ಭರಾಟೆ ನಂತರ ಶ್ರೀಮುರಳಿ ಅಭಿನಯಿಸುತ್ತಿರುವ ಸಿನಿಮಾ ಮದಗಜ. ಕೇವಲ ಟೈಟಲ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಮದಗಜ ಸಿನಿಮಾ, ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಕನ್ನಡದ ಕೆಜಿಎಫ್ ಸಿನಿಮಾ ಪರಭಾಷೆಗಳಲ್ಲಿ ತೆರೆಕಂಡು ಯಶಸ್ಸು ಕಂಡ ನಂತರ ಕನ್ನಡದ ಹಲವಾರು ಸಿನಿಮಾಗಳು ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗಲು ಸಜ್ಜಾಗುತ್ತಿದೆ. ಧ್ರುವ ಸರ್ಜಾ ಅಭಿನಯದ ಪೊಗರು ಸಹ ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಇಂತಹ ಸಾಲಿಗೆ ಕನ್ನಡದ ಮತ್ತಷ್ಟು ಸಿನಿಮಾಗಳು ಈಗ ಸೇರಿಕೊಂಡಿವೆ. ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ನಿರ್ದೇಶನದ ಮದಗಜ ಸಿನಿಮಾದ ಕನ್ನಡದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈಗ ಇದೇ ಸಿನಿಮಾದ ತೆಲುಗು ವರ್ಷನ್ನ ಟೀಸರ್ ರಿಲೀಸ್ ಆಗಿದೆ.
ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ಫಸ್ಟ್ ಲುಕ್ ಟೀಸರ್ ಅನ್ನು ಲಾಂಚ್ ಮಾಡಲಾಗಿತ್ತು. ‘ಉಗ್ರಂ’ ಸಿನಿಮಾದ ಮೂಲಕ, ನಟ ಶ್ರೀಮುರಳಿ ಅವರ ಸಿನಿ ಜೀವನಕ್ಕೆ ತಿರುವು ಸಿಕ್ಕಿತ್ತು. ಆ ಚಿತ್ರವನ್ನು ನಿರ್ದೇಶಿಸಿದ್ದ ಪ್ರಶಾಂತ್ ನೀಲ್, ‘ಮದಗಜ’ ಚಿತ್ರದ ಲುಕ್ ರಿವೀಲ್ ಮಾಡಿದ್ದರು. ವಿಶೇಷ ಎಂದರೆ ಇದುವರೆಗೂ ಕಾಣಿಸಿಕೊಂಡಿರದ ಹೊಸ ಲುಕ್‌ನಲ್ಲಿ ಮುರಳಿ ಇಲ್ಲಿ ಮಿಂಚಿದ್ದಾರೆ. ಧೂಳೆಬ್ಬಿಸುವ ಖಡಕ್ ಡೈಲಾಗ್ನೊಂದಿಗೆ ಮುರಳಿ ಅಭಿಮಾನಿಗಳೆದುರು ಮತ್ತೆ ಬಂದಿದ್ದಾರೆ.
ಡಿಸೆಂಬರ್ 17ರಂದು ರಿಲೀಸ್ ಆದ ಮದಗಜ ಚಿತ್ರದ 1:42 ಸೆಕಂಡ್ ಇರುವ ಟೀಸರ್, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಯೂ ಟ್ಯೂಬ್ನಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿತು. ಈಗ ಟೀಸರ್ಗೆ 3 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿದೆ.
ಹೊಸ ವರ್ಷಕ್ಕೆಂದು ಮದಗಜ ಚಿತ್ರತಂಡ ತೆಲುಗು ಪ್ರೇಕ್ಷಕರಿಗೆ ತೆಲುಗು ಟೀಸರ್ ಅನ್ನು ಉಡುಗೊರೆಯಾಗಿ ನೀಡಿದೆ. ಈ ತೆಲುಗು ಟೀಸರ್ಗೆ ಶ್ರೀಮುರಳಿ ಅವರೇ ಕಂಠದಾನ ಮಾಡಿದ್ದಾರೆ. ಖಕಡ್ ವಾಯ್ಸ್ನಲ್ಲಿ ಹೇಳಿರುವ ಪಂಚಿಗ್ ಡೈಲಾಗ್ಸ್ಗೆ ಟಾಲಿವುಡ್ ಪ್ರೇಕ್ಷಕರೂ ಫಿದಾ ಆಗುತ್ತಿದ್ದಾರೆ.
ಇದನ್ನೂ ಓದಿ: Pavan wadeyar: ನಿರ್ದೇಶಕ ಪವನ್ ಒಡೆಯರ್-ಅಪೇಕ್ಷಾ ಪುರೋಹಿತ್ ಮಗನ ಹೆಸರು ಬಹಿರಂಗ: ಇಲ್ಲಿದೆ ವಿಡಿಯೋ..!
ಫಸ್ಟ್ ಲುಕ್‌ನಲ್ಲಿ ರೋರಿಂಗ್ ಸ್ಟಾರ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮುರಳಿ ಈ ಚಿತ್ರದಲ್ಲೂ ಫುಲ್ ಮಾಸ್ ಸ್ಟೈಲ್ನಲ್ಲಿ ಮತ್ತೆ ಮರಳಿದ್ದಾರೆ ಎನ್ನಬಹುದು. ವಾರಾಣಸಿಯಲ್ಲಿ ಚಿತ್ರೀಕರಣ ಮಾಡಿರುವ ಭಾಗ ಅದ್ಭುತವಾಗಿ ಮೂಡಿಬಂದಿದ್ದು, ಸುಡುವ ಹೆಣಗಳ ಮಧ್ಯೆ ಮುರಳಿ ಕೂತು ಚಿಲ್ಲಂ ಸೇದುವ ಸ್ಲೋ ಮೋಶನ್ ಶಾಟ್ ಅಂತೂ ಅಭಿಮಾನಿಗಳಿಗೆ ಹಬ್ಬ. ಟೀಸರ್ ಬಿ ಜಿ ಎಂ ಕೂಡ ಪವರ್ಫುಲ್ ಆಗಿದೆ.
ಮದಗಜ ಚಿತ್ರವನ್ನು ವಾರಣಾಸಿ, ಮೈಸೂರು, ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ರಾಬರ್ಟ್ ನಿರ್ಮಾಪಕ ಉಮಾಪತಿ ಅವರು ತಮ್ಮ ಬ್ಯಾನರ್ ಉಮಾಪತಿ ಫಿಲಂಸ್ ಅಡಿ ಮದಗಜ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮದಗಜ ಚಿತ್ರದ ಮೊದಲ ಕಂತು ವಾರಾಣಸಿಯಲ್ಲಿ ಮುಗಿಸಿರುವ ಚಿತ್ರತಂಡ, ಮೈಸೂರಿನಲ್ಲಿ ಎರಡನೇ ಹಂತ ಮುಗಿಸಿ, ಈಗ ಮೂರನೇ ಹಂತದ ಚಿತ್ರೀಕರಣ ಮಾಡುತ್ತಿದೆ. ಶ್ರೀಮುರಳಿಗೆ ಜೊತೆಯಾಗಿ ಅಶಿಕಾ ರಂಗನಾಥ್ ಅಭಿನಯಿಸುತ್ತಿಯಾದ್ದರೆ. ರವಿ ಬಸ್ರೂರ್ ಸಂಗೀತ ನೀಡುತ್ತಿದ್ದು ನವೀನ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇದನ್ನೂ ಓದಿ: Deepika Padukone: ಟ್ವಿಟರ್-ಇನ್ಸ್ಟಾಗ್ರಾಂನ ಎಲ್ಲ ಪೋಸ್ಟ್ಗಳನ್ನು ಡಿಲೀಟ್ ಮಾಡಿದ ದೀಪಿಕಾ ಪಡುಕೋಣೆ..!
ಚಿತ್ರದ ಬಜೆಟ್ ಬರೋಬ್ಬರಿ 20 ಕೋಟಿಗಿಂತ ಜಾಸ್ತಿ ಇರಬಹುದು ಎಂದು ನಿರ್ದೇಶಕರು ಹೇಳಿದ್ದಾರೆ. ಮಹೇಶ್ ಕುಮಾರ್ ಇದಕ್ಕೂ ಮುನ್ನ ಸತೀಶ್ ನೀನಾಸಂ ರವರ ಅಯೋಗ್ಯ ಎಂಬ ಹಿಟ್ ಸಿನಿಮಾ ಕೊಟ್ಟಿದ್ದರು. ಇವರು ಯೋಗರಾಜ್ ಭಟ್ಟರ ಜೊತೆ ಸಹ ಕೆಲಸ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ