Movie Show: ಲವ್ ಮಾಕ್ಟೇಲ್ 2 ಸಿನಿಮಾದ ಟಿಕೆಟ್ ಗಳು ಫುಲ್​​ ಸೋಲ್ಡ್ ಔಟ್

ಇದೇ ಮೊದಲ ಬಾರಿಗೆ ಲವ್ ಮಾಕ್ಟೇಲ್ 2 ಸಿನಿಮಾದ ಪ್ರೀಮಿಯರ್ ಶೋ ಟಿಕೆಟನ್ನು ಬುಕ್ ಮೈ ಶೋದಲ್ಲಿ ಪ್ರೇಕ್ಷಕರಿಗಾಗಿ ಮಾರಾಟಕ್ಕಿಡಲಾಗಿದೆ. ಸಿನಿಮಾ ಫೆ11ರಂದು ರಾಜ್ಯಾದ್ಯಂತ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್

  • Share this:
    ಸ್ಟಾರ್ ಕಪಲ್ಸ್ (Star couples) ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್ (Milana nagraj)  'ಲವ್ ಮಾಕ್ಟೇಲ್'  (Love Mocktail) ಮೂಲಕ ಜಂಟಿ ಪಯಣ ಆರಂಭಿಸಿದ್ದರು. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ನಟನೆಯ ಲವ್ ಮಾಕ್ಟೇಲ್ ಚಿತ್ರ ಸಾಕಷ್ಟು ಹಿಟ್ ಆಗಿತ್ತು. ಲವ್ ಮಾಕ್ಟೇಲ್ ಚಿತ್ರ ಸಿನಿ ರಸಿಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು. ಈಗ ‘ಲವ್ ಮಾಕ್ಟೇಲ್ 2’ (Love Mocktail) ಚಿತ್ರ ಮೊದಲ ಭಾಗವಾದ ಲವ್ ಮಾಕ್ಟೇಲ್ ಚಿತ್ರದಂತೆಯೇ ಪ್ರೇಕ್ಷಕರನ್ನು (Audience) ರಂಜಿಸಲಿದೆಯಂತೆ. ಈ ಅವತರಣಿಕೆಯನ್ನೂ ತಾರಾ ದಂಪತಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಿಸಿದ್ದಾರೆ. ಲವ್ ಮಾಕ್ಟೇಲ್ 2 ಚಿತ್ರ, ಪ್ರೇಕ್ಷಕರನ್ನು ಅಳು ಮತ್ತು ನಗೆಗಡಲಲ್ಲಿ ತೇಲಿಸಲಿದೆಯಂತೆ.

    ಜೀವನದಲ್ಲಿ ಪ್ರೀತಿ, ಪ್ರೇಮವಾಗುವಂಥಹ ಸನ್ನಿವೇಶಗಳು ಸಹಜ. ಈಗಂತೂ ಲವ್ ಆಗೋದು ಮತ್ತು ಬ್ರೇಕಪ್ ಆಗುವ ಪ್ರಕರಣಗಳು ಹೆಚ್ಚಿವೆ. ಪ್ರೀತಿಯಾದ ನಂತರ ಅದು ಮನಸ್ಸನ್ನು ಆವರಿಸಿಕೊಂಡು ಬಿಟ್ಟಿರುತ್ತದೆ. ಹೀಗಿರುವಾಗ ಏಕಾಏಕಿಯಾಗಿ ಬ್ರೇಕಪ್ ಮಾಡಿಕೊಂಡಾಗ ಜೀವನವೆಲ್ಲಾ ನೀರಸ ಆಗುತ್ತದೆ. ಜಿಗುಪ್ಸೆ, ಖಿನ್ನತೆ ಕಾಡುತ್ತದೆ. ಹಾಗಾಗಿ ಪ್ರೀತಿ ಮತ್ತು ಬ್ರೇಕಪ್ ನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವುದು ಮತ್ತು ಮನಸ್ಸು, ದೇಹದ ಸಮತೋಲನ ಕಾಪಾಡಿಕೊಳ್ಳುವ ಅವಶ್ಯಕತೆ ಈಗಿನ ಯುವ ಸಮಾಜಕ್ಕೆ ದೊಡ್ಡ ಸವಾಲಾಗಿದೆ.

    ಬ್ರೇಕಪ್ ನಿಭಾಯಿಸುವುದು ಹೇಗೆ..?

    ಈಗ ಲವ್ ಮಾಕ್ಟೇಲ್ 2 ಸಿನಿಮಾ ಬ್ರೇಕಪ್ ಅನ್ನು ಹೇಗೆ ನಿಭಾಯಿಸುವುದು ಎನ್ನುವ ಬಗ್ಗೆ ಸಂದೇಶ ನೀಡುತ್ತದೆಯಂತೆ. ಸೂಕ್ಷ್ಮ ವಿಷಯಗಳನ್ನ ಜನರಿಗೆ ಇಷ್ಟ ಆಗೋ ರೀತಿಯಲ್ಲಿ ಹೇಳಲಾಗಿದೆ ಎಂದು ಚಿತ್ರ ತಂಡ ಹೇಳಿದೆ.

    ಇದನ್ನೂ ಓದಿ: ಈ ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಸಾರಾ ಅಲಿ ಖಾನ್​!


    ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದೆ ಸಿನಿಮಾ

    ಇನ್ನು ನಿರ್ದೇಶಕ, ನಿರ್ಮಾಪಕ ಮತ್ತು ನಾಯಕ ನಟರೂ ಆಗಿರುವ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ 2 ಚಿತ್ರ ಸಿನಿಮಾದಲ್ಲಿ ಅಳಿಸುವುದಕ್ಕಿಂತ ಹೆಚ್ಚಾಗಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದೆ ಎಂಬ ಭರವಸೆ ನೀಡುತ್ತೇನೆ ಎಂದು ಚಿತ್ರದ ಕುರಿತು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ. ಎಲ್ಲರಿಗೂ ಒಂದು ದಿನ ಮುಂಚೆ ಸಿನಿಮಾ ನೋಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹೀಗಾಗಿ ಅಂಥ ಸಿನಿಮಾ ಅಭಿಮಾನಿಗಳಿಗಾಗಿ ಪ್ರೀಮಿಯರ್ ಶೋ ಟಿಕೆಟ್ ಮಾರಾಟ ಮಾಡುವ ಯೋಚನೆ ಬಂದಿದ್ದು ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.

    ಫೆ. 11ರಂದು ಚಿತ್ರ ಸಿನಿ ಮಂದಿರಗಳಲ್ಲಿ ಬಿಡುಗಡೆ

    ಈಗಾಗಲೇ ಇದೇ ಮೊದಲ ಬಾರಿಗೆ ಲವ್ ಮಾಕ್ಟೇಲ್ 2 ಸಿನಿಮಾದ ಪ್ರೀಮಿಯರ್ ಶೋ ಟಿಕೆಟನ್ನು ಬುಕ್ ಮೈ ಶೋ ಜಾಲತಾಣದಲ್ಲಿ ಪ್ರೇಕ್ಷಕರಿಗಾಗಿ ಮಾರಾಟಕ್ಕಿಡಲಾಗಿದೆ. ಸಿನಿಮಾ ಫೆ.11ರಂದು ರಾಜ್ಯಾದ್ಯಂತ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    ಚಿತ್ರದ ಟಿಕೆಟ್ ಗಳು ಸೋಲ್ಡ್ ಔಟ್

    ಅದಕ್ಕೆ ಒಂದು ದಿನ ಮೊದಲು ಅಂದರೆ ಫೆ.10 (ನಾಳೆ) ರಾತ್ರಿ 9.30ಕ್ಕೆ ಮೈಸೂರು, ಬೆಂಗಳೂರು ನಗರಗಳಲ್ಲಿ ಆಯ್ದ ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಬಹುತೇಕ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಇದು ಕನ್ನಡ ಸಿನಿ ರಸಿಕರು ಹೆಮ್ಮೆ ಪಡುವ ಸಂಗತಿ ಆಗಿದೆ.

    ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್ ಕಿಡ್ನಾಪ್, ಅಭಿಮಾನಿಗಳಿಗೆ ಶಾಕ್!

    ಮಸ್ತ್ ಡೈಲಾಗ್ ಹೊಂದಿದೆ ಲವ್ ಮಾಕ್ಟೇಲ್ 2

    ಲವ್ ಮಾಕ್ಟೇಲ್ ಸಿನಿಮಾದ ಮೊದಲ ಭಾಗದಲ್ಲಿ 'ಹೆಂಗೆ ನಾವು' ಎನ್ನುವ ಸಂಭಾಷಣೆ ಜನಪ್ರಿಯವಾಗಿತ್ತು. ಅದರ ಮೀಮ್ ಗಳು, ಕಾಮಿಡಿ ವಿಡಿಯೋಗಳು ಅಸಂಖ್ಯ ಮಟ್ಟದಲ್ಲಿ ಹರಿದಾಡಿದ್ದವೋ ಅಂಥದ್ದೇ ಹಲವು ತರದ ಸಂಭಾಷಣೆ, ಡೈಲಾಗ್ ಗಳು ಲವ್ ಮಾಕ್ಟೇಲ್ 2 ಸಿನಿಮಾದಲ್ಲೂ ಇವೆಯಂತೆ. ಡೈಲಾಗ್, ಸಂಭಾಷಣೆಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಾವುದೇ ರೀತಿಯ ಸಂಶಯ ಇಲ್ಲ ಎನ್ನುವ ವಿಶ್ವಾಸದಲ್ಲಿದ್ದಾರೆ ನಿರ್ಮಾಪಕ ದಂಪತಿ.
    Published by:renukadariyannavar
    First published: