Love Mocktail 2: ನಿಧಿಮಾ ಇಲ್ದೇ ಆದಿ ಇಲ್ಲ-ಆದಿ ಇಲ್ದೇ ಸಿನಿಮಾ ಇಲ್ಲ.. ಲವ್ ​ಮಾಕ್​ಟೈಲ್​ 2 ಭಾವನಾತ್ಮಕ ಪಯಣ!

ಲವ್ ಮಾಕ್​ಟೈಲ್​ 2 ಸಿನಿಮಾ ಇಂದು ರಿಲೀಸ್ ಆಗಿ ಹೌಸ್ ಫುಲ್(Housefull) ಆಗಿದೆ. ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಎಲ್ಲೂ ಅಸಮಾಧಾನವಾಗದಂತೆ ಚಿತ್ರತಂಡ ಅಚ್ಚುಕಟ್ಟಾಗಿ ಸಿನಿಮಾ ಮಾಡಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಲವ್​ ಮಾಕ್​ಟೈಲ್​ 2 ಪೋಸ್ಟರ್​

ಲವ್​ ಮಾಕ್​ಟೈಲ್​ 2 ಪೋಸ್ಟರ್​

  • Share this:
ಸ್ಯಾಂಡಲ್​ವುಡ್ (Sandalwood)​ ಸೇರಿದಂತೆ ಹಲವು ಭಾಷೆಗಳಲ್ಲಿ ಸೀಕ್ವೆಲ್​(Sequel)​ ಸಿನಿಮಾಗಳು ಬಂದಿವೆ. ಆದರೆ, ಸೀಕ್ವೆಲ್​​ ಮಾಡಿ ಗೆದ್ದ ಸಿನಿಮಾಗಳು ಮಾತ್ರ ಬೆರಳಣಿಕೆಯಷ್ಟು. ಹೌದು, ಮೊದಲ ಭಾಗಕ್ಕೂ, ಎರಡನೇ ಭಾಗಕ್ಕೂ ಕೊಂಚ ವ್ಯತ್ಯಾಸ ಇದ್ದರೂ ಸಿನಿಮಾ ಸಕ್ಸಸ್​ ಕಾಣುವುದಿಲ್ಲ. ಸದ್ಯ ಕನ್ನಡದಲ್ಲಿ ರಿಲೀಸ್​ ಆಗಿರುವ ‘ಲವ್​ ಮಾಕ್ಟೇಲ್​ 2’ (Love Mocktail 2) ಸಿನಿಮಾ ಕೂಡ ಸೀಕ್ವೆಲ್​ ಎಂಬ ಕಾರಣಕ್ಕೆ ಹೆಚ್ಚು ಹೈಪ್​ ಸೃಷ್ಟಿಸಿದೆ. ಮೊದಲನೇ ಪಾರ್ಟ್​​​ನಲ್ಲಿ ಇದ್ದ ಬಹುತೇಕ ಎಲ್ಲ ಪಾತ್ರಗಳು ಈಗ ಎರಡನೇ ಪಾರ್ಟ್​ನಲ್ಲಿ ಮುಂದುವರಿದಿವೆ. ಮೊದಲ ಶೋ (First Show) ಸಿನಿಮಾ ನೋಡಿದ ಪ್ರೇಕ್ಷಕ ಮಹಾಪ್ರಭು ಲವ್​ ಮಾಕ್​ಟೈಲ್​ ಸಿನಿಮಾಗೆ ಜೈಕಾರ ಹೇಳಿದ್ದಾನೆ. ಹೌದು, ಲವ್ ಮಾಕ್​ಟೈಲ್ 2 ಚಿತ್ರ ಇಂದು ರಿಲೀಸ್ ಆಗಿ ಹೌಸ್ ಫುಲ್ (Housefull) ಆಗಿದೆ. ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಎಲ್ಲೂ ಅಸಮಾಧಾನವಾಗದಂತೆ ಚಿತ್ರತಂಡ ಅಚ್ಚುಕಟ್ಟಾಗಿ ಸಿನಿಮಾ ಮಾಡಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನಾ ನಾಗರಾಜ್ (Milana Nagraj) ಜೊತೆಗೂಡಿ ನಿರ್ದೇಶಿಸಿದ್ದು, ಚಿತ್ರ ಕಥೆಯನ್ನು ಮುದ್ದಾಗಿ ಹೆಣೆಯಲಾಗಿದೆ. ಹಾಗಾದರೆ ಸಿನಿಮಾದಲ್ಲಿ ಏನಿದೆ.? ಹೇಗಿದೆ ಎಂದು ತಿಳೀಯೋಣ ಬನ್ನಿ..

ಮತ್ತೊಂದು ಮದುವೆಯಾಗಲು ಸಜ್ಜಾಗಿದ್ದಾರೆ ಆದಿ!

ಲವ್ ಮಾಕ್​ಟೈಲ್​ ಭಾಗ ಒಂದರಲ್ಲಿ ಆದಿಯ ಪತ್ನಿ ನಿಧಿ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಕೊನೆಯುಸಿರೆಳೆಯುತ್ತಾಳೆ. ಇದೇ ಡಿಪ್ರೆಷನ್​ನಲ್ಲಿದ್ದ ಆದಿ ಈಗ ಎರಡನೇ ಭಾಗದಲ್ಲಿ ಮತ್ತೊಂದು ಮದುವೆಯಾಗಲು ಸಿದ್ಧರಾಗಿದ್ದಾರೆ. ನಿಜಕ್ಕೂ ಆದಿ ಮತ್ತೊಂದು ಮದುವೆಯಾಗುತ್ತಾರಾ? ಆ ಹುಡುಗಿಯಾದರೂ ಯಾರು? ಈ ಎಲ್ಲಾ ಕುತೂಹಲಗಳಿಗೆ ಉತ್ತರ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದಾಗಲೇ ತಿಳಿಯುತ್ತದೆ. ಎರಡನೇ ಮದುವೆಯಾಗುವ ಸಂಭ್ರಮದಲ್ಲಿ ಆದಿ ನಿಧಿಮಾಳನ್ನು ಮರೆತು ಬಿಡುತ್ತಾನಾ.? ಇಷ್ಟೇನಾ ಪ್ರೀತಿ ಅಂದರೆ, ಎಂಬುದನ್ನು ಚಿತ್ರದಲ್ಲಿ ತೋರಿಸಿಕೊಡಲಾಗಿದೆ. ಡಾರ್ಲಿಂಗ್​ ಕೃಷ್ಣ ಇಲ್ಲಿ ಅಚ್ಚುಕಟ್ಟಾಗಿ ತಾವು ಹೇಳಬೇಕಿರುವುದನ್ನು ಹೇಳಿದ್ದಾರೆ.

ಇದನ್ನೂ ಓದಿ: ಪವರ್​​ಫುಲ್​ `ಜೇಮ್ಸ್​’ ಟೀಸರ್​ ರಿಲೀಸ್​, ವ್ಹಾವ್​.. ಅಪ್ಪುನ ನೋಡೋಕೆ ಎರಡು ಕಣ್ಣು ಸಾಲದು!

ಲವ್​ ಮಾಡೋದು ಅಷ್ಟೇ ಅಲ್ಲ.. ಬದುಕಬೇಕು ಅನ್ನೋದು ಕಥೆ!

ಪ್ರಪಂಚದಲ್ಲಿ ಎಲ್ಲರಿಗೂ ಪ್ರೀತಿಯ ಅನುಭವವಾಗಿರುತ್ತೆ. ಆದರೆ, ನಾವು ಪ್ರೀತಿಸಿದವರು ಒಪ್ಪದಿದ್ದಾಗ, ಅಥವಾ ಬೇರೆ ಕಾರಣಗಳಿಂದ ದೂರಾದಾಗ ಬೇಸರಗೊಳ್ಳುತ್ತಾರೆ. ತಮ್ಮ ಜೀವನವನ್ನೇ ಮುಗಿಸಿಕೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಂಥವರಿಗೆ ಈ ಲವ್​ ಮಾಕ್​​ಟೈಲ್​ 2 ಸಿನಿಮಾ ಒಳ್ಳೆ ಪಾಠ ಎಂದರೆ ತಪ್ಪಾಗಲಾರದು. ಲವ್ ಮಾಡೋದು ಅಷ್ಟೇ ಅಲ್ಲ. ಬ್ರೇಕಪ್ ಆದಮೇಲೆ ಬದುಕುವುದನ್ನು ಲವ್ ಮಾಕ್​ಟೈಲ್​ ಚಿತ್ರ ತೋರಿಸಿಕೊಟ್ಟಿದೆ. ಇನ್ನು ಲವ್ ಮಾಕ್​ಟೈಲ್​ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ರೇಚೆಲ್ ಡೇವಿಡ್, ಸುಷ್ಮಿತಾ ಗೌಡ, ಅಭಿಲಾಷ್, ಖುಷಿ, ಅಮೃತಾ ಬಣ್ಣ ಹಚ್ಚಿದ್ದಾರೆ. ಎಲ್ಲರೂ ಕೂಡ ನಟನೆಯಿಂದ ಗಮನ ಸೆಳೆಯುತ್ತಾರೆ.

ಇದನ್ನೂ ಓದಿ: ಇಂದು ಸ್ಯಾಂಡಲ್​ವುಡ್​​ನ `ಗೋಲ್ಡನ್​’ ದಂಪತಿಗೆ 14ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ!

ಪಾರ್ಟ್​ 2 ನಲ್ಲೂ ಕಮಾಲ್​ ಮಾಡ್ತಾರೆ ನಿಧಿಮಾ!

ಹೌದು, ಪಾರ್ಟ್​ 2ನಲ್ಲೂ ನಿಧಿಮಾ ಪಾತ್ರ ಬರುತ್ತದೆ. ಸತ್ತು ಹೋದ ನಿಧಿಮಾ ಮತ್ತೆ ಹೇಗೆ ಎರಡನೇ ಪಾರ್ಟ್​ನಲ್ಲಿ ಕಾಣಿಸಿ ಕೊಳ್ಳುತ್ತಾರೆ  ಅನ್ನೋದೇ ಚಿತ್ರದ ಕುತೂಹಲ. ಇದನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಡಾರ್ಲಿಂಗ್​ ಕೃಷ್ಣ. ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಮೊದಲ ಅರ್ಧ ಭಾಗದಲ್ಲಿ ಆದಿ ಸ್ನೇಹಿತರಾದ  ವಿಜಯ್ & ಸುಷ್ಮಾ ಸಖತ್​ ಮನರಂಜನೆ ನೀಡುತ್ತಾರೆ ಇನ್ನು ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನೀಡಿದ್ದು, ಶ್ರೀ ಕ್ರೇಜಿಮೈಂಡ್ಸ್ ಅವರ ಛಾಯಾಗ್ರಹಣವಿದೆ. ಲಡಾಕ್​ನಲ್ಲಿ ಶೂಟಿಂಗ್ ಮಾಡಲಾಗಿದ್ದು, ಮನಮೋಹಕ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಒಟ್ಟಿನಲ್ಲಿ ತುಂಬಾ ದಿನಗಳ ನಂತರ ಒಂದೊಳ್ಳೆ ಸಿನಿಮಾ ನೋಡುಬೇಕು ಅಂದರೆ, ಲವ್​ ಮಾಕ್​ಟೈಲ್​ 2 ಸಿನಿಮಾವನ್ನು ನೋಡಿ. 
Published by:Vasudeva M
First published: