Radhe Shyam: ಪ್ರಭಾಸ್ ಮುಂಬರುವ ಚಿತ್ರದ ಕಥೆಯ ಬಗ್ಗೆ ಬಾಯ್ಬಿಟ್ಟ ಗೀತ ರಚನೆಕಾರ!

Prabhas- Pooj Hegde: ನಟ ಪ್ರಭಾಸ್ ತಮ್ಮ ಮುಂಬರುವ ಚಿತ್ರವಾದ ‘ರಾಧೆ ಶ್ಯಾಮ್’ ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದು. ಈ ಚಿತ್ರದಲ್ಲಿ ಪ್ರಭಾಸ್ ಮೊದಲ ಬಾರಿಗೆ ನಟಿ ಪೂಜಾ ಹೆಗ್ಡೆ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ.

ಪ್ರಭಾಸ್ -ಪೂಜಾ ಹೆಗ್ಡೆ

ಪ್ರಭಾಸ್ -ಪೂಜಾ ಹೆಗ್ಡೆ

  • Share this:
    ಪ್ಯಾನ್ ಇಂಡಿಯಾ(Pan india) ತಾರೆ ಪ್ರಭಾಸ್ (Prabhas) ಚಿತ್ರಗಳೆಂದರೆ ಸಾಕು ಅಭಿಮಾನಿಗಳಿಗೆ ಒಂದು ದೊಡ್ಡ ಹಬ್ಬದ ಸಡಗರವಿದ್ದಂತೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರ ಮುಂದಿನ ಚಿತ್ರವಾದ ‘ರಾಧೆ ಶ್ಯಾಮ್’ (Radhe shyam) ಬಿಡುಗಡೆಗಾಗಿ ತುಂಬಾನೇ ಕಾತುರತೆಯಿಂದ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಆ ಚಿತ್ರದ ಬಗ್ಗೆ ಏನೇ ವಿಷಯ ಬಹಿರಂಗಗೊಂಡರೂ ಅದನ್ನು ತಿಳಿದುಕೊಳ್ಳಲು ತುಂಬಾನೇ ಕುತೂಹಲ ತೋರಿಸುತ್ತಿದ್ದಾರೆ.

    ನಟ ಪ್ರಭಾಸ್ ತಮ್ಮ ಮುಂಬರುವ ಚಿತ್ರವಾದ ‘ರಾಧೆ ಶ್ಯಾಮ್’ ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದು. ಈ ಚಿತ್ರದಲ್ಲಿ ಪ್ರಭಾಸ್ ಮೊದಲ ಬಾರಿಗೆ ನಟಿ ಪೂಜಾ ಹೆಗ್ಡೆ (Pooja Hegde) ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯಿಸುತ್ತಿರುವ 'ರಾಧೆ ಶ್ಯಾಮ್' ಪ್ರಸ್ತುತ ಭಾರತೀಯ ಸಿನೆಮಾದಲ್ಲಿ ಬಿಡುಗಡೆಗಾಗಿ ಕಾಯುತ್ತಿರುವ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

    ಈ ಚಿತ್ರದ ಸಂಗೀತ ಸಂಯೋಜಕರಾದ ಜಸ್ಟಿನ್ ಪ್ರಭಾಕರನ್ ಅವರು ಮಾಡಿದ ಚಿತ್ರದ ಮೊದಲ ಹಾಡು ‘ಈ ರಾತಲೆ’ ಎಂಬ ಶೀರ್ಷಿಕೆಯ ಹಾಡು ಕಳೆದ ವಾರ ಬಿಡುಗಡೆಯಾಗಿ ತಕ್ಷಣವೇ ಹಿಟ್ ಆಯಿತು. ಏತನ್ಮಧ್ಯೆ, ಈ ಹಾಡಿನ ಗೀತ ರಚನೆಕಾರರಾದ ಕೃಷ್ಣ ಕಾಂತ್ ಅವರು ಇತ್ತೀಚೆಗೆ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ಸಂದರ್ಶನದಲ್ಲಿ ಚಿತ್ರದ ಕಥೆಯನ್ನು ಬಾಯ್ಬಿಟ್ಟಿದ್ದಾರಂತೆ ಎಂದು ಹೇಳಲಾಗುತ್ತಿದೆ.

    ಆದರೆ ಇವರು ಚಿತ್ರದ ಬಗ್ಗೆ ಬಾಯ್ಬಿಟ್ಟ ವಿಷಯವಾದರೂ ಏನು ಎನ್ನುವ ಕುತೂಹಲ ನಿಮಗೂ ಇರಬೇಕಲ್ಲವೇ? ಹಾಗಾದರೆ ಬನ್ನಿ ನೋಡೋಣ ಗೀತ ರಚನೆಕಾರರು ಏನು ಹೇಳಿದ್ದಾರೆ ಅಂತ.

    ಇದನ್ನು ಓದಿ: Kamal Haasan: ನಟ ಕಮಲ್​ ಹಾಸನ್​ಗೆ ಕೋವಿಡ್​ ಸೋಂಕು ದೃಢ; ಆಸ್ಪತ್ರೆಗೆ ದಾಖಲು

    ‘ರಾಧೆ ಶ್ಯಾಮ್’ ಚಿತ್ರದ ಬಗ್ಗೆ ಮಾತನಾಡಿದ ಗೀತ ರಚನೆಕಾರರಾದ ಕೃಷ್ಣ ಕಾಂತ್ ಅವರು ಚಿತ್ರದ ಎಲ್ಲಾ ಐದು ಹಾಡುಗಳನ್ನು ನಾನೇ ಬರೆದಿದ್ದೇನೆ ಮತ್ತು ಕಥೆಯ ರಹಸ್ಯವನ್ನು ಸಹ ಪರಿಹರಿಸಿದ್ದೇನೆ ಎಂದು ಹೇಳಿದ್ದಾರೆ.

    ರಾಧೆ ಕೃಷ್ಣ ಕುಮಾರ್ ಅವರ ನಿರ್ದೇಶನದ ‘ರಾಧೆ ಶ್ಯಾಮ್’ ಚಿತ್ರದ ಕಥೆಯು 1970 ರ ಯುರೋಪ್ ಹಿನ್ನೆಲೆಯನ್ನು ಒಳಗೊಂಡಿದೆ, ಆದರೆ ಅದರ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ ಎಂದು ಅವರು ವಿವರಿಸಿದರು. ಈ ಚಿತ್ರವು ಪುನರ್ಜನ್ಮದ ಕಥೆಯನ್ನು ಹೊಂದಿದೆ ಎಂದು ಕೆಲವರು ಊಹಿಸಿದರೇ, ಇನ್ನೂ ಕೆಲವರು ಈ ಕಥೆಯು ರೈಲು ಪ್ರಯಾಣದ ಸಮಯದಲ್ಲಿ ಸಂಭವಿಸುವ ರಹಸ್ಯಮಯ ಕಥೆಯನ್ನು ಹೊಂದಿದೆ ಎಂದು ಊಹಿಸುತ್ತಿದ್ದಾರೆ. ಅದು ಏನೇ ಇರಲಿ, ಈ ಕುತೂಹಲವನ್ನು ಹಾಗೆಯೇ ಇಡೋಣ ಎಂದು ಗೀತ ರಚನೆಕಾರ ಹೇಳಿದರು.



    ಇದನ್ನು ಓದಿ: GGVV Movie: ಈ ಸಿನಿಮಾದಲ್ಲಿ ಹೀರೋಯಿನ್ ಯಾಕಿಲ್ಲ? ಕೊನೆಗೂ ರಹಸ್ಯ ಬಿಚ್ಚಿಟ್ಟ ರಾಜ್ ಬಿ ಶೆಟ್ಟಿ!

    ನಂತರ, ಅವರು ಬರೆದ ‘ಈ ರಾತಲೆ’ ಹಾಡಿನ ಬಗ್ಗೆ ಮಾತನಾಡಿದ ಕೃಷ್ಣ ಕಾಂತ್ “ಈ ಹಾಡು ಕೆಲವರಿಗೆ ಜಟಿಲವಾಗಿ ತೋರಬಹುದು ಆದರೆ ಅದನ್ನು ದೊಡ್ಡ ಪರದೆಯ ಮೇಲೆ ನೋಡಿದಾಗ, ಅವರು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಿದರು. ಇಡೀ ಚಿತ್ರವನ್ನು ‘ಈ ರಾತಲೆ’ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಸಾಕಷ್ಟು ಗೊಂದಲಮಯ ದೃಶ್ಯಗಳನ್ನು ಹೊಂದುವ ಬದಲು, ಮಾಂಟೇಜ್ ಅನ್ನು ಬಳಸಲಾಗಿದೆ ಎಂದು ಹೇಳಿದರು.

    ‘ರಾಧೆ ಶ್ಯಾಮ್’ ಚಿತ್ರವು 14ನೇ ಜನವರಿ 2022 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಯುವಿ ಕ್ರಿಯೇಷನ್ಸ್, ಗೋಪಿ ಕೃಷ್ಣ ಮೂವೀಸ್ ಮತ್ತು ಟಿ-ಸೀರೀಸ್ ನಿರ್ಮಿಸಿರುವ ಈ ಚಿತ್ರವನ್ನು ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.


    Published by:Harshith AS
    First published: