news18-kannada Updated:August 18, 2020, 3:08 PM IST
ಇಬ್ಬರ ಸಂಬಂಧ ಮುರಿದು ಬಿದ್ದಿತ್ತು ಎನ್ನಲಾಗಿತ್ತು. ಅಚ್ಚರಿ ಎಂಬಂತೆ ಇಬ್ಬರೂ ಕಾರ್ತಿಕ್ ಆರ್ಯನ್ ಹಾಗೂ ಸಾರಾ ಅಲಿ ಖಾನ್ ‘ಲವ್ ಆಜ್ ಕಲ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು ಈ ಸಿನಿಮಾ ತೆರೆಕಂಡ ನಂತರ ಇಬ್ಬರ ಸಂಬಂಧ ಸರಿಯಾಗಿದೇ ಎಂದೇ ಭಾವಿಸಲಾಗಿತ್ತು.
ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಹಾಗೂ ನಟ ಕಾರ್ತಿಕ್ ಆರ್ಯನ್ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಚಾರ ಸಾಕಷ್ಟು ವೈರಲ್ ಆಗಿತ್ತು. ನಂತರ ಬ್ರೇಕಪ್ ಆದ ವಿಚಾರ ಕೂಡ ಹೊರ ಬಿದ್ದಿತ್ತು. ಈ ಸುದ್ದಿ ಹೊರ ಬಿದ್ದ ಹೊರತಾಗಿಯೂ ಇಬ್ಬರೂ ಸಿನಿಮಾವೊಂದರಲ್ಲಿ ನಟಿಸಿದ್ದರು. ಈಗ ಈ ಜೋಡಿ ಮತ್ತೊಂದು ಶಾಕಿಂಗ್ ಸುದ್ದಿ ನೀಡಿದೆ. ಅದೇನು ಅಂತೀರಾ? ಅದಕ್ಕೆ ಇಲ್ಲಿದೆ ಉತ್ತರ.
ಕರಣ್ ಜೋಹರ್ ನಡೆಸುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸಾರಾ ಅಲಿ ಖಾನ್ ಭಾಗಿಯಾಗಿದ್ದರು. ಈ ವೇಳೆ ಅವರು ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ಕಾರ್ತಿಕ್ ಆರ್ಯನ್ ಹಾಗೂ ಸಾರಾ ಅಲಿ ಖಾನ್ ಒಟ್ಟಾಗಿ ಕಾಣಿಸಿಕೊಂಡಿದ್ದರು.
ನಂತರ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು ಎನ್ನಲಾಗಿತ್ತು. ಅಚ್ಚರಿ ಎಂಬಂತೆ ಇಬ್ಬರೂ ಕಾರ್ತಿಕ್ ಆರ್ಯನ್ ಹಾಗೂ ಸಾರಾ ಅಲಿ ಖಾನ್ ‘ಲವ್ ಆಜ್ ಕಲ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರೂ ಕಿಸ್ಸಿಂಗ್ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದರು. ಈ ಸಿನಿಮಾ ತೆರೆಕಂಡ ನಂತರ ಇಬ್ಬರ ಸಂಬಂಧ ಸರಿಯಾಗಿದೇ ಎಂದೇ ಭಾವಿಸಲಾಗಿತ್ತು.
ಆದರೆ, ಈಗ ಇಬ್ಬರೂ ಇನ್ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ತುಂಬಾನೇ ಬೇಸರಗೊಂಡಿದ್ದಾರೆ. ಎಲ್ಲವೂ ಸರಿಯಿದ್ದಾಗ ಇಬ್ಬರೂ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದರು. ಆದರೆ, ಈಗ ಇಬ್ಬರೂ ಪರಸ್ಪರ ಅನ್ ಫಾಲೋ ಮಾಡಿರುವುದು ಈಗ ಇವರ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿದೆ ಎನ್ನಲಾಗಿದೆ.
Published by:
Rajesh Duggumane
First published:
August 18, 2020, 3:01 PM IST