Sruthi Hariharan: ಹೇಗಿದ್ದಾಳೆ ಗೊತ್ತಾ ನಾತಿಚರಾಮಿ ನಟಿ ಶ್ರುತಿ ಹರಿಹರನ್ ಮಗಳು ಜಾನಕಿ?

Sruthi Hariharan: 2 ದಿನಗಳ ಹಿಂದಷ್ಟೆ ನಟಿ ಶ್ರುತಿ ಹರಿಹರನ್- ರಾಮ್​ ಜೋಡಿಯ ಮುದ್ದಾದ ಮಗಳ ನಾಮಕರಣ ನೆರವೇರಿದೆ. ಕುಟುಂಬದ ಆಪ್ತರ ಸಮ್ಮುಖದಲ್ಲಿ ಮನೆಯಲ್ಲಿಯೇ ನಡೆದ ಕಾರ್ಯಕ್ರಮದಲ್ಲಿ ಮಗುವಿಗೆ ಜಾನಕಿ ಎಂದು ಹೆಸರಿಡಲಾಗಿದೆ.

Sushma Chakre | news18-kannada
Updated:October 9, 2019, 6:26 PM IST
Sruthi Hariharan: ಹೇಗಿದ್ದಾಳೆ ಗೊತ್ತಾ ನಾತಿಚರಾಮಿ ನಟಿ ಶ್ರುತಿ ಹರಿಹರನ್ ಮಗಳು ಜಾನಕಿ?
ಮಗುವಿನೊಂದಿಗೆ ಶ್ರುತಿ ಹರಿಹರನ್ ದಂಪತಿ
  • Share this:
2 ತಿಂಗಳ ಹಿಂದಷ್ಟೇ 'ಲೂಸಿಯಾ' ಖ್ಯಾತಿಯ ನಟಿ ಶ್ರುತಿ ಹರಿಹರನ್​ಗೆ ಹೆಣ್ಣುಮಗುವಾಗಿತ್ತು. ಆರೇಳು ತಿಂಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಶ್ರುತಿ ತಾವು ತಾಯಿಯಾಗುತ್ತಿರುವ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಸುಕಾದ ಫೋಟೋವೊಂದನ್ನು ಹಾಕಿ ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಿದ್ದರು.

ಕನ್ನಡದ ಪ್ರತಿಭಾವಂತ ನಟಿ. 'ಬ್ಯೂಟಿಫುಲ್ ಮನಸುಗಳು', 'ಉರ್ವಿ', 'ನಾತಿಚರಾಮಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮುಂತಾದ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್ ತಾಯ್ತನದ ಸಂಭ್ರಮದಲ್ಲಿದ್ದಾರೆ. ಬಹುಕಾಲದ ಗೆಳೆಯ ಕೇರಳದ ಕಳರಿಪಯಟ್ಟು ಕಲಾವಿದ ರಾಮ್​ಕುಮಾರ್ ಅವರನ್ನು ಮದುವೆಯಾಗಿರುವ ಶ್ರುತಿ ಹರಿಹರನ್ ರಾಮ್​ ಕುಮಾರ್ ಜೊತೆ ಕನ್ನಡದ ಒಂದು ವಿಡಿಯೋ ಆಲ್ಬಂನಲ್ಲಿಯೂ ಕಾಣಿಸಿಕೊಂಡಿದ್ದರು.

ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿ ಸುದ್ದಿಯಾಗಿದ್ದ ಶ್ರುತಿ ಹರಿಹರನ್ ಅದಾದ ನಂತರ ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ. ಬಳಿಕ ಬಿಡುಗಡೆಯಾದ 'ನಾತಿಚರಾಮಿ' ಸಿನಿಮಾದ ಅಭಿನಯಕ್ಕೆ ಶ್ರುತಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅವರಿಗೆ ರಾಷ್ಟ್ರಪ್ರಶಸ್ತಿ ಬಂದ ದಿನವೇ ಹೆಣ್ಣುಮಗು ಹುಟ್ಟಿದ್ದರಿಂದ ಶ್ರುತಿ ಪಾಲಿನ ಸಂಭ್ರಮ ದುಪ್ಪಟ್ಟಾಗಿತ್ತು. ಇದೀಗ ಆ ಮಗುವಿಗೆ 'ಜಾನಕಿ' ಎಂಬ ಹೆಸರಿಡಲಾಗಿದೆ.
 

Loading...
View this post on Instagram
 

It was 28 days since we received one of the best gifts ever - and that calls for a celebration with family and loved ones... doesn't it :) #28happydays #j #changedmylifeforever #womanbymyside #familypictures


A post shared by Raam (@raam.kalari) on


ಹಲವಾರು ಸದಭಿರುಚಿಯ ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್​ಗೆ ಅಭಿಮಾನಿಗಳೇನೂ ಬರವಿಲ್ಲ. ಉರ್ವಿ, ನಾತಿಚರಾಮಿ, ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಳಲ್ಲಿನ ಅವರ ಅಭಿನಯಕ್ಕೆ ಅನೇಕರು ಮಾರುಹೋಗಿದ್ದರು. ತಮ್ಮ ಮೆಚ್ಚಿನ ನಟಿಯ ಮಗುವನ್ನು ನೋಡಬೇಕೆಂಬ ಬಯಕೆ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಆದರೆ, ಶ್ರುತಿ ತಮ್ಮ ಮಗಳ ಫೋಟೋವನ್ನು ಎಲ್ಲೂ ಪ್ರಕಟಿಸಿರಲಿಲ್ಲ. ಕೆಲವು ದಿನಗಳ ಹಿಂದೆ ಮಗಳ ಕಾಲುಗಳ ವಿಡಿಯೋ ತುಣುಕೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಶ್ರುತಿ ಹರಿಹರನ್ ಆಪ್ತವಾಗಿ ಮಗಳೊಂದಿಗಿನ ಅನುಭವಗಳನ್ನು ಕಟ್ಟಿಕೊಟ್ಟಿದ್ದರು.

'ನನ್ನ ಪುಟ್ಟ ಕಾಲುಗಳಿವು...
ನಾನು ಒಂದು ದಿನ ಇದೇ ಕಾಲುಗಳಲ್ಲಿ ಜಿಗಿಯುತ್ತೇನೆ, ಜೋರಾಗಿ ಓಡುತ್ತೇನೆ, ಮುಂದೊಂದು ದಿನ ಇದೇ ಕಾಲುಗಳಲ್ಲಿ ನಾನು ರಸ್ತೆಯನ್ನು ದಾಟುತ್ತೇನೆ, ಯಾರಿಗೆ ಗೊತ್ತು ನಾನು ಬಾಹ್ಯಾಕಾಶಕ್ಕೂ ಪಾದ ಬೆಳೆಸಬಹುದು. ಈ ಕಾಲುಗಳಲ್ಲಿ ಪರ್ವತಗಳನ್ನು ಹತ್ತುತ್ತೇನೆ, ಸಮುದ್ರದಲ್ಲಿ ಇದೇ ಕಾಲುಗಳನ್ನು ಬಡಿಯುತ್ತ ಈಜುತ್ತೇನೆ. ನನ್ನ ಈ ಕಾಲುಗಳೂ ನಿಮ್ಮೆಲ್ಲರಂತೆ ಎಲ್ಲ ಕೆಲಸಗಳನ್ನೂ ಮಾಡಲಿವೆ. ಆದರೆ, ಇಂದು ನನ್ನೀ ಕಾಲುಗಳು ಬಹಳ ಸಂತೋಷವಾಗಿವೆ. ಈ ಕಾಲುಗಳಿಗೆ ತನ್ನ ಬೆರಳುಗಳನ್ನು ಅಲುಗಿಸುತ್ತಾ ಇರುವುದೆಂದರೆ ಬಹಳ ಖುಷಿ... ಪ್ರೀತಿಯ ಜೆ... ನಿನ್ನೊಂದಿಗೆ ಈ 2 ತಿಂಗಳು ಅದೆಷ್ಟು ಹುಚ್ಚಾಟಗಳನ್ನು ಆಡಿದ್ದೇನೋ ನನಗೇ ಗೊತ್ತಿಲ್ಲ. ನೀನು ಬಂದಮೇಲೆ ನಮ್ಮ ಜಗತ್ತೇ ಬದಲಾಗಿದೆ. ನೀನು ನಮ್ಮ ಬದುಕಲ್ಲಿ ಬರುವವರೆಗೂ ಈ ರೀತಿಯ ಪ್ರೀತಿಯನ್ನು ನಾನು ಕಂಡಿರಲಿಲ್ಲ' ಎಂದು ಶ್ರುತಿ ಹರಿಹರನ್ ತಮ್ಮ ಮಗಳ ಬಗ್ಗೆ ಆಪ್ತ ಸಾಲುಗಳನ್ನು ಬರೆದುಕೊಂಡಿದ್ದರು.
2 ದಿನಗಳ ಹಿಂದಷ್ಟೆ ಶ್ರುತಿ ಹರಿಹರನ್- ರಾಮ್​ ಜೋಡಿಯ ಮುದ್ದಾದ ಮಗಳ ನಾಮಕರಣ ನೆರವೇರಿದೆ. ಕುಟುಂಬದ ಆಪ್ತರ ಸಮ್ಮುಖದಲ್ಲಿ ಮನೆಯಲ್ಲಿಯೇ ನಡೆದ ಕಾರ್ಯಕ್ರಮದಲ್ಲಿ ಮಗುವಿಗೆ 'ಜಾನಕಿ' ಎಂದು ಹೆಸರಿಡಲಾಗಿದೆ. ಮಗುವನ್ನು ಮೈಮೇಲೆ ಮಲಗಿಸಿಕೊಂಡು ನಾಮಕರಣ ಶಾಸ್ತ್ರದಲ್ಲಿ ಭಾಗಿಯಾಗಿರುವ ಫೋಟೋವನ್ನು ಶ್ರುತಿಯ ಗಂಡ ರಾಮ್​ಕುಮಾರ್ ಹಂಚಿಕೊಂಡಿದ್ದಾರೆ. ಆದರೆ, ಮಗುವಿನ ಮುಖವನ್ನು ಇನ್ನೂ ತೋರಿಸಿಲ್ಲ. ಈ ಫೋಟೋ ನೋಡಿದ ಅಭಿಮಾನಿಗಳು ಮಗುವಿನ ಫೋಟೋ ಹಾಕಿ ಎಂದು ಬೇಡಿಕೆಯಿಟ್ಟಿದ್ದಾರೆ.
First published:October 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...