ಶ್ರೀಮುರಳಿ(Sri Murali) ನಟಿಸಿರುವ ‘ಮದಗಜ’(Madhagaja) ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಇಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್(Release) ಆಗಿದೆ. ಸುಮಾರ್ 800 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿದ್ದು, ಮೊದಲ ಪ್ರದರ್ಶನ ಮುಗಿದಿದೆ. ಸಿನಿಮಾ ನೋಡಿದ ಪ್ರೇಕ್ಷಕ ಪ್ರಭುಗಳು ಬಹುಪರಾಕ್ ಹೇಳಿದ್ದಾರೆ. ಶ್ರೀ ಮುರುಳಿ ಅವರ ನಟನೆ(Acting), ಫೈಟ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶ್ರೀಮುರಳಿ ‘ಭರಾಟೆ’ ಬಳಿಕ ‘ಮದಗಜ’ ಸಿನಿಮಾವನ್ನು ಒಪ್ಪಿಕೊಂಡಿದ್ದರಯ. ಈ ಕಾರಣಕ್ಕೆ ಚಿತ್ರ ಸೆಟ್ಟೇರಿದ ದಿನದಿಂದಲೂ ಭಾರಿ ಕ್ರೇಜ್ ಹುಟ್ಟುಹಾಕಿತ್ತು. ಈ ಸಿನಿಮಾಗೆ ರವಿ ಬಸ್ರೂರು(Ravi Basruru) ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹಾಡುಗಳು ಹಾಗೂ ಟ್ರೇಲರ್ಗಳು ಭಾರೀ ಸೌಂಡ್ ಮಾಡುತ್ತಿವೆ. ಫಸ್ಟ್ ಶೋ(First Sow) ನೋಡಿದ ಸಿನಿರಸಿಕರು ಮಾತ್ರ ಮದಗಜನ ಅಬ್ಬರಕ್ಕೆ ಸೈ ಎಂದಿದ್ದಾರೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಗುರೂ ಅಂತಿದ್ದಾರೆ. ಫಸ್ಟ್ ಹಾಫ್ ಆಕ್ಷನ್-ಸೆಂಟಿಮೆಂಟ್(Action-Sentiment) ವರ್ಕೌಟ್ ಆಗಿದೆ. ಸೆಕೆಂಡ್ ಹಾಫ್ನಲ್ಲಿ ವಿಲ್ನ(Villain)ಗಳ ಅಬ್ಬರದ ನಡುವೆ ಕೊಂಚ ಲವ್ ಟಚ್ ಸಖತ್ ಕಿಕ್ ನೀಡುತ್ತೆ. ಪ್ರತಿಯೊಂದು ದೃಶ್ಯವು ಕಣ್ಣಿಗೆ ಹಬ್ಬ ಅಂತಿದ್ದಾರೆ ಸಿನಿಮಾ ನೋಡಿಬಂದ ಫ್ಯಾನ್ಸ್.
ಫಸ್ಟ್ ಹಾಫ್.. ಆಕ್ಷನ್ ಬೊಂಬಾಟ್.. ಸೆಂಟಿಮೆಂಟ್ ಸೂಪರ್..!
ಮದಗಜ ಸಿನಿಮಾ ಶುರುವಾದಗಿನಿಂದಲೂ ಮಾಸ್ ಪ್ರೇಕ್ಷಕರಿಗೆ ಸಖತ್ ಮಜಾ ನೀಡುತ್ತೆ. ಸಿನಿಮಾ ಮೊದಲಾರ್ಧ ಸಖತ್ ಮಾಸ್ ಆಗಿ ಮೂಡಿಬಂದಿದೆ. ಶ್ರೀ ಮುರುಳಿ ಅವರ ಆ್ಯಕ್ಷನ್ ನೋಡೋಕೆ ಖುಷಿ. ಫಸ್ಟ್ ಹಾಫ್ನಲ್ಲಿರುವ ಎರಡು ಫೈಟ್ ದೃಶ್ಯಗಳು ಪ್ರೇಕ್ಷಕರ ಎದೆಬಡಿತವನ್ನು ಹೆಚ್ಚಿಸುತ್ತೆ.
ಫಸ್ಟ್ ಹಾಫ್ನಲ್ಲಿ ಬರುವ ಅನೇಕ ಸನ್ನಿವೇಶಗಳು ವಾರಾಣಸಿಯಲ್ಲಿ ನಡೆಯುತ್ತಿವೆ. ಇನ್ನುಳಿದ ದೃಶ್ಯಗಳು ಕರ್ನಾಟಕದ ಕನೆಕ್ಷನ್ ಹೊಂದಿವೆ. ವಾರಾಣಸಿಯಿಂದ ಕರ್ನಾಟಕದತ್ತ ಕಥೆ ಸಾಗುತ್ತದೆ.ಆ್ಯಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ದೃಶ್ಯಗಳಿಗೆ ಫಸ್ಟ್ ಹಾಫ್ನಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ.ಶಿವರಾಜ್ ಕೆ.ಆರ್. ಪೇಟೆ ಮತ್ತು ಚಿಕ್ಕಣ್ಣ ಅವರ ಕಾಮಿಡಿಗೆ ಅವಕಾಶ ಸಿಕ್ಕಿದೆ.
ಸೆಕೆಂಡ್ ಹಾಫ್.. ಲವ್ ಸೀನ್.. ವಿಲನ್ ಅಬ್ಬರ.. ಮಸ್ತ್ ಮ್ಯೂಸಿಕ್!
ಇನ್ನೂ ಸೆಕೆಂಡ್ ಹಾಫ್ ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಮದಗಜ ಯಶಸ್ವಿಯಾಗಿದೆ. ಕಥೆಯ ಮುಖ್ಯ ವಿಲನ್ ಜಗಪತಿ ಬಾಬು ಅವರ ಪಾತ್ರ ಮಧ್ಯಂತರದ ವೇಳೆಗೆ ಕಾಣಿಸಿಕೊಳ್ಳುತ್ತದೆ. ಇದಾದ ಬಳಿಕ ಸೆಕೆಂಟ್ ಹಾಫ್ನಲ್ಲಿ ಜಗಪತಿ ಬಾಬು ಪಾತ್ರ ಅಬ್ಬರಿಸಿ ಬೊಬ್ಬಿರಿದಿದೆ. ಪ್ರತಿ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಜಗಪತಿ ಬಾಬು, ಈ ಸಿನಿಮಾದಲ್ಲೂ ಅವರು ಭಿನ್ನ ರೀತಿಯ ವಿಲನ್ ಗೆಟಪ್ ತೊಟ್ಟಿದ್ದಾರೆ. ಇನ್ನು ಅಲ್ಲಲ್ಲಿ ತಾಯಿ ಸೆಂಟಿಮೆಂಟ್ ದೃಶ್ಯಗಳು ಕಣ್ಣೀರು ತರಿಸುತ್ತೆ. ಸಿನಿಮಾ ಪೂರ್ತಿ ಡೈಲಾಗ್ಸ್ಗಳೇ ಹೈಲೆಟ್. ಕಥೆಯಲ್ಲಿ ಹೊಸತನ ಇಲ್ಲದಿದ್ದರೂ ಕಟ್ಟಿಕೊಟ್ಟಿರುವ ರೀತಿ ಜನರಿಗೆ ಇಷ್ಟವಾಗುತ್ತೆ. ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಹಾಗೇ ಸಿನಿಮಾ ಮಾಡಿದ್ದಾರೆ ಮಹೇಶ್.
ಇದನ್ನು ಓದಿ : ವೀಕೆಂಡ್ ಮೂವಿ ಧಮಾಕ: ಈ ವಾರ OTTಯಲ್ಲಿ ಈ 5 ಥ್ರಿಲ್ಲಿಂಗ್ ಸಿನಿಮಾಗಳು ರಿಲೀಸ್!
ಹಿನ್ನಲೆ ಸಂಗೀತವೇ ಸಿನಿಮಾಗೆ ಹೈಲೆಟ್
ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳಷ್ಟೇ ಅಲ್ಲದೇ ಹಿನ್ನಲೆ ಸಂಗೀತದಲ್ಲೂ ರವಿ ಬಸ್ರೂರು ಕೈ ಚಳಕ ತೋರಿದ್ದಾರೆ. ಹೀರೋ - ವಿಲನ್ ಎಂಟ್ರಿ ದೃಶ್ಯ, ತಾಯಿ ಸೆಂಟಿಮೆಂಟ್ ದೃಶ್ಯಗಳಲ್ಲಿ ರವಿ ಬಸ್ರೂರು ಅವರ ಸಂಗೀತ ಮನಸ್ಸಿಗೆ ನಾಟುತ್ತದೆ. ತೆರೆ ಮುಂದೆ ರವಿ ಬಸ್ರೂರು ಕಾಣಿಸಿಕೊಳ್ಳದಿದ್ದರೂ, ತೆರೆ ಹಿಂದೆ ಅವರ ಸಂಗೀತ ಸಖತ್ ಸೌಂಡ್ ಮಾಡಿದೆ. ಇನ್ನೂ ಆಶಿಕಾ ಕೂಡ ಹಳ್ಳಿ ಹುಡುಗಿ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ತುಂಬಾ ಮುದ್ದಾಗಿ ಕಾಣಿಸುತ್ತಾರೆ.
ಇದನ್ನು ಓದಿ :ಕಿಚ್ಚನ ಬಳಿಕ ರಾಜಮೌಳಿ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡ ನಟ: RRR ಚಿತ್ರದಲ್ಲಿ ಅರುಣ್ ಸಾಗರ್!
ಸಿನಿಮಾದ ಛಾಯಾಗ್ರಹಣ ಬೇರೆ ಲೆವಲ್ಗೆ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಪ್ರತಿಯೊಂದು ದೃಶ್ಯವೂ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗುತ್ತಿದೆ,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ