Dhanush ಟೈಮ್​ ಸರಿನೇ ಇಲ್ಲ-ಡಿವೋರ್ಸ್ ಆಯ್ತು, ಈಗ ಮತ್ತೊಂದು ಟೆನ್ಶನ್​! ತಮಿಳು ಸ್ಟಾರ್​ ನಟನಿಗೆ ಸಮನ್ಸ್​

ವೃದ್ಧ ದಂಪತಿಗಳು ಚಿತ್ರನಟ ಧನುಷ್ ತಮ್ಮ ಪುತ್ರ ಎಂದು ಕೋರ್ಟ್ ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದು, ಈ ಕುರಿತಾಗಿ ಕೋರ್ಟ್ ನಟ ಧನುಷ್​​ಗೆ ಸಮನ್ಸ್ (summoned ) ಜಾರಿ ಮಾಡಿದೆ.

ನಟ ಧನುಷ್​

ನಟ ಧನುಷ್​

  • Share this:
ದಕ್ಷಿಣ ಭಾರತದ ಖ್ಯಾತ ನಟ ಧನುಷ್ (South Indian Famous Actor Dhanush) ತಮ್ಮ ಅಭಿನಯದ ಮೂಲಕವೇ ಹೆಸರು ಮಾಡಿದವರು. ಯಾವುದೇ ಪಾತ್ರ ಕೊಟ್ಟರು ಧನುಷ್​ ನೀರು ಕುಡಿದಂತೆ ಸುಲಭವಾಗಿ ನಟಿಸಿಬಿಡುತ್ತಾರೆ. ಇವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಹುಡುಗನ ಪಾತ್ರಕ್ಕೂ ಸೈ, ಅಜ್ಜನ ಪಾತ್ರಕ್ಕೂ. ಯಾವುದೇ ಪಾತ್ರ ಕೊಟ್ಟರು ಆಳವಾಗಿ ಇಳಿದು ಅಭಿನಯಿಸುತ್ತಾರೆ. ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗಿದ್ದರು. ತಮಿಳು ನಿರ್ದೇಶಕಿ, ರಜನಿಕಾಂತ್ (Rajinikanth) ಅವರ ಪುತ್ರಿ ಐಶ್ವರ್ಯಾ (Aishwarya) ಹಾಗೂ ಧನುಷ್​ ಡಿವೋರ್ಸ್ (Divorce) ಪಡೆದು ದೂರಾಗಿದ್ದಾರೆ. ಇದೀಗ ಮತ್ತೊಂದು ವಿಚಾರಕ್ಕೆ ನಟ ಧನುಷ್​ ಟೆನ್ಶನ್​ ಆಗಿದ್ದಾರೆ. ಪಿತೃತ್ವ ಪ್ರಕರಣವೊಂದರಲ್ಲಿ (paternity case) ಕಾಲಿವುಡ್ ನಟ (Kollywood hero) ಧನುಷ್ ಗೆ (Dhanush) ಮದ್ರಾಸ್ ಹೈಕೋರ್ಟ್ (Madras High Court) ಸಮನ್ಸ್ ಜಾರಿ ಮಾಡಿದೆ.

ಮತ್ತೆ ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿಗಳು!

ವೃದ್ಧ ದಂಪತಿಗಳು ಚಿತ್ರನಟ ಧನುಷ್ ತಮ್ಮ ಪುತ್ರ ಎಂದು ಕೋರ್ಟ್ ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದು, ಈ ಕುರಿತಾಗಿ ಕೋರ್ಟ್ ನಟ ಧನುಷ್​​ಗೆ ಸಮನ್ಸ್ (summoned ) ಜಾರಿ ಮಾಡಿದೆ. ಕದಿರೇಸನ್ (Kathiresan ) ಹಾಗೂ ಅವರ ಪತ್ನಿ ಮೀನಾಕ್ಷಿ (Meenakshi ) ಚಿತ್ರ ನಟ ಧನುಷ್ ತಮ್ಮ ಮೂರನೇ ಪುತ್ರ ಎಂದು ಹೇಳಿಕೊಂಡಿದ್ದು, ಚಿತ್ರದಲ್ಲಿ ನಟಿಸಬೇಕು ಎನ್ನುವ ಆಸೆಯ ಕಾರಣದಿಂದಾಗಿ ಮನೆಯಿಂದ ಓಡಿ ಬಂದಿದ್ದ ಎಂದು ಹೇಳಿದ್ದಾರೆ ಈ ಹಿಂದೆಯೂ ಈ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಮತ್ತೊಮ್ಮೆ  ಈ ವಿಚಾರ ಮುನ್ನೆಲೆಗೆ ಬಂದಿದೆ.

ಪ್ರತಿ ತಿಂಗಳು 65 ಸಾವಿರ ಬೇಡಿಕೆ ಇಟ್ಟ ದಂಪತಿಗಳು!

ಧನುಷ್ ತಮ್ಮ ಮಗ ಎಂದು ಕದಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಆರೋಪಿಸಿದ್ದಾರೆ. ಧನುಷ್ ಪಿತೃತ್ವ ಪರೀಕ್ಷೆಯ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಕದಿರೇಸನ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮನೆಯ ನಿರ್ವಹಣೆಗಾಗಿ ಅವರಿಂದ ಪ್ರತಿ ತಿಂಗಳು 65 ಸಾವಿರ ರೂಪಾಯಿ ಬೇಡಿಕೆಯನ್ನೂ ಇಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಈ ವಿಚಾರದಲ್ಲಿ ಪೊಲೀಸ್ ತನಿಖೆಯನ್ನೂ ನಡೆಸುವಂತೆ ಕೋರಿದ್ದಾರೆ.  ಪ್ರಕರಣವನ್ನು ವಜಾಗೊಳಿಸಿ 2020 ರಲ್ಲಿ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಕದಿರೇಸನ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Koffee With Karan ಶೋ ಇನ್ನು ಮುಂದೆ ಬರಲ್ಲ! ಕರಣ್​ ಜೋಹರ್​ ಕೊಟ್ಟ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ

ಯಾರು ಈ ವೃದ್ಧ ದಂಪತಿಗಳು!

ಧನುಷ್ ಅವರ ಮೂಲ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜಾ. ತಾವು ತಮಿಳಿನ ಚಿತ್ರ ನಿರ್ದೇಶಕ ಕಸ್ತೂರಿ ರಾಜಾ ಹಾಗೂ ವಿಜಯಲಕ್ಷ್ಮೀ ಅವರ ಪುತ್ರ ಎಂದು ಈಗಾಗಲೇ ಧನುಷ್ ಹಲವು ಬಾರಿ ಹೇಳಿದ್ದಾರೆ. ಆದರೆ, ಕದಿರೇಸನ್ ಹಾಗೂ ಅವರ ಪತ್ನಿ ಮೀನಾಕ್ಷಿಈ ಕುರಿತಾಗಿ ಪ್ರಕರಣ ದಾಖಲಿಸಿದ್ದಲ್ಲದೆ, ಧನುಷ್ ತಮ್ಮ ಮೂರನೇ ಮಗ ಎಂದು ವಾದಿಸಿದ್ದರು. ಕೋರ್ಟ್ ಮೆಟ್ಟಲು ಸಹ ಏರಿದ್ದರು.

ಇದನ್ನೂ ಓದಿ: Ravichandran ಮಗನ ಮದುವೆ ಆಮಂತ್ರಣ ಪತ್ರಿಕೆ ವೈರಲ್​! 'ಆ' ನಟಿ ಜೊತೆ ಮನೋರಂಜನ್ ಹೊಸ 'ಪ್ರಾರಂಭ​'

ಡಿಎನ್​ಎ ಟೆಸ್ಟ್​ ಮಾಡಿಸುವಂತೆ ಸಲಹೆ ನೀಡಿದ್ದ ಕೋರ್ಟ್​!

ಕೋರ್ಟ್ ಇದಕ್ಕೂ ಮುನ್ನ ಈ ವಿಚಾರವನ್ನು ಇತ್ಯರ್ಥ ಮಾಡಲು ಡಿಎನ್ಎ ಟೆಸ್ಟ್ ಮಾಡುವಂತೆ ಸಲಹೆ ನೀಡಿತ್ತು. ಆದರೆ, ಧನುಷ್ ಹಾಗೂ ಅವರ ಪರ ವಕೀಲರು ಇದನ್ನು ನಿರಾಕರಿಸಿದ್ದರು. ನಂತರ, ಧನುಷ್ ಅವರ ಐಡೆಂಟಿಫಿಕೇಷನ್ ಗುರುತುಗಳನ್ನು ಪರಿಶೀಲಿಸಲು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ನ್ಯಾಯಾಲಯವು ಅವರಿಗೆ ಸೂಚಿಸಿತ್ತು. ಇದೀಗ ಪ್ರಕರಣದ ಪೂರ್ತಿ ತೀರ್ಪಿಗೆ ಕಾಯಲಾಗುತ್ತಿದೆ.
Published by:Vasudeva M
First published: