ಮಹರ್ಷಿಯಲ್ಲಿ ರಿಷಿಯಾಗಿ ಮಹೇಶ್​ಬಾಬು: ಬಿಡುಗಡೆಯಾಯಿತು ಫಸ್ಟ್​ಲುಕ್​

news18
Updated:August 10, 2018, 1:54 PM IST
ಮಹರ್ಷಿಯಲ್ಲಿ ರಿಷಿಯಾಗಿ ಮಹೇಶ್​ಬಾಬು: ಬಿಡುಗಡೆಯಾಯಿತು ಫಸ್ಟ್​ಲುಕ್​
news18
Updated: August 10, 2018, 1:54 PM IST
ನ್ಯೂಸ್​ 18 ಕನ್ನಡ 

ಕೆಲವು ನಟರೇ ಹಾಗೆ ವಯಸ್ಸು ಹೆಚ್ಚಿದಷ್ಟೂ, ಇನ್ನಷ್ಟು ಚೆನ್ನಾಗಿ ಕಾಣಿಸುತ್ತಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕೂಡ ಅಷ್ಟೇ. ಅವರ ದೂಧ್​​ಪೇಡಾದಂತಹ ಮುದ್ದು ಮುಖ, ಕ್ಯೂಟ್​ ಸ್ಮೈಲ್​ ಹಾಗೂ ಸಾಧಾರಾಣಾ ಮೈಕಟ್ಟು ಅವರನ್ನು ಕಾಲೇಜು ಹುಡುಗನ ತರ ಕಾಣುವಂತೆ ಮಾಡುತ್ತದೆ.

ಸದ್ಯ `ಮಹರ್ಷಿ' ಅವತಾರ ತಾಳಿರೋ ಮಹೇಶ್ ಈಗಷ್ಟೇ ಪದವಿ ಕಾಲೇಜಿಗೆ ಸೇರಿರೋ ಆಗಿರೋ ಹುಡುಗನಂತೆ ಕಾಣುತ್ತಿದ್ದಾರೆ. ಅದರ ಝಲಕ್ ಇಲ್ಲಿದೆ ನೋಡಿ.

 ಟಾಲಿವುಡ್ ಪ್ರಿನ್ಸ್ ಮಹೇಶ್‍ಬಾಬು 42 ವರ್ಷ ಪೂರೈಸಿ, 43ನೇ ವಸಂತಕ್ಕೆ ನಿನ್ನೆಯಷ್ಟೆ (ಆ.9) ಕಾಲಿಟ್ಟಿದ್ದಾರೆ. ಆದರೆ ಅವರನ್ನ ನೋಡಿದವರು, ಯಾರೂ ಕೂಡ ಅಷ್ಟು ವಯಸ್ಸಾಗಿದೆ ಅಂತ ನಂಬುವುದೇ ಇಲ್ಲ. ಅದಕ್ಕೆ ಕನ್ನಡಿ ಹಿಡಿಯುವಂತಿದೆ  ಅವರ ಹೊಸ ಸಿನಿಮಾ 'ಮಹರ್ಷಿ'ಯ ಟೀಸರ್​.

ಹೌದು, ವಂಶಿಪಡಿಪಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್‍ಬಾಬು ರಿಷಿ ಎಂಬ ಪಾತ್ರ ಮಾಡ್ತಿದ್ದಾರೆ. ಸದ್ಯ ಪಾತ್ರದ ಒಂದು ಫಸ್ಟ್​ಲುಕ್​ ಅಷ್ಟೆ ಬಿಡುಗಡೆ ಮಾಡಲಾಗಿದೆ. ಮಹೇಶ್ ಇಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದು, ಹರೆಯದ ಹುಡುಗಿಯರ ನಿದ್ದೆಗೆಡಿಸುತ್ತಿದ್ದಾರೆ.

ಮಹೇಶ್​ ಬಾಬು ಮಹರ್ಷಿ ಸಿನಿಮಾಗಾಗಿ ಹೊಸ ಹೇರ್​ ಸ್ಟೈಲ್​ ಮಾಡಿಸಿಕೊಳ್ಳಲು ಎಲ್ಲಿಗೆ ಹೋಗಿದ್ದರು ಎಂದು ತಿಳಿಯೋಕೆ ಈ ಲಿಂಕ್​ ಕ್ಲಿಕ್​ ಮಾಡಿ.....

https://kannada.news18.com/news/entertainment/is-mahesh-babu-planning-to-debut-in-bollywood-soon-wife-namrata-shirodkar-has-the-answer-54083.html

'ಭರತ್ ಅನೇ ನೇನು' ಸಿನಿಮಾ ಮೂಲಕ ಯುವ ಮುಖ್ಯಮಂತ್ರಿಯ ಅವತಾರದಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. ಈಗ 'ಮಹರ್ಷಿ' ಸಿನಿಮಾದಲ್ಲಿ ಅವರ ಲುಕ್ಕು-ಗೆಟಪ್​ ಸಂಪೂರ್ಣ ಬದಲಾಗಿದೆ. ಅವರ ಹೇರ್ ಸ್ಟೈಲ್​, ಚಿಗುರು ಮೀಸೆ, ಸ್ಟೈಲಿಶ್ ಆಗಿರೋ ಗಡ್ಡ ಮಹೇಶ್ ಲುಕ್‍ಗೆ ಒಂಥರಾ ಕಿಕ್ ಕೊಟ್ಟಿವೆ. ಒಟ್ಟಾರೆ ಚಿತ್ರದಿಂದ ಚಿತ್ರಕ್ಕೆ ಬದಲಾಗುವ ಮಹೇಶ್ ರಿಷಿಯಾಗಿ ಮತ್ತೆ ಮೋಡಿ ಮಾಡೋದು ಖಚಿತ ಎನ್ನುತ್ತಿದ್ದಾರೆ ಟಾಲಿವುಡ್ ಮಂದಿ.

 

 
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...