ಯುಕ್ತಿ-ಶಕ್ತಿಗಳ ಮುಖಾಮುಖಿ: ಕುತೂಹಲ ಮೂಡಿಸುವ ಮಾಫಿಯಾ ಟೀಸರ್

Mafia teaser: ಈಗಾಗಲೇ ಕಾಲಿವುಡ್​​ನಲ್ಲಿ ಮಾಫಿಯಾ ಟೀಸರ್ ಸಖತ್ ಸೌಂಡ್ ಮಾಡುತ್ತಿದ್ದು, ಯುವ ನಿರ್ದೇಶಕನ ಹೊಸತನದಿಂದ ಕೂಡಿದ ಮೇಕಿಂಗ್ ಬಗ್ಗೆಈಗಾಗಲೇ ಸೂಪರ್ ಸ್ಟಾರ್ ರಜನಿಕಾಂತ್ ಮೆಚ್ಚುಗೆ ಸೂಚಿಸಿದ್ದಾರೆ.

news18-kannada
Updated:September 18, 2019, 10:11 AM IST
ಯುಕ್ತಿ-ಶಕ್ತಿಗಳ ಮುಖಾಮುಖಿ: ಕುತೂಹಲ ಮೂಡಿಸುವ ಮಾಫಿಯಾ ಟೀಸರ್
Mafia
  • Share this:
'ಧ್ರುವಂಗಳ್ ಪದಿನಾರ್' ಎಂಬ ಸೂಪರ್ ಡೂಪರ್ ಥ್ರಿಲ್ಲರ್ ಚಿತ್ರ ನೀಡಿದ ಕಾಲಿವುಡ್ ಯುವ ನಿರ್ದೇಶಕ ಕಾರ್ತಿಕ್ ನರೇನ್ 'ಮಾಫಿಯಾ'ಯೊಂದಿಗೆ ಮರಳಿದ್ದಾರೆ. ಈ ಬಾರಿ ಕೂಡ ಆ್ಯಕ್ಷನ್ ಸಸ್ಪೆನ್ಸ್ ಕಥೆಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಅರುಣ್ ವಿಜಯ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಯುಕ್ತಿ ಮತ್ತು ಶಕ್ತಿ ಕಾನ್ಸೆಪ್ಟ್ ಮೇಲೆ ಚಿತ್ರದಕಥೆಯನ್ನು ಹೆಣೆಯಲಾಗಿದ್ದು, ಇಲ್ಲಿ ಅರುಣ್ ಶಕ್ತಿಯನ್ನು ಪ್ರದರ್ಶಿಸಿದರೆ, ನಟ ಪ್ರಸನ್ನ ಯುಕ್ತಿಯನ್ನು ತೋರ್ಪಡಿಸಲಿದ್ದಾರೆ. ಮೇಲ್ನೋಟಕ್ಕೆ ಇದೊಂದು ಅಂಡಲ್​ವರ್ಲ್ಡ್​ ಹೊಡೆದಾಟ ಬಡಿದಾಟದ ಕಥೆ ಹೊಂದಿರುವುದು ಟೀಸರ್ ನೋಡಿದರೆ ತಿಳಿದು ಬರುತ್ತದೆ.

ಹಾಗೆಯೇ ಚಿತ್ರದಲ್ಲಿ ಅರುಣ್ ವಿಜಯ್-ಪ್ರಸನ್ನ ಪೊಲೀಸ್ ಪಾತ್ರಧಾರಿಗಳಾ ಅಥವಾ ಡಾನ್​ ಅವತಾರದಲ್ಲಿ ಕಾಣಿಸಲಿದ್ದಾರಾ ಎಂಬ ವಿಷಯವನ್ನು ಸಸ್ಪೆನ್ಸ್​ನಲ್ಲೇ ಇರಿಸಲಾಗಿದೆ.

ಇದನ್ನೂ ಓದಿ: ಪೋರ್ನ್​ ವೀಕ್ಷಕರೇ ಎಚ್ಚರ: ನಿಮ್ಮ ವಿಡಿಯೋ ಕೂಡ ರೆಕಾರ್ಡ್​ ಆಗುತ್ತಿದೆ..!

ಕಾಡಿನಲ್ಲಿ ಒಂದು ಸಿಂಹ ಇತ್ತು..ಎಂದು ಆರಂಭವಾಗುವ ಟೀಸರ್ ಕೊನೆಯಲ್ಲಿ ಗೆಲ್ಲುವುದು ಸಿಂಹದ ಶಕ್ತಿನಾ ಅಥವಾ ನರಿ ಕುತಂತ್ರವೇ ಎಂಬುದನ್ನು ಕಾದುನೋಡಿ ಎಂಬಾರ್ಥದಲ್ಲಿ ಅಂತ್ಯಗೊಳ್ಳುತ್ತದೆ.ಈಗಾಗಲೇ ಕಾಲಿವುಡ್​​ನಲ್ಲಿ ಮಾಫಿಯಾ ಟೀಸರ್ ಸಖತ್ ಸೌಂಡ್ ಮಾಡುತ್ತಿದ್ದು, ಯುವ ನಿರ್ದೇಶಕನ ಹೊಸತನದಿಂದ ಕೂಡಿದ ಮೇಕಿಂಗ್ ಬಗ್ಗೆಈಗಾಗಲೇ ಸೂಪರ್ ಸ್ಟಾರ್ ರಜನಿಕಾಂತ್ ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರವು ಎರಡು ಭಾಗಗಳಾಗಿ ತೆರೆಗೆ ಬರಲಿದ್ದು, ಚಾಪ್ಟರ್ 1 ಯಶಸ್ವಿಯಾದರೆ, ಭಾಗ 2 ಚಿತ್ರೀಕರಣಕ್ಕೆ ಕಾರ್ತಿಕ್ ಪ್ಲ್ಯಾನ್ ಹಾಕಿಕೊಂಡಿದ್ದಾರೆ.ಸ್ವಿಟ್ಜರ್ಲೆಂಡ್​ನಲ್ಲಿ ಒಡೆಯ-ಒಡತಿ: ಕೊಡಗಿನ ವೈಯ್ಯಾರಿ ಜೊತೆ ದರ್ಶನ್ ಸ್ಟೆಪ್ಸ್
First published:September 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading