Hamsalekha: ಸರಿಗಮಪ’ ಶೋಗೆ ಹಂಸಲೇಖ ಗೈರು, ವಾಹಿನಿ ಹೇಳಿದ್ದು ಹೀಗೆ..!

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ  ಅವರು, ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊರಗುಳಿಯಲು ನಿರ್ಧರಿಸಿದರು. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ’ ಎಂದು ತಿಳಿಸಿದ್ದಾರೆ,

ಹಂಸಲೇಖ

ಹಂಸಲೇಖ

 • Share this:
  ಕನ್ನಡದಲ್ಲಿ ನೂರಾರು ಹೊಸ ಪ್ರತಿಭೆಗಳನ್ನು ಹುಟ್ಟುಹಾಕಿದ್ದ ‘ಸರಿಗಮಪ’ ಸಂಗೀತ ರಿಯಾಲಿಟಿ ಶೋಗೆ (Music reality show)ಅದರದೇ ಆದ ಗೌರವ ಇದೆ. ಕಾರ್ಯಕ್ರಮದ ಆಯೋಜನೆ, ತೀರ್ಪುಗಾರರು, ಸ್ಪರ್ಧಿಗಳು ಎಲ್ಲಾವೂ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಿ ಕಾರ್ಯಕ್ರಮವನ್ನು ಉನ್ನತ ಸ್ಥಾನಕ್ಕೇರಿಸಿದ್ದಾರೆ. ಅಂತಹ ಅದ್ಬುತ ಕಾರ್ಯಕ್ರಮಕ್ಕೆ ಮಹಾ ಗುರು ಹಂಸಲೇಖ (Hamsalekha) ಗೈರಾಗಿದ್ದಕ್ಕೆ ಇದೀಗ ಎಲ್ಲೆಡೆ ಗುರುಗಳನ್ನು ಶೋನಿಂದ ಹೊರಗಿಟ್ಟಿದ್ದಾರೆ ಎಂಬ ಸುದ್ದಿ (Rumors)ಹರಡಿತ್ತು. ಆದರೆ ಸ್ವತಃ ಜೀ ವಾಹಿನಿ ಕಡೆಯಿಂದ ಸ್ಪಷ್ಟನೆ (Clarification)ಸಿಕ್ಕಿದೆ. ಕಳೆದ ಸೆಪ್ಟೆಂಬರ್‌ ನಲ್ಲಿ ಮತ್ತೆ ಆರಂಭವಾದ ಸರಿಗಮಪ’ ಹೊಸ ಆವೃತ್ತಿಯಲ್ಲಿ ಹೊಸ ಬಗೆಯೂ ಸಾಕಷ್ಟು ಮನರಂಜನೆ ನೀಡುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನಾದಬ್ರಹ್ಮ ಹಂಸಲೇಖ ಅವರು ಈ ಶೋನ ಮಹಾಗುರು ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಶನಿವಾರ ಶೋನಲ್ಲಿ (Saturday's show)ಕಾಣಿಸಿಕೊಂಡಿಲ್ಲದ ಕಾರಣ ಭಾರಿ ಗುಸುಗುಸು ಶುರುವಾಗಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.

  ಇದನ್ನು ಓದಿ: ನನ್ನ ಹೇಳಿಕೆಯಿಂದ ಕೆಲಸದಲ್ಲೂ ನನಗೆ ಹಿನ್ನಡೆಯಾಗಿದೆ; ವಿಚಾರಣೆ ವೇಳೆ ಗದ್ಗದಿತರಾದ Hamsalekha

  ಅಲ್ಲದೆ, ಜೀ ಕನ್ನಡ ವಾಹಿನಿ ಅವರನ್ನು ‘ಸರಿಗಮಪ’ ಶೋನಿಂದ ಹೊರಗಿಟ್ಟಿದೆ ಎಂಬ ಮಾತು ಕೇಳಿ ಬಂದಿತ್ತು. ಅದಲ್ಲದೇ ಹಂಸಲೇಖ ಅವರನ್ನು ಬಾಯ್‌ ಕಟ್‌ ಮಾಡುವಂತೆ ಒತ್ತಾಯ ಹೆಚ್ಚಾದ ಹಿನ್ನಲೆಯಲ್ಲಿ ಅವರನ್ನು ಶೋನಿಂದ ಕೈಬಿಡಲಾಗಿದೆ ಎಂದೆಲ್ಲಾ ಬಿಂಬಿಸಲಾಗಿತ್ತು.
  ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ..? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿವರ್ ಫ್ರೈ ತಿಂತಾರಾ, ಆಗತ್ತಾ..?,'' ಅಂತ ಹಂಸಲೇಖ ಹೇಳಿದ್ದರು.

  ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಾದ ಬ್ರಹ್ಮನ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದರು. ಸರಿಗಮಪ ಕಾರ್ಯಕ್ರಮದಿಂದ ಹಂಸಲೇಖರನ್ನು ಕಿತ್ತೊಗೆಯಿರಿ. ಇಲ್ಲದೆ ಹೋದರೆ ಟಿಆರ್‌ಪಿ ಕಳೆದುಕೊಳ್ಳುತ್ತೀರಾ ಎಂದು ಎಚ್ಚರಿಕೆ ನೀಡಿದ್ದರು. ಮತ್ತೆ ಕೆಲವರು ಇವರು ಮಹಾಗುರುಗಳು ಅಂತ ಅನಿಸಿಕೊಳ್ಳಲು ಯೋಗ್ಯರಲ್ಲ. ಸರಿಗಮಪ ಕಾರ್ಯಕ್ರಮದಿಂದ ಕೈ ಬಿಡಿ ಎಂದು ಒತ್ತಾಯಿಸಿದ್ದರು, ಅನಂತರ ಹಂಸಲೇಖ ಅವರು ಕ್ಷಮೆಯಾಚಿಸಿದಲ್ಲದೇ, ವಿಚಾರಣೆಯನ್ನು ಎದುರಿಸಿದ್ದಾರೆ.

  ರಾಘವೇಂದ್ರ ಹುಣಸೂರು ಸ್ಪಷ್ಟನೆ
  ಈ ಮಧ್ಯೆ ಹಂಸಲೇಖ ಅವರ ಆರೋಗ್ಯ ತಪ್ಪಿ ಮಾಹಿತಿ ನೀಡಿದ್ದರು. ಈ ಮಧ್ಯೆ ಅವರು ‘ಸರಿಗಮಪ’ ಶೋನಲ್ಲಿ ಕಾಣಿಸಿಕೊಳ್ಳದೇ ಇದ್ದಿದ್ದು ಅನುಮಾನ ಹುಟ್ಟು ಹಾಕಿತ್ತು. ಅವರು ಮತ್ತೆ ಶೋಗೆ ಬರುವುದಿಲ್ಲ ಎನ್ನುವ ಮಾತನ್ನು ಕೆಲವರು ಹೇಳಿದ್ದರು. ಈಗ ಇದಕ್ಕೆ ಜೀ ಕನ್ನಡ ಬಿಸ್ನೆಸ್​ ಹೆಡ್ ರಾಘವೇಂದ್ರ ಹುಣಸೂರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ  ಅವರು, ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊರಗುಳಿಯಲು ನಿರ್ಧರಿಸಿದರು. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ’ ಎಂದು ತಿಳಿಸಿದ್ದಾರೆ,

  ನನ್ನ ಆರೋಗ್ಯ ಸ್ಥಿರವಾಗಿದೆ. ಸರಿಗಮಪ ನನ್ನ ಪ್ರೀತಿಯ ಭೂಮಿಕೆ. ಅದು ಮನಸ್ಸು ಮನಸ್ಸುಗಳನ್ನು ನೇಯುವ ವೇದಿಕೆ. ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ. ಬೇಗ ಬಂದು ಸೇರಿಕೊಳ್ಳುತ್ತೇನೆ’ ಎನ್ನುವ ಸಂದೇಶವೂ ಹಂಸಲೇಖ ಕಡೆಯಿಂದ ಬಂದಿದೆ. ಹಾಗಾಗಿ ಅಭಿಮಾನಿಗಳು ನಿರಾಸೆಯಾಗಬೇಕಿಲ್ಲ.

  ಅಲ್ಲದೇ ಹಂಸಲೇಖ ಅವರು ರಾಘವೇಂದ್ರ ಹುಣಸೂರು ಅವರಿಗೆ ಕಳುಹಿಸಿರುವ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ. ಗುರುಗಳಿಂದ ಬಂದ ಸಂದೇಶ ಎಂದು ಬರೆದುಕೊಂಡು ಅಭಿಮಾನಿಗಳೊಂದಿಗೆ ಅದನ್ನು ಶೇರ್ ಮಾಡಿಕೊಂಡಿದ್ದಾರೆ.

  ಇದನ್ನು ಓದಿ:Hamsalekha: ವಿವಾದ ಕುರಿತ ಹೇಳಿಕೆ ದಾಖಲಿಸಲು ಆಗಮಿಸಿದ ಹಂಸಲೇಖ; ಧರಣಿ ಕುಳಿತ ಅಹಿಂಸಾ ಚೇತನ್

  ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ  ಹೊರ ಹಾಕಿದ್ದಾಳೆ. ನನ್ನ ಎಪತ್ತು ವರ್ಷದ ಜೀವನದಲ್ಲಿ ಎಂದಿಗೂ ಹೀಗೆ ಮಾಡಿಕೊಂಡಿಲ್ಲ ಹೇಳಿಕೆಯಿಂದ ತಪ್ಪಾಗಿದೆ. ಯಾವ ಧರ್ಮ ,ಜಾತಿಯ ನಿಂದಿಸೊ ಉದ್ದೇಶ ಇರಲಿಲ್ಲ.  ನನ್ನ ಕೆಲಸದಲ್ಲಿಯೂ ನನಗೆ ಹಿನ್ನಡೆ ಅಗಿದೆ ಎಂದು ವಿಚಾರಣೆಯಲ್ಲಿ ಹೇಳಿಕೊಂಡಿದ್ದರು.
  Published by:vanithasanjevani vanithasanjevani
  First published: