• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • MS Dhoni: ಬಣ್ಣದ ಲೋಕಕ್ಕೆ ಕಾಲಿಟ್ಟ ಧೋನಿ! 'ಆ' ನಟಿ ನಟಿಸಿದ್ರೆ ಮಾತ್ರ ದುಡ್ಡು ಹಾಕೋದು ಅಂದ್ರಾ ಮಾಹಿ?

MS Dhoni: ಬಣ್ಣದ ಲೋಕಕ್ಕೆ ಕಾಲಿಟ್ಟ ಧೋನಿ! 'ಆ' ನಟಿ ನಟಿಸಿದ್ರೆ ಮಾತ್ರ ದುಡ್ಡು ಹಾಕೋದು ಅಂದ್ರಾ ಮಾಹಿ?

ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿ

ತಮ್ಮ ಶಾಂತ ಸ್ವಭಾವ ಹಾಗೂ ತೀಕ್ಷ್ಣ ನಾಯಕತ್ವದಿಂದ ಇಡೀ ವಿಶ್ವದ (World) ಗಮನವನ್ನು ಕೂಲ್‌ ಕ್ಯಾಪ್ಟನ್‌ ಸೆಳೆದಿದ್ರು. 2022ರ ಐಪಿಎಲ್ ಸೀಸನ್​ನ ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ಸೌಂಡ್​ ಮಾಡಿದ್ದರು ಮಾಹಿ. ಇದೀಗ ಕ್ರಿಕೆಟ್​ ಅಲ್ಲದ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ.

  • Share this:

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni), ಕ್ರಿಕೆಟ್​​​ನ (Cricket) ಗ್ರೇಟ್ ಮೈಂಡ್. ಈ ಐಕಾನ್ ಆಟಗಾರ​​ನನ್ನ ದೇಶ ವಿದೇಶಗಳಲ್ಲಿ, ಫಾಲೋ (Follow) ಮಾಡ್ತಾರೆ. ಧೋನಿಯ ಸ್ಟೈಲಿಶ್​ ಲುಕ್ಸ್​ಗೆ,(Stylish Look) ಸಾಕಷ್ಟು ಮಂದಿ ಪ್ರಭಾವ ಆಗಿದ್ದಾರೆ. ಧೋನಿ ಟೀಮ್‌ ಇಂಡಿಯಾ (Team India) ನಾಯಕತ್ವ (Captaincy) ವಹಿಸಿಕೊಂಡ ಬಳಿಕ ಮೊಟ್ಟ ಮೊದಲ ಬಾರಿ ರಾಷ್ಟ್ರೀಯ ತಂಡವನ್ನು ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ (ICC Test Ranking) ಅಗ್ರ ಸ್ಥಾನಕ್ಕೇರಿಸಿದ್ದ ಕೀರ್ತಿ ಕೂಡ ಧೋನಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ತಮ್ಮ ಶಾಂತ ಸ್ವಭಾವ ಹಾಗೂ ತೀಕ್ಷ್ಣ ನಾಯಕತ್ವದಿಂದ ಇಡೀ ವಿಶ್ವದ (World) ಗಮನವನ್ನು ಕೂಲ್‌ ಕ್ಯಾಪ್ಟನ್‌ ಸೆಳೆದಿದ್ರು. 2022ರ ಐಪಿಎಲ್ ಸೀಸನ್​ನ ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ಸೌಂಡ್​ ಮಾಡಿದ್ದರು ಮಾಹಿ. ಇದೀಗ ಕ್ರಿಕೆಟ್​ ಅಲ್ಲದ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ.


ನಯನತಾರಾ ಸಿನಿಮಾಗೆ ಬಂಡವಾಳ ಹೂಡ್ತಿದ್ದಾರಂತೆ ಧೋನಿ!


ವರದಿಗಳ ಪ್ರಕಾರ, ಮಹೇಂದ್ರ ಸಿಂಗ್ ಧೋನಿ ಮತ್ತು ನಟಿ ನಯನತಾರಾ ಹೊಸ ಯೋಜನೆಗಾಗಿ ಜೊತೆಯಾಗುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಿದ್ದಾರೆ.ಭಾರತದ ಮಾಜಿ ನಾಯಕ, ಅವರು 2011 ರ ವಿಶ್ವಕಪ್ ಸೇರಿದಂತೆ ಭಾರತಕ್ಕಾಗಿ ಅನೇಕ ಟ್ರೋಫಿಗಳನ್ನು ಗೆದ್ದಿದ್ದಾರೆ.ಪ್ರಸ್ತುತ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ನಾಯಕರಾಗಿದ್ದಾರೆ. ಹೀಗಿರುವಾಗ ಧೋನಿ ನಿರ್ಮಾಣ ಸಂಸ್ಥೆ ಆರಂಭಿಸಿ ತಮಿಳಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ನಟ ರಜನಿಕಾಂತ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಸಹಾಯಕರಾಗಿದ್ದ ಸಂಜಯ್ ಈಗಷ್ಟೇ ಸೇರಿಕೊಂಡಿದ್ದಾರೆ.


ಶೀಘ್ರದಲ್ಲೇ ಆರಂಭವಾಗಲಿದ್ಯಂತೆ ಶೂಟಿಂಗ್​!


ನಯನ ಜೊತೆಗಿನ ಚಿತ್ರ ಲಾಭದಾಯಕವಾಗಲಿದೆ ಎಂದು ಸಂಜಯ್ ಸಲಹೆ ನೀಡಿದ್ದು, ಮಾತುಕತೆ ಆರಂಭಿಸಿದ್ದಾರೆ. ಹೀಗಿರುವಾಗ ಧೋನಿ ನಿರ್ಮಿಸಲಿರುವ ತಮಿಳು ಚಿತ್ರದಲ್ಲಿ ನಟಿ ನಯನತಾರಾ ನಾಯಕಿಯಾಗಿ ನಟಿಸಲಿದ್ದಾರೆ.ಇದರ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ನಯನತಾರಾ ತಮ್ಮ ಬಹುಕಾಲದ ಪ್ರೇಮಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಜೂನ್ 9 ರಂದು ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಇದಾದ ಬಳಿಕ ಕೆಲ ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳುತ್ತಿದ್ದಾರೆ.


ಇದನ್ನೂ ಓದಿ: ಇಂಡಿಯನ್​ ಬಾಕ್ಸ್​ ಆಫೀಸ್​ ಲೂಟಿ ಮಾಡಿದ ದಕ್ಷಿಣ ಭಾರತದ ಟಾಪ್​ 10 ಸಿನಿಮಾಗಳಿವು


ಸಖತ್​ ಸೌಂಡ್ ಮಾಡಿದ್ದ ಮಾಹಿ ಬಯೋಪಿಕ್​!


ರಾಂಚಿಯಂತಹ ಸಣ್ಣ ಪಟ್ಟಣದಿಂದ ಬಂದ ಧೋನಿ ಇಡೀ ಕ್ರಿಕೆಟ್​ ಜಗತ್ತಿನಲ್ಲೇ ಅದ್ಭುತ ನಾಯಕ, ವಿಕೆಟ್​ ಕೀಪರ್​ ಆಗಿ ಮೆರೆದಿದ್ದಾರೆ. ಕ್ರಿಕೆಟ್​ನಲ್ಲಿ ಸಾಧನೆ ಮಾಡಬೇಕು ಎಂದು ಬಯಸುವ ಸಣ್ಣಪುಟ್ಟ ಪಟ್ಟಣಗಳ ಲಕ್ಷಾಂತರ ಯುವಕರಿಗೆ ಧೋನಿ ಸ್ಪೂರ್ತಿಯಾಗಿದ್ದಾರೆ. ಸದ್ಯ ಕೂಲ್ ಕ್ಯಾಪ್ಟನ್ ಧೋನಿ ಏನೇ ಮಾಡುದ್ರು ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಹಾಗೆಯೇ ಸಿನಿಮಾ ಜಗತ್ತಿನ ಜೊತೆಗೂ ನಂಟು ಇಟ್ಟುಕೊಂಡಿರುವ ಧೋನಿ ತಮ್ಮ ಜೀವನಚರಿತ್ರೆಯನ್ನು ಸಿನಿಮಾ ಆಗಿ ಕೂಡ ನೋಡಿದ್ದಾರೆ.


ಇದನ್ನೂ ಓದಿ: Mahesh Babu - Rajamouli ಮುಂದಿನ ಸಿನಿಮಾದ ಬಿಗ್​ ಅಪ್​ಡೇಟ್​!​ ಅಂಡ್ವೆಂಚರ್​ ಥ್ರಿಲ್ಲರ್​ ಕಥೆ ರೆಡಿಯಾಗ್ತಿದ್ಯಂತೆ


ಇನ್ನು ಧೋನಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ನಟನೆ ಮಾಡಿದ್ರು. ಅಲ್ಲದೆ ಇವರ ಜೀವನಚರಿತ್ರೆಯನ್ನು ತಿಳಿಸುವ 'ಎಂಎಸ್ ಧೋನಿ; ದಿ ಅನ್‌ಟೋಲ್ಡ್ ಸ್ಟೋರಿ' ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್, ಧೋನಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ 'ರೋರ್ ಆಫ್‌ ದಿ ಲಯನ್' ಹೆಸರಿನ ಡಾಕ್ಯು ಡ್ರಾಮಾದಲ್ಲಿ ಸ್ವತಃ ಎಂಎಸ್ ಧೋನಿ ನಟಿಸಿದ್ದರು. ಈ ಡಾಕ್ಯುಡ್ರಾಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿತ್ತು.

Published by:Vasudeva M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು