‘ಕಾಂತಾರ’ದ (Kantara) ‘ಲೀಲಾ’ ಅಲಿಯಾಸ್ ಸಪ್ತಮಿ ಗೌಡ (Leela alias Saptami Gowda) ಈಗ ಸಖತ್ ಬ್ಯುಸಿಯಾಗಿದ್ದಾರೆ. ಲೀಲಾ ಆಗಿ ಮನೋಜ್ಞ ಅಭಿನಯ ನೀಡಿದ ಬಳಿಕ ಸಪ್ತಮಿ ಗೌಡ ಅವರಿಗೆ ಸಿನಿ ಇಂಡಸ್ಟ್ರಿಯಲ್ಲಿ (Cine Industry) ಡಿಮ್ಯಾಂಡ್ ಹೆಚ್ಚಾಗಿದ್ಯಂತೆ. ಬರೀ ಕನ್ನಡ (Kannada) ಮಾತ್ರವಲ್ಲ, ಬೇರೆ ಬೇರೆ ಫಿಲ್ಮ್ ಇಂಡಸ್ಟ್ರಿಯಿಂದಲೂ (Film Industry) ಸಪ್ತಮಿ ಗೌಡಗೆ ಆಫರ್ ಮೇಲೆ ಆಫರ್ ಬರ್ತಾ ಇದ್ಯಂತೆ. ಸದ್ಯ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ (Junior Rebel star Abhishek Ambarish) ಜೊತೆ ‘ಕಾಳಿ’ (Kaali) ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಆದರೂ ಸಪ್ತಮಿ ಗೌಡ ಕಾಂತಾರ ಗುಂಗಿನಿಂದ ಹೊರ ಬಂದಂತೆ ಕಾಣುತ್ತಿಲ್ಲ. ಇದೀಗ ಲೀಲಾ ಅಲಿಯಾಸ್ ಸಪ್ತಮಿ ಗೌಡ ಕಾಂತಾರ ಸಿನಿಮಾದ ಲಾಸ್ಟ್ ಡೇ ಶೂಟಿಂಗ್ನ (Kantara Last day shooting) ವಿಡಿಯೋವನ್ನು ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಹೇಗಿತ್ತು ಕಾಂತಾರ ಸಿನಿಮಾದ ಲಾಸ್ಟ್ ಡೇ ಶೂಟಿಂಗ್?
ಕಾಂತಾರ ಸಿನಿಮಾದ ಎಲ್ಲಾ ಶೂಟಿಂಗ್ ನಡೆದಿರುವುದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಹುಟ್ಟೂರಿನಲ್ಲಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಎಂಬಲ್ಲಿ ಸೆಟ್ ಹಾಕಿ, ಕಾಂತಾರ ಶೂಟಿಂಗ್ ಮಾಡಲಾಗಿತ್ತು. ಇದೀಗ ನಟಿ ಸಪ್ತಮಿ ಗೌಡ ಅವರು ಕಾಂತಾರ ಸಿನಿಮಾದ ಲಾಸ್ಟ್ ಡೇ ಶೂಟಿಂಗ್ನ ವಿಡಿಯೋವನ್ನು ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: Kannada Pan India Heroines: 2022ರಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ ಕನ್ನಡದ ನಟಿಯರು!
ಕಾಂತಾರ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ನಟಿ!
ಹೌದು, ಹೀಗಂತ ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ನಟಿ ಸಪ್ತಮಿ ಗೌಡ ಬರೆದಿಕೊಂಡಿದ್ದಾರೆ. ಕಾಂತಾರ ಚಿತ್ರದ ಸೆಟ್ನಲ್ಲಿ ಇರುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ರಾತ್ರಿಯ ಚಿತ್ರೀಕರಣದ ಸಮಯದಲ್ಲಿ ನಾನು ಸೇವಿಸಿದ ಎಲ್ಲಾ ಬನ್ಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ನನ್ನ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದು ಸೆಟ್ನಲ್ಲಿ ನನ್ನ ಕೊನೆಯ ಶೂಟಿಂಗ್ ದಿನವಾಗಿತ್ತು ಅಂತ ಸಪ್ತಮಿ ಭಾವುಕರಾಗಿ ಬರೆದುಕೊಂಡಿದ್ದಾರೆ.
ಫಾರೆಸ್ಟ್ ಗಾರ್ಡ್ ಯೂನಿಫಾರ್ಮ್ ಇಟ್ಟುಕೊಂಡಿದ್ದಾರಾ ಲೀಲಾ?
ಕಾಂತಾರ ಚಿತ್ರದ ಇಡೀ ಕಥೆ ಕಾಡಿನಲ್ಲಿ ನಡೆಯುವುದರಿಂದ, ಅವರು ಚಿತ್ರದಲ್ಲಿ ಲೀಲಾ ಎಂಬ ಫಾರೆಸ್ಟ್ ಗಾರ್ಡ್ ಪಾತ್ರವನ್ನು ನಿರ್ವಹಿಸಿದ್ದರು. ಚಿತ್ರದಲ್ಲಿ ತೊಟ್ಟಿದ್ದ ಸಮವಸ್ತ್ರವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ತಾನು ಇಷ್ಟು ದಿನ ಅರಣ್ಯ ಸಿಬ್ಬಂದಿ ವೇಷಭೂಷಣವನ್ನು ಧರಿಸಿದ್ದೇನೆ ಮತ್ತು ಚಿತ್ರೀಕರಣ ಮುಗಿದ ನಂತರ ಅದನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದು ಸಪ್ತಮಿ ಹೇಳಿದ್ದರಂತೆ. ಆದ್ದರಿಂದ, ಲೀಲಾ ಅವರ ಬ್ಯಾಡ್ಜ್ನ ಮೇಲೆ ಸಮವಸ್ತ್ರವನ್ನು ಮನೆಗೆ ತೆಗೆದುಕೊಂಡು ಹೋಗುವ ಬಯಕೆಯನ್ನು ಅವರು ವ್ಯಕ್ತಪಡಿಸಿದಾಗ, ರಿಷಬ್ ಶೆಟ್ಟಿ ಅದನ್ನು ತೆಗೆದುಕೊಳ್ಳಲು ಒಪ್ಪಿಕೊಂಡರಂತೆ.
ಇದನ್ನೂ ಓದಿ: Sapthami Gowda: ಕಾಂತಾರ ಚಿತ್ರದ ಲೀಲಾ ಮೋಹಕ ರೂಪ! ಕಪ್ಪು ಉಡುಗೆಯಲ್ಲಿ ಸಪ್ತಮಿ
ಸಪ್ತಮಿ ಗೌಡಗೆ ಫುಲ್ ಡಿಮ್ಯಾಂಡ್
ಎರಡು ವರ್ಷಗಳ ಹಿಂದೆ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಟಿ ಸಪ್ತಮಿ ಗೌಡ ಅವರು ಕಾಂತಾರ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಇದೀಗ ಅವರಿಗೆ ಫುಲ್ ಡಿಮ್ಯಾಂಡ್ ಬರುತ್ತಿದೆಯಂತೆ. ಸದ್ಯ ಅವರು ಕಾಳಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ