ನಿರ್ದೇಶಕ ಹಾಗೂ ಗೀತರಚನಕಾರ ಯೋಗರಾಜ್ ಭಟ್ರು (Yogaraj Bhat) ಬರೆಯೋ ಸಾಂಗ್ ಎಲ್ಲಾ ಸ್ವಲ್ಪ ಅಲ್ಲ ಜಾಸ್ತಿನೇ ಡಿಫರೆಂಟ್ ಆಗಿರುತ್ತೆ ಅನ್ನೋದು ಸ್ಯಾಂಡಲ್ವುಡ್ (Sandalwood) ಮಂದಿಗೆಲ್ಲಾ ಗೊತ್ತಿರೋ ವಿಚಾರವೇ. ತಾವು ನಿರ್ದೇಶನ (Director) ಮಾಡೋ ಚಿತ್ರಕ್ಕೆ ಮಾತ್ರವಲ್ಲ ಬೇರೆ ಚಿತ್ರಗಳಿಗೂ ಯೋಗರಾಜ್ ಭಟ್ರು ಹಾಡುಗಳನ್ನು ಬರೆದುಕೊಟ್ಟಿದ್ದಾರೆ. ಅವ್ರ ಅನೇಕರ ಹಾಡುಗಳು (Songs) ಸೂಪರ್ ಹಿಟ್ ಆಗಿವೆ. ಮೊಗ್ಗಿನ ಮನಸ್ಸು ನಿರ್ದೇಶಕ ಶಶಾಂಕ್ (Shashank) ನಿರ್ದೇಶನ ಮಾಡ್ತಿರೋ ಲವ್ 360 (Love 360) ಚಿತ್ರಕ್ಕೂ ಯೋಗರಾಜ್ ಭಟ್ರು ಹೊಸ ಹಾಡೋದನ್ನು ಬರೆದುಕೊಟ್ಟಿದ್ದಾರೆ. ಅದೇ ನೋಡಿ ಈ ಜಜಾಂಗ್ ಜಾಂಗ್ ಅನ್ನೋ ಹಾಡು. ಈ ಹಾಡಿಗೆ ಅರ್ಜುನ್ ಜನ್ಯ (Arjun Janya) ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಲವ್ 360 ಸಾಂಗ್ ರಿಲೀಸ್
ಲವ್ 360 ಚಿತ್ರತಂಡ ಪ್ರಮೋಷನಲ್ ಸಾಂಗ್ ರಿಲೀಸ್ ಮಾಡಿದೆ. ಈ ಹಾಡು ಸಖತ್ ಸದ್ದು ಮಾಡ್ತಿದೆ. ಸಿದ್ ಶ್ರೀರಾಮ್ ಹಾಡಿರುವ ‘ಜಗವೇ ನೀನು ಗೆಳತಿಯೇ..’ ಗೀತೆ ಈಗಾಗಲೇ 1.2 ಕೋಟಿ ಬಾರಿ ವೀಕ್ಷಣೆ ಕಂಡಿದೆ. ‘ಭೋರ್ಗರೆದು..’ ಸಾಂಗ್ ಕೂಡ ಲಕ್ಷಾಂತರ ವೀವ್ಸ್ ಪಡೆದಿದೆ. ಈಗ ‘ಜಜಾಂಗ್ ಜಾಂಗ್..’ ಎಂಬ ಪ್ರಮೋಷನಲ್ ಹಾಡನ್ನು ರಿಲೀಸ್ ಮಾಡಿದ್ದು, ಇದು ಭಾರೀ ಸದ್ದು ಮಾಡ್ತಿದೆ.
ಆಗಸ್ಟ್ 19ರಂದು ತೆರೆ ಮೇಲೆ ಲವ್ 360
ಶಶಾಂಕ್ ನಿರ್ದೇಶನದ 'ಲವ್ 360' ಸಿನಿಮಾವು ಇದೇ ಆಗಸ್ಟ್ 19ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. 'ಮೊಗ್ಗಿನ ಮನಸು', 'ಕಷ್ಣನ್ ಲವ್ ಸ್ಟೋರಿ', 'ಕೃಷ್ಣ ಲೀಲಾ' ಥರದ ಸಿನಿಮಾಗಳ ಮೂಲಕ ಗಮನಸೆಳೆದಿರುವ ಶಶಾಂಕ್ ಈಗ 'ಲವ್ 360' ಸಿನಿಮಾ ಮಾಡಿದ್ದು, ಹಾಡು ಮತ್ತು ಟ್ರೇಲರ್‌ನಿಂದಲೇ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ.
ಶಶಾಂಕ್ ಮತ್ತು ಅರ್ಜುನ್ ಮಾತುಕತೆ
ಲವ್ 360 ಚಿತ್ರದ ಈ ಹಾಡಿನ ಆರಂಭದಲ್ಲಿ ಶಶಾಂಕ್ ಮತ್ತು ಅರ್ಜುನ್ ಜನ್ಯ ಮಾತನಾಡುವ ದೃಶ್ಯಗಳಿವೆ. ಅದರಲ್ಲಿ ಶಶಾಂಕ್, ಒಂದು ಪ್ರಮೋಷನಲ್ ಸಾಂಗ್ ಮಾಡೋಣ. ಎಂದು ಕೇಳುತ್ತಾರೆ. ಅದಕ್ಕೆ ಅರ್ಜುನ್ ಜನ್ಯ, ಯಾವ ಥರ ಸಾಂಗ್ ಸರ್? ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಶಶಾಂಕ್, ಇಂಥ ಸಾಂಗ್ ಗಳಿಗೆ ವರ್ಲ್ಡ್ ಫೇಮಸ್ ಆಗಿರುವ ನಮ್ ಯೋಗರಾಜ್ ಭಟ್ ಬರ್ದುಕೊಟ್ಟವ್ರೇ' ಎಂದು ಲಿರಿಕ್ಸ್ ಶೀಟ್‌ನ ಅರ್ಜುನ್ ಜನ್ಯ ಕೈಗಿಡುತ್ತಾರೆ.
ಅದರಲ್ಲಿರುವ 'ಜಜಾಂಗ್ ಜಾಂಗ್...' ಲಿರಿಕ್ಸ್ ನೋಡಿ, 'ಹಂಗಂದ್ರೆ ಏನ್ ಸರ್' ಎಂದು ಅರ್ಜುನ್ ಕೇಳುತ್ತಾರೆ. ಆಗ ಶಶಾಂಕ್, 'ಹೇ ಯಾವನೀಗೊತ್ರಿ?! ಆ ಭಟ್ರು ಬರೆಯೋದೆಲ್ಲ ಅಂಥವೇ ಸಾಂಗ್ ಹಿಟ್ ಆಯ್ತದೆ ಹಾಕಿ' ಎಂದು ಹೇಳುತ್ತಾರೆ.
ಈ ತಮಾಷೆಯಾಗಿರುವ ಹಾಡನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೇ ಹಾಡಿದ್ದಾರೆ. ಈ ಹಾಡಿನಲ್ಲಿ ರವಿಶಂಕರ್ ಗೌಡ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಹೊಸ ನಟ ಪ್ರವೀಣ್ ಅವರು ಹೀರೋ ಆಗಿ ನಟಿಸಿದ್ದಾರೆ. ‘ಲವ್ ಮಾಕ್ಟೇಲ್’ ಖ್ಯಾತಿಯ ನಟಿ ರಚನಾ ಇಂದರ್ ಅವರು ಹೀರೋಯಿನ್ ಆಗಿ ಅಭಿನಯಿಸಿದ್ದಾರೆ. ಚಾಲೆಂಜಿಂಗ್ ಆದಂತಹ ಪಾತ್ರವನ್ನು ಅವರು ನಿಭಾಯಿಸಿದ್ದಾರೆ.
ಈಚೆಗಷ್ಟೇ ಈ ಸಿನಿಮಾದ ಟ್ರೇಲರ್ ಅನ್ನು 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಅವರು ರಿಲೀಸ್ ಮಾಡಿ, ಚಿತ್ರತಂಡಕ್ಕೆ ಆನ್ ದಿ ಬೆಸ್ಟ್ ಹೇಳಿದ್ದಾರೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ 'ಜಗವೇ ನೀನು ಗೆಳತಿಯೇ..' ಹಾಡಿಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ