Madhagaja: ಕಣ್ಣುಗಳು ಬಾಯಾರಿದಾಗ, ರಕ್ತಪಾತ ಕಡ್ಡಾಯವಂತೆ ಈ ಖಳನಾಯಕನ ಅಡ್ಡಾದಲ್ಲಿ..!

Happy Birthday Jagapathi Babu: ಜಗಪತಿ ಬಾಬು ತೆಲುಗು ಹಾಗೂ ಕನ್ನಡದಲ್ಲಿ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಕಾಲದಲ್ಲಿ ನಾಯಕನಾಗಿ ಮಿಂಚಿದ್ದ ಜಗಪತಿ ಬಾಬು ಈಗ ಖಳನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಮದಗಜ ಸಿನಿಮಾದಲ್ಲಿ ಜಗಪತಿ ಬಾಬು

ಮದಗಜ ಸಿನಿಮಾದಲ್ಲಿ ಜಗಪತಿ ಬಾಬು

  • Share this:
ಭರಾಟೆ ನಂತರ ಶ್ರೀಮುರಳಿ ಅಭಿನಯಿಸುತ್ತಿರುವ ಸಿನಿಮಾ ಮದಗಜ. ಕೇವಲ ಟೈಟಲ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಮದಗಜ ಸಿನಿಮಾ, ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಕನ್ನಡದ ಕೆಜಿಎಫ್​ ಸಿನಿಮಾ ಪರಭಾಷೆಗಳಲ್ಲಿ ತೆರೆಕಂಡು ಯಶಸ್ಸು ಕಂಡ ನಂತರ ಕನ್ನಡದ ಹಲವಾರು ಸಿನಿಮಾಗಳು ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್​ ಆಗಲು ಸಜ್ಜಾಗುತ್ತಿದೆ. ಧ್ರುವ ಸರ್ಜಾ ಅಭಿನಯದ ಪೊಗರು ಸಹ ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ದರ್ಶನ್​ ಅಭಿನಯದ ರಾಬರ್ಟ್ ಚಿತ್ರವೂ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದೆ. ಇಂತಹ ಸಿನಿಮಾಗಳ ಸಾಲಿಗೆ ಕನ್ನಡದ ಮತ್ತಷ್ಟು ಸಿನಿಮಾಗಳು ಈಗ ಸೇರಿಕೊಂಡಿವೆ. ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್​ ನಿರ್ದೇಶನದ ಮದಗಜ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈಗ ಇದೇ ಸಿನಿಮಾದ ಕಡೆಯಿಂದ ಮತ್ತೊಂದು ಅಪ್ಡೇಟ್​ ಸಿಕ್ಕಿದೆ.

ಈ ಹಿಂದೆ ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಮದಗಜ ಚಿತ್ರದ​ ಫಸ್ಟ್​ ಲುಕ್​ ಟೀಸರ್​ ಅನ್ನು ಲಾಂಚ್​ ಮಾಡಲಾಗಿತ್ತು. ‘ಉಗ್ರಂ’ ಸಿನಿಮಾದ ಮೂಲಕ, ನಟ ಶ್ರೀಮುರಳಿ ಅವರ ಸಿನಿ ಜೀವನಕ್ಕೆ ತಿರುವು ಸಿಕ್ಕಿತ್ತು. ಆ ಚಿತ್ರವನ್ನು ನಿರ್ದೇಶಿಸಿದ್ದ ಪ್ರಶಾಂತ್ ನೀಲ್​, ‘ಮದಗಜ’ ಚಿತ್ರದ ಲುಕ್​ ರಿವೀಲ್​ ಮಾಡಿದ್ದರು. ವಿಶೇಷ ಎಂದರೆ ಇದುವರೆಗೂ ಕಾಣಿಸಿಕೊಂಡಿರದ ಹೊಸ ಲುಕ್‌ನಲ್ಲಿ ಮುರಳಿ ಇಲ್ಲಿ ಮಿಂಚಿದ್ದಾರೆ.


ಇಂದು ಇದೇ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಜಗಪತಿ ಬಾಬು ಅವರ ಹುಟ್ಟುಹಬ್ಬ. ನಟನ ಬರ್ತ್​ ಡೇಗೆ ಉಡುಗೊರೆಯಾಗಿ ಮದಗಜ ಚಿತ್ರತಂಡ ಇಂದು ಫಸ್ಟ್​ಲುಕ್ ಟೀಸರ್ ರಿಲೀಸ್ ಮಾಡಿದೆ.ಜಗಪತಿ ಬಾಬು ತೆಲುಗು ಹಾಗೂ ಕನ್ನಡದಲ್ಲಿ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಕಾಲದಲ್ಲಿ ನಾಯಕನಾಗಿ ಮಿಂಚಿದ್ದ ಜಗಪತಿ ಬಾಬು ಈಗ ಖಳನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.ಮದಗಜ ಜಗಪತಿ ಬಾಬು ಬರ್ತ್​ ಡೇ ಟೀಸರ್​ನಲ್ಲಿ ಆ ಪಾತ್ರದಲ್ಲಿನ ಕ್ರೂರತೆ ನಟನ ಕಣ್ಣಲ್ಲಿ ಕಾಣುತ್ತದೆ. ಅದಕ್ಕೆ ಈ ಟೀಸರ್​ ಪೋಸ್ಟ್ ಮಾಡಿರುವ ಚಿತ್ರತಂಡ ಸಖತ್​ ಶೀರ್ಷಿಕೆ ನೀಡಿದ್ದಾರೆ. ಅವನ ಕಣ್ಣುಗಳು ಬಾಯಾರಿದಾಗ, ರಕ್ತಪಾತ ಕಡ್ಡಾಯವಾಗಿತ್ತು ಎಂದು ಬರೆಯಲಾಗಿದೆ.

ಇದನ್ನೂ ಓದಿ: ರಿವೀಲ್​ ಆಯ್ತು ರಾಬರ್ಟ್​ ಚಿತ್ರದಲ್ಲಿ ಜಗಪತಿ ಬಾಬು ಫಸ್ಟ್​ಲುಕ್​..!

ಹೊಸ ವರ್ಷಕ್ಕೆಂದು ಮದಗಜ ಚಿತ್ರತಂಡ ತೆಲುಗು ಪ್ರೇಕ್ಷಕರಿಗೆ ತೆಲುಗು ಟೀಸರ್ ಅನ್ನು ಉಡುಗೊರೆಯಾಗಿ ನೀಡಿದೆ. ಈ ತೆಲುಗು ಟೀಸರ್​ಗೆ ಶ್ರೀಮುರಳಿ ಅವರೇ ಕಂಠದಾನ ಮಾಡಿದ್ದಾರೆ. ಖಕಡ್​ ವಾಯ್ಸ್​ನಲ್ಲಿ ಹೇಳಿರುವ ಪಂಚಿಗ್ ಡೈಲಾಗ್ಸ್​ಗೆ ಟಾಲಿವುಡ್​ ಪ್ರೇಕ್ಷಕರೂ ಫಿದಾ ಆಗಿದ್ದಾರೆ. ಇನ್ನು ಈ ಸಿನಿಮಾದ ಮೂರನೇ ಹಂತದ ಚಿತ್ರೀಕರಣ ಸಹ ಪೂರ್ಣಗೊಂಡಿದೆ.

Ended with fulfilled scheduleಫಸ್ಟ್ ಲುಕ್​ನಲ್ಲಿ ರೋರಿಂಗ್ ಸ್ಟಾರ್ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮುರಳಿ ಈ ಚಿತ್ರದಲ್ಲೂ ಫುಲ್ ಮಾಸ್ ಸ್ಟೈಲ್​ನಲ್ಲಿ ಮತ್ತೆ ಮರಳಿದ್ದಾರೆ ಎನ್ನಬಹುದು. ವಾರಾಣಸಿಯಲ್ಲಿ ಚಿತ್ರೀಕರಣ ಮಾಡಿರುವ ಭಾಗ ಅದ್ಭುತವಾಗಿ ಮೂಡಿಬಂದಿದ್ದು, ಸುಡುವ ಹೆಣಗಳ ಮಧ್ಯೆ ಮುರಳಿ ಕೂತು ಚಿಲ್ಲಂ ಸೇದುವ ಸ್ಲೋ ಮೋಶನ್ ಶಾಟ್ ಅಂತೂ ಅಭಿಮಾನಿಗಳಿಗೆ ಹಬ್ಬ. ಟೀಸರ್ ಬಿ ಜಿ ಎಂ ಕೂಡ ಪವರ್ಫುಲ್ ಆಗಿದೆ.

ಇದನ್ನೂ ಓದಿ: KrissMi: ಮೆಹೆಂದಿ ಶಾಸ್ತ್ರಕ್ಕೂ ಮುನ್ನ ಫೋಟೋಶೂಟ್​ಗೆ ಪೋಸ್​ ಕೊಟ್ಟ ಮಿಲನಾ-ಕೃಷ್ಣ..!

ಮದಗಜ ಚಿತ್ರವನ್ನು ವಾರಣಾಸಿ, ಮೈಸೂರು, ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ರಾಬರ್ಟ್​ ನಿರ್ಮಾಪಕ ಉಮಾಪತಿ ಅವರು ತಮ್ಮ ಬ್ಯಾನರ್​ ಉಮಾಪತಿ ಫಿಲಂಸ್​ ಅಡಿ ಮದಗಜ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.​ ಶ್ರೀಮುರಳಿಗೆ ಜೊತೆಯಾಗಿ ಅಶಿಕಾ ರಂಗನಾಥ್ ಅಭಿನಯಿಸುತ್ತಿಯಾದ್ದರೆ. ರವಿ ಬಸ್ರೂರ್ ಸಂಗೀತ ನೀಡುತ್ತಿದ್ದು ನವೀನ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರದ ಬಜೆಟ್ ಬರೋಬ್ಬರಿ 20 ಕೋಟಿಗಿಂತ ಜಾಸ್ತಿ ಇರಬಹುದು ಎನ್ನಲಾಗುತ್ತಿದೆ. ಮಹೇಶ್ ಕುಮಾರ್ ಇದಕ್ಕೂ ಮುನ್ನ ಸತೀಶ್ ನೀನಾಸಂ ರವರ ಅಯೋಗ್ಯ ಎಂಬ ಹಿಟ್ ಸಿನಿಮಾ ಕೊಟ್ಟಿದ್ದರು. ಇವರು ಯೋಗರಾಜ್ ಭಟ್ಟರ ಜೊತೆ ಸಹ ಕೆಲಸ ಮಾಡಿದ್ದಾರೆ.
Published by:Anitha E
First published: