`ಲವ್​ ಯೂ ರಚ್ಚು’ ಟ್ರೈಲರ್​ ಲಾಂಚ್​: ಹಾಟ್​ ಲುಕ್​ನಲ್ಲಿ ರಚಿತಾ, ಕಾರ್ಯಕ್ರಮಕ್ಕೆ ಬಾರದ ಅಜಯ್​ ರಾವ್​!

ಲವ್ ಯೂ ರಚ್ಚು  ಆಕ್ಷನ್ ಸೀನ್ ಶೂಟಿಂಗ್ ದುರಂತದಿಂದ  ಉಂಟಾದ ಮನಸ್ತಾಪ ಮುಂದುವರೆದಿಯಾ? ಡಬ್ಬಿಂಗ್ ವಿಚಾರದಲ್ಲೂ  ನಾಯಕ ನಿರ್ಮಾಪಕ ನಡುವೆ  ಗೊಂದಲ ಉಂಟಾಗಿತ್ತು ಎಂಬ ಸುದ್ದಿ ಇದೆ. ಟ್ರೈಲರ್​ ಲಾಂಚ್​ ಕಾರ್ಯಕ್ರಮಕ್ಕೆ ನಟ ಅಜಯ್​ರಾವ್​ ಗೈರಾಗಿದ್ದರು.

ರಚಿತಾ ರಾಮ್​, ಅಜಯ್ ರಾವ್​

ರಚಿತಾ ರಾಮ್​, ಅಜಯ್ ರಾವ್​

  • Share this:
ರಚಿತಾ ರಾಮ್ (Rachita Ram)​ ಮತ್ತು ಅಜಯ್​ ರಾವ್ (Ajay Rao) ಮುಖ್ಯಭೂಮಿಕೆ ನಟಿಸಿರುವ  ‘ಲವ್ ಯೂ ರಚ್ಚು’ (Love You Rachchu) ಸಿನಿಮಾದ ಟ್ರೈಲರ್​ (Trailer)​ ರಿಲೀಸ್​ ಆಗಿದೆ. ಶೂಟಿಂಗ್​ ಸಂದರ್ಭದಲ್ಲಿಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ ‘ಲವ್​ ಯೂ ರಚ್ಚು’ ಸಿನಿಮಾಗಾಗಿ ರಚಿತಾ ಬೋಲ್ಡ್​(Bold) ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರ ಹೊಂದಿದೆ ಎಂಬುದಕ್ಕೆ ಟ್ರೈಲರ್​​ ಸಾಕ್ಷ್ಯ ನೀಡಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಧ್ರುವ ಸರ್ಜಾ (Dhruva Sarja) ಆಗಮಿಸಿದ್ದರು. ಟ್ರೈಲರ್​ ನೋಡಿದ ಸಿನಿರಸಿಕರು ರಚಿತಾ ರಾಮ್​ ಲುಕ್​ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. . ಈ ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿತ್ತು. ಫೈಟರ್​ ವಿವೇಕ್ (Fighter Vivek)​ ಅವರು ಶೂಟಿಂಗ್​ ವೇಳೆ ಹೈ ವೋಲ್ಟೇಜ್​ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು. ಈ ಪ್ರಕರಣದಿಂದ ಸಿನಿಮಾ ತಂಡದ ಕೆಲವರು ಅರೆಸ್ಟ್​ ಕೂಡ ಆಗಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಸಿನಿಮಾ ಟ್ರೈಲರ್​​ ಮೂಲಕ ಸದ್ದು ಮಾಡುತ್ತಿದೆ. ನಿನ್ನೆ ಸಂಜೆ ಈ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ. ಲವ್​ ಯೂ ರಚ್ಚು ಸಿನಿಮಾ ಟ್ರೈಲರ್​​ಗೆ ಸಖತ್​ ರೆಸ್ಪಾನ್ಸ್​ ದೊರಕಿದೆ. 

ಮರ್ಡರ್​ ಮಿಸ್ಟ್ರಿ ಸಿನಿಮಾ ಲವ್​​ ಯೂ ರಚ್ಚು! 

ಟ್ರೈಲರ್​ನಲ್ಲೇ ಚಿತ್ರದ ಜೀವಾಳ ಏನು ಎಂಬುದನ್ನು ತೋರಿಸಲಾಗಿದೆ. ಸುಂದರವಾದ ಕುಟುಂಬದಲ್ಲಿ ಡ್ರೈವರ್​ ಒಬ್ಬ ವಿಲನ್​ ಆಗಿ ಎಂಟ್ರಿಯಾಗುತ್ತಾನೆ. ಸುಂದರ ಹೆಂಡತಿಯನ್ನು ವಶಪಡಿಸಿಕೊಳ್ಳಲು ಡ್ರೈವರ್​ ಮುಂದಾಗುತ್ತಾನೆ. ಇದಕ್ಕೆ ಒಪ್ಪದ ಪತ್ನಿ ಡ್ರೈವರ್​ ಕಥೆಯನ್ನು ಮುಗಿಸುತ್ತಾಳೆ. ಈ ಮೃತದೇಹವನ್ನು ಗಂಡ-ಹೆಂಡತಿ ಇಬ್ಬರು ಸೇರಿಕೊಂಡು ಸಾಗಿಸುವ ಕಥೆಯೆ ಲವ್​ ಯೂ ರಚ್ಚು ಸಿನಿಮಾ. ಈ ವಿಷಯ ಯಾರಿಗೂ ತಿಳಿಯದಂತೆ ಇಬ್ಬರೂ ಮಾಡುತ್ತಾರಾ. ಅಥವಾ ಪೊಲೀಸರ ಕೈಯಲ್ಲಿ ಸಿಕ್ಕಿ ಬೀಳುತ್ತಾರೆ ಎಂದು ಸಿನಿಮಾ ಬರುವವರೆಗೂ ಕಾಯಬೇಕಿದೆ.

ಇದನ್ನು ಓದಿ:ರೀ.. ಏನ್ರಿ ನಿಮ್​ ಅವತಾರ: ನೋಡ್ಬಾರ್ದನ್ನ ನೋಡ್ಬಿಟ್ವಿ ಅಂತಿದ್ದಾರೆ ನೆಟ್ಟಿಗರು!

ಪವರ್​ ಫುಲ್​  ಆಕ್ಷನ್​ ಮೋಡ್​ನಲ್ಲಿ ಅಜಯ್​ ರಾವ್​

ಎಕ್ಸ್​ಕೂಸ್​ಮಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಅಜಯ್​ ರಾವ್​ ಎಂಟ್ರಿಯಾಗಿದ್ದರು. ಅನೇಕ ಸಿನಿಮಾಗಳಲ್ಲಿ ಕೃಷ್ಣ ಅಜಯ್​ ರಾವ್​ ನಟಿಸಿದ್ದಾರೆ. ಅವರು ನಟಿಸಿರುವ ಅಷ್ಟು ಸಿನಿಮಾಗಳಲ್ಲಿ ಕೊಂಚ ಆ್ಯಕ್ಷನ್​ ದೃಶ್ಯಗಳು ಕಡಿಮೆ. ಆದರೆ ಲವ್​ ಯೂ ರಚ್ಚು ಸಿನಿಮಾದ ಟ್ರೈಲರ್​ನಲ್ಲೇ ಭರ್ಜರಿ ಆ್ಯಕ್ಷನ್​ ಸಿಕ್ವೆನ್ಸ್​ಗಳಿಗೆ. ಇನ್ನೂ ಸಿನಿಮಾದಲ್ಲಿ ಮಸ್ತ್​ ಸಾಹಸ ದೃಶ್ಯಗಳು ಇರುವುದರಲ್ಲಿ ಅನುಮಾನವೇ ಇಲ್ಲ. ಮೊದಲ ಬಾರಿಗೆ ಅಜಯ್​ ರಾವ್​ ಈ ಮಟ್ಟದ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ.

ಇದನ್ನು ಓದಿ: ಬ್ರಾ, ಸೋಂಟದ ಸೈಜ್ ಕೇಳ್ತಾರೆ..ಶಿವರಾಜ್​ಕುಮಾರ್​ ಹಿರೋಯಿನ್​ ಗರಂ!

ಲವ್​ ಯೂ ರಚ್ಚು ಬಗ್ಗೆ ಧ್ರುವ ಹೇಳಿದ್ದೇನು? 
ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ ಲವ್‌ ಯು ರಚ್ಚು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಟ್ರೈಲರ್‌ ನೋಡಿದರೆ ಇದೊಂದು ಮರ್ಡರ್‌ ಮಿಸ್ಟ್ರಿ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಖಂಡಿತ ಜನರನ್ನು ಚಿತ್ರ ಮಂದಿರದಲ್ಲಿ ಹಿಡಿದಿಟ್ಟುಕೊಳ್ಳುತ್ತೆ. ನಮಗೆ ಕಂಟೆಂಟ್‌ ಓರಿಯೆಂಟ್‌ ಸಿನಿಮಾಗಳು ಬೇಕಲ್ವಾ. ಕನ್ನಡ ಚಿತ್ರಗಳನ್ನ ನೋಡಿ ಪ್ರೋತ್ಸಾಹಿಸಿ, ಎಲ್ಲರೂ ಕಂಟೆಂಟ್‌ ಇರೋ ಸಿನಿಮಾಗಳನ್ನೆ ಮಾಡುತ್ತಾರೆ. ಈ ಚಿತ್ರದ ಬಗ್ಗೆ ಹೇಳಬೇಕು ಅಂದರೆ ಡಿಸೆಂಬರ್‌ 31ಕ್ಕೆ ಲವ್‌ ಯು ರಚ್ಚು ಸಿನಿಮಾ ರಿಲೀಸ್‌ ಆಗ್ತಿದೆ. ಎಲ್ಲರೂ ಚಿತ್ರ ಮಂದಿರಕ್ಕೆ ಹೋಗಿ ಸಿನಿಮಾ ನೋಡಿ" ಎಂದು ಧ್ರುವ ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಅಜಯ್​ರಾವ್​ ಗೈರು!

ಲವ್ ಯೂ ರಚ್ಚು ಆಕ್ಷನ್ ಸೀನ್ ಶೂಟಿಂಗ್ ದುರಂತದಿಂದ ಉಂಟಾದ ಮನಸ್ತಾಪ ಮುಂದುವರೆದಿಯಾ? ಡಬ್ಬಿಂಗ್ ವಿಚಾರದಲ್ಲೂ ನಾಯಕ ನಿರ್ಮಾಪಕ ನಡುವೆ  ಗೊಂದಲ ಉಂಟಾಗಿತ್ತು ಎಂಬ ಸುದ್ದಿ ಇದೆ. ಕಾರಣ ಟ್ರೈಲರ್​ ಲಾಂಚ್​ ಕಾರ್ಯಕ್ರಮಕ್ಕೆ ನಟ ಅಜಯ್​ರಾವ್​ ಗೈರಾಗಿದ್ದರು. ಕಾರ್ಯಕ್ರಮದಲ್ಲಿ ಎಲ್ಲಿಯೂ ಅಜಯ್​ ರಾವ್​ ಹೆಸರು ಕೇಳಿಬಂದಿಲ್ಲ. ಇನ್ನೂ ಅಜಯ್​ರಾವ್​ ಆರೋಗ್ಯ ಸರಿಯಿರದ ಕಾರಣ ಅವರು ಬಂದಿಲ್ಲ ಎಂಬ ಮಾತುಗಳು ಹರಿದಾಡುತ್ತಿತ್ತು. Published by:Vasudeva M
First published: