Rachana Inder: ಕೊಡಗಿನ ಬೆಡಗಿ ಲವ್ ಮಾಕ್ಟೆಲ್ ಹುಡುಗಿ ರಚನಾ ಏನ್ ಮಾಡ್ತಿದ್ದಾಳೆ? ಹೆಂಗೆ ನಾವು ಎಂದವಳು ಈಗ ಹೇಗಿದ್ದಾಳೆ?

ರಚನಾ ಇಂದರ್ ತೆರೆ ಮೇಲೆ ಬೇರೆ ರೀತಿನೇ ಕಾಣುತ್ತಾರೆ. ಇವರ ರೂಪ ಕೂಡ ವಿಭಿನ್ನ ಅನಿಸುತ್ತದೆ. ಆಗಾಗ ರೀಲ್ಸ್‌ನಲ್ಲೂ ಕಾಣಿಸಿಕೊಳ್ತಾರೆ. ಆದರೆ ಈಗಿನ ಟ್ರೆಂಡ್​ನ ಈ ರೀಲ್ಸ್ ಅಂದ್ರೆ ಇವರಿಗೆ ಅಷ್ಟೇನೂ ಕ್ರೇಜ್ ಇಲ್ಲವೇ ಇಲ್ಲವಂತೆ. ಹಾಗಿದ್ರೆ ಹೆಂಗೆ ನಾವು ಎಂದ ಹುಡುಗಿ ಈಗ ಹೇಗಿದ್ದಾಳೆ?

ರಚನಾ ಇಂದರ್ ಹಳ್ಳಿ ಹುಡುಗಿ ಲುಕ್

ರಚನಾ ಇಂದರ್ ಹಳ್ಳಿ ಹುಡುಗಿ ಲುಕ್

  • Share this:
ಸ್ಯಾಂಡಲ್​ವುಡ್​ನಲ್ಲೂ ಒಳ್ಳೆ ಕಲಾವಿದೆಯರು ಇದ್ದಾರೆ. ಸೌಂದರ್ಯವತಿಯರನ್ನೂ ನಾವು ಇಲ್ಲಿ ಕಾಣಬಹುದು. ಇಂತಹ ಚಂದದ ಚಂದನವನದಲ್ಲಿ ನವ ಪ್ರತಿಭೆಗಳಿಗೆ ಚಾನ್ಸ್ ಕೂಡ ಒಂದು ಹಂತಕ್ಕೆ ಸಿಗ್ತಾನೇ ಇದೆ. ಎಲ್ಲ ಏರು ಪೇರುಗಳ ಮಧ್ಯೆ ಕನ್ನಡದ ನಟಿಯರು ಇಲ್ಲಿ ತಮ್ಮದೇ ಸ್ಥಾನವನ್ನ ಮಾಡಿಕೊಳ್ಳ್ತಾನೇ ಇದ್ದಾರೆ. ಕೊಡಗಿನ ಕುವರಿ ರಷ್ಮಿಕಾ ಮಂದಣ್ಣ ಈಗ ಎಲ್ಲ ಇಂಡಸ್ಟ್ರೀಯಲ್ಲೂ ಚಿರಪರಿಚಿತ. ಇದೇ ಕೊಡಗಿನಿಂದಲೇ ಮತ್ತೋರ್ವ ನಾಯಕಿನೂ ಬಂದಿದ್ದಾರೆ. ಅವರು ಯಾರೂ ಅಂತ ಈಗಾಗಲೇ ಗೊತ್ತಾಗಿದೆ. ತುಂಬಾ ಕಡಿಮೆ ಸಮಯದಲ್ಲಿಯೇ ಬ್ಯಾಕ್ ಟು ಬ್ಯಾಕ್ ಅನ್ನೋ ಹಾಗೆ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಎರಡು ಹಿಟ್ ಆಗಿವೆ. ಒಂದು ರಿಲೀಸ್​ಗೆ ರೆಡಿ ಇದೆ. ಇನ್ನೂ ಒಂದು ಮೊನ್ನೆ ಮೊನ್ನೆ ಬಂದು ಹೋಗಿದೆ. ಹೌದು ನಾವ್ ಈಗ ಹೇಳಿರೋದು ಹೆಂಗೇ ನಾವು ಖ್ಯಾತಿಯ ಯುವ ನಟಿ ರಚನಾ ಇಂದರ್ ಬಗ್ಗೆನೆ. ಅವರೊಂದಿಗಿನ ನಮ್ಮ ಟಾಕ್ ಡಿಟೈಲ್ ಇಲ್ಲಿದೆ.

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯದ ಲವ್ ಮಾಕ್ಟೆಲ್ ಚಿತ್ರದಿಂದಲೇ ರಚನಾ ಇಂದರ್ ಎಲ್ಲರಿಗೂ ಪರಿಚಿತ. ಚಿತ್ರದಲ್ಲಿ "ಹೆಂಗೆ ನಾವು" ಅಂತ ಒಂದೇ ಒಂದು ಡೈಲಾಗ್ ಹೊಡೆದು ಇಡೀ ಕನ್ನಡ ಇಂಡಸ್ಟ್ರೀಗೆ ಪರಿಚಯ ಆಗಿಬಿಟ್ಟರು. ಅಷ್ಟೇ ಯಾಕೆ ? ಲವ್ ಮಾಕ್ಟೆಲ್ ಸಿನಿಮಾ ಒಪ್ಪಿದ ಜನ ಕೂಡ ಈ ಕೊಡಗಿನ ಕುವರಿಯನ್ನೂ ಒಪ್ಪಿಕೊಂಡ್ರು. ಅದಕ್ಕೇ ಅಲ್ವೇ, ಮೊನ್ನೆ ಮೊನ್ನೆ ಬಂದ ಹರಿಕಥೆ ಅಲ್ಲ ಗಿರಿಕಥೆಯಲ್ಲೂ ರಚನಾ ಇಂದರ್ ಅಭಿನಯಿಸಿದ್ದರು.ಲವ್ 360 ಸಿನಿಮಾ ಈ ನಾಯಕಿಯ ಅಭಿನಯಕ್ಕೆ ಕನ್ನಡಿಯಂತಿತ್ತು.ಜನ ಕೂಡ ಇಲ್ಲೂ ರಚನಾ ಇಂದರ್ ಪಾತ್ರವನ್ನ ಮೆಚ್ಚಿಕೊಂಡ್ರು. ಸಿನಿಮಾವನ್ನ ಗೆಲ್ಲಿಸಿದರು.

ರಚನಾ ಇಂದರ್ ಮುಂದಿನ ಪ್ರೋಜೆಕ್ಟ್ ಯಾವುದು ಗೊತ್ತೇ
ಕೊಡಗಿನ ಹುಡುಗಿ ರಚನಾ ಇಂದರ್ ಕಥೆಗಳನ್ನ ಕೇಳ್ತಿದ್ದಾರೆ. ತಮಗೆ ಇಷ್ಟ ಆಗೋ ಕಥೆಯನ್ನ ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೆ ಸುಮಾರು ಕಥೆಗಳನ್ನ ಕೇಳಿದ್ದಾರೆ. ಅದರಲ್ಲಿ ಯಾವುದು ಇನ್ನೂ ಫೈನಲ್ ಮಾಡಿಲ್ಲ. ಆದರೆ ರಚನಾ ಇಂದರ್ ಒಪ್ಪಿಕೊಂಡ ಸಿನಿಮಾಗಳಲ್ಲಿ ಇನ್ನೂ ಒಂದು ಇದೆ. ಅದುವೇ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ. ಈ ಸಿನಿಮಾದಲ್ಲಿ ರಚನಾ ಇಂದರ್ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ.

Love 360 Heroin Rachana Inder Now A Ditective
ರಚನಾ ಇಂದರ್ ಸೂಪರ್ ಲುಕ್


ಇದನ್ನೂ ಓದಿ: Tina Datta: ಆ್ಯಕ್ಟಿಂಗ್ ಬಿಟ್ಟು ತರಕಾರಿ ಮಾರುತ್ತಿದ್ದಾರಾ ನಟಿ? ನೆಟ್ಟಿಗರು ಏನಂದ್ರು?

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಟ್ರಿಪಲ್ ರೈಡಿಂಗ್
ಟ್ರಿಪಲ್ ರೈಡಿಂಗ್ ಚಿತ್ರದಲ್ಲಿ ಹೆಂಗೆ ನಾವು ರಚನಾ ಇಂದರ್ ಅಭಿನಯಿಸಿದ್ದಾರೆ. ಈ ಚಿತ್ರದ ಕೆಲಸ ಕಂಪ್ಲೀಟ್ ಆಗಿದೆ. ಇನ್ನೇನು ಈ ಚಿತ್ರ ರಿಲೀಸ್ ಆಗಬೇಕಷ್ಟೇ. ಇದರ ಹೊರತಾಗಿ ರಚನಾ ಇನ್ನೊಂದಿಷ್ಟು ವಿಷಯಗಳನ್ನ ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ.

ರಚನಾ ಒಪ್ಪಿಕೊಂಡ 4 N 6 ಸಿನಿಮಾ ತುಂಬಾ ಸ್ಪೆಷಲ್

ಈ ಸಿನಿಮಾ ವಿಶೇಷ ಸಿನಿಮಾ. ಇಲ್ಲಿ ಹೀರೋ ಮತ್ತು ಹೀರೋಯಿನ್ ಅಂತ ಏನೂ ಇಲ್ಲ. ಇಲ್ಲಿ ಬರೋ ಪಾತ್ರಗಳು ಕಥೆ ಹೇಳುತ್ತವೆ. ಲೀಡ್ ರೋಲ್​ ಅಂತ ಏನೂ ಇಲ್ಲದೇ ಇದ್ದರೂ, ಇಲ್ಲಿ ಬರೋ ಪಾತ್ರಗಳು ತಮ್ಮಷ್ಟೇ ತಾವೇ ಲೀಡ್ ಆಗಿರುತ್ತವೆ. ಇಂತಹ ಈ ಚಿತ್ರವನ್ನ ದರ್ಶನ್ ಶ್ರೀನಿವಾಸ್ ಡೈರೆಕ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ರಚನಾ ಪಾತ್ರ ಕೂಡ ವಿಶೇಷಾಗಿಯೇ ಇದೆ.

Love 360 Heroin Rachana Inder Now A Ditective
ರಚನಾ ಇಂದರ್ ಹಾಟ್ ಲುಕ್


ಇದನ್ನೂ ಓದಿ: Happy Birthday Shriya Saran: ಶ್ರಿಯಾ ಶರಣ್ ನಟಿಯಷ್ಟೇ ಅಲ್ಲ, ಅದ್ಭುತ ಕಥಕ್ ಡ್ಯಾನ್ಸರ್ ಕೂಡಾ

ಹೆಂಗೆ ನಾವು ಹುಡುಗಿ ರಚನಾ ಇಂದರ್ ಈಗ ಡಿಟೆಕ್ಟೀವ್
ರಚನಾ ಇಂದರ್ ಈ ಚಿತ್ರದಲ್ಲಿ ಡಿಟೆಕ್ಟೀವ್ ಪಾತ್ರವನ್ನೇ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಬಂದ್ಮೇಲೆ ಬೇರೆ ಬೇರೆ ರೀತಿಯ ಪಾತ್ರಗಳನ್ನ ನಿರ್ವಹಿಸಬೇಕು ಅನ್ನೋ ರಚನಾ ಇಂದರ್, ಈ ಒಂದು ಸಿನಿಮಾದಲ್ಲಿ ಡಿಟೆಕ್ಟೀವ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಈ ಚಿತ್ರ ಬಿಟ್ಟರೇ ರಚನಾ ಇಂದರ್ ಬೇರೆ ಯಾವುದೇ ಚಿತ್ರವನ್ನೂ ಸದ್ಯಕ್ಕೆ ಒಪ್ಪಿಕೊಂಡಿಲ್ಲ.ಉಳಿದಂತೆ ರಚನಾ ಲವ್-360 ಸಿನಿಮಾ ಗುಂಗಿನಲ್ಲಿಯೇ ಇದ್ದಾರೆ. ಅದೇ ಚಿತ್ರ ಯಶಸ್ಸಿನ ಕುರಿತು ಮಾತನಾಡುತ್ತಾರೆ. ಜನ ಈಗ ನಮ್ಮ ಈ ಸಿನಿಮಾವನ್ನ ನೋಡ್ತಿದ್ದಾರೆ. ಖುಷಿ ಆಗುತ್ತದೆ ಅಂತಲೂ ಹೇಳಿಕೊಳ್ಳುತ್ತಾರೆ.
First published: