ದಕ್ಷಿಣ ಭಾರತದ ಟ್ರಿಪಲ್ ಆರ್ (RRR Movie) ಸಿನಿಮಾ ದೇಶ ಮತ್ತು ವಿದೇಶದಲ್ಲೂ ಹೆಸರು ಮಾಡಿದೆ. ಎಸ್.ಎಸ್.ರಾಜಮೌಳಿ (S.S.Rajamouli) ನಿರ್ದೇಶನದ ಈ ಚಿತ್ರ ಎಲ್ಲರ ದಿಲ್ ಕದ್ದಿದೆ. ಸಿನಿಮಾ ಪ್ರೇಮಿಗಳು ಇದನ್ನ ಮೆಚ್ಚಿಕೊಂಡಾಡಿದ್ದಾರೆ. ಅತಿ ಹೆಚ್ಚು ಜನರನ್ನ ಸೆಳೆದಿರೊ ಟಾಲಿವುಡ್ನ (Tollywood Cinema) ಈ ಸಿನಿಮಾ, ಆಸ್ಕರ್ ರೇಸ್ನಲ್ಲೂ ಇದೆ. ಈ ಚಿತ್ರದ ನಾಟು ನಾಟು ಹಾಡಿಗೆ ಮೊನ್ನೆ ಮೊನ್ನೆ ಗೋಲ್ಡನ್ ಗ್ಲೋಬ್ ಪ್ರಶಸ್ತಿನೂ ಬಂದಿದೆ. ಇದನ್ನ ಪಡೆದ ಸಂಗೀತ ನಿರ್ದೇಶಕ ಎಂ.ಎಂ. (M.M.Keeravani) ಕೀರವಾಣಿ ಎಲ್ಲರನ್ನೂ ನೆನಪಿಸಿಕೊಂಡಿದ್ದಾರೆ. ಕನ್ನಡದ ಜೆಂಟಲ್ಮ್ಯಾನ್ಗೂ ಮನಸಾರೆ ಧನ್ಯವಾದ ತಿಳಿಸಿದ್ದಾರೆ. ಆದರೆ ಆ ನಾಯಕ ಯಾರು? ಎಲ್ಲರನ್ನೂ ಬಿಟ್ಟು ಕೀರವಾಣಿ ಅವರು ಆ ನಟನನ್ನ ನೆನಪಿಸಿಕೊಳ್ಳಲು ಕಾರಣ ಏನು? ಈ ಎಲ್ಲ ಪಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ.
ಕನ್ನಡದ ಜೆಂಟಲ್ಮ್ಯಾನ್ಗೆ ಕೀರವಾಣಿ ಧನ್ಯವಾದ
ದಕ್ಷಿಣ ಭಾರತದಲ್ಲಿ ಎಂ.ಎಂ.ಕೀರವಾಣಿ ಹೆಸರು ದೊಡ್ಡಮಟ್ಟದಲ್ಲಿಯೇ ಇದೆ. ಎಸ್.ಎಸ್.ರಾಜಮೌಳಿ ಚಿತ್ರಗಳಿಗೆ ಖಾಯಂ ಸಂಗೀತ ನಿರ್ದೇಶಕ ಆಗಿರೋ ಕೀರವಾಣಿ ಅವರು ಟ್ರಿಪಲ್ ಆರ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದರು. ಆ ಮೂಲಕ ಈಗ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದು ಇಡೀ ದಕ್ಷಿಣ ಭಾರತವೇ ಹೆಮ್ಮೆ ಪಡೋವಂತೆನೂ ಮಾಡಿದ್ದಾರೆ.
ಎಂ.ಎಂ.ಕೀರವಾಣಿ ಯಾರನ್ನೂ ಮರೆತಿಲ್ಲ!
ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ನಿಜಕ್ಕೂ ಯಾರನ್ನೂ ಮರೆತಿಲ್ಲ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದ ಖುಷಿಯಲ್ಲಿ ಎಂ.ಎಂ.ಕೀರವಾಣಿ ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದಾರೆ. ತಮ್ಮ ಯಶಸ್ವಿ ಪಯಣಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಮನಸಾರೆ ಧನ್ಯವಾದ ತಿಳಿಸುತ್ತಿದ್ದಾರೆ.
ಅರ್ಜುನ್ ಸರ್ಜಾ ಅವರನ್ನ ನೆನಪಿಸಿಕೊಂಡ ಎಂ.ಎಂ.ಕೀರವಾಣಿ
ಕನ್ನಡ ಬಹು ಭಾಷಾ ನಟ ಅರ್ಜುನ್ ಸರ್ಜಾ ಅವರನ್ನ ಎಂ.ಎಂ.ಕೀರವಾಣಿ ಮರೆತಿಲ್ಲ. ಅವರನ್ನು ಈ ಸಮಯದಲ್ಲಿ ನೆನಪಿಸಿಕೊಂಡಿದ್ದಾರೆ. ತುಂಬಾ ಸರಳವಾಗಿರೋ ಎಂ.ಎಂ.ಕೀರವಾಣಿ ಅವರು ಅರ್ಜುನ್ ಸರ್ಜಾ ಅವರನ್ನ ನೆನಪಿಸಿಕೊಳ್ಳಲು ಕಾರಣವೂ ಇದೆ.
ಅರ್ಜುನ್ ಸರ್ಜಾ ನಿರ್ದೇಶನದ ಮೊದಲ ಚಿತ್ರಕ್ಕೆ ಕೀರವಾಣಿ ಸಂಗೀತ
ನಟ, ನಿರ್ದೇಶಕ, ನಿರ್ಮಾಪಕ ಅರ್ಜುನ್ ಸರ್ಜಾ ಚಿತ್ರಕ್ಕೂ ಎಂ.ಎಂ. ಕೀರವಾಣಿ ಸಂಗೀತ ಮಾಡಿದ್ದಾರೆ. ವಿಶೇಷವೆಂದ್ರೆ, ಅರ್ಜುನ್ ಸರ್ಜಾ ನಿರ್ದೇಶನದ ಮೊದಲ ಸಿನಿಮಾ ಸೇವಗನ್ ಚಿತ್ರಕ್ಕೂ ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದಾದ್ಮೇಲೆ ಪ್ರತಾಪ್ ಚಿತ್ರಕ್ಕೂ ಎಂ.ಎಂ.ಕೀರವಾಣಿ ಸಂಗೀತ ಕೊಟ್ಟಿದ್ದರು. ಅಲ್ಲಿಂದ ಅರ್ಜುನ್ ಸರ್ಜಾ ಮತ್ತು ಎಂ.ಎಂ.ಕೀರವಾಣಿ ಅವರ ರಿಲೇಷನ್ ಚೆನ್ನಾಗಿಯೇ ಇದೆ. ಅದೇ ಒಂದು ಒಳ್ಳೆ ಸ್ನೇಹದಿಂದ ಎಂ.ಎಂ.ಕೀರವಾಣಿ ಅವರು ಅರ್ಜುನ್ ಸರ್ಜಾ ನಟನೆಯ ಅಳಿಮಯ್ಯ ಚಿತ್ರಕ್ಕೂ ಸಂಗೀತ ಕೊಟ್ಟಿದ್ದರು.
ಪ್ರೇಮಬರಹ ಚಿತ್ರದ ಹಾಡೊಂದಕ್ಕೆ ಕೀರವಾಣಿ ಗಾನ
ಅರ್ಜುನ್ ಸರ್ಜಾ ನಿರ್ದೇಶನದ ಪ್ರೇಮಬರಹ ಚಿತ್ರಕ್ಕೂ ಎಂ.ಎಂ.ಕೀರವಾಣಿ ಸಾಥ್ ಕೊಟ್ಟಿದ್ದರು. ಚಿತ್ರದ ಒಂದು ಹಾಡಿಗೆ ಧ್ವನಿಯಾಗಿದ್ದರು. ಅದೇ ಬಾಂಧವ್ಯ ಈಗಲೂ ಮುಂದುವರೆದಿದೆ.
ಅರ್ಜುನ್ ಸರ್ಜಾ ಅವರಿಗೆ ಮನಸಾರೆ ಧನ್ಯವಾದ ಹೇಳಿದ ಕೀರವಾಣಿ
ಇದನ್ನೆಲ್ಲ ನೆನಪಿನಲ್ಲಿಟ್ಟುಕೊಂಡಿರೋ ಗೋಲ್ಡನ್ ಗ್ಲೋಬ್ ವಿನ್ನರ್, ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಈಗ ಎಲ್ಲರನ್ನು ನೆನೆದುಕೊಳ್ಳುತ್ತಲೇ, ತಮ್ಮ ಸಂಗೀತ ಜೀವನದ ಯಶಸ್ವಿ ಪಯಣಕ್ಕೆ ಕಾರಣರಾದ ಅರ್ಜುನ್ ಸರ್ಜಾ ಅವರನ್ನು ಕೂಡ ಅಷ್ಟೇ ಪ್ರೀತಿಯಿಂದ ನೆನಪಿಸಿಕೊಂಡಿದ್ದಾರೆ.
ಗೋಲ್ಡನ್ ಗ್ಲೋಬ್ ಅನ್ನೋದು ಸುಲಭಕ್ಕೆ ಧಕ್ಕೋ ಪ್ರಶಸ್ತಿ ಅಲ್ಲ. ಅಳೆದು-ತೂಗಿ ಒಳ್ಳೆ ಸಂಗೀತಕ್ಕೆ ಸಿಗೋ ಪ್ರಶಸ್ತಿ ಇದಾಗಿದೆ. ಇದನ್ನ ಪಡೆದ ಎಂ.ಎಂ.ಕೀರವಾಣಿ ದಕ್ಷಿಣ ಭಾರತವೇ ಹೆಮ್ಮೆ ಪಡುವ ಹಾಗೆ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: Rashmika Mandanna: ಕನ್ನಡಿಗರ ಕೋಪದ ಬಿಸಿ ರಶ್ಮಿಕಾಗೆ ತಟ್ಟಿತಾ? ಮತ್ತೆ ನೆನಪಾದ್ರಾ ರಿಷಬ್, ರಕ್ಷಿತ್ ಶೆಟ್ಟಿ?M
ತಮ್ಮ ಈ ಸಾಧನೆಗೆ ಸಾಥ್ ಕೊಟ್ಟ ಡೈರೆಕ್ಟರ್ ಬಾಲಚಂದರ್, ಭರತನ್, ಹಾಗೂ ಭಟ್ ಸಾಬ್ ಸೇರಿದಂತೆ ಪ್ರತಿಯೊಬ್ಬರನ್ನೂ ನೆನಪಿಸಿಕೊಂಡು ಇತರರಿಗೂ ಸ್ಪೂರ್ತಿ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ