Lucky Man Review: ಹೇಗಿದೆ ಲಕ್ಕಿಮ್ಯಾನ್​? ಪರಮಾತ್ಮನ ರೂಪದಲ್ಲಿ ಬಂದು ಕಚಗುಳಿಯಿಟ್ಟ ಅಪ್ಪು!

ದೇವರ ಪಾತ್ರದಲ್ಲಿ ಅಪ್ಪು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಪುನೀತ್​ ನಿಧನದ ಬಳಿಕ ಸಿನಿಮಾ ರಿಲೀಸ್​ ಆಗಿರೋ ಹಿನ್ನಲೆ ದೇವರ ಪಾತ್ರ ಅವರಿಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತಿದೆ.

ಲಕ್ಕಿಮ್ಯಾನ್​

ಲಕ್ಕಿಮ್ಯಾನ್​

  • Share this:
ನಟ ಪುನೀತ್​ ರಾಜ್​ ಕುಮಾರ್ (Puneeth Rajkumar)​ ಅಭಿನಯದ ಕೊನೆಯ ಚಿತ್ರ ಬಹುನಿರೀಕ್ಷಿತ ಲಕ್ಕಿಮ್ಯಾನ್​​ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಲವ್​ ಮಾಕ್ಟೇಲ್ (Love Mocktailಖ್ಯಾತಿಯ ಡಾರ್ಲಿಂಗ್​ ಕೃಷ್ಣ (Darling Krishna), ಸಂಗೀತಾ ಶೃಂಗೇರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಕ್ಕಿಮ್ಯಾನ್​ (Lucky Man) ನೂರಾರು ಥಿಯೇಟರ್​ಗಳಲ್ಲಿ ರಿಲೀಸ್ ಆಗಿದೆ.  ಚಿತ್ರ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. 

ಭಗವಂತನಾಗಿ ಬಂದ ಅಪ್ಪು

ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲಾ ಅಗಲಿ 11 ತಿಂಗಳುಗಳೇ ಕಳೆದಿದೆ. ಆದ್ರೆ ಅಪ್ಪು ಅಭಿಮಾನಿಗಳ ಮನದಲ್ಲಿ ಚಿರಂಜೀವಿ ಆಗಿದ್ದಾರೆ. ಅವರು ಮಾಡಿ ಹೋಗಿರೋ ಸಮಾಜ ಸೇವೆ, ಸಾಮಾಜಿಕ ಕೆಲಸಗಳು ಸಹ ಅವರ ನೆನಪನ್ನು ಜೀವಂತವಾಗಿಸಿದೆ. ಕಾಕತಾಳೀಯ ಎಂಬಂತೆ ಕೊನೆಯ ಚಿತ್ರದಲ್ಲಿ ದೇವರಾಗಿ ಅಪ್ಪು ಕಾಣಿಸಿಕೊಂಡಿದ್ದಾರೆ.

 ದೇವರ ರೂಪದಲ್ಲಿ ಅಪ್ಪು ನೋಡಿ ಅಭಿಮಾನಿಗಳು ಭಾವುಕ 

ದೇವರ ಪಾತ್ರದಲ್ಲಿ ಅಪ್ಪು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಪುನೀತ್​ ನಿಧನದ ಬಳಿಕ ಸಿನಿಮಾ ರಿಲೀಸ್​ ಆಗಿರೋ ಹಿನ್ನಲೆ ದೇವರ ಪಾತ್ರ ಅವರಿಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಆ ಕಾರಣದಿಂದಾಗಿ ಪ್ರೇಕ್ಷಕರಿಗೆ ಈ ಚಿತ್ರ  ಇನ್ನಷ್ಟು ಹತ್ತಿರವಾಗಿದೆ.

ದಾಂಪತ್ಯ ಜೀವನದ ಏಳುಬೀಳಿನ ಕಥೆ

ಲಕ್ಕಿಮ್ಯಾನ್​ ಚಿತ್ರದ ಕಥಾನಾಯಕ (ಡಾರ್ಲಿಂಗ್ ಕೃಷ್ಣ) ಬಾಲ್ಯದ ಸ್ನೇಹಿತೆಯನ್ನೇ ವಿವಾಹವಾಗುತ್ತಾರೆ. ಜಗಳ ಮನಸ್ತಾಪದಿಂದಕ ದಾಂಪತ್ಯ ಜೀವನವೇ ಕಷ್ಟ ಎನ್ನುವ ನಿರ್ಧಾರಕ್ಕೆ ಬರುವ ನಾಯಕ ಡಿವೋರ್ಸ್​ ಪಡೆಯಲು ನಿರ್ಧರಿಸುತ್ತಾನೆ. ಇನ್ನೇನು ವಿಚ್ಛೇದನ ಸಿಗಬೇಕು ಎಂಬಷ್ಟರಲ್ಲಿ ಆತನಿಗೆ ದೇವರೇ (ಪುನೀತ್​) ಪ್ರತ್ಯಕ್ಷರಾಗ್ತಾರೆ.

ನಾಯಕನಿಗೆ 2ನೇ ಅವಕಾಶ ನೀಡಿದ ದೇವರು

ದೇವರ ರೂಪದಲ್ಲಿ ಬರುವ ಪುನೀತ್ ರಾಜ್ ಕುಮಾರ್ ಕಥಾನಾಯಕನ ಮನಸ್ಸಿನಲ್ಲಿ ಬದಲಾವಣೆ ತರುತ್ತಾರೆ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು, ಬೇರೆ ಹುಡುಗಿಯನ್ನು ಮದುವೆಯಾಗಲು ದೇವರು 2ನೇ ಅವಕಾಶ ನೀಡುತ್ತಾರೆ.

ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಸಿಗಲಿದೆ ಉತ್ತರ

ಕಥಾ ನಾಯಕ ದೇವರು ಕೊಟ್ಟ 2ನೇ ಅವಕಾಶವನ್ನು ಕಥಾನಾಯಕ ಸರಿಯಾಗಿ ಉಪಯೋಗಿಸಿಕೊಳ್ಳುತ್ತಾನಾ? ಎರಡನೇ ಲೈಫ್​ನಲ್ಲಿ ಆತ ಯಾರನ್ನು ಮದುವೆ ಆಗ್ತಾನೆ? ಅಂತಿಮವಾಗಿ ಅವನಿಗೆ ಡಿವೋರ್ಸ್​ ಸಿಗುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಉತ್ತರ ಸಿಗಲಿದೆ.

ಸ್ನೇಹ, ಪ್ರೀತಿ, ಹೊಂದಾಣಿಕೆ ಪಾಠ

ಚಿತ್ರದಲ್ಲಿ ಪ್ರೀತಿ, ಸ್ನೇಹ, ನಂಬಿಕೆ ಬಗ್ಗೆ ಮನಮುಟ್ಟುವಂತೆ ಹೇಳಲಾಗಿದೆ. ಚಿತ್ರ ಎಲ್ಲೂ ಬೋರ್​ ಆಗೋದಿಲ್ಲ. ಕಾಮಿಡಿ ಸನ್ನಿವೇಶಗಳು ಸಹ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡಲಾಗಿದೆ. ಕಥಾನಾಯಕ ಎರಡು ಡಿಫರೆಂಟ್​ ಲವ್​ ಸ್ಟೋರಿಗಳಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಮಜಾ ನೀಡುತ್ತವೆ.

ಪುನೀತ್​- ಸಾಧು ಕಾಮಿಡಿ ಕಿಕ್​

ದೇವರಾಗಿ ಕಾಣಿಸಿಕೊಂಡಿರುವ ಪುನೀತ್​ ರಾಜ್​ಕುಮಾರ್​ ಅವರಿಗೆ ಸಾಧುಕೋಕಿಲ ಸಾಥ್​ ನೀಡಿದ್ದಾರೆ. ಇಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದ ಕಾಮಿಡಿ ದೃಶ್ಯಗಳು ಚೆನ್ನಾಗಿವೆ. ಪುನೀತ್​ ಭರಪೂರ ನಗಿಸುತ್ತಾರೆ ನಿಜ. ಆದರೆ ಅವರನ್ನು ಪರದೆ ಮೇಲೆ ನೋಡಿದ ಪ್ರೇಕ್ಷಕ  ಭಾವುಕನಾಗೋದು ಗ್ಯಾರೆಂಟಿ

ಪುನೀತ್​ ರಾಜ್​ಕುಮಾರ್​ ಫೈಟ್​

ಪುನೀತ್​ ರಾಜ್​ಕುಮಾರ್ ಸಿನಿಮಾ ಎಂದ ಮೇಲೆ ಫೈಟಿಂಗ್​ ದೃಶ್ಯಗಳು ಇರಲೇಬೇಕು. ಈ ಸಿನಿಮಾದಲ್ಲಿಯೂ ಅಪ್ಪು ಫೈಟ್​ ಮಾಡಿದ್ದಾರೆ. ಆದರೆ ಅದು ದೇವರ ರೂಪದಲ್ಲಿ! ಈ ಸಾಹಸ ಸನ್ನಿವೇಶ ತುಂಬ ಡಿಫರೆಂಟ್​ ಆಗಿದೆ. ಅದನ್ನು ತೆರೆಮೇಲೆ ನೋಡಿಯೇ ಎಂಜಾಯ್​ ಮಾಡಬೇಕು.

ಪುನೀತ್​, ಪ್ರಭುದೇವ್ ಡ್ಯಾನ್ಸ್ ಹೈಲೈಟ್

ಚಿತ್ರದ ಪ್ರಮೋಷನಲ್​ ಹಾಡಿನಲ್ಲಿ ಪ್ರಭುದೇವ ಮತ್ತು ಪುನೀತ್​ ರಾಜ್​ಕುಮಾರ್ ಅವರು ಜೊತೆಯಾಗಿ ಡ್ಯಾನ್ಸ್​ ಮಾಡಿದ್ದಾರೆ. ತೆರೆಮೇಲೆ ಅಪ್ಪು-ಪ್ರಭು ಡ್ಯಾನ್ಸ್​ ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ.
Published by:Pavana HS
First published: