• Home
  • »
  • News
  • »
  • entertainment
  • »
  • Puneeth Rajkumar: ಇದಪ್ಪಾ ಪವರ್ ಸ್ಟಾರ್ ಪವರ್; ಇವ್ರಿಂದ ‘ಲಕ್ಕಿಮ್ಯಾನ್’ಗೆ ಸಿಕ್ಕಾಪಟ್ಟೆ ಲಕ್​

Puneeth Rajkumar: ಇದಪ್ಪಾ ಪವರ್ ಸ್ಟಾರ್ ಪವರ್; ಇವ್ರಿಂದ ‘ಲಕ್ಕಿಮ್ಯಾನ್’ಗೆ ಸಿಕ್ಕಾಪಟ್ಟೆ ಲಕ್​

ಲಕ್ಕಿಮ್ಯಾನ್​

ಲಕ್ಕಿಮ್ಯಾನ್​

ವಿತರಣೆ ಹಕ್ಕು ಒಂದೇ ದಿನಕ್ಕೆ ಸೋಲ್ಡ್‌ಔಟ್ ಸೆಪ್ಟೆಂಬರ್‌ನಲ್ಲಿ 'ಲಕ್ಕಿಮ್ಯಾನ್' ಸಿನಿಮಾ ರಿಲೀಸ್​ಗೆ ತಯಾರಿ ನಡೆಸಿದೆ. ಇದೀಗ ಸಿನಿಮಾ ವಿತರಣೆ ಹಕ್ಕು ಮಾರಾಟವಾಗಿರುವುದಾಗಿ ವರದಿಯಾಗಿದೆ.

  • Share this:

ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್​ ​ ನಟನೆ  ಕೊನೆಯ ಸಿನಿಮಾ ಲಕ್ಕಿಮ್ಯಾನ್  ಮುಂದಿನ ತಿಂಗಳು ರಿಲೀಸ್ ಆಗಲಿದೆ. ಲವ್​ ಮಾಕ್ಟೇಲ್​’ (Love Mocktailಖ್ಯಾತಿಯ ಡಾರ್ಲಿಂಗ್​ ಕೃಷ್ಣ (Darling Krishna), ಸಂಗೀತಾ ಶೃಂಗೇರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಕ್ಕಿಮ್ಯಾನ್​ (Luckyman)  ಟೀಸರ್ (Teaser) ಬಿಡುಗಡೆಯಾಗಿತ್ತು, ಮತ್ತೆ ಅಭಿಮಾನಿಗಳು ಅಪ್ಪು ಅವರನ್ನು ಟೀಸರ್​ನಲ್ಲಿ ಕಂಡು ಕಣ್ತುಂಬಿ ಕೊಂಡಿದ್ದಾರೆ. ಲಕ್ಕಿಮ್ಯಾನ್ ಚಿತ್ರ ಒಂದೊಂದೆ ದಾಖಲೆ ಬರೆಯುತ್ತಿದೆ. 


ವಿತರಣೆ ಹಕ್ಕು ಒಂದೇ ದಿನಕ್ಕೆ ಸೋಲ್ಡ್‌ಔಟ್


ವಿತರಣೆ ಹಕ್ಕು ಒಂದೇ ದಿನಕ್ಕೆ ಸೋಲ್ಡ್‌ಔಟ್ ಸೆಪ್ಟೆಂಬರ್‌ನಲ್ಲಿ 'ಲಕ್ಕಿಮ್ಯಾನ್' ಸಿನಿಮಾ ರಿಲೀಸ್​ಗೆ ತಯಾರಿ ನಡೆಸಿದೆ. ಇದೀಗ ಸಿನಿಮಾ ವಿತರಣೆ ಹಕ್ಕು ಮಾರಾಟವಾಗಿರುವುದಾಗಿ ವರದಿಯಾಗಿದೆ. ಇಡೀ ಕರ್ನಾಟಕದ ವಿತರಣಾ ಹಕ್ಕುಗಳು ಒಂದೇ ದಿನದಲ್ಲಿ ಮಾರಾಟವಾಗಿರುವುದು ವಿಶೇಷ. ಪುನೀತ್‌ ರಾಜ್‌ಕುಮಾರ್‌ ಕ್ರೇಜ್‌ ಕಾರಣ ಪ್ರದರ್ಶನಕರು ಸಿನಿಮಾ ಹಕ್ಕುಗಳಿಗಾಗಿ ಮುಗಿಬಿದ್ದಿದ್ದಾರೆ. ಪರಿಣಾಮ ಒಂದೇ ದಿನಕ್ಕೆ ಹಕ್ಕುಗಳು ಮಾರಾಟವಾಗಿದೆ.


ಪ್ರಭುದೇವ್, ಪುನೀತ್​ ಭರ್ಜರಿ ಸ್ಟೆಪ್​


ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಲೀಡ್‌ ರೋಲ್‌ಗಳಲ್ಲಿ ಮಿಂಚಿದ್ದಾರೆ. ದಿವಂಗತ ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಪ್ರಭುದೇವಾ ಹಾಗೂ ಪವರ್ ಸ್ಟಾರ್ ಹಾಡೊಂಡಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅದರ ಮೇಕಿಂಗ್‌ನ ಸಣ್ಣ ಝಲಕ್ ಕೂಡ ರಿಲೀಸ್ ಆಗಿದೆ.


ವಿತರಣೆ ಹಕ್ಕು ಖರೀದಿಸಿದ ಜಾಕ್‌ ಮಂಜು 


ಇತ್ತೀಚೆಗೆ 'ವಿಕ್ರಾಂತ್ ರೋಣ' ಸಿನಿಮಾ ನಿರ್ಮಿಸಿ ಗೆದ್ದ ನಿರ್ಮಾಪಕ ಜಾಕ್‌ ಮಂಜು 'ಲಕ್ಕಿಮ್ಯಾನ್' ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದಾರೆ. ಭಾರೀ ಮೊತ್ತಕ್ಕೆ ಅಪ್ಪು ಕೊನೆಯ ಸಿನಿಮಾ ಹಕ್ಕುಗಳನ್ನು ಮಂಜು ಸ್ವಂತ ಮಾಡಿಕೊಂಡಿದ್ದು, ಬಹಳ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ. ಇನ್ನು ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಓವರ್‌ಸೀಸ್‌ ಥ್ರಿಯೇಟ್ರಿಕಲ್ ರೈಟ್ಸ್‌ಗೂ ಭಾರೀ ಡಿಮ್ಯಾಂಡ್ ಶುರುವಾಗಿದೆ.


ಇದನ್ನೂ ಓದಿ: Gaalipata 2: ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಹಾರಾಡ್ತಿದೆ ಗಾಳಿಪಟ-2; 3ನೇ ದಿನವೂ ಭರ್ಜರಿ ಕಲೆಕ್ಷನ್​


ಇತ್ತೀಚಿಗಷ್ಟೆ ಟೀಸರ್ ರಿಲೀಸ್


ಈ ಟೀಸರ್​ನಲ್ಲಿ ಪುನೀತ್ ರಾಜ್​ ಕುಮಾರ್ ಜೊತೆ ಭಾರತದ ಮೈಕಲ್ ಜಾಕ್ಸನ್​ ಖ್ಯಾತಿಯ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಇನ್ನು ಇದರಲ್ಲಿ ಅಪ್ಪು ಲೈಫ್​ನಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಳ್ಳೋಕೆ ನಿನಗೆ ಒಂದು ಚಾನ್ಸ್​ ಕೊಡ್ತೀನಿ ಎಂದಿದ್ದು, ಅಭಿಮಾನಿಗಳು ದೇವರು ನಿಮಗೆ ಮತ್ತೊಂದು ಚಾನ್ಸ್​ ಕೊಡಬೇಕು ಎಂದು ನೋವಿನಿಂದ ಕಾಮೆಂಟ್​ ಮಾಡ್ತಿದ್ದಾರೆ.  ಕಳೆದ ಡಿಸೆಂಬರ್​ನಲ್ಲಿ ಈ ಸಿನಿಮಾದ ಪೋಸ್ಟರ್​ ರಿಲೀಸ್​ ಆಗಿ ಬಹಳ ಸದ್ದು ಮಾಡಿತ್ತು. ಪುನೀತ್​ ರಾಜ್​ಕುಮಾರ್​ ಅವರು ಪ್ರಭುದೇವ ಜತೆ ಡ್ಯಾನ್ಸ್​ ಮಾಡುತ್ತಿದ್ದ ಫೋಟೋಗಳು ಸಹ ವೈರಲ್​ ಆಗಿದ್ದವು.
ಈ ಸಿನಿಮಾದಲ್ಲಿ ಆರ್ಯ, ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್ ರಾಜ್, ರೋಶಿನಿ ಪ್ರಕಾಶ್, ಸುಧಾ ಬೆಳವಾಡಿ, ಮಾಳವಿಕಾ  ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದು, ಎಸ್.ನಾಗೇಂದ್ರ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಪಿಆರ್ ಮೀನಾಕ್ಷಿ ಸುಂದರಾಮ್ ಹಾಗೂ ಸುಂದರ ಕಾಮರಾಜ್ ಅವರು ಬಂಡವಾಳ ಹೂಡಿದ್ದಾರೆ.


ರಾಜರತ್ನ ಪುನೀತ್​ ರಾಜ್​ಕುಮಾರ್ ಅಕಾಲಿಕ ನಿಧನವನ್ನು ಅಭಿಮಾನಿಗಳಿಗೆ ಮಾತ್ರವಲ್ಲ ಸ್ಯಾಂಡಲ್​ವುಡ್​ಗೆ  ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ನೆನಪಿಸಿಕೊಳ್ಳಲು ಒಂದು ಸಣ್ಣ ಚಾನ್ಸ್​ ಸಿಕ್ಕರೂ ಸಾಕು ಬಿಡುವುದಿಲ್ಲ. ಅವರು ನಮ್ಮಿಂದ ದೂರವಾಗಿ ಹಲವು ದಿನಗಳೇ ಕಳೆದಿದ್ದರೂ ಅವರ ನೆನಪುಗಳು ಅಭಿಮಾನಿಗಳನ್ನು ಬಿಟ್ಟು ಹೋಗಿಲ್ಲ ಎಂಬುದಕ್ಕೆ ಹಲವು ಬಾರಿ, ಹಲವು ಘಟನೆಗಳು ಸಾಕ್ಷಿಯಾಗುತ್ತಿವೆ.

Published by:Pavana HS
First published: