Luckyman Teaser: ರಿಲೀಸ್ ಆಯ್ತು ಅಪ್ಪು ನಟಿಸಿರುವ ಲಕ್ಕಿಮ್ಯಾನ್​ ಸಿನಿಮಾದ ಟೀಸರ್​, ಮತ್ತೆ ತೆರೆಯ ಮೇಲೆ ದೇವರ ದರ್ಶನ!

Puneeth Rajkumar: ಕಳೆದ ಡಿಸೆಂಬರ್​ನಲ್ಲಿ ಈ ಸಿನಿಮಾದ ಪೋಸ್ಟರ್​ ರಿಲೀಸ್​ ಆಗಿ ಬಹಳ ಸದ್ದು ಮಾಡಿತ್ತು. ಪುನೀತ್​ ರಾಜ್​ಕುಮಾರ್​ ಅವರು ಪ್ರಭುದೇವ ಜತೆ ಡ್ಯಾನ್ಸ್​ ಮಾಡುತ್ತಿದ್ದ ಫೋಟೋಗಳು ಸಹ ವೈರಲ್​ ಆಗಿದ್ದವು.

ಲಕ್ಕಿಮ್ಯಾನ್​

ಲಕ್ಕಿಮ್ಯಾನ್​

  • Share this:
ಲವ್​ ಮಾಕ್ಟೇಲ್​’ (Love Mocktailಖ್ಯಾತಿಯ ಡಾರ್ಲಿಂಗ್​ ಕೃಷ್ಣ (Darling Krishna), ಸಂಗೀತಾ ಶೃಂಗೇರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಕ್ಕಿಮ್ಯಾನ್​ (Luckyman)  ಟೀಸರ್ (teaser) ಬಿಡುಗಡೆಯಾಗಿದ್ದು, ಮತ್ತೆ ಅಭಿಮಾನಿಗಳು ಅಪ್ಪು ಅವರನ್ನು ತೆರೆಯ ಮೇಲೆ ನೋಡಿ ಕಣ್ತುಂಬಿ ಕೊಂಡಿದ್ದಾರೆ. ಪುನೀತ್ ರಾಜ್​ಕುಮಾರ್ ಹಾಗೂ ಈ ಸಿನಿಮಾಗೂ ಸಂಬಂಧ ಏನು ಅಂತ ಯೋಚಿಸಬಹುದು. ಈ ಸಿನಿಮಾದಲ್ಲಿ ಅಪ್ಪು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅಪ್ಪು ಅವರನ್ನು  ಟೀಸರ್​ನಲ್ಲಿ ನೋಡಿ ಫ್ಯಾನ್ಸ್​ ಸಂತಸಗೊಂಡಿದ್ದಾರೆ.  

ತೆರೆಯ ಮೇಲೆ ಪುನೀತ್ ನೋಡಿ ಫ್ಯಾನ್ಸ್ ಫಿದಾ

ಈ ಟೀಸರ್​ನಲ್ಲಿ ಪುನೀತ್ ರಾಜ್​ ಕುಮಾರ್ ಜೊತೆ ಭಾರತದ ಮೈಕಲ್ ಜಾಕ್ಸನ್​ ಖ್ಯಾತಿಯ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಇನ್ನು ಇದರಲ್ಲಿ ಅಪ್ಪು ಲೈಫ್​ನಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಳ್ಳೋಕೆ ನಿನಗೆ ಒಂದು ಚಾನ್ಸ್​ ಕೊಡ್ತೀನಿ ಎಂದಿದ್ದು, ಅಭಿಮಾನಿಗಳು ದೇವರು ನಿಮಗೆ ಮತ್ತೊಂದು ಚಾನ್ಸ್​ ಕೊಡಬೇಕು ಎಂದು ನೋವಿನಿಂದ ಕಾಮೆಂಟ್​ ಮಾಡ್ತಿದ್ದಾರೆ.  ಕಳೆದ ಡಿಸೆಂಬರ್​ನಲ್ಲಿ ಈ ಸಿನಿಮಾದ ಪೋಸ್ಟರ್​ ರಿಲೀಸ್​ ಆಗಿ ಬಹಳ ಸದ್ದು ಮಾಡಿತ್ತು. ಪುನೀತ್​ ರಾಜ್​ಕುಮಾರ್​ ಅವರು ಪ್ರಭುದೇವ ಜತೆ ಡ್ಯಾನ್ಸ್​ ಮಾಡುತ್ತಿದ್ದ ಫೋಟೋಗಳು ಸಹ ವೈರಲ್​ ಆಗಿದ್ದವು.







ತಮಿಳಿನ ‘ಓಹ್ ಮೈ ಕಡವುಳೆ’ ಸಿನಿಮಾದ ರಿಮೇಕ್​ ‘ಲಕ್ಕಿ ಮ್ಯಾನ್’​ ಚಿತ್ರ. ಈ ಚಿತ್ರದಲ್ಲಿ ಪುನೀತ್​​ ರಾಜ್​ಕುಮಾರ್​ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬರುವ ವಿಶೇಷ ಹಾಡಿನಲ್ಲಿ ಪ್ರಭುದೇವ ಮತ್ತು ಪುನೀತ್​ ರಾಜ್​ಕುಮಾರ್​ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಡಾ. ರಾಜ್​ಕುಮಾರ್​ ಅವರ ಕುರಿತು ಈ ಸಾಂಗ್​ ರಚಿತವಾಗಿದೆ ಎಂಬುದು ಮತ್ತೊಂದು ವಿಶೇಷ.


ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಯಿಂದ ರಜನಿಕಾಂತ್​ಗೆ ಸನ್ಮಾನ, ತಂದೆಯ ಪರವಾಗಿ ಪ್ರಶಸ್ತಿ ಪಡೆದ ಐಶ್ವರ್ಯಾ

ಬಿಡುಗಡೆಗೆ ಸಿದ್ದವಾಗಿದೆ ಸಿನಿಮಾ

‘ಲಕ್ಕಿ ಮ್ಯಾನ್​’ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​​ ಕೆಲಸಗಳು ನಡೆಯುತ್ತಿವೆ. ಡಬ್ಬಿಂಗ್ ಮಾಡುವ ವೇಳೆ ಪುನೀತ್​ ಅವರನ್ನು ಡಾರ್ಲಿಂಗ್​ ಕೃಷ್ಣ ತುಂಬ ಮಿಸ್​ ಮಾಡಿಕೊಂಡಿದ್ದರು. ಡಬ್ಬಿಂಗ್​ ಸಮಯದ ಒಂದು ವಿಡಿಯೋ ತುಣುಕನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಅದನ್ನು ಕಂಡು ಅಭಿಮಾನಿಗಳು ಬಹಳ ಎಮೋಷನಲ್​ ಆಗಿದ್ದರು.




ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರಾ ಕಿಡಿಗೇಡಿಗಳು? ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಜಾಕ್ ಮಂಜು ಗರಂ

ಈ ಸಿನಿಮಾದಲ್ಲಿ ಆರ್ಯ, ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್ ರಾಜ್, ರೋಶಿನಿ ಪ್ರಕಾಶ್, ಸುಧಾ ಬೆಳವಾಡಿ, ಮಾಳವಿಕಾ  ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದು, ಎಸ್.ನಾಗೇಂದ್ರ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಪಿಆರ್ ಮೀನಾಕ್ಷಿ ಸುಂದರಾಮ್ ಹಾಗೂ ಸುಂದರ ಕಾಮರಾಜ್ ಅವರು ಬಂಡವಾಳ ಹೂಡಿದ್ದಾರೆ.

ರಾಜರತ್ನ ಪುನೀತ್​ ರಾಜ್​ಕುಮಾರ್ ಅಕಾಲಿಕ ನಿಧನವನ್ನು ಅಭಿಮಾನಿಗಳಿಗೆ ಮಾತ್ರವಲ್ಲ ಸ್ಯಾಂಡಲ್​ವುಡ್​ಗೆ  ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ನೆನಪಿಸಿಕೊಳ್ಳಲು ಒಂದು ಸಣ್ಣ ಚಾನ್ಸ್​ ಸಿಕ್ಕರೂ ಸಾಕು ಬಿಡುವುದಿಲ್ಲ. ಅವರು ನಮ್ಮಿಂದ ದೂರವಾಗಿ ಹಲವು ದಿನಗಳೇ ಕಳೆದಿದ್ದರೂ ಅವರ ನೆನಪುಗಳು ಅಭಿಮಾನಿಗಳನ್ನು ಬಿಟ್ಟು ಹೋಗಿಲ್ಲ ಎಂಬುದಕ್ಕೆ ಹಲವು ಬಾರಿ, ಹಲವು ಘಟನೆಗಳು ಸಾಕ್ಷಿಯಾಗುತ್ತಿವೆ. ಈಗ ಟೀಸರ್​ನಲ್ಲಿ ಅಪ್ಪು ನೋಡಿ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ.
Published by:Sandhya M
First published: