ಕೇವಲ ಟೈಟಲ್ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ, ಈಗ ಟೀಸರ್ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ರೋಚಕತೆ ಸೃಷ್ಟಿಸಿದೆ. ಇಂದು ಮುರಳಿ ಹುಟ್ಟುಹಬ್ಬದ ಪ್ರಯುಕ್ತ ಮೋಸ್ಟ್ ಎಕ್ಸ್ಪೆಕ್ಟೆಡ್ ಫಸ್ಟ್ ಲುಕ್ ಟೀಸರ್ ಲಾಂಚ್ ಆಗಿದೆ. ‘ಉಗ್ರಂ’ ಸಿನಿಮಾದ ಮೂಲಕ, ನಟ ಶ್ರೀಮುರಳಿಗೆ ಮರುಜನ್ಮ ನೀಡಿದ್ದ ಶ್ರೀಮುರಳಿ ಭಾಮೈದ ನಿರ್ದೇಶಕ ಪ್ರಶಾಂತ್ ನೀಲ್, ‘ಮದಗಜ’ನ ಲುಕ್ ರಿವೀಲ್ ಮಾಡಿದ್ದಾರೆ. ವಿಶೇಷ ಎಂದರೆ ಇದುವರೆಗೂ ಕಾಣಿಸಿಕೊಂಡಿರದ ಹೊಸ ಲುಕ್ನಲ್ಲಿ ಮುರಳಿ ಇಲ್ಲಿ ಮಿಂಚಿದ್ದಾರೆ. ಧೂಳೆಬ್ಬಿಸುವ ಖಡಕ್ ಡೈಲಾಗ್ನೊಂದಿಗೆ ಮುರಳಿ ಅಭಿಮಾನಿಗಳೆದುರು ಮತ್ತೆ ಬಂದಿದ್ದಾರೆ.
ಡಿಸೆಂಬರ್ 17ರಂದು ‘ದಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ 25ನೇ ಚಿತ್ರ ಮದಗಜದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಅದರಂತೆ ಚಿತ್ರತಂಡ 1:42 ಸೆಕಂಡ್ ಇರುವ ಟೀಸರ್ ರಿಲೀಸ್ ಮಾಡಿದ್ದು, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಯೂ ಟ್ಯೂಬ್ನಲ್ಲಿ ಸಾಕಷ್ಟು ವೀಕ್ಷಣೆ ಕಂಡಿದೆ.
ಒಂದು ಮುತ್ತುವಿನ ಕಥೆ ಹೇಳಲಿದ್ದಾರೆ ನವೀನ್ ಸಜ್ಜು
ಫಸ್ಟ್ ಲುಕ್ನಲ್ಲಿ ರೋರಿಂಗ್ ಸ್ಟಾರ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಮುರಳಿ ಈ ಚಿತ್ರದಲ್ಲೂ ಫುಲ್ ಮಾಸ್ ಆಗಿ ಮತ್ತೆ ಮರಳಿದ್ದಾರೆ ಎನ್ನಬಹುದು. ಸಿನಿಮಾದಲ್ಲಿ ಒಳ್ಳೆ ಪಂಚ್ ಡೈಲಾಗ್ಸ್, ಖಡಕ್ ಲುಕ್, ಭರ್ಜರಿ ಆಕ್ಷನ್ ಇರುವುದು ಪಕ್ಕ ಎಂದು ಫಸ್ಟ್ ಲುಕ್ ಟೀಸರ್ ನೋಡಿದವರಿಗೆ ಅನಿಸದೇ ಇರದು. ವಾರಾಣಸಿಯಲ್ಲಿ ಚಿತ್ರೀಕರಣ ಮಾಡಿರುವ ಭಾಗ ಅದ್ಭುತವಾಗಿ ಮೂಡಿಬಂದಿದ್ದು, ಸುಡುವ ಹೆಣಗಳ ಮಧ್ಯೆ ಮುರಳಿ ಕೂತು ಚಿಲ್ಲಂ ಸೇದುವ ಸ್ಲೋ ಮೋಶನ್ ಶಾಟ್ ಅಂತೂ ಅಭಿಮಾನಿಗಳಿಗೆ ಹಬ್ಬ. ಟೀಸರ್ ಬಿ ಜಿ ಎಂ ಕೂಡ ಪವರ್ಫುಲ್ ಆಗಿದೆ.
ಈ ಮೂಲಕ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ರೋರಿಂಗ್ ಸ್ಟಾರ್ಗೆ ಮದಗಜ ಫಸ್ಟ್ ಲುಕ್ ಟೀಸರ್ ಅನ್ನು ಪರ್ಫೆಕ್ಟ್ ಉಡುಗೊರೆಯಾಗಿ ಕೊಟ್ಟಿದೆ.
ಮದಗಜ ಚಿತ್ರವನ್ನು ವಾರಣಾಸಿ, ಮೈಸೂರು, ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ಉಮಾಪತಿ ಫಿಲ್ಸ್ಮ್ ಬ್ಯಾನರ್ನಡಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಚಿತ್ರ ನಿರ್ಮಿಸುತ್ತಿದ್ದಾರೆ. ಎಸ್.ಮಹೇಶ್ ಕುಮಾರ್ ನಿರ್ದೇಶನ ಇದೆ.
ಚಿತ್ರದ ಬಜೆಟ್ ಬರೋಬ್ಬರಿ 20 ಕೋಟಿಗಿಂತ ಜಾಸ್ತಿ ಇರಬಹುದು ಎಂದು ನಿರ್ದೇಶಕರು ಹೇಳಿದ್ದಾರೆ. ಮಹೇಶ್ ಕುಮಾರ್ ಇದಕ್ಕೂ ಮುನ್ನ ಸತೀಶ್ ನೀನಾಸಂ ರವರ ಅಯೋಗ್ಯ ಎಂಬ ಹಿಟ್ ಸಿನಿಮಾ ಕೊಟ್ಟಿದ್ದರು. ಇವರು ಯೋಗರಾಜ್ ಭಟ್ಟರ ಅಸೋಸಿಯೇಟ್ ಆಗಿದ್ದವರು.
ಬೆತ್ತಲೆ ಫೋಟೋ ಹಂಚಿಕೊಂಡ 52 ವರ್ಷದ ಖ್ಯಾತ ನಟ; ಅಭಿಮಾನಿಗಳು ಏನಂದ್ರು ಗೊತ್ತಾ?
ಮದಗಜ ಚಿತ್ರದ ಮೊದಲ ಕಂತು ವಾರಾಣಸಿಯಲ್ಲಿ ಮುಗಿಸಿರುವ ಚಿತ್ರತಂಡ, ಮೈಸೂರಿನಲ್ಲಿ ಎರಡನೇ ಹಂತ ಮುಗಿಸಿ, ಈಗ ಮೂರನೇ ಹಂತದ ಚಿತ್ರೀಕರಣ ಮಾಡುತ್ತಿದೆ. ಶ್ರೀ ಮುರಳಿಯವರಿಗೆ ಜೊತೆಯಾಗಿ ಸ್ಯಾಂಡಲ್ವುಡ್ ಗೊಂಬೆ ಅಶಿಕಾ ರಂಗನಾಥ್ ಅಭಿನಯಿಸುತ್ತಿಯಾದ್ದರೆ. ರವಿ ಬಸ್ರೂರ್ ಸಂಗೀತ ನೀಡುತ್ತಿದ್ದು ನವೀನ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ