ಸಹಾಸ ದೃಶ್ಯದ ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ ಕಲಾವಿದರು ಸಾವನ್ನಪ್ಪಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಸಲ ಇಂತಹ ಕಹಿ ಘಟನೆಗಳು ಸಂಭವಿಸಿವೆ. ಈ ಹಿಂದೆ ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಸ್ಯಾಂಡಲ್ವುಡ್ನ ಖ್ಯಾತ ವಿಲನ್ಗಳಾಗಿದ್ದ ಉದಯ್ ಹಾಗೂ ಅನಿಲ್ ಅವರು ಸಾವನ್ನಪ್ಪಿದ್ದರು. ಈ ಘಟನೆ ನೆನಪಿನಿಂದ ಮಾಸುವ ಮುನ್ನವೇ ಈಗ ಮತ್ತೊಂದು ದುರ್ಘಟನೆ ನಡೆದಿದೆ. ಶಂಕರ್ ರಾಜ್ ನಿರ್ದೇಶನದ ಅಜಯ್ ರಾವ್ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ಲವ್ ಯೂ ರಚ್ಚು. ಈ ಸಿನಿಮಾದ ಶೂಟಿಂಗ್ ನಡೆಯುವಾಗ ಸಂಭವಿಸಿರುವ ವಿದ್ಯುತ್ ಅವಘಡದಿಂದ ಸಾಹಹ ಕಲಾವಿದ ಪ್ರಾಣ ಕಳೆದುಕೊಂಡಿದ್ದಾರೆ. ತಮಿಳುನಾಡು ಮೂಲದ 28 ವರ್ಷದ ವಿವೇಕ್ ಎಂಬ ಸಹಾಸ ಕಲಾವಿದ ವಿದ್ಯುತ್ ಸ್ಪರ್ಶದಿಂದಾಗಿ ಸಾವನ್ನಪ್ಪಿದ್ದಾರೆ. ವಿವೇಕ್ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಿಗ್ಗೆ ಘಟನೆ ಬಿಡದಿ ಬಳಿ ಜೋಗರಪಾಳ್ಯದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜೋಗರಪಾಳ್ಯ ಹಳ್ಳಿಯಲ್ಲಿ ಕಳೆದ ಐದು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಇಂದು ಕೊನೆಯ ದೃಶ್ಯದ ಶೂಟಿಂಗ್ ನಡೆಯುತ್ತಿದ್ದು, ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಸಿನಿರಂಗದಲ್ಲಿ ಖಳನಟನಾಗುವ ಆಸೆಯಿಂದ ಕೆಲಸ ಮಾಡುತ್ತಿದ್ದ ವಿವೇಕ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೀವನ ನಿರ್ವಣೆಗಾಗಿ ಸಿನಿಮಾದ ಜೊತೆಗೆ ಟೈಲ್ಸ್ ಹಾಕುವ ಕೆಲಸ ಸಹ ಮಾಡುತ್ತಿದ್ದರಂತೆ.
![ighter Vivek Death, Rachita Ram, Ajay Rao, Love You Racchu, Sandalwood, ಫೈಟರ್ ವಿವೇಕ್ ಸಾವು, ರಚಿತಾ ರಾಮ್, ಅಜಯ್ ರಾವ್, ಲವ್ ಯೂ ರಚ್ಚು, ಸ್ಯಾಂಡಲ್ವುಡ್, Ajay rao, Fighter Vivek Death, love you racchu, Rachita Ram, Sandalwood, Love You Rachchu Movie stunt man Vivek death case movie director and other 3 members facing police enquiry ae]()
ಸಾವನ್ನಪ್ಪಿದ ಸಾಹಸ ಕಲಾವಿದ ವಿವೇಕ್
ಪುಟ್ಟರಾಜು ಎಂಬುವರ ತೆಂಗಿನ ತೋಟದಲ್ಲಿ ಶೂಟಿಂಗ್ಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತಂತೆ. ಇನ್ನು ಚಿತ್ರೀಕರಣಕ್ಕೆ ಚಿತ್ರತಂಡ ಪೊಲೀಸರಿಂದ ಅನುಮತಿ ಪಡೆದಿಲ್ಲ ಎಂದೂ ಹೇಳಲಾಗುತ್ತಿದೆ. ತೋಟದವರ ಬಳಿ ಅನುಮತಿ ಇದೆ ಎಂದು ಹೇಳಿ ಶೂಟಿಂಗ್ ಮಾಡಲಾಗುತ್ತಿತ್ತಂತೆ. ಚಿತ್ರೀಕರಣ ನಡೆಯುವಾದ ಈ ಘಟನೆ ಸಂಭವಿಸಿ ವಿವೇಕ್ ಮರಣ ಹೊಂದಿದ್ದಾರೆ.
ಇದನ್ನೂ ಓದಿ: Weight Loss: ಹೆಚ್ಚಿಸಿಕೊಂಡಿದ್ದ 15 ಕೆಜಿ ತೂಕವನ್ನು ಇಳಿಸುವುದು ಕೃತಿ ಸನೋನ್ಗೆ ಸುಲಭವಾಗಿರಲಿಲ್ಲ
ವಿವೇಕ್ ಅವರ ಮೃತ ದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ತರಲಾಗಿದೆ. ಆಸ್ಪತ್ರೆ ಬಳಿ ಮೃತನ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ನಿರ್ದೇಶಕ ಶಂಕರ್ ಎಸ್ ರಾಜು , ಸ್ಟಂಟ್ ಮಾಸ್ಟರ್ ವಿನೋದ್, ಕ್ರೇನ್ ಡ್ರೈವರ್ ಮುನಿಯಪ್ಪ ಹಾಗೂ ಜಮೀನು ಮಾಲೀಕ ಪುಟ್ಟರಾಜು ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ನಡೆದದ್ದು ಹೇಗೆ..?
ಫೈಟಿಂಗ್ ದೃಶ್ಯಕ್ಕಾಗಿ ತೆಂಗಿನ ತೋಟದ ಒಳಗೆ ಕ್ರೇನ್ ತರಿಸಲಾಗಿತ್ತಂತೆ. ಕ್ರೇನ್ ಮೇಲಿನಿಂದ ಹಾರಿ ನೀರಿನ ಟ್ಯಾಂಕ್ಗೆ ಬೀಳುವ ದೃಶ್ಯದ ಶೂಟಿಂಗ್ ಮಾಡಬೇಕಿತ್ತು. ಮೆಟಲ್ ರೋಪ್ಗಳನ್ನು ಬಳಸಿ ಕ್ರೇನ್ಗೆ ಕಟ್ಟಲಾಗಿತ್ತು. ಕ್ರೇನ್ನ ಮುಂಭಾಗವನ್ನು ಮೇಲಕ್ಕೆ ಎತ್ತುತ್ತಿದ್ದಂತೆಯೇ ಮೇಲೆ ಹಾದು ಹೋಗಿದ್ದ 11 ಕೆವಿ ಲೈನ್ಗೆ ಅದು ತಾಗಿದೆ. ಅದರಿಂದ ಹರಿದ ವಿದ್ಯುತ್ ಮೆಟಲ್ ರೋಪ್ ಧರಿಸಿದ್ದ ವಿವೇಕ್ ಹಾಗೂ ರೋಪ್ ಜಾಕೆಟ್ ಧರಿಸಿದ್ದ ಮತ್ತೋರ್ವ ವ್ಯಕ್ತಿಗೆ ತಗುಲಿದೆ. ಈ ಘಟನೆಯಲ್ಲಿ ವಿವೇಕ್ ಸಾವನ್ನಪ್ಪಿದರೆ, ಜಾಕೆಟ್ ಧರಿಸಿದ್ದ ಮತ್ತೋರ್ವರಿಗೆ ತೀವ್ರವಾಗಿ ಗಾಯವಾಗಿದೆ.
ಇದನ್ನೂ ಓದಿ: Leelavathi: ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಶ್ರುತಿ-ಸುಧಾರಾಣಿ
ಅಜಯ್ ರಾವ್ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ಲವ್ ಯೂ ರಚ್ಚು. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದೆ. ಶಂಕರ್ ರಾಜ್ ನಿರ್ದೇಶನದ ಈ ಸಿನಿಮಾದ ಮುಹೂರ್ತ ಆರ್ಟ್ ಆಫ್ ಲಿವಿಂಗ್ನ ರವಿ ಸಂಕರ್ ಗುರೂಜಿ ಅವರು ಸಿನಿಮಾಗೆ ಚಾಲನೆ ನೀಡಿದ್ದರು. ಕದ್ರಿ ಅವರು ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ನವೆಂಬರ್ನಲ್ಲಿ ಶೂಟಿಂಗ್ಗೆ ತೆರೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ