'ಲವ್​ರಾತ್ರಿ': ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಚಿತ್ರದ ವಿರುದ್ಧ ಆಕ್ರೋಶ!

news18
Updated:August 6, 2018, 11:05 PM IST
'ಲವ್​ರಾತ್ರಿ': ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಚಿತ್ರದ ವಿರುದ್ಧ ಆಕ್ರೋಶ!
news18
Updated: August 6, 2018, 11:05 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮಾ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿರುವುದು ಹಳೆಯ ವಿಷಯ.  ಇದೀಗ ಇದರ ಮೊದಲ ಹೆಜ್ಜೆ ಎಂಬಂತೆ ಆಯುಷ್ ಅಭಿನಯದ 'ಲವ್​ರಾತ್ರಿ' ಚಿತ್ರದ ಮೊದಲ ಟ್ರೇಲರ್​ನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದ ನಿರ್ಮಾಪಕ ನಟ ಸಲ್ಮಾನ್ ಖಾನ್ ಅವರು ಇಂದು ಬೆಳಿಗ್ಗೆ ಪ್ರೀತಿ ಮತ್ತು ಪ್ರಣಯದ ಕಥೆ ನಿಮಗಾಗಿ.. ಎಂಬ ಶೀರ್ಷಿಕೆಯಡಿಯಲ್ಲಿ 'ಲವ್​ರಾತ್ರಿ'ಯ ಮೊದಲ ಟ್ರೇಲರ್ ಬಿಡುಗೊಳಿಸಿದ್ದಾರೆ.

ಚಿತ್ರದಲ್ಲಿ ಆಯುಷ್ ಶರ್ಮಾಗೆ ನಾಯಕಿಯಾಗಿ ವರೀನಾ ಹುಸೇನ್ ಕಾಣಿಸಿಕೊಂಡಿದ್ದು, ಈ ಸಿನಿಮಾದ ಮೂಲಕ ಬಿಟೌನ್​ಗೆ ಮತ್ತೊಂದು ಯುವ ಜೋಡಿಯ ಆಗಮನವಾಗುತ್ತಿದೆ. ಶಾರೂಖ್ ಖಾನ್ ಅಭಿನಯದ 'ಫ್ಯಾನ್' ಮತ್ತು ಸಲ್ಮಾನ್ ಖಾನ್​ರ 'ಸುಲ್ತಾನ್' ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಅಭಿರಾಜ್ ಮಿನವಾಲ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ನವರಾತ್ರಿಯಲ್ಲಿ ನಡೆಯುವ ಪ್ರೇಮ್​ ಕಹಾನಿ ಈ ಚಿತ್ರದಲ್ಲಿದ್ದೂ, ಚಿತ್ರದ ಟೈಟಲ್ ಈಗಾಗಲೇ ವಿವಾದಕ್ಕೆ ಕಾರಣವಾಗಿದೆ. 'ಲವ್​ರಾತ್ರಿ' ಶೀರ್ಷಿಕೆ ಮತ್ತು ಕಥೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ವಿಎಚ್​ಪಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಚಿತ್ರದ ಬಿಡುಗಡೆಗೆ ತಡೆಯೊಡ್ಡುವುದಾಗಿ ಬೆದರಿಕೆ ಹಾಕಿದೆ. ಚಿತ್ರದಲ್ಲಿ ಸಲ್ಲು ಸಹೋದರರಾದ ಅರ್ಬಾಜ್ ಮತ್ತು ಸೊಹೈಲ್ ಖಾನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರೇಮಕಥೆಯು ನವರಾತ್ರಿ ಹಬ್ಬಕ್ಕನುಗುಣವಾಗಿ ಅಕ್ಟೋಬರ್ 5ರಂದು ತೆರೆಗೆ ಬರಲಿದೆ.

First published:August 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ