Kannada Serial: ಧಾರಾವಾಹಿ ಪ್ರಿಯರಿಗೆ ಗುಡ್​ ನ್ಯೂಸ್​, ಮತ್ತೆ ಸ್ಟಾರ್ಟ್ ಆಗ್ತಿದೆ ಮಗಳು ಜಾನಕಿ

T.N.Seetharam: ತಮ್ಮ ಧಾರಾವಾಹಿಯ ಮೂಲಕ ಸಂಚಲನ ಮೂಡಿಸುವ ಟಿ.ಎನ್ ಅವರ ಈ ಮಗಳು ಜಾನಕಿ ಧಾರಾವಾಹಿ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅದು ಒಟಿಟಿ ಮೂಲಕ.

ಟಿ.ಎನ್.ಸೀತಾರಾಮ್

ಟಿ.ಎನ್.ಸೀತಾರಾಮ್

  • Share this:
ಧಾರಾವಾಹಿ (Serial) ಎಂದರೆ ಮೊದಲೆಲ್ಲ ಕೇವಲ ಹೆಂಗಸರು (Women) ಮಾತ್ರ ನೋಡುವುದು, ಅದರಲ್ಲಿ ಏನೂ ಇರುವುದಿಲ್ಲ. ಮನೆ ಹಾಳು ಮಾಡುವ ಐಡಿಯಾ ಮಾತ್ರ ಸಿಗುತ್ತದೆ ಎಂಬಿತ್ಯಾದಿ ಭಾವನೆ ಇತ್ತು. ಆದರೆ ಅದೆಲ್ಲಾ ದೂರ ಮಾಡಿದವರು ನಿರ್ದೇಶಕ, ನಿರ್ಮಾಪಕ ಟಿ.ಎನ್. ಸೀತಾರಾಮ್ (T. N. Seetharam) ​. ಅವರ ಧಾರಾವಾಹಿಗಳು ಆರಂಭವಾದ ನಂತರ ಎಲ್ಲವೂ ಬದಲಾಗಿದೆ. ಗಂಡಸರು ಸಹ ಧಾರಾವಾಹಿ ನೋಡಲು ಆರಂಭಿಸಿದ್ದರು. ಈ ಮಾಯಮೃಗ, ಮನ್ವಂತರ, ಮುಕ್ತ ಧಾರಾವಾಹಿಗಳು ಕಿರುತೆರೆಯಲ್ಲಿ ಬದಲಿಸಲಾಗದ ಇತಿಹಾಸವನ್ನು (History) ಬರೆದಿವೆ. ಅವರ ಧಾರಾವಾಹಿ ಬರುತ್ತಿದ್ದ ಸಮಯದಲ್ಲಿ ರೋಡ್​ಗಳು ಬಹಳ ಶಾಂತವಾಗಿರುತ್ತಿತ್ತಂತೆ, ಗಂಡಸರು ಸಹ ಸರಿಯಾದ ಸಮಯಕ್ಕೆ ಮನೆ ತಲುಪುತ್ತಿದ್ದ ಕಾಲವಿತ್ತು. ಹಾಗೆ ಎಲ್ಲವನ್ನು ಬದಲಾಯಿಸಿದ ನಿರ್ದೇಶಕ ಎಂದರೆ ತಪ್ಪಿಲ್ಲ.

ಮರಳಿ ಬರುತಿದೆ ಮಗಳು ಜಾನಕಿ

ಕೆಲ ಕಾಲ ಧಾರಾವಾಹಿಯಿಂದ ದೂರವಿದ್ದ ಟಿ.ಎನ್, ಮಗಳು ಜಾನಕಿ ಎಂಬ ಅದ್ಭುತ ಕಥೆಯ ಮೂಲಕ ಕಿರುತೆರೆಗೆ ಮರಳಿದ್ದರು. ಆದರೆ ಕೊರೊನಾ ನಂತರ ಅದರ ಪ್ರಸಾರ ಮುಂದುವರೆಯಲಿಲ್ಲ. ಅದು ಪ್ರೇಕ್ಷಕರಿಗೆ ನಿಜಕ್ಕೂ ಬೇಸರ ಮೂಡಿಸಿತ್ತು. ಆದರೆ ಈಗೊಂದು ಖುಷಿ ವಿಚಾರವಿದೆ. ಯಾವುದು ಆ ವಿಚಾರ ಅಂತ ತಿಳಿಯಬೇಕು  ಅಂದ್ರೆ ಈ ಸ್ಟೋರಿ ಓದಿ.

ತಮ್ಮ ಧಾರಾವಾಹಿಯ ಮೂಲಕ ಸಂಚಲನ ಮೂಡಿಸುವ ಟಿ.ಎನ್ ಅವರ ಈ ಮಗಳು ಜಾನಕಿ ಧಾರಾವಾಹಿ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅದು ಒಟಿಟಿ ಮೂಲಕ. ಹೌದು, ಭೂಮಿಕಾ ಟಾಕೀಸ್​ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ಮಗಳು ಜಾನಕಿ ಧಾರಾವಾಹಿ ಪ್ರಸಾರವಾಗಲಿದ್ದು ಇದು ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಈ ಧಾರಾವಾಹಿ ಮೊದಲು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು, ಆದರೆ ಕೊರೊನಾ ಲಾಕ್​ಡೌನ್​ ನಂತರ ಅದರ ಪ್ರಸಾರ ನಿಲ್ಲಿಸಲಾಗಿತ್ತು.

ಧಾರಾವಾಹಿ ಪ್ರಸಾರ ನಿಂತಿದ್ದರಿಂದ ವೀಕ್ಷಕರಿಗೆ ಬೇಸರವಾಗಿತ್ತು. ಆ ಧಾರಾವಾಹಿಗೆ ಅಪಾರ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು. ಯಾವ ಮಟ್ಟಿಗೆ ಎಂದರೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಪ್ರಶ್ನಿಸಲು ಆರಂಭಿಸಿದ್ದರು. ಅಲ್ಲದೇ ಸೀತಾರಾಮ್ ಅವರು ಎಲ್ಲಿಗೆ ಹೋದರೂ ಬಂದರೂ ಅದರ ಬಗ್ಗೆಯೇ ಪ್ರಶ್ನೆ ಮಾಡುತ್ತಿದ್ದರು. ಜನರ ಈ ಪ್ರತಿಕ್ರಿಯೆ ನೋಡಿ ಖುಷಿಯಾಗಿರುವ ಸೀತಾರಾಮ್ ಮತ್ತೆ ಧಾರಾವಾಹಿ ಆರಂಭಿಸಲು ನಿರ್ಧರಿಸಿದ್ಧಾರೆ.

ಇದನ್ನೂ ಓದಿ: ಹಿಟ್​ ಆಗಿದ್ದು ಕಮಲ್ ಸಿನಿಮಾ, ಪಾರ್ಟಿ ಕೊಟ್ಟಿದ್ದು ಮೆಗಾಸ್ಟಾರ್​! ಇವ್ರಿಗ್​ ಸಾಥ್​ ಕೊಟ್ರು ಸಲ್ಲು ಭಾಯ್​

ಇಂದಿನಿಂದ ಶೂಟಿಂಗ್ ಆರಂಭ

ಹೌದು, ಇಂದಿನಿಂದ ಅಂದರೆ ಜೂನ್ 13ರಿಂದ ಈ ಧಾರಾವಾಹಿ ಶೂಟಿಂಗ್ ಆರಂಭವಾಗಿದ್ದು, ಆಗಸ್ಟ್ ತಿಂಗಳ ಕೊನೆಯಲ್ಲಿ ಭೂಮಿಕಾ ಟಾಕೀಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಪ್ರಸಾರವಾಗಲಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ದೇಶಕ ಟಿ.ಎನ್.ಸೀತಾರಾಮ್, ಹೆಚ್ಚು, ಹೆಚ್ಚು ಜನರು ಈ ಬಗ್ಗೆ ಆಸಕ್ತಿ ತೋರಿದ ಕಾರಣ , ಅವರ ಒತ್ತಾಯದ ಮೇರೆಗೆ ಈ ಧಾರಾವಾಹಿಗೆ ಮರುಜೀವ ಬಂದಿದ್ದು, ಸುಮಾರು 300 ಸಂಚಿಕೆಗಳ ಧಾರಾವಾಹಿ ಪ್ರಸಾರ ಮಾಡಲಾಗುತ್ತದೆ ಎಂದಿದ್ದಾರೆ.

ಅಲ್ಲದೇ, ಧಾರಾವಾಹಿಯ ಒಂದು ಎಪಿಸೋಡ್ ಅರ್ಧ ಗಂಟೆ ಇರಲಿದ್ದು, ಯೂಟ್ಯೂಬ್​ನಲ್ಲಿ ಪ್ರಸಾರವಾಗುವುದರಿಂದ ಯಾವಾಗ ಬೇಕಾದರೂ ಸಹ ಅದನ್ನು ವೀಕ್ಷಿಸಬಹುದು ಎಂದು ಮಾಹಿತಿ ನೀಡಿದ್ದಾರೆ.  ಇನ್ನು ಸೀತಾರಾಮ್ ಅವರ ಈ ಧಾರಾವಾಹಿಯಲ್ಲಿ ಸಹ ಸುಧಾ ಬೆಳವಾಡಿ, , ರವಿ ಮಂಡ್ಯ, ರಶ್ಮಿ, ಮೇಧಾ ವಿದ್ಯಾ ಭೂಷಣ್ ಸೇರಿದಂತೆ ಮುಂತಾದ ಪ್ರಮುಖ ನಟ, ನಟಿಯರ ತಾರಾ ಬಳಗವಿದೆ. ಇನ್ನು ತಾಂತ್ರಿಕ ಬಳಗ ಸಹ ಅದೇ ಇರಲಿದ್ದು, ವೆಬ್​ ಸರಣಿ ಮಾದರಿಯಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿನಯ್ ಗುರೂಜಿ ಕನಸು ನನಸು ಮಾಡಿದ ಮಾಸ್ಟರ್ ಆನಂದ್, ಗ್ರೀನ್​ ಗೆಳೆಯರಿಂದ ಅದ್ಭುತ ಕಾರ್ಯ

ಇನ್ನು ಭೂಮಿಕಾ ಟಾಕೀಸ್​ನಲ್ಲಿ ಈಗಾಗಲೇ ಸೀತಾರಮ್ ನಿರ್ದೇಶನದ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು, ಇದೀಗ ಮಗಳು ಜಾನಕಿ ಸಹ ಬರುತ್ತಿರುವುದು ಸಂತೋಷಕ್ಕೆ ಕಾರಣವಾಗಿದೆ.
Published by:Sandhya M
First published: