ಮಗನಿಗೋಸ್ಕರ ಭಾರತ ಬಿಟ್ಟು ದುಬೈಗೆ ಶಿಫ್ಟ್ ಆಗಿದ್ದಾರೆ ಆರ್ ಮಾಧವನ್ ಮತ್ತು ಕುಟುಂಬ!

ವೇದಾಂತ್ ಈಗಾಗಲೇ ಪ್ರಪಂಚದಾದ್ಯಂತ ಈಜು ಚಾಂಪಿಯನ್ ಶಿಪ್‍ಗಳನ್ನು ಗೆದ್ದಿದ್ದಾರೆ ಮತ್ತು ನಮಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಮಾಧವನ್ ಹೇಳುತ್ತಾರೆ.

ಮಾಧವನ್ ಪುತ್ರ ವೇದಾಂತ್

ಮಾಧವನ್ ಪುತ್ರ ವೇದಾಂತ್

  • Share this:
ಸಾಮಾನ್ಯವಾಗಿ ತಂದೆ ತಾಯಿ ಮಕ್ಕಳ ಕನಸಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಮಕ್ಕಳ ಖುಷಿಯಲ್ಲೇ ತಂದೆ ತಾಯಿ ತಮ್ಮ ಸಂತೋಷ ಕಂಡುಕೊಳ್ಳುತ್ತಾರೆ. ಮಕ್ಕಳು ತಮ್ಮ ಕನಸಿನತ್ತ ಶ್ರಮವಹಿಸುತ್ತಿದ್ದಾರೆ ಎಂದು ತಂದೆ ತಾಯಿಗೆ ತಿಳಿದರೆ ಸಾಕು ಅವರ ಕನಸಿನ ಈಡೇರಿಕೆಗಾಗಿ ತಯಾರಿರುತ್ತಾರೆ.ಈ ಸಾಲಿಗೆ ನಟ ಮಾಧವನ್ (Madhavan) ಕೂಡ ಸೇರುತ್ತಾರೆ. ಹೌದು ಮಗ ಈಜುಪಟು ಆಗಲು ಯಾವ ತ್ಯಾಗಕ್ಕೂ ನಿಂತಿರುವ ಮಾಧವನ್ ಮಗನನ್ನು ಒಲಿಂಪಿಕ್ಸ್‌ಗೆ (Olympics) ಕಳಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ತನ್ನ ಕನಸಿನ (Dream) ಮೂಲಕ ಭಾರತದ ಗರಿಮೆ ಹೆಚ್ಚಿಸಲು ಉತ್ಸಕರಾಗಿದ್ದಾರೆ ಮಾಧವನ್ ಪುತ್ರ ವೇದಾಂತ್ ( Son Vedant) . ತಂದೆ ತಮ್ಮ ನಟನೆಯ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರೆ, ಮಗ ಈಜುಪಟು (Swimmer) ಆಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ರಾಷ್ಟ್ರೀಯ ಈಜು ಚಾಂಪಿಯನ್
ನಟ ಆರ್ ಮಾಧವನ್ ಪುತ್ರ ವೇದಾಂತ್ ರಾಷ್ಟ್ರೀಯ ಈಜು ಚಾಂಪಿಯನ್. ಅವರು ಈಗ ಒಲಿಂಪಿಕ್ಸ್ 2026ಕ್ಕೆ ತಯಾರಿ ನಡೆಸುತ್ತಿದ್ದಾರೆ. ಆದರೆ ವೇದಾಂತ್ ಅಭ್ಯಾಸ ಮಾಡಲು ಭಾರತದಲ್ಲಿ ಯಾವುದೇ ಒಲಿಂಪಿಕ್ಸ್‌ ಈಜುಕೊಳಗಳಿಲ್ಲ. ಆದ ಕಾರಣ ಮಾಧವನ್ ಮತ್ತು ಅವರ ಪತ್ನಿ ಸರಿತಾ ದುಬೈನಲ್ಲಿ ವೇದಾಂತ್ ಜೊತೆ ಇದ್ದು, ಮಗನ ಅಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ಇದನ್ನೂ ಓದಿ: R Madhavan: ಅಪ್ಪನನ್ನು ಮೀರಿಸಿದ ಮಗ, ಈಜಿನಲ್ಲಿ 7 ಪದಕ ಗೆದ್ದ ನಟ ಮಾಧವನ್ ಪುತ್ರ

ಮುಂಬೈನಲ್ಲಿನ ದೊಡ್ಡ ಈಜುಕೊಳಗಳನ್ನು ಕೋವಿಡ್ ಮಹಾಮಾರಿಯಿಂದಾಗಿ ಮುಚ್ಚಲಾಗಿದೆ ಅಥವಾ ಕಾಲಮಿತಿ ಹೇರಿದೆ. ನಾವು ದುಬೈನಲ್ಲಿ ವೇದಾಂತ್‌ನೊಂದಿಗೆ ಇದ್ದೇವೆ, ಅಲ್ಲಿ ವೇದಾಂತ್‍ಗೆ ದೊಡ್ಡ ಈಜುಕೊಳ್ಳದಲ್ಲಿ ಅಭ್ಯಾಸ ನಡೆಸಲು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಒಲಿಂಪಿಕ್ಸ್‌ಗೆ ಆಯ್ಕೆಯಾಗುವ ಸಲುವಾಗಿ ಎಲ್ಲ ರೀತಿಯಲ್ಲೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರಿತಾ ಮತ್ತು ನಾನು ಅವನ ಜೊತೆಯಲ್ಲಿಯೇ ನಿಂತು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೆಮ್ಮೆಯ ತಂದೆ ಹೇಳುತ್ತಾರೆ.

ನಮಗೆ ತುಂಬಾ ಹೆಮ್ಮೆ
ಮಾಧವನ್ ತನ್ನ ಮಗ ನಟನಾಗಬೇಕೆಂದು ಬಯಸಲಿಲ್ಲವೇ? "ಎಂದಿಗೂ ಇಲ್ಲ! ನನ್ನ ಹೆಂಡತಿ ಸರಿತಾ ಮತ್ತು ನಾನು ನಮ್ಮ ಮಗನ ಜೀವನದಲ್ಲಿ ಏನು ಮಾಡಬೇಕೆಂದು ಬಯಸಿದ್ದೆವೋ ಅದರ ಜೊತೆಯಲ್ಲಿ ಸಾಗಿದೆವು. ವೇದಾಂತ್ ಈಗಾಗಲೇ ಪ್ರಪಂಚದಾದ್ಯಂತ ಈಜು ಚಾಂಪಿಯನ್ ಶಿಪ್‍ಗಳನ್ನು ಗೆದ್ದಿದ್ದಾರೆ ಮತ್ತು ನಮಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಮಾಧವನ್ ಹೇಳುತ್ತಾರೆ.

ಮಗನ ಕನಸಿಗೆ ಮತ್ತಷ್ಟು ಬಣ್ಣ
ತಾರಾ-ಪೋಷಕರು ಮಕ್ಕಳ ಕುರಿತಾಗಿ ಪೋಷಕರಿಗೆ, ನಿಮ್ಮ ಮಗುವನ್ನು ಮುಕ್ತವಾಗಿ ಹಾರಲು ಬಿಡಿ. ಅವನು ಅಥವಾ ಅವಳನ್ನು ತಮ್ಮ ಕನಸುಗಳನ್ನು ಹೇರಬೇಡಿ. ಅವರ ಇಷ್ಟದ ವೃತ್ತಿಯನ್ನು, ಕನಸನ್ನು ಮುಂದುವರಿಸಲು ಬಿಡಿ. ಅದರಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿ. ವೇದಾಂತ್ ನಟನಾಗದೆ ಈಜು ವೃತ್ತಿ ಆಯ್ಕೆ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ವಿಷಾದವಿಲ್ಲ. ನನ್ನ ಸ್ವಂತ ವೃತ್ತಿಗಿಂತ ಅವರ ಆಯ್ಕೆಯ ವೃತ್ತಿ ನನಗೆ ತುಂಬಾ ಮುಖ್ಯವಾಗಿದೆ. ಅವನು ಜೀವನದಲ್ಲಿ ಎಲ್ಲಿಗೆ ಹೋಗಬೇಕೆಂದು ಬಯಸುತ್ತಾನೋ ಅಲ್ಲಿಗೆ ಅವನನ್ನು ಕರೆದೊಯ್ಯಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಮಗನ ಕನಸಿಗೆ ಮತ್ತಷ್ಟು ಬಣ್ಣ ತುಂಬಲು ತಯಾರಿದ್ದಾರೆ ಈ ದಂಪತಿ.

ವೇದಾಂತ್ ಸಾಧನೆ:
ಥಾಯ್ಲೆಂಡ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಈಜು ಕೂಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದ ವೇದಾಂತ್‍ಗೆ ಮೊದಲ ಪ್ರಮುಖ ಗೌರವ ಸಂದಿದೆ. ನಂತರ ಡಿಸೆಂಬರ್ 2018ರಲ್ಲಿ 100 ಮೀ ಫ್ರೀಸ್ಟೈಲ್ ವಿಭಾಗದಲ್ಲಿ ನ್ಯಾಷನಲ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದರು. ಸೆಪ್ಟೆಂಬರ್ 2019ರಲ್ಲಿ ಏಷ್ಯನ್ ಏಜ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ತಂದ ಕಾರಣ 16-ವರ್ಷದ ನಂತರ ಭಾರತವನ್ನು ಪ್ರತಿನಿಧಿಸಿ ಮೊದಲ ಅಧಿಕೃತ ಪದಕ ಗೆದ್ದರು.

ಇದನ್ನೂ ಓದಿ: Yash Raj Films: OTTಗೆ ಕಾಲಿಟ್ಟ YRF, ಭೋಪಾಲ್ ದುರಂತದ ಬಗ್ಗೆ ವೆಬ್ ಸೀರೀಸ್

ಜನವರಿ 2020ರಲ್ಲಿ, ವೇದಾಂತ್ ಮಾಧವನ್ ಖೇಲೋ ಇಂಡಿಯಾ ಯೂತ್ ಗೇಮ್ಸ್‌ ಭಾಗವಾಗಿ ಏಷ್ಯನ್ ಏಜ್ ಗ್ರೂಪ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲಿಯೂ ವಿಜಯಶಾಲಿಯಾದರು. ಈ ವರ್ಷದ ಆರಂಭದಲ್ಲಿ ಮಾರ್ಚ್‍ನಲ್ಲಿ ವೇದಾಂತ್ ಮಾಧವನ್ ಲಟ್ವಿಯನ್ ಓಪನ್ ಕ್ವಾಲಿಫೈಯರ್‌ನಲ್ಲಿ ಭಾರತಕ್ಕಾಗಿ ಕಂಚಿನ ಪದಕ ಗೆದ್ದರು.
Published by:vanithasanjevani vanithasanjevani
First published: