ಟಾಲಿವುಡ್​ ಪ್ರಿನ್ಸ್​ಗೆ ಜೊತೆಯಾದ ಅರ್ಜುನ್​ ರೆಡ್ಡಿ: ಮಹೇಶ್​ ಬಾಬು ಬ್ಯಾನರ್​ನಲ್ಲಿ ವಿಜಯ್​ ದೇವರಕೊಂಡ 

ಅಭಿನಯದ ಜೊತೆ ಜೊತೆಗೆ ನಟ ಮಹೇಶ್​ ಬಾಬು ವ್ಯವಹಾರದಲ್ಲೂ ಹೊಸ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ಎಎಂಬಿ ಸಿನಿಮಾಸ್​ ಎಂಬ ಮಲ್ಟಿಪ್ಲೆಕ್ಸ್​ ಅನ್ನು ಆರಂಭಿಸಿದ್ದು ಗೊತ್ತೇ ಇದೆ. ಅವರೊಂದಿಗೆ ಅವರು ಸಿನಿಮಾ ನಿರ್ಮಾಣ ಕ್ಷೇತ್ರಕ್ಕೂ ಕೈ ಹಾಕಿದ್ದಾರೆ.

Anitha E | news18
Updated:May 9, 2019, 1:46 PM IST
ಟಾಲಿವುಡ್​ ಪ್ರಿನ್ಸ್​ಗೆ ಜೊತೆಯಾದ ಅರ್ಜುನ್​ ರೆಡ್ಡಿ: ಮಹೇಶ್​ ಬಾಬು ಬ್ಯಾನರ್​ನಲ್ಲಿ ವಿಜಯ್​ ದೇವರಕೊಂಡ 
ವಿಜಯ್​ ದೇವರಕೊಂಡ ಹಾಗೂ ಮಹೇಶ್​ ಬಾಬು
  • News18
  • Last Updated: May 9, 2019, 1:46 PM IST
  • Share this:
ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಕೇವಲ ಸಿನಿಮಾಗಳಲ್ಲಿ ಅಭಿನಯಿಸುವುದು ಮಾತ್ರವಲ್ಲದೆ, ವ್ಯವಹಾರ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದ್ದಾರೆ. ಹೌದು, ಈ ಹಿಂದೆಯೇ ಅವರು ತಮ್ಮ ಸ್ವಂತ ಬ್ಯಾನರ್​ ಅಡಿಯಲ್ಲಿ ಸಹ ನಿರ್ಮಾಣಪಕನಾಗಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ. 'ಬ್ರಹ್ಮೋತ್ಸವಂ' ಹಾಗೂ 'ಶ್ರೀಮಂತುಡು' ಸಿನಿಮಾಗಳಿಗೆ ಮಹೇಶ್​ ಹಣ ಹೂಡಿದ್ದು, ಇದರ ಜೊತೆಗೆ ಇತ್ತೀಚೆಗಷ್ಟೆ ಎಎಂಬಿ ಸಿನಿಮಾಸ್​ ಎಂಬ ಮಲ್ಟಿಪ್ಲೆಕ್ಸ್​ ಅನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: ಟಾಲಿವುಡ್​ನಲ್ಲಿ 'ಮಹರ್ಷಿ' ಹವಾ: ಅಮೆರಿಕದಲ್ಲೂ ದಾಖಲೆ ಬರೆಯಲು ಸಿದ್ಧರಾದ ಪ್ರಿನ್ಸ್ ಮಹೇಶ್​ ಬಾಬು

ಇನ್ನು ಸದ್ಯದಲ್ಲೇ 'ಮಹೇಶ್​ ಬಾಬು ಎಂಟರ್​ಟೈನ್ಮೆಂಟ್ಸ್​' ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಿಸಲಿದ್ದಾರಂತೆ. ಇದರ ಭಾಗವಾಗಿ ಅಡವಿ ಶೇಷ್​ ನಾಯಕನಾಗಿ ಅಭಿನಯಿಸುತ್ತಿರುವ 'ಮೇಜರ್​' ಸಿನಿಮಾವನ್ನು ಮಹೇಶ್​ ಅವರ ಬ್ಯಾನರ್​ ಅಡಿಯಲ್ಲೇ ನಿರ್ಮಿಸುತ್ತಿರುವ ವಿಷಯ ತಿಳಿದೇ ಇದೆ.

'ಮೇಜರ್​' ಸಿನಿಮಾ ಇನ್ನೂ ನಿರ್ಮಾಣ ಹಂತದಲ್ಲೇ ಇದ್ದು, ಜತೆಗೆ ಇನ್ನೊಂದು ಸಿನಿಮಾಗೆ ಮಹೇಶ್​ ಓಕೆ ಹೇಳಿದ್ದಾರಂತೆ. ಸಂದೀಪ್​ ವಂಗಾ ನಿರ್ದೇಶನದಲ್ಲಿ ವಿಜಯ್​ ದೇವರಕೊಂಡ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ಮಹೇಶ್​ ಬಾಬು ಹಣ ಹೂಡಲಿದ್ದಾರಂತೆ.

ಹೌದು, 'ಅರ್ಜುನ್​ ರೆಡ್ಡಿ' ನಂತರ ಸಂದೀಪ್​ ವಂಗಾ ಅವರು ಮಹೇಶ್​ ಬಾಬು ಅವರನ್ನು ಭೇಟಿ ಮಾಡಿದ್ದು, ಒಂದು ಕತೆಯನ್ನು ಕೇಳಿಸಿದ್ದರಂತೆ. ಪ್ರಿನ್ಸ್​ಗೆ ಕತೆ ಇಷ್ಟವಾಗಿದ್ದು, ಓಕೆ ಮಾಡಿದ್ದರಂತೆ. ಆದರೆ ಇದು ಕಾರ್ಯರೂಪಕ್ಕೆ ಬರಲಿಲ್ಲ.

ಈಗ ಈ ಕುರಿತಂತೆ ಮತ್ತೊಂದು ತಾಜಾ ಸುದ್ದಿ ಟಾಲಿವುಡ್​​ ಅಂಗಳದಲ್ಲಿ ಹರಿದಾಡುತ್ತಿದೆ. ಅದು ಸಂದೀಪ್​ ವಂಗಾ ಅವರ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು.

ಇದನ್ನೂ ಓದಿ: Happy Birthday Vijay Devarakonda: ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಸಿಹಿ ಸುದ್ದಿ ಕೊಟ್ಟ ವಿಜಯ್​ ದೇವರಕೊಂಡಈ ಹಿಂದೆಯೇ ಮಹೇಶ್​ ಪ್ರತಿಭಾನ್ವಿತ ಕಲಾವಿದರು ಹಾಗೂ ಒಳ್ಳೆಯ ಕತೆ ಸಿಕ್ಕರೆ ಸಿನಿಮಾ ನಿರ್ಮಾಣ ಮಾಡಲು ಸದಾ ಸಿದದ್ಧ ಎಂದಿದ್ದರು. ಅದಕ್ಕೆ ತಕ್ಕಂತೆ ಈಗ ಈ ವಿಷಯ ಹರಿದಾಡುತ್ತಿದೆ. ಇದರಿಂದಾಗಿಯೇ ವಿಜಯ್​​ ದೇವರಕೊಂಡ 'ಮಹರ್ಷಿ' ಸಿನಿಮಾದ ಪ್ರೀಮಿಯರ್​ ಶೋಗೂ ಬಂದಿದ್ದರು ಎನ್ನಲಾಗುತ್ತಿದೆ.

 

Robert Movie Photos: 'ರಾಬರ್ಟ್'​ ಸಿನಿಮಾದ ಮುಹೂರ್ತದಲ್ಲಿ ಡಿಬಾಸ್​ ಮತ್ತು ತಂಡ


 
First published:May 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading