Madikeri: ಪುನೀತ್​ಗೆ ಗೀತ ನಮನ ಸಲ್ಲಿಸಿದ ಕೊಡಗಿನ ಇನ್ಸ್‌ಪೆಕ್ಟರ್ 

ಇನ್ಸ್‌ಪೆಕ್ಟರ್ ಮಹೇಶ್

ಇನ್ಸ್‌ಪೆಕ್ಟರ್ ಮಹೇಶ್

ಕೊಡಗು (Kodagu) ಜಿಲ್ಲೆ ಕುಶಾಲನಗರದ (Kushalanagara) ವೃತ್ತ ನಿರೀಕ್ಷಕ ಮಹೇಶ್ ದೇವರು ಅವರೇ ನೆಚ್ಚಿನ ನಟನ ಅಗಲಿಕೆಯ ನೋವಿನಿಂದ ಇನ್ನೂ ಹೊರ ಬರಲಾಗದವರು. ಆ ನೋವಿನಲ್ಲೇ ಇನ್ಸ್‌ಪೆಕ್ಟರ್ ಮಹೇಶ್ ದೇವರು ಅವರು ಅಪ್ಪು ಅವರ ಹುಟ್ಟು ಹಬ್ಬ ಮತ್ತು ಜೇಮ್ಸ್ ಸಿನಿಮಾ (James Movie) ರಿಲೀಜ್ ಸಂದರ್ಭದಲ್ಲಿ ಭಾವುಕರಾಗಿ ಗೀತೆಯೊಂದನ್ನು ಹಾಡಿ ನಮನ ಸಲ್ಲಿಸಿದ್ದಾರೆ.

ಮುಂದೆ ಓದಿ ...
  • Share this:

ಕೊಡಗು(ಮಾ.19): ಅಪ್ಪು ಅಂದರೆ ಅದ್ಯಾರಿಗೆ ತಾನೆ ಇಷ್ಟವಾಗಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಅವರ ಅಭಿಮಾನಿಗಳಿದ್ದಾರೆ (Fans). ಇನ್ನು ಅವರ ಸಾಕಷ್ಟು ಸಿನಿಮಾಗಳಿಂದ ಪ್ರೇರಿತರಾಗಿ ಅಧಿಕಾರಿಗಳಾಗಿರುವವರು ಇದ್ದಾರೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ (Police Officer) ಡಾ, ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು ಪವರ್ ಸ್ಟಾರ್ (Power star) ಅವರು ಅಗಲಿ ನಾಲ್ಕು ತಿಂಗಳಾದರೂ ಅವರ ಅಗಲಿಕೆಯ ನೋವನ್ನು ಇಂದಿಗೂ ಮರೆತಿಲ್ಲ. ಹೌದು ಕೊಡಗು (Kodagu) ಜಿಲ್ಲೆ ಕುಶಾಲನಗರದ (Kushalanagara) ವೃತ್ತ ನಿರೀಕ್ಷಕ ಮಹೇಶ್ ದೇವರು ಅವರೇ ನೆಚ್ಚಿನ ನಟನ ಅಗಲಿಕೆಯ ನೋವಿನಿಂದ ಇನ್ನೂ ಹೊರ ಬರಲಾಗದವರು. ಆ ನೋವಿನಲ್ಲೇ ಇನ್ಸ್‌ಪೆಕ್ಟರ್ ಮಹೇಶ್ ದೇವರು ಅವರು ಅಪ್ಪು ಅವರ ಹುಟ್ಟು ಹಬ್ಬ ಮತ್ತು ಜೇಮ್ಸ್ ಸಿನಿಮಾ (James Movie) ರಿಲೀಜ್ ಸಂದರ್ಭದಲ್ಲಿ ಭಾವುಕರಾಗಿ ಗೀತೆಯೊಂದನ್ನು ಹಾಡಿ ನಮನ ಸಲ್ಲಿಸಿದ್ದಾರೆ.


ಡಾಕ್ಟರ್ ರಾಜ್ ಕುಮಾರ್ ಅವರು ಹಾಡಿರುವ ರೀತಿಯಲ್ಲಿಯೇ ಗಂಡುಗಲಿ ಸಿನಿಮಾದ ಗೀತೆಯನ್ನು ಹಾಡಿ ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದ್ಧಾರೆ.


ಭಾವುಕರಾಗಿ ಹಾಡಿದ ಪೊಲೀಸ್


ಅಪ್ಪು ಅವರ ಸಮಾಜ ಸೇವೆ ಹಾಗೂ ಅಭಿಮಾನಗಳು ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಇಟ್ಟಿರುವ ಅಭಿಮಾನಕ್ಕೆ ನಮಿಸಿ ಇನ್ಸ್‌ಪೆಕ್ಟರ್ ಮಹೇಶ್ ದೇವರು
ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ ಇಂದು ಮಾತನಾಡಿದೆ ಪ್ರೀತಿ ಮೌನವಾಗಿದೆ ನೀನೆ ಜೀವ, ಜೀವನ ನೀನೆ ಪ್ರೇಮ ಕಾರಣ ಎಂದು ಹೇಳ ಬಂದರೆ,ದೂರ ಹೋದೆ ಏತಕೆ ಕಾಣದಂಥ ಲೋಕಕೆ ಎಂಬ ಗೀತೆಯನ್ನು ಭಾವುಕರಾಗಿ ಹಾಡಿದ್ದಾರೆ.


ಮಡಿಕೇರಿಯಲ್ಲೂ ನಡೆದಿತ್ತು ಶೂಟಿಂಗ್


ಅಪ್ಪು ಅವರು ನಟಿಸಿ ಹಲವು ದಾಖಲೆಗಳನ್ನು ಮುರಿದು ಬಾಕ್ಸ್  ಆಫೀಸನ್ನೇ ಉಡೀಸ್ ಮಾಡಿರುವ ಜೇಮ್ಸ್ ಸಿನಿಮಾದ ಚಿತ್ರೀಕರಣ ಕೊಡಗು ಜಿಲ್ಲೆಯ ಹಲವೆಡೆ ನಡೆದಿತ್ತು. ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲದಲ್ಲಿರುವ ಟೀ ಎಸ್ಟೇಟ್ ನಲ್ಲೂ ಜೇಮ್ಸ್ ಸಿನಿಮಾದ ಚಿತ್ರೀಕರಣ ನಡೆದಿತ್ತು. ಅಷ್ಟೇ ಅಲ್ಲ ಈ ವೇಳೆ ಕುಶಾಲನಗರ ಸಮೀಪದ ಆನೆ ಕಾಡಿನಲ್ಲಿರುವ ಅರಣ್ಯ ಇಲಾಖೆಯ ಮರದ ಡಿಪೋದಲ್ಲಿಯೂ ಒಂದೆರಡು ದಿನಗಳ ಕಾಲ ಚಿತ್ರೀಕರಣ ನಡೆದಿತ್ತು.


ಇದನ್ನೂ ಓದಿ: Puneeth Rajkumar: ಮೊದಲ ದಿನವೇ 'ಕೆಜಿಎಫ್‌' ದಾಖಲೆ ಮುರಿದ 'ಜೇಮ್ಸ್'! 'ಪವರ್ ಸ್ಟಾರ್' ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!


ಈ  ಸಂದರ್ಭ ಕುಶಾಲನಗರ ವೃತ್ತ ನಿರೀಕ್ಷಕರಾಗಿದ್ದ ಮಹೇಶ್ ದೇವರು ಅವರು ಚಿತ್ರೀಕರಣಕ್ಕೆ ಭದ್ರತೆ ನೀಡುವ ಜವಾಬ್ದಾರಿ ಹೊತ್ತಿದ್ದರು. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟರಾಗಿದ್ದ ಅಪ್ಪು ಅವರೊಂದಿಗೆ ಸಿಪಿಐ ಮಹೇಶ್ ದೇವರು ಸ್ವಲ್ಪ ಹೊತ್ತು ಸಮಯ ಕಳೆದಿದ್ದರು.


ಕಾಡುತ್ತಿರುವ ನೆನಪು


ಪುನೀತ್ ರಾಜ್‌ಕುಮಾರ್ ಅವರು ಕೂಡ ಇನ್ಸ್‌ಪೆಕ್ಟರ್ ಅವರೊಂದಿಗೆ ಅತ್ಯಂತ ಪ್ರೀತಿ, ಸ್ನೇಹದಿಂದ ನಡೆದುಕೊಂಡು ತಮ್ಮ ಅಭಿಮಾನಿಯ ಎದೆಯಲ್ಲಿ ಇನ್ನಷ್ಟು ಅಘಾದವಾದ ಪ್ರೀತಿ ಸೆಳೆಯುವಂತೆ ಮಾಡಿದ್ದರು. ಹೀಗಾಗಿ ಅವರ ನೆನಪು ಇನ್ಸ್‌ಪೆಕ್ಟರ್ ಮಹೇಶ್ ದೇವರು ಅವರಿಗೆ ಇನ್ನೂ ಕಾಡುತ್ತಿದೆ.


ಇದನ್ನೂ ಓದಿ: ಬಾಕ್ಸ್​ ಆಫೀಸ್​ ಕೊಳ್ಳೆ! 100 ಕೋಟಿ ಕ್ಲಬ್ ಸೇರಿದ The Kashmir Files!


ಇನ್ಸ್‌ಪೆಕ್ಟರ್ ಮಹೇಶ್ ದೇವರು ಅವರು ಹಾಡಿರುವ ಈ ಗೀತೆಯ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಅಪ್ಪು ಅವರ ಮೇಲಿನ ಪ್ರೀತಿ ಎಂತಹದ್ದು ಎಂಬುದನ್ನು ಸಾಬೀತುಪಡಿಸಿದೆ.

top videos
    First published: