ಪಠಾಣ್ (Pathaan) ಸಿನಿಮಾ ಜನವರಿ 25ರಂದು ರಿಲೀಸ್ ಆಗಿ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ಸಿನಿಮಾ ರಿಲೀಸ್ ಆಗುವ ಮೊದಲೇ ಶಾರುಖ್ (Shah Rukh Khan) ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಸಿನಿಮಾ ರಿಲೀಸ್ ಆಗುವ ಮೊದಲೇ ಪಠಾಣ್ ಕ್ರೇಜ್ ಎಲ್ಲೆಡೆ ಹಬ್ಬಿತ್ತು. ಇದಕ್ಕೆ ಉದಾಹರಣೆ ಲಕ್ನೋ (Lucknow) ನಗರದ ಈ ಜೋಡಿ (Couple). ಹೌದು, ಲಕ್ನೋದ ದಂಪತಿ ಶಾರುಖ್ ಖಾನ್ ಅವರ ಡೈ ಹಾರ್ಡ್ ಫ್ಯಾನ್ಸ್ (Fans). ಕಿಂಗ್ ಖಾನ್ ಕುರಿತು ತಮಗಿರುವ ಅಭಿಮಾನದಿಂದಲೇ ಈ ಜೋಡಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದಾರೆ.
ಬಹಳಷ್ಟು ವರ್ಷಗಳ ನಂತರ ಬಾಲಿವುಡ್ ಬಾದ್ ಶಾ ಕಿಂಗ್ ಶಾರುಖ್ ಖಾನ್ ಅವರ ಆ್ಯಕ್ಷನ್ ಮೂವಿ ರಿಲೀಸ್ ಆಗಿದೆ. ಶಾರುಖ್ ಅವರನ್ನು ಬಿಗ್ಸ್ಕ್ರೀನ್ ಮೇಲೆ ನೋಡಲು ಕಾಯುತ್ತಿದ್ದ ಶಾರುಖ್ ಫ್ಯಾನ್ಸ್ ಕೊನೆಗೂ ಪಠಾಣ್ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.
ಬಾಲಿವುಡ್ ನಟ ದೊಡ್ಡ ಅಭಿಮಾನಿಯಾಗಿರುವ ಈ ವ್ಯಕ್ತಿ ವಿಶಾಲ್ ಅಥವಾ ವಿಶಾರುಖ್ ಲಕ್ನೋ ನಿವಾಸಿ. ಅವರು ಸಿನಿಮಾ ರಿಲೀಸ್ ಆಗುವ ಬಹಳ ಮೊದಲೇ ಪತ್ನಿ ರುಚಿ ಸಿಂಗ್ ಜೊತೆ ಸಿನಿಮಾ ನೋಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು.
ಶಾರುಖ್ ಪ್ರತಿ ಸಿನಿಮಾಗೆ ಕಾರಿನ ಲುಕ್ ಚೇಂಜ್
ಈ ದಂಪತಿಯ ಕ್ರೇಜ್ ಎಷ್ಟಿದೆ ಎಂದರೆ ಶಾರುಖ್ ಖಾನ್ ಪ್ರತಿ ಸಿನಿಮಾ ಮಾಡುವಾಗಲೂ ಇವರು ತಮ್ಮ ಕಾರಿನ ಲುಕ್ ಬದಲಾಯಿಸುತ್ತಾರೆ. ಯಾವ ಸಿನಿಮಾ ರಿಲೀಸ್ ಆಗುತ್ತದೆಯೋ ಅದೇ ಬಣ್ಣದಲ್ಲಿ ಕಾರು ಜಗಮಗಿಸುತ್ತದೆ. ಇಷ್ಟೇ ಅಲ್ಲ ಈ ಜೋಡಿ ತಮ್ಮ ಪೂರ್ತಿ ಮನೆಯನ್ನು ಕಿಂಗ್ ಖಾನ್ ಅವರ ಸಾಮ್ರಾಜ್ಯವಾಗಿ ಬದಲಾಯಿಸಿಬಿಟ್ಟಿದ್ದಾರೆ.
ಇವರ ಮನೆತುಂಬಾ ಶಾರುಖ್ ಖಾನ್
ವಿಶಾಲ್ ಸಿಂಗ್ ಅವರ ಮನೆ ಶಾರುಖ್ ಖಾನ್ ಕುರಿತ ದೊಡ್ಡ ಮ್ಯೂಸಿಯಂನಂತಿದೆ. ನೀವು ಆ ಮನೆಯಲ್ಲಿ ಏನು ನೋಡಿದ್ರೂ ಶಾರುಖ್ ಕಾಣಿಸುತ್ತಾರೆ. ಮನೆಯ ಗೋಡೆಗಳು, ಸೀಲಿಂಗ್, ಬಾತ್ರೂಮ್, ಎಸಿ, ಬಾಗಿಲುಗಳು, ಟೇಬಲ್, ಬೆಡ್ರೂಮ್ನಲ್ಲಿರುವ ತಲೆದಿಂಬು, ದೇವರ ಕೋಣೆ ಎಲ್ಲಾ ಕಡೆಗಳಲ್ಲಿ ಶಾರುಖ್ ಅವರನ್ನು ಕಾಣಬಹುದು.
ಎಣಿಸಲು ಸಾಧ್ಯವಾಗದಷ್ಟು ಶಾರುಖ್ ಖಾನ್ ಅವರ ಫೋಟೋಗಳು ವಿಶಾಕ್ ಅವರ ಮನೆಯಲ್ಲಿವೆ. ದೇಶದಲ್ಲಿ ಯಾರದಾರೂ ಶಾರುಖ್ ಅವರ ಭಾರೀ ಅಪ್ಪಟ ಅಭಿಮಾನಿ ಅಂತ ಇದ್ದರೆ ಅದು ವಿಶಾಲ್ ಹಾಗೂ ರುಚಿ ಸಿಂಗ್. ಅಂದ ಹಾಗೆ ಈ ದಂಪತಿ ಶಾರುಖ್ ಕುಟುಂಬಕ್ಕೂ ಆಪ್ತರು.
ಈ ಜೋಡಿ ಸಿನಿಮಾ ಹೇಗೆ ನೋಡಿದ್ರು ಗೊತ್ತಾ?
ವಿಶಾಲ್ ದಂಪತಿ ಬಹಳಷ್ಟು ಸಮಯದಿಂದ ಶಾರುಖ್ ಅವರ ಆ್ಯಕ್ಷನ್ ಸಿನಿಮಾ ನೋಡೋಕೆ ಕಾಯುತ್ತಿದ್ದರು. ಅಂತೂ ಅವರ ಕಾಯುವಿಕೆ ಕೊನೆಯಾಗಿದೆ. ಶಾರುಖ್ ಅವರ ದೊಡ್ಡ ಅಭಿಮಾನಿಗಳಾದ ಈ ದಂಪತಿ ಮುಂಬೈನ ಅತ್ಯಂತ ಹಳೆಯ, ಪ್ರಸಿದ್ಧ ಮರಾಠ ಮಂದಿರ್ ಥಿಯೇಟರ್ನಲ್ಲಿ ಪಠಾಣ್ ಸಿನಿಮಾವನ್ನು ನೋಡಲು ನಿರ್ಧರಿಸಿದ್ದರು.
ಆ ಮೊಮೆಂಟ್ ಎಂಜಾಯ್ ಮಾಡಲು ಇತರ ಪ್ಲಾನ್ ಕೂಡಾ ಮಾಡಿದ್ದರು. ಬಾಲಿವುಡ್ನ ಬಹಳಷ್ಟು ಜನರನ್ನು ಅಲ್ಲಿ ಆಹ್ವಾನಿಸಿದ್ದರು. ವೃದ್ಧಾಶ್ರಮದ ಸದಸ್ಯರೊಂದಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳೊಂದಿಗೆ ಕುಳಿತು ಸಿನಿಮಾ ನೋಡಿ ಸಿಹಿ ಕೂಡಾ ಹಂಚಿದ್ದರು.
ಏನಂತಾರೆ ಈ ದಂಪತಿ?
ಇದಾಗಿ ಶಾರುಖ್ ಅವರ ಮನೆ ಮನ್ನತ್ಗೆ ಭೇಟಿ ನೀಡಲು ನಿರ್ಧರಿಸಿದ್ದರು. ಶಾರುಖ್ ಅವರ ಮನೆಯಲ್ಲೂ ಪಠಾಣ್ ಸಿನಿಮಾ ರಿಲೀಸ್ ಸಂಭ್ರಮಿಸಲು ತೀರ್ಮಾನಿಸಿದ್ದರು. ಸಿನಿಮಾ ಸಕ್ಸಸ್ ಆಗೋದು ಪಕ್ಕಾ ಎಂದು ಫುಲ್ ಖುಷಿಯಲ್ಲಿದ್ದರು ಈ ದಂಪತಿ. ವಿಶಾಲ್ ಅವರು ಪಠಾಣ್ ಸಿನಿಮಾದ ಸಕ್ಸಸ್ ಅನ್ನು ಡಿಡಿಎಲ್ಜೆ(ದಿಲ್ವಾಲೆ ದುಲ್ಹಾನಿಯಾ ಲೇಜಾಯೇಂಗೆ) ಸಿನಿಮಾಗೆ ಹೋಲಿಸಿದ್ದಾರೆ.
ಇದನ್ನೂ ಓದಿ: Pathaan: 8 ದಿನ 600 ಕೋಟಿ! ಸದ್ಯಕ್ಕೆ ನಿಲ್ಲಲ್ಲ ಪಠಾಣ್ ಅಬ್ಬರ
ಪಠಾಣ್ ಸಿನಿಮಾದ ಹಾಡುಗಳು ಈಗಾಲೇ ಸಕ್ಸಸ್ ಚಾರ್ಟ್ನಲ್ಲಿದ್ದು ಜನರು ಭಾರೀ ಇಷ್ಟಪಟ್ಟು ಕೇಳುತ್ತಿದ್ದಾರೆ. ದಿಲ್ವಾಲೆ ದುಲ್ಹಾನಿಯಾ ಲೇಜಾಯೇಂಗೆ ಸಿನಿಮಾ ಹೇಗೆ ರೆಕಾರ್ಡ್ಗಳನ್ನು ಬ್ರೇಕ್ ಮಾಡಿತ್ತೋ ಅದೇ ರೀತಿ ಪಠಾಣ್ ಸಿನಿಮಾ ಕೂಡಾ ದಾಖಲೆಗಳನ್ನು ಮುರಿಯುತ್ತೆ. ಸಿನಿಮಾ ಸಕ್ಸಸ್ ಮೇಲೆ ಬಾಯ್ಕಾಟ್ ಪಠಾಣ್ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ವಿಶಾಲ್ ಸಿಂಗ್ ಹೇಳಿದ್ದಾರೆ.
ಪ್ರತಿಯೊಬ್ಬರು ಫ್ಯಾಮಿಲಿ ಜೊತೆ ಈ ಸಿನಿಮಾ ನೋಡಬೇಕು
ವಿಶಾಲ್ ಸಿಂಗ್ ಅವರ ಪತ್ನಿ ರುಚಿ ಸಿಂಗ್ ಪ್ರತಿಕ್ರಿಯಿಸಿ ಈ ಸಿನಿಮಾ ದೊಡ್ಡ ಹಿಟ್ ಆಗುತ್ತದೆ ಎಂದಿದ್ದರು. ಜನ ಈ ಸಿನಿಮಾವನ್ನು ನೋಡಬೇಕು. ಎಲ್ಲರೂ ಕುಟುಂಬ ಸಮೇತರಾಗಿ ಹೋಗಿ ಸಿನಿಮಾ ನೋಡಬೇಕು. ಕೊರೋನಾ ನಂತರ ಶಾರುಖ್ ಅವರ ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾ ರಿಲೀಸ್ ಆಗಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ