Movie Review: ಕಲೆಕ್ಟರ್, ಕ್ರೈಂ, ಲವ್ - 'ಮಾಚೆರ್ಲಾ ನಿಯೋಜಕವರ್ಗಂ' ಸಿನಿಮಾ ವಿಮರ್ಶೆ

ಟಾಲಿವುಡ್‌ ಸೂಪರ್‌ ಸ್ಟಾರ್‌ ಆಗಿರುವ ನಿತಿನ್ ನಟಿಸಿದ ʼಮಾಚೆರ್ಲಾ ನಿಯೋಜಕವರ್ಗಂʼ ಸಿನಿಮಾ ಚಲನಚಿತ್ರ ಮಂದಿರಗಳಲ್ಲಿ ತೆರೆ ಕಂಡಿದೆ. ನಿತಿನ್‌ ಅವರ ಅಭಿಮಾನಿಗಳಿಗೆ ಈ ಸಿನಿಮಾ ಒಂದು ಮನೋರಂಜನೆ ಸಿನಿಮಾ ಆಗಿ ಹೊರಹೊಮ್ಮುವುದರಲ್ಲಿ ಯಾವ ಆಶ್ಚರ್ಯವಿಲ್ಲ. ಆದರೆ ಬಿಡುಗಡೆ ಕಂಡಿರುವ ʼಮಾಚೆರ್ಲಾ ನಿಯೋಜಕವರ್ಗಂʼ ಸಿನಿಮಾದ ಬಗ್ಗೆ ಸಿನಿಮಾ ವಿಮರ್ಶಕರು ಏನ್‌ ಹೇಳ್ತಾರೆ? ತಿಳಿಯೋಣ ಬನ್ನಿ

ʼಮಾಚೆರ್ಲಾ ನಿಯೋಜಕವರ್ಗಂʼ ಸಿನಿಮಾ

ʼಮಾಚೆರ್ಲಾ ನಿಯೋಜಕವರ್ಗಂʼ ಸಿನಿಮಾ

  • Share this:
ಟಾಲಿವುಡ್‌ ಸೂಪರ್‌ ಸ್ಟಾರ್‌ (Tollywood Super Star) ಆಗಿರುವ ನಿತಿನ್ (Nithiin) ನಟಿಸಿದ ʼಮಾಚೆರ್ಲಾ ನಿಯೋಜಕವರ್ಗಂʼ  (Macherla Niyojakavargam) ಸಿನಿಮಾ ಚಲನಚಿತ್ರ ಮಂದಿರಗಳಲ್ಲಿ ತೆರೆ ಕಂಡಿದೆ. ನಿತಿನ್‌ ಅವರ ಅಭಿಮಾನಿಗಳಿಗೆ ಈ ಸಿನಿಮಾ ಒಂದು ಮನೋರಂಜನೆ ಸಿನಿಮಾ ಆಗಿ ಹೊರಹೊಮ್ಮುವುದರಲ್ಲಿ ಯಾವ ಆಶ್ಚರ್ಯವಿಲ್ಲ. ಆದರೆ ಬಿಡುಗಡೆ ಕಂಡಿರುವ ʼಮಾಚೆರ್ಲಾ ನಿಯೋಜಕವರ್ಗಂʼ ಸಿನಿಮಾದ ಬಗ್ಗೆ ಸಿನಿಮಾ ವಿಮರ್ಶಕರು (Movie Reviewers) ಏನ್‌ ಹೇಳ್ತಾರೆ? ಸಿನೆಮಾಕ್ಕೆ ಎಷ್ಟು ರೇಟಿಂಗ್‌ ಕೊಡ್ತಾರೆ? ಇದರ ಕಥೆ ಹೇಗಿದೆ? ಚಿತ್ರದ ಬಗ್ಗೆ ಅವರ ಅಭಿಪ್ರಾಯಗಳೇನು? ಎಂಬೆಲ್ಲ ಮಾಹಿತಿಯನ್ನು ತಿಳಿಸಿದ್ದಾರೆ ಅದನ್ನು ಇಲ್ಲಿ ತಿಳಿಯೋಣ ಬನ್ನಿ.

ಕಥಾ ಹಂದರ

ಸಿದ್ಧಾರ್ಥ್ ರೆಡ್ಡಿ (ನಿತಿನ್) ಎಂಬ ವ್ಯಕ್ತಿ ಸಿವಿಲ್ ಪರೀಕ್ಷೆಗಳಲ್ಲಿ ಟಾಪರ್ ಆಗಿರುತ್ತಾರೆ ಮತ್ತು ಅವರ ನೇಮಕಾತಿ ಲೇಟರ್‌ ಬರಲು ಕಾಯುತ್ತಿರುತ್ತಾರೆ. ಇನ್ನೊಂದು ಕಡೆ ಅವನ ಬಾಲ್ಯದ ಗೆಳತಿ ಅವನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ, ಅವಳ ಪ್ರೀತಿಗೆ ಇವನ ಪ್ರತಿಕ್ರಿಯೆ ಏನು ಇರುವುದಿಲ್ಲ. ಅವನ ಗುರಿ ಜನ ಸೇವೆ ಮಾಡುವುದು ಆಗಿರುತ್ತದೆ. ಈ ನಡುವೆ ಸಿದ್ಧಾರ್ಥ್ ಮತ್ತೊಬ್ಬ ಹುಡುಗಿಯನ್ನು ಪ್ರೀತಿಸಲು ಆರಂಭಿಸುತ್ತಾನೆ.

ಆದರೆ ಅವಳು ಇದ್ದಕ್ಕಿದ್ದಂತೆ ಮಾಚೆರ್ಲಾಗೆ ಹೋಗುತ್ತಾಳೆ. ಸಿದ್ಧಾರ್ಥ್ ಅವಳನ್ನು ಹುಡುಕುತ್ತಾ ಹೋಗುತ್ತಾನೆ. ಯಾಕೆ ಅವಳನ್ನು ಹುಡುಕುತ್ತಾ ಹೋಗುತ್ತಾನೆ. ಮಾಚೆರ್ಲಾದಲ್ಲಿ ಯಾರಿದ್ದಾರೆ ಎಂದು ಕಥೆ ಮುಂದೆಸಾಗುವ ಹೊತ್ತಿಗೆ ಎರಡನೇ ಹಾಫ್‌ಗೆ ತೆರೆದುಕೊಳ್ಳುತ್ತದೆ. ಈ ಸಿನಿಮಾದಲ್ಲಿ ತ್ರಿಕೋನ ಪ್ರೀತಿ ಕಥೆ ಇರಬಹುದು ಎಂಬುದಕ್ಕೆ ಸಿನಿಮಾದಲ್ಲಿ ಉತ್ತರ ಸಿಗುತ್ತಾ ಹೋಗುತ್ತದೆ.

ಇದನ್ನೂ ಓದಿ: Katrina Kaif and Vicky Kaushal: ಬಾಲಿವುಡ್​ನ ಮತ್ತೊಂದು ಜೋಡಿಯಿಂದ ಗುಡ್​ನ್ಯೂಸ್​! ಆಲಿಯಾ ಬಳಿಕ ತಾಯಿಯಾಗ್ತಿದ್ದಾರಾ ಕತ್ರಿನಾ ಕೈಫ್​?

ಇನ್ನು ಎರಡನೇ ಹಾಫ್‌ನಲ್ಲಿ ಸಂಪೂರ್ಣವಾಗಿ ನಾಯಕ ನಟ ವಿಜೃಂಭಿಸಿದ್ದಾನೆ. ಏಕೆಂದರೆ ನಾಯಕ ನಟ ಮಾಚೆರ್ಲಾಗೆ ಕಲೆಕ್ಟರ್‌ ಆಗಿ ನೇಮಕಗೊಳ್ಳುತ್ತಾನೆ. ಆ ಮಾಚೆರ್ಲಾದಲ್ಲಿ ಭಯಂಕರ ಕ್ರಿಮಿನಲ್‌ ಆದ ಸಮುದ್ರಕನಿ ಜೊತೆ ನ್ಯಾಯಕ್ಕೆ ಹೋರಾಡುವ ಧೀಮಂತ ಕಲೆಕ್ಟರ್‌ ಆಗಿ ನಿತಿನ್‌ ಬಹಳ ಪ್ರಬುದ್ಧತೆಯಿಂದ ನಟಿಸಿದ್ಧಾರೆ. ನಿಜಕ್ಕೂ ಇದು ಒಂದು ಉತ್ತಮ ಸಿನಿಮಾ ಆಗಿದೆ.

  • ಸಿನಿಮಾ-ಮಾಚರ್ಲಾ ನಿಯೋಜಕವರ್ಗಂ

  • ತಾರಾಗಣ- ನಿತಿನ್, ಕೃತಿ ಶೆಟ್ಟಿ, ಕ್ಯಾಥರೀನ್ ತ್ರೇಸಾ

  • ನಿರ್ದೇಶಕ-ಎಂ.ಎಸ್.ರಾಜಶೇಖರ್ ರೆಡ್ಡಿ

  • ನಿರ್ಮಾಪಕರು -ಸುಧಾಕರ್ ರೆಡ್ಡಿ, ನಿಕಿತಾ ರೆಡ್ಡಿ

  • ಸಂಗೀತ- ಮಹತಿ ಸ್ವರ ಸಾಗರ್

  • ರನ್ ಸಮಯ-2 ಗಂಟೆ 40 ನಿಮಿಷಗಳು

  • ಬಿಡುಗಡೆ- 12 ಆಗಸ್ಟ್ 2022


ಸಿನಿಮಾದಲ್ಲಿ ನಟ-ನಟಿಯರ ಪಾತ್ರದ ಬಗ್ಗೆ ಒಂದಿಷ್ಟು ಮಾತು:
ನಿತಿನ್ ಮಾಸ್ ಲುಕ್ ನಲ್ಲಿ ಸಕತ್‌ ಮಿಂಚಿದ್ಧಾರೆ. ಬುದ್ಧಿವಂತ ಕಲೆಕ್ಟರ್‌ ಆಗಿ ತಮ್ಮ ಪಾತ್ರವನ್ನು ಪ್ರಬುದ್ಧತೆಯಿಂದ ನಿರ್ವಹಿಸಿದ್ದಾರೆ ಎಂದು ಹೇಳಬಹುದು. ಈ ನಿತಿನ್‌ ಪಾತ್ರ ಮಾತ್ರ ಈ ಸಿನಿಮಾದಲ್ಲಿ ಹೊಸದಾಗಿದೆ. ಆದರೆ ಕಥೆ, ಚಿತ್ರಕಥೆ ಸೇರಿದಂತೆ ಉಳಿದೆಲ್ಲ ವಿಷಯಗಳು ಹಳೆಯ ಕಥೆಗಳನ್ನೆ ಹೋಲುತ್ತವೆ ಎನ್ನುವುದು ಬೇಸರದ ಸಂಗತಿ.

ನಿತಿನ್‌ಗೆ ಪಾತ್ರಕ್ಕೆ ಮತ್ತೆ ಬರುವುದಾದರೆ, ಅವರು ಮಾಸ್ ಪಾತ್ರಕ್ಕೆ ಹೊಂದಿಕೊಳ್ಳಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದಾರೆ. ಇನ್ನು ಕೃತಿ ಮತ್ತು ಕ್ಯಾಥರೀನ್ ಸಿನಿಮಾದಲ್ಲಿ ಸೀಮಿತ ಪಾತ್ರವನ್ನು ಹೊಂದಿದ್ದಾರೆ. ಈ ಸಿನಿಮಾದಲ್ಲಿ ವೆನಿಲ್ಲಾ ಕಿಶೋರ್ ಅತ್ಯುತ್ತಮ ಹಾಸ್ಯ ನಟರಾಗಿ ಪ್ರೇಕ್ಷಕರಿಗೆ ಹಾಸ್ಯದ ಕಚಗುಳಿ ಇಡುತ್ತಾರೆ ಎನ್ನುವುದು ಸಮಾಧಾನಕರ. ಸಮುದ್ರಕನಿ ವಿಲನ್‌ ಆಗಿ ಉತ್ತಮ ಪಾತ್ರ ನಿರ್ವಹಿಸಿದ್ದಾರೆ.

ತೆರೆ ಹಿಂದೆ ಇರುವ ಪ್ರತಿಭೆಗಳು:
ಮಹತಿ ಸಾಗರ್ ಅವರ ಹಿನ್ನೆಲೆ ಸಂಗೀತ ಸಿನಿಮಾ ಪ್ರೇಕ್ಷಕರಿಗೆ ಮುದ ನೀಡುತ್ತವೆ. ಮಾಚೆರ್ಲಾ ಮಾಸ್ ಸಿನಿಮಾ ಆಗಿರುವುದರಿಂದ ಸಿನಿಮಾಟೋಗ್ರಫಿ ಚೆಂದವಾಗಿ ಮೂಡಿ ಬಂದಿದೆ. ಪ್ರೊಡಕ್ಷನ್‌ ವ್ಯಾಲೂಗಳು ಉತ್ತಮವಾಗಿವೆ.

ನಿರ್ದೇಶಕ ಎಂ.ಎಸ್.ರಾಜಶೇಖರ್ ರೆಡ್ಡಿ ಅನುಭವಿ ಸಂಪಾದಕ ಆಗಿದ್ದಾರೆ. ಆದರೆ ಅವರು ಕಥೆಯ ಟ್ರಿಕ್ ಅನ್ನು ಅಷ್ಟೊಂದು ಆಸಕ್ತಿದಾಯಕವಾಗಿ ಹೆಣೆದಿಲ್ಲ. ಮಾಚೆರ್ಲಾದಲ್ಲಿನ ಪ್ರತಿಯೊಂದು ದೃಶ್ಯವು ಈ ಹಿಂದೆ ತೆಲುಗು ಸಿನಿಮಾದಲ್ಲಿ ನಾವು ಬೇರೆಲ್ಲಿಯೋ ಅದೇ ದೃಶ್ಯವನ್ನು ನೋಡಿದ್ದೇವೆ ಎಂಬ ಭಾವನೆಯನ್ನು ತರುತ್ತದೆ. ಈ ಸಿನಿಮಾ ಬೇರೆ ಯಾವುದೋ ಸಿನಿಮಾದ ಕಾಪಿ ಪೇಸ್ಟ್ ದೃಶ್ಯಗಳ ಸಿನಿಮಾ ಎಂದು ಹೇಳಬಹುದು. ಈ ಸಿನಿಮಾದಲ್ಲಿ ಸ್ವಂತಿಕೆ ಸೋತಿದೆ.

ಇದನ್ನೂ ಓದಿ:  Lal Singh Chaddha: ಆಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು?

ವೆನಿಲ್ಲಾ ಕಿಶೋರ್ ಅವರ ಹಾಸ್ಯವೊಂದನ್ನು ಬಿಟ್ಟರೆ ಸಿನಿಮಾದಲ್ಲಿನ ಒಂದೇ ಒಂದು ದೃಶ್ಯವು ಹೊಸತನ ಹೊಂದಿಲ್ಲ ಎಂದೇ ವಿರ್ಮಶಿಸಬಹುದು.

ಕೊನೆಯದಾಗಿ ಈ ಸಿನಿಮಾ ಕುರಿತು ವಿಮರ್ಶಕರೇನು ಹೇಳ್ತಿದಾರೆ?
ಮಾಚೆರ್ಲಾ ನಿಯೋಜಕವರ್ಗಮ್ ಎಲ್ಲ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾದಲ್ಲಿ ಪ್ರೇಕ್ಷಕರು ಯಾವುದೇ ಹೊಸತನ ಹುಡುಕಲು ಸಾಧ್ಯವಿಲ್ಲ. ಕೋವಿಡ್‌ ನಂತರ ಪ್ರೇಕ್ಷಕರು ಕಟೆಂಟ್‌ ವಿಷಯಾಧಾರಿತ ಸಿನಿಮಾಗಳನ್ನು ನೋಡಲು ಬಯಸುತ್ತಿದ್ದರೆ, ಅದೇ ಹಳೆಯ ವಿಷಯವನ್ನು ಹೊಂದಿರುವ ಈ ಸಿನಿಮಾ ಚಿತ್ರಕಥೆ ಮತ್ತು ಆಕರ್ಷಕ ನಿರೂಪಣೆ ಸೇರಿದಂತೆ ಹಲವು ಅಂಶಗಳಲ್ಲಿ ಸೋತಿದೆ ಎಂದು ಹೇಳಬಹುದು.
Published by:Ashwini Prabhu
First published: