HOME » NEWS » Entertainment » LOVE ISSUE IN BIGG BOSS KANNADA 8 PRIYANKA TIMMESH AND CHAKRAVARTHI FOUGHT WITH EACH OTHER AE

Bigg Boss 8: ಪ್ರಿಯಾಂಕಾ ತಿಮ್ಮೇಶ್​-ಚಕ್ರವರ್ತಿ ನಡುವೆ ಜಗಳ: ಪ್ರೀತಿ ವಿಷಯಕ್ಕೆ ನಡೆಯಿತು ವಾರ್​..!

ಇತ್ತೀಚೆಗೆ ಶಮಂತ್​ ಅವರ ಮೇಲೆ ಪ್ರೀತಿ ಇದೆ ಎಂದು ಹೇಳುತ್ತಿದ್ದದ್ದು, ಪ್ರಿಯಾಂಕಾಗೆ ಅದರಿಂದ ಬೇಸರವಾಗಿತ್ತು. ಆಗಲೇ ಪ್ರಿಯಾಂಕಾ ನನ್ನ ಜೀವನ ಹೇಗಾದರೂ ಹಾಳಾಗಿ ಹೋಗಲಿ ಕೇರ್​ ಮಾಡೋಕೆ ನೀವು ಯಾರು. ನಾನು ಯಾರನ್ನ ಹಾಗೂ ಯಾವಾಗ ಮದುವೆಯಾಗಬೇಕು ಎಂದು ನನಗೆ ಗೊತ್ತಿದೆ. ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದರು ಪ್ರಿಯಾಂಕಾ.

Anitha E | news18-kannada
Updated:May 8, 2021, 9:01 AM IST
Bigg Boss 8: ಪ್ರಿಯಾಂಕಾ ತಿಮ್ಮೇಶ್​-ಚಕ್ರವರ್ತಿ ನಡುವೆ ಜಗಳ: ಪ್ರೀತಿ ವಿಷಯಕ್ಕೆ ನಡೆಯಿತು ವಾರ್​..!
ಪ್ರಿಯಾಂಕಾ-ಚಕ್ರವರ್ತಿ ನಡುವಿನ ಜಗಳಕ್ಕೆ ಕೊನೆ ಹಾಡಲು ಬಂದ ಪ್ರಶಾಂತ್​ ಸಂಬರಗಿ
  • Share this:
ಬಿಗ್​ ಬಾಸ್​ ಮನೆಯಲ್ಲಿ ಇನ್ನೂ ಸಿಂಗಲ್​ ಆಗಿರುವ ಶಮಂತ್​ಗೆ ಈಗ ಜೋಡಿ ಹುಡುಕುವ ಕೆಲವನ್ನು ಚಕ್ರವರ್ತಿ ವಹಿಸಿಕೊಂಡಂತೆ ಇದೆ. ಶಮಂತ್​ ಬಿಗ್​ ಬಾಸ್​ ಮನೆಗೆ ಬಂದ ದಿನವೇ ಅವರಿಗೆ ದಿವ್ಯಾ ಸುರೇಶ್​ ಅವರ ಮೇಲೆ ಕ್ರಶ್​ ಆಗಿತ್ತು ಎಂದು ಹೇಳಿಕೊಂಡಿದ್ದರು. ನಂತರ ದಿವ್ಯಾ ಉರುಡುಗ ಅರವಿಂದ್​ ಅವರ ಜೊತೆ ಕ್ಲೋಸ್​ ಆದರು. ಇದರಿಂದಾಗಿ ಇದ್ದ ಇಬ್ಬರು ಹುಡುಗಿಯರು ಶಮಂತ್​ ಕಡೆ ತಿರುಗಿಯೂ ನೋಡಲಿಲ್ಲ. ದಿವ್ಯಾ ಸುರೇಶ್​ ಶಮಂತ್​ ಬಿಗ್​ ಬಾಸ್​ ಮನೆಗೆ ಬಂದಿರೋದು ಹುಡುಗಿಯರ ಮನ ಗೆಲ್ಲಲು ಆಟವಾಡಲು ಅಲ್ಲ ಎಂದಿದ್ದರು. ಅಂದಿನಿಂದ ಶಮಂತ್​ ಹುಡುಗಿಯ ಹಿಂದೆ ಸುತ್ತೋದನ್ನ ಬಿಟ್ಟು, ಟಾಸ್ಕ್​ ಕಡೆ ಗಮನ ಹರಿಸೋಕೆ ಶುರು ಮಾಡಿದರು. ಈ ನಡುವೆ ವೈಲ್ಡ್​ ಕಾರ್ಡ್​ ಮೂಲಕ ಮನೆಗೆ ಗಣಪ ಸಿನಿಮಾದ ನಟಿ ಪ್ರಿಯಾಂಕಾ ತಿಮ್ಮೇಶ್​ ಎಂಟ್ರಿ ಆಗುತ್ತೆ. ಅಲ್ಲಿಂದ ಮತ್ತೆ ಶಮಂತ್​ ಹಾರ್ಟ್​ ಮತ್ತೆ ಜೋರಾಗಿ ಸದ್ದು ಮಾಡೋಕೆ ಶುರು ಮಾಡಿತ್ತು. 

ಇತ್ತೀಚೆಗೆ ಪ್ರಿಯಾಂಕಾ ತಿಮ್ಮೇಶ್​ ಹಾಗೂ ಶಮಂತ್​ ಹೆಚ್ಚಾಗಿ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಮಂತ್​ ಹಾಗೂ ಕವಿತಾ ಮಾತನಾಡುತ್ತಾ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಇದನ್ನು ನೋಡಿ ಚಕ್ರವರ್ತಿ ಈ ಜೋಡಿಯನ್ನು ಒಂದು ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದರ ಫಲವಾಗಿಯೇ ಅವರು ಸದಾ ಪ್ರಿಯಾಂಕಾ ಹತ್ತಿರ ಪ್ರೀತಿಯ ವಿಷಯ ಮಾತನಾಡಲು ಆರಂಭಿಸಿದ್ದಾರೆ.

ಇತ್ತೀಚೆಗೆ ಶಮಂತ್​ ಅವರ ಮೇಲೆ ಪ್ರೀತಿ ಇದೆ ಎಂದು ಹೇಳುತ್ತಿದ್ದದ್ದು, ಪ್ರಿಯಾಂಕಾಗೆ ಅದರಿಂದ ಬೇಸರವಾಗಿತ್ತು. ಆಗಲೇ ಪ್ರಿಯಾಂಕಾ ನನ್ನ ಜೀವನ ಹೇಗಾದರೂ ಹಾಳಾಗಿ ಹೋಗಲಿ ಕೇರ್​ ಮಾಡೋಕೆ ನೀವು ಯಾರು. ನಾನು ಯಾರನ್ನ ಹಾಗೂ ಯಾವಾಗ ಮದುವೆಯಾಗಬೇಕು ಎಂದು ನನಗೆ ಗೊತ್ತಿದೆ. ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದರು ಪ್ರಿಯಾಂಕಾ.


ಇದು ಇಲ್ಲಿಗೆ ಮುಗಿಯಲಿಲ್ಲ ಚಕ್ರವರ್ತಿ ಮತ್ತೆ ಪ್ರಿಯಾಂಕಾ ಬಳಿ ಪ್ರೀತಿಯ ವಿಷಯ ತೆಗೆದು ನಿಮ್ಮ ಪ್ರಕಾರ ಪ್ರೀತಿ ಎಂದರೇನು ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರಿಯಾಂಕಾ ತನ್ನದೇ ಆದ ರೀತಿಯಲ್ಲಿ ಉತ್ತರಿಸಿದ್ದರು. ಆದರೆ ಆ ಉತ್ತರ ಚಕ್ರವರ್ತಿ ಅವರಿಗೆ ಸಮಾಧಾನ ಕೊಡಲಿಲ್ಲ. ಮತ್ತೆ ಅದ್ಬುತವೆನಿಸಿದ ಪ್ರೇಮಿಗಳ ಬಗ್ಗೆ ಹೇಳಿ ಅಂತ ಕೇಳಲಾರಂಭಿಸಿದರು. ಅದಕ್ಕೂ ಪ್ರಿಯಾಂಕಾ ಅಬ್ಧುತ ಅನಿಸೋಕೆ ಎನಿದೆ ಎಂದಾಗ ಚಕ್ರವರ್ತಿ ಹಾಗಲ್ಲ ಅಂತ ಮತ್ತೆ ತಮ್ಮ ಅಭಿಪ್ರಾಯವನ್ನು ಪ್ರಿಯಾಂಕಾ ಮೇಲೆ ಹೇರಲಾರಂಭಿಸಿದ್ದರು.

ಇದನ್ನೂ ಓದಿ: ಒಂದು ವರ್ಷದ ಮಗಳು ಸೇರಿದಂತೆ ಕೋವಿಡ್​ಗೆ​ ತುತ್ತಾದ ನಟಿ ಶಿಲ್ಪಾ ಶೆಟ್ಟಿ ಕುಟುಂಬ

ಚಕ್ರವರ್ತಿ ಅವರ ವರ್ತನೆಯಿಂದ ಬೇಸರಗೊಂಡ ಪ್ರಿಯಾಂಕಾ ನೀವು ಹೇಳುವ ವಿಷಯ ಕೇಳಲು ಆಸಕ್ತಿ ಇಲ್ಲ ಎಂದಾಗ, ಅಲ್ಲಿಂದ ಚಕ್ರವರ್ತಿ ಎದ್ದು ಹೋಗುತ್ತಾರೆ. ನನ್ನ ಮಾತು ಹಳಲು ಆಸಕ್ತಿ ಇಲ್ಲದವರ ಬಳಿ ಮಾತನಾಡಲು ನನಗೂ ಇಷ್ಟ ಇಲ್ಲ ಎಂದು ಹೇಳಿ ಹೋಗುತ್ತಾರೆ.
ಇದಾದ ನಂತರ ಮತ್ತೆ ನಿನ್ನೆ ಇದೇ ವಿಷಯಕ್ಕೆ ಪ್ರಿಯಾಂಕಾ ಹಾಗೂ ಚಕ್ರವರ್ತಿ ನಡುವಿನ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ಪ್ರಶಾಂತ್ ಸಂಬರಗಿ ಮಧ್ಯಸ್ಥಿಕೆ ವಹಿಸಿದ್ದರು. ಆಗಲೂ ಸಹ ಪ್ರಿಯಾಂಕಾ ಚಕ್ರವರ್ತಿ ನನಗೆ ಮಾತನಾಡಲು ಬಿಡುವುದಿಲ್ಲ. ತಮ್ಮದೇ ವಾದವನ್ನು ಮಾಡುತ್ತಿರುತ್ತಾರೆ. ನಾನು ನನ್ನ ಅಹಂಕಾರವನ್ನು ಬಿಟ್ಟುಕೊಡುವುದಿಲ್ಲ ಎನ್ನುತ್ತಾರೆ. ಚಕ್ರವರ್ತಿ ಎಷ್ಟೇ ತಿಳಿದವರಾಗಿದ್ದರೂ ಅಷ್ಟೆ ನನಗೆ ಸರಳವಾಗಿ ಮಾತನಾಡಿದರೆನೇ ಅರ್ಥವಾಗೋದಿಲ್ಲ. ಹೀಗಿರುವಾಗ ಚಕ್ರವರ್ತಿ ಒಳ್ಳೆ ಬುಕ್​ಲೆಟ್​ ಹಿಡುದಂತೆ ಮಾತನಾಡುತ್ತಾರೆ. ಅವರನ್ನ ನಂಬಿ ನಾನು ಬಿಗ್​ ಬಾಸ್​ ಮನೆಗೆ ಬಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Vaishnavi: ಮದುವೆಯಾಗೋಕೆ ತುದಿಗಾಲಲ್ಲಿ ನಿಂತಿದ್ದೇನೆ ಎಂದ ಅಗ್ನಿಸಾಕ್ಷಿ ಖ್ಯಾತಿಯ ನಟಿ

ನಾನು ಪ್ರಿಯಾಂಕಾ ಅವರನ್ನು ಮಾತನಾಡಿಸಲು ಹೋದ್ರೆ ಅವರು ಶಮಂತ್​ ಬಳಿ ಹೋಗುತ್ತಾರೆ. ನಾನು ಇನ್ನು ಮುಂದೆ ಪ್ರಿಯಾಂಕಾ ಬಳಿ ಮಾತನಾಡಲು ಹೋಗುವುದಿಲ್ಲ ಎಂದು ಪ್ರಶಾಂತ್​ ಅವರಿಗೆ ಹೇಳಿದ್ದಾರೆ ಚಕ್ರವರ್ತಿ.
Published by: Anitha E
First published: May 8, 2021, 9:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories