Love 360: ಗೆದ್ದೇಬಿಡ್ತು ನಮ್ಮ ಲವ್ 360 ಸಿನಿಮಾ; ಸ್ಪೆಶಲ್ ವಿಡಿಯೋದಲ್ಲಿ ಥ್ಯಾಂಕ್ಸ್ ಹೇಳಿದ ಶಶಾಂಕ್

ನಮ್ಮ ಚಿತ್ರಕ್ಕೆ ಮೊದಲ ದಿನವೇ ಒಳ್ಳೆ ರೆಸ್ಪಾನ್ಸ್ ಬಂದಿದೆ. ಆದರೆ ಕಲೆಕ್ಷನ್ ವಿಚಾರದಲ್ಲಿ ಡಲ್ ಆಗಿಯೇ ಇತ್ತು. ಆಗಲೇ ವಿಡಿಯೋ ಮೂಲಕ ಜನರಲ್ಲಿ ಮನವಿ ಮಾಡಿಕೊಂಡೆ. ಅದನ್ನ ಗೌರವಿಸಿದ ಜನ ಚಿತ್ರವನ್ನ ಗೆಲ್ಲಿಸಿದ್ದಾರೆ. ನಾನು ಈಗ ತುಂಬಾ ಖುಷಿಯಲ್ಲಿಯೇ ಇದ್ದೇನೆ. ಚಿತ್ರಕ್ಕೆ ನೀವು ಕೊಟ್ಟ ಪ್ರೀತಿಗೆ ನಾನು ಆಭಾರಿ ಎಂದಿದ್ದಾರೆ ನಿರ್ದೇಶಕ ಶಶಾಂಕ್. -ಶಶಾಂಕ್,ನಿರ್ದೇಶಕ-ನಿರ್ಮಾಪಕ

ಲವ್ 360 ಚಿತ್ರಕ್ಕೆ ಡಿಮ್ಯಾಂಡ್​

ಲವ್ 360 ಚಿತ್ರಕ್ಕೆ ಡಿಮ್ಯಾಂಡ್​

  • Share this:
    ಕನ್ನಡದ ಲವ್ 360 (Love 360) ಚಿತ್ರ ಜನರ ಮೆಚ್ಚುಗೆ ಪಡೆದುಕೊಂಡಿದೆ. ವಿಮರ್ಶಕರೂ ಚಿತ್ರವನ್ನ ಕೊಂಡಾಡಿದ್ದಾರೆ. ಆದರೆ ಚಿತ್ರದಲ್ಲಿ ಬಿಗ್ ಸ್ಟಾರ್ ಇರಲಿಲ್ಲ ನೋಡಿ. ಅದಕ್ಕೇನೆ ಸಿನಿಮಾಗೆ ಹೇಳಿಕೊಳ್ಳುವ ಓಪನಿಂಗ್ ಸಿಗಲೇ ಇಲ್ಲ. ಇದರಿಂದ ಚಿತ್ರದ ನಿರ್ದೇಶಕ ನಿರ್ಮಾಪಕ ಶಶಾಂಕ್ (Director Shashank) ತುಂಬಾನೆ ಬೇಸರದಲ್ಲಿಯೇ ಇದ್ದರು.  ಒಳ್ಳೆ ಕಥೆ ಒಳ್ಳೆ ಸಿನಿಮಾ. ಆದರೆ ಜನಾನೇ ಬರ್ತಿಲ್ವೇ ಅಂತ ಬೇಸರ ಮಾಡಿಕೊಂಡಿದ್ದರು. ಬೇಸರ ಮಾಡಿಕೊಂಡ್ರೆ ಆಗಬೇಕಲ್ವೇ. ಹಾಗಾಗಿಯೇ ನಿರ್ದೇಶಕ ಶಶಾಂಕ್ ಒಂದು ವೀಡಿಯೋ ಮೂಲಕ ಕನ್ನಡದ ಜನತೆಯನ್ನ ಕೈ ಮುಗಿದು ಕೇಳಿಕೊಂಡರು. ಯಾವುದೇ ಡ್ರಾಮ್ಯಾಟಿಕ್ ಮಾತುಗಳು ಇಲ್ಲದೇ ತಮ್ಮ ನೋವು ಇಲ್ಲಿ ಹೇಳಿಕೊಂಡರು.



    ಥಿಯೇಟರ್​ ಗೆ ಬಂದು ಸಿನಿಮಾ ನೋಡಿ ಅಂದಿದ್ದರು ಶಶಾಂಕ್
    ನಮ್ಮ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಥಿಯೇಟರ್​ಗೆ ಜನ ಬರ್ತಾ ಇಲ್ಲ. ಇದೇ ರೀತಿ ಆದರೆ ಒಳ್ಳೆ ಸಿನಿಮಾ ಸೋತು ಹೋಗುತ್ತದೆ. ಥಿಯೇಟರ್​ಗೆ ಬಂದು ಸಿನಿಮಾ ನೋಡಿ ಅಂತಲೇ ಶಶಾಂಕ್ ವಿಡಿಯೋ ಮೂಲಕ ಆಗ ಮನವಿ ಮಾಡಿದ್ದರು.

    Sandalwood director shashank Comebacks With new movie love 360
    ಲವ್​ 360 ಸಿನಿಮಾ ತಂಡ


    ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ಡೈರೆಕ್ಟರ್ ಶಶಾಂಕ್
    ನನ್ನ ಮನವಿಯನ್ನ ಗೌರವಿಸಿದ್ದಕ್ಕೆ ಧನ್ಯವಾದಗಳು, ಲವ್ 360 ಚಿತ್ರವನ್ನ ಪ್ರೇಕ್ಷಕರು ಥಿಯೇಟರ್​ಗೆ ಬಂದು ವೀಕ್ಷಿಸುತ್ತಿದ್ದಾರೆ. ಇದರಿಂದ ಕಲೆಕ್ಷನ್ ಚೆನ್ನಾಗಿದೆ. ಲವ್ 360 ಸಿನಿಮಾ ಯಶಸ್ವಿ ಸಿನಿಮಾ ಆಗಿ ಹೊರಹೊಮ್ಮಿದೆ. ಚಿತ್ರ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದಗಳು.

    ಇದನ್ನೂ ಓದಿ: Actor JK: ಸೂಪರ್​ ಸ್ಟಾರ್ ಜೆಕೆ ಮದುವೆ ಸುದ್ದಿ ಸುಳ್ಳೇ? ಇಲ್ಲಿದೆ Exclusive ಇಂಟರ್​ವ್ಯೂ

    ಚಿತ್ರವನ್ನ ಥಿಯೇಟರ್​ಗೆ ಬಂದು ನೋಡಿ ಅಂತ ಕೇಳಿಕೊಂಡ ಆ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಹಾಗೇನೆ ಚಿತ್ರದ ಯಶಸ್ಸಿನ ಕುರಿತು ಹೇಳಿಕೊಂಡ ಈ ವಿಡಿಯೋವನ್ನೂ ಶೇರ್ ಮಾಡಿ ಅಂತಲೇ ಶಶಾಂಕ್ ವಿಡಿಯೋ ಮೂಲಕವೇ ವಿನಂತಿಸಿದ್ದಾರೆ.

    ರಾಜ್ಯಾದ್ಯಂತ ಆಗಸ್ಟ್ 19ಕ್ಕೆ ಸಿನಿಮಾ ರಿಲೀಸ್
    ಕಳೆದ ತಿಂಗಳು 19 ರಂದು ರಾಜ್ಯಾದ್ಯಂತ ಲವ್ 360 ಸಿನಿಮಾ ರಿಲೀಸ್ ಆಗಿತ್ತು.ನವ ನಟ ಪ್ರವೀಣ್ ಕುಮಾರ್ ಹಾಗೂ ಲವ್ ಮಾಕ್ಟೇಲ್ ಚಿತ್ರದ ಹೆಂಗೇ ನಾವು ಖ್ಯಾತಿಯ ನಟಿ ರಚನಾ ಇಂದರ್ ಈ ಮೂಲಕ ಒಂದ್ ಒಳ್ಳೆ ಕಥೆಗೆ ಸಾಕ್ಷಿ ಆಗಿದ್ದರು.

    ಲವ್ 360 ತಮಿಳು-ತೆಲುಗು ಭಾಷೆಯಲ್ಲಿ ರಿಮೇಕ್ ಈ ವಿಷಯವನ್ನ ಅಧಿಕೃತವಾಗಿ ನಿರ್ದೇಶಕ ಶಶಾಂಕ್ ಅವರೇ ತಿಳಿಸಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಮ್ಮ ಲವ್360 ಸಿನಿಮಾ ರಿಮೇಕ್ ಆಗುತ್ತಿದೆ. ಅಲ್ಲಿಯ ದೊಡ್ಡ ಸಂಸ್ಥೆಯೊಂದು ಈ ಚಿತ್ರವನ್ನ ರಿಮೇಕ್ ಮಾಡಲು ಮುಂದೆ ಬಂದಿದೆ.

    ಇದನ್ನೂ ಓದಿ: Vaijanath Biradar: 90 ಬಿಡಿ ಮನೆಗೆ ನಡಿ; ಭಿಕ್ಷುಕ ಪಾತ್ರಕ್ಕೇ ಫೇಮಸ್ ಆಗಿದ್ದ ವೈಜನಾಥ್ ಬಿರಾದಾರ್ ಈಗ ಹೀರೋ!

    ಅಲ್ಲಿ ಹೀರೋ ಯಾರು ? ಹೀರೋಯಿನ್ ಯಾರು ? ಯಾರ್ ಡೈರೆಕ್ಷನ್ ಮಾಡ್ತಾರೆ ? ಈ ಎಲ್ಲ ಮಾಹಿತಿಯನ್ನೂ ಕೊಡುತ್ತೇನೆ. ವೇಟ್ ಮಾಡಿ ಅಂತಲೇ ನಿರ್ಮಾಪಕ-ನಿರ್ದೇಶಕ ಶಶಾಂಕ್ ಈಗಾಗಲೇ ತಿಳಿಸಿದ್ದು, ಲವ್ 360 ಸಿನಿಮಾ ಸದ್ಯಕ್ಕೆ ರನ್ನಿಂಗ್ ಸಕ್ಸಸ್​ಫುಲಿ.
    First published: