• Home
  • »
  • News
  • »
  • entertainment
  • »
  • Thank God Movie: ಥ್ಯಾಂಕ್ ಗಾಡ್ ಸಿನೆಮಾ ಬ್ಯಾನ್ ಮಾಡುವಂತೆ ಸಚಿವ ವಿಶ್ವಾಸ್ ಸಾರಂಗ್ ಒತ್ತಾಯ!

Thank God Movie: ಥ್ಯಾಂಕ್ ಗಾಡ್ ಸಿನೆಮಾ ಬ್ಯಾನ್ ಮಾಡುವಂತೆ ಸಚಿವ ವಿಶ್ವಾಸ್ ಸಾರಂಗ್ ಒತ್ತಾಯ!

ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್

ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್

ಥ್ಯಾಂಕ್ ಗಾಡ್ ಚಿತ್ರವನ್ನು ನಿಷೇಧಿಸುವಂತೆ ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನು ಒತ್ತಾಯಿಸಿದ್ದಾರೆ. ಠಾಕೂರ್ ಅವರಿಗೆ ಈ ಕುರಿತು ವಿಶ್ವಾಸ್ ಸಾರಂಗ್ ಪತ್ರವನ್ನು ಬರೆದಿದ್ದು, ಚಿತ್ರವು ಯಮ ಧರ್ಮರಾಜನ ಅನುಯಾಯಿಯಾಗಿರುವ ಚಿತ್ರಗುಪ್ತನ ಬಗ್ಗೆ ಅನುಚಿತವಾಗಿರುವ ಹೇಳಿಕೆಗಳನ್ನು ನೀಡಿದೆ ಎಂದು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಅಜಯ್‌ ದೇವಗನ್ (Ajay Devgn) ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಥ್ಯಾಂಕ್ ಗಾಡ್ (Thank God) ಚಿತ್ರವನ್ನು ನಿಷೇಧಿಸುವಂತೆ ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನು ಒತ್ತಾಯಿಸಿದ್ದಾರೆ. ಠಾಕೂರ್ ಅವರಿಗೆ ಈ ಕುರಿತು ವಿಶ್ವಾಸ್ ಸಾರಂಗ್ (Vishwas Sarang )ಪತ್ರವನ್ನು ಬರೆದಿದ್ದು, ಚಿತ್ರವು ಯಮ ಧರ್ಮರಾಜನ ಅನುಯಾಯಿಯಾಗಿರುವ ಚಿತ್ರಗುಪ್ತನ ಬಗ್ಗೆ ಅನುಚಿತವಾಗಿರುವ ಹೇಳಿಕೆಗಳನ್ನು ನೀಡಿದ್ದು, ತಪ್ಪಾಗಿ ಬಿಂಬಿಸಿದೆ ಎಂದು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಚಿತ್ರಗಳು ಹಿಂದೂ ದೇವತೆಗಳನ್ನು ಧರ್ಮದ ಮಹತ್ವವನ್ನು ಅಪಹಾಸ್ಯಕ್ಕೊಳಪಡಿಸುತ್ತಿದ್ದು, ನಿರ್ಮಾಪಕರು ಹಾಗೂ ನಟರು (Actors) ಒಳಗೊಂಡಂತೆ ಸಿನಿಮಾಗಳಲ್ಲಿ ದೇವತೆಗಳ ಬಗ್ಗೆ ಅಶ್ಲೀಲ ದೃಶ್ಯಗಳನ್ನು ಪ್ರದರ್ಶಿಸುವುದು ಸೇರಿದಂತೆ ಆಕ್ಷೇಪಾರ್ಹವಾದ ಕಾಮೆಂಟ್‌ಗಳನ್ನು (Comment) ಮಾಡುತ್ತಿದ್ದಾರೆ ಎಂದು  ತಿಳಿಸಿದ್ದಾರೆ.


ಚಿತ್ರದಲ್ಲಿ ಚಿತ್ರಗುಪ್ತನ ಪಾತ್ರಕ್ಕೆ ಅವಮಾನ
ಚಿತ್ರದ ಟ್ರೇಲರ್‌ನಲ್ಲಿ ಚಿತ್ರಗುಪ್ತನ ಪಾತ್ರವನ್ನು ಅರೆಬೆತ್ತಲೆ ಮಹಿಳೆಯರಿಂದ ಸುತ್ತುವರೆದಿರುವ ಸನ್ನಿವೇಶದಲ್ಲಿ ತೋರಿಸಲಾಗಿದ್ದು, ಪಾತ್ರದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಘಟನೆ ಇದಾಗಿದೆ ಎಂದು ಪತ್ರದಲ್ಲಿ ಖಂಡಿಸಿದ್ದಾರೆ. ಅಂತೆಯೇ ಚಿತ್ರ ನಟ ಅಜಯ್ ದೇವಗನ್ ಚಿತ್ರಗುಪ್ತನ ಪರವಾಗಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಾರಂಗ್ ತಿಳಿಸಿದ್ದಾರೆ.


ಚಿತ್ರ ನಟ ಅಜಯ್ ದೇವಗನ್ ವಿವಾದಾತ್ಮಕ ಹೇಳಿಕೆ
ಸಮಾಜಕ್ಕೆ ಉತ್ತಮ ಮಾರ್ಗದರ್ಶನವನ್ನು ನೀಡಬೇಕಾದ ಒಬ್ಬ ನಟನೇ ಇಂತಹ ಹೇಳಿಕೆಗಳನ್ನು ನೀಡಿರುವುದು ಕಾಯಸ್ಥ ಸಮಾಜದ ಜೊತೆಗೆ ಸಂಪೂರ್ಣ ಹಿಂದೂ ಸಮಾಜದ ಕ್ರೋಧಕ್ಕೆ ಕಾರಣವಾಗಿದ್ದಾರೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Vikram Vedha: ನೋಡುಗರಿಗೂ ನಶೆ ಏರಿಸುತ್ತೆ ಹೃತಿಕ್‌ ಆಲ್ಕೋಹಾಲಿಯಾ ಸಾಂಗ್, ನೀವ್ ಕೇಳಿದ್ರಾ?


"ಚಿತ್ರದ ಪ್ರಸಾರವನ್ನು ತಕ್ಷಣವೇ ನಿಲ್ಲಿಸುವಂತೆ ನಿರ್ದೇಶನಗಳನ್ನು ನೀಡುವ ಮೂಲಕ ಕಾಯಸ್ಥ/ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆಯಾಗದಂತೆ ದಯೆಯಿಂದ ತಡೆಯಲು ವಿನಂತಿಸಲಾಗಿದೆ" ಎಂದು ಸಚಿವರು ಹೇಳಿದ್ದಾರೆ.


ಹಿಂದೂ ಧರ್ಮಕ್ಕೆ ಧಕ್ಕೆ
ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಅಧಿಕೃತ ಹೇಳಿಕೆಯನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ. ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಚಿತ್ರಗುಪ್ತನು ಮಾನವರು ಮಾಡುವ ಕರ್ಮವನ್ನಾಧರಿಸಿ ಶಿಕ್ಷಿಸುವ ಇಲ್ಲವೇ ಪ್ರತಿಫಲ ನೀಡುವ ಕೆಲಸವನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ. ಆದರೆ ಇಂತಹ ದೈವಿಕ ಪಾತ್ರಕ್ಕೆ, ಚಿತ್ರ ಹಾಗೂ ಇದರಲ್ಲಿರುವ ನಟರು ಅವಮಾನಿಸಿದ್ದಾರೆ ಎಂಬುದು ಸಾರಂಗ್ ಅವರ ಅಭಿಪ್ರಾಯವಾಗಿದೆ.


ಥ್ಯಾಂಕ್‌ಗಾಡ್ ಚಿತ್ರದ ಕುರಿತು
ಇಂದ್ರ ಕುಮಾರ್ ನಿರ್ದೇಶನದ 'ಥ್ಯಾಂಕ್ ಗಾಡ್' ಮುಂಬರುವ ಫ್ಯಾಮಿಲಿ ಮನರಂಜನಾತ್ಮಕ ಚಿತ್ರವಾಗಿದ್ದು, ಇದರಲ್ಲಿ ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಕುಲ್ ಪ್ರೀತ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


ಅಪಘಾತದ ನಂತರ ಸಾವು ಹಾಗೂ ಬದುಕಿನ ಲೋಕವನ್ನು ಪ್ರವೇಶಿಸುವ ಹಾಗೂ ಚಿತ್ರಗುಪ್ತನನ್ನು (ಅಜಯ್ ದೇವಗನ್) ಭೇಟಿಯಾಗುವ ಸಾಮಾನ್ಯ ಮನುಷ್ಯನ (ಸಿದ್ಧಾರ್ಥ್ ಮಲ್ಹೋತ್ರಾ) ಕಥೆಯನ್ನು ಚಿತ್ರವು ಒಳಗೊಂಡಿದೆ. ಚಿತ್ರದಲ್ಲಿ ಚಿತ್ರಗುಪ್ತನು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಆಟವೊಂದನ್ನು ಆಡಲಿದ್ದು ಇದನ್ನು ಜೀವನದ ಆಟ (ಗೇಮ್ ಆಫ್ ಲೈಫ್) ಎಂದು ಕರೆಯಲಾಗಿದೆ.


ಟ್ರೇಲರ್‌ಗೆ ಹಾಗೂ ಮೊದಲ ಹಾಡಿಗೆ ಸಕಾರಾತ್ಮಕ ಪ್ರತಿಕ್ರಿಯೆ
ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರದ ಮೊದಲ ಹಾಡು 'ಮನಿಕೆ' ಕೂಡ ಪ್ರಸಾರವಾಗಿದೆ. ಹಾಡಿಗೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ.


ಇದನ್ನೂ ಓದಿ: Indian Models: ಭಾರತದಲ್ಲಿ IIM ಪದವೀಧರರಿಗಿಂತ ಹೆಚ್ಚು ವೇತನ ಪಡೆಯುತ್ತಾರೆ ಮಾಡೆಲ್​ಗಳು!


ಇನ್ನು ಚಿತ್ರದಲ್ಲಿ ಸಿದ್ಧಾರ್ಥ್ ಹಾಗೂ ರಾಕುಲ್ ಪ್ರೀತಿ ಯುವ ಜೋಡಿಯಾಗಿ ಕಾಣಿಸಿಕೊಂಡಿದ್ದು, ಬಾಲಿವುಡ್‌ನ ದೆ ದೆ ಪ್ಯಾರ್ ದೇ ಹಾಗೂ ರನ್‌ವೇ 34 ಚಿತ್ರಗಳ ನಂತರ ರಾಕುಲ್ ಹಾಗೂ ಅಜಯ್ ಅವರು ಜೊತೆಯಾಗಿ ನಟಿಸುತ್ತಿರುವ ಮೂರನೇ ಚಿತ್ರ ಇದಾಗಿದೆ. ಈ ವರ್ಷ ಅಕ್ಟೋಬರ್ 25 ರಂದು ಚಿತ್ರವು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Published by:Ashwini Prabhu
First published: