚ್ಚು ಜನ ನೋಡಿ ಎಂಜಾಯ್ ಮಾಡಿದ್ದಾರೆ.


ಇದನ್ನೂ ಓದಿ: ಇಂದು ಪಾರ್ವತಮ್ಮ ಪುಣ್ಯಸ್ಮರಣೆ, ರಾಜ್‌ಕುಮಾರ್ ಹಿಂದಿನ ಶಕ್ತಿ ಇವರೇ


ಇನ್ನು ಮಹೇಶ್​ ಬಾಬು ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಹಾಗಾಗಿ ಪ್ರಚಾರ ಕಾರ್ಯದಲ್ಲಿ ಸಹ ಸಾಥ್ ನೀಡುತ್ತಿದ್ದಾರೆ. ಇನ್ನು ನಿಹಾರಿಕಾ ಇತ್ತೀಚಿನ ಬ್ಲಾಕ್​ ಬಸ್ಟರ್ ಚಿತ್ರ ಕೆಜಿಎಫ್ ಚಾಪ್ಟರ್ 2 ರಿಲೀಸ್​ ಆದಾಗ ಸಹ ರಾಕಿ ಭಾಯ್ ಯಶ್​ ಜೊತೆ ವಿಡಿಯೋ ಮಾಡಿದ್ದರು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು