Shashank New Movie : ಲವ್ 360 ಸಕ್ಸಸ್; ಶಶಾಂಕ್ ಮುಂದಿನ ಸಿನಿಮಾ ಹೀರೋ ಯಾರು?

ಲವ್ 360 ಸಿನಿಮಾ ಹಿಟ್

ಲವ್ 360 ಸಿನಿಮಾ ಹಿಟ್

  • Share this:
ಕನ್ನಡ ಸಿನಿಮಾರಂಗದಲ್ಲಿ ಹೊಸಬರನ್ನ (Kannada Cinema) ಹಾಕಿಕೊಂಡು ಗೆಲುವು ಸಾಧಿಸೋದು ಸಣ್ಣ-ಪುಟ್ಟ ಕೆಲಸ ಅಲ್ಲವೇ ಅಲ್ಲ. ಅದು ನಿಜಕ್ಕೂ ಒಂದು ಮಹಾನ್ ಸಾಧನೇ ಸರಿ. ಆ ಸಾಧನೆ ಈಗ ಕನ್ನಡದಲ್ಲಿಯೆ ಆಗಿದೆ. ಸಿನಿಮಾಗೆ (Cinema) ಹಾಕಿರೋ ಬಂಡವಾಳವನ್ನ ಈಗ ಆ ಸಿನಿಮಾ ಪಡೆದುಕೊಂಡಿದೆ. ನಿರ್ಮಾಪಕರೂ (Producer) ಖುಷಿ ಆಗಿದ್ದಾರೆ. ಸಿನಿಮಾದ ಕಥೆಯನ್ನ ಕಂಡ ಜನರು ಚಿತ್ರವನ್ನ ಗೆಲ್ಲಿಸಿದ್ದಾರೆ.ಅದೇ ಖುಷಿಯನ್ನೆ ಚಿತ್ರದ ನಿರ್ಮಾಪಕ-ನಿರ್ದೇಶಕ (Director) ಶಶಾಂಕ್ ಇಲ್ಲಿ ಹಂಚಿಕೊಂಡಿದ್ದಾರೆ. ಕನ್ನಡದ ಲವ್-360 ಸಿನಿಮಾ (Love 360) ಡೈರೆಕ್ಟರ್ ಶಶಾಂಕ್ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಒಳ್ಳೆ ಸಿನಿಮಾ ನೋಡಲು ಜನ ಬರ್ತಿಲ್ಲ ಅಂತಲೇ ಬೇಸರದಲ್ಲಿಯೇ ಇದ್ದ ನಿರ್ಮಾಪಕ ಶಶಾಂಕ್ (Director Shashank) ಗೆದ್ದ ಸಂತೋಷದಲ್ಲಿಯೇ ನಮ್ಮ ಜೊತೆಗೆ ಮಾತನಾಡಿದ್ದಾರೆ.

ನಮ್ಮ ಚಿತ್ರವನ್ನ ಜನ ಒಪ್ಪಿಕೊಂಡಿದ್ದಾರೆ. ನಾ ಮಾಡಿರೋ ಪುಟ್ಟ ಮನವಿಯನ್ನೂ ಪುರಸ್ಕರಿಸಿದ್ದಾರೆ. ಥಿಯೇಟರ್​ಗೆ ಬಂದು ಸಿನಿಮಾ ನೋಡಿದ್ದಾರೆ ಅಂತಲೇ ಧನ್ಯತಾ ಭಾವದಲ್ಲಿಯೇ ಹೇಳಿಕೊಂಡಿದ್ದಾರೆ.

ಹೊಸಬರ ಸಿನಿಮಾಕೆ ಬಂಡವಾಳ ವಾಪಸ್ ಬಂದಿದೆ ಅನ್ನೋದೇ ಸಾಧನೆ
ಹೌದು, ಈ ಒಂದು ವಿಷಯವನ್ನ ಒತ್ತಿ ಹೇಳ್ತಾರೆ ಡೈರೆಕ್ಟರ್ ಶಶಾಂಕ್. ತಮ್ಮ ಚಿತ್ರದಲ್ಲಿರೋರು ಗ್ರೇಟ್ ಸ್ಟಾರ್​ಗಳೇನೂ ಅಲ್ಲ. ಅವರೆಲ್ಲ ಹೊಸಬರೇ. ಹಂಗಿರೋವಾಗ ಸ್ಟಾರ್​ಗಳನ್ನ ನೋಡಲು ಜನ ಥಿಯೇಟರ್​ಗೆ ಹೋಗ್ತಾರೆ. ಇವರನ್ನ ನೋಡಲಿಕ್ಕೆ ಬರೋದಿಲ್ಲ. ಆದರೂ ನಮ್ಮ ಚಿತ್ರಕ್ಕೆ ಜನ ಬಂದ್ರು. ಬಂದು ನಮ್ಮ ಚಿತ್ರವನ್ನ ಗೆಲ್ಲಿಸಿದರು. ಅಷ್ಟೇ ಯಾಕೆ ಹಾಕಿದ ಬಂಡವಾಳವೂ ಬಂದಿದೆ. ಇದಕ್ಕಾಗಿ ನಾನು ಜನರಿಗೆ ಧನ್ಯವಾದ ತಿಳಿಸಲೇಬೇಕು ಅಂತಲೇ ಶಶಾಂಕ್ ಹೇಳ್ತಾರೆ.

Director Shashank New Project
ಡೈರೆಕ್ಟರ್ ಶಶಾಂಕ್ ಹೊಸ ಪ್ರಾಜೆಕ್ಟ್ ಪ್ಲಾನ್


ಒಲವೇ ನೀನು ಗೆಳತಿಯೇ ಹಾಡು ಸಿಕ್ಕಾಪಟ್ಟೆ ರೀಚ್ ಆಗಿದೆ
ಚಿತ್ರದ ಒಲವೇ ನೀನು ಗೆಳತಿಯೇ ಹಾಡು ಜನರನ್ನ ಹೆಚ್ಚು ತಟ್ಟಿದೆ. ಇದು ಚಿತ್ರಕ್ಕೆ ಒಳ್ಳೆ ಪ್ರಚಾರವನ್ನೆ ಕೊಟ್ಟಿದೆ. ಆದರೂ ಮೊದಲ ದಿನ ಜನ ಥಿಯೇಟರ್ ಬರೋಕೆ ಹಿಂದೆ-ಮುಂದೆ ನೋಡಿದರು. ಆದರೆ ನನ್ನ ಒಂದೇ ಒಂದು ಮನವಿಗೆ ಜನ ಗೌರವ ಕೊಟ್ಟರು. ಚಿತ್ರಮಂದಿರಕ್ಕೆ ಬಂದು ಸಿನಿಮಾ ಕೂಡ ನೋಡಿದರು. ಅದು ನನಗೆ ತುಂಬಾ ಖುಷಿ ತಂದಿದೆ ಅಂತಲೇ ಶಶಾಂಕ್ ತಿಳಿಸುತ್ತಾರೆ.

ಲವ್-360 ಸಿನಿಮಾದ ಬಳಿಕ ಶಶಾಂಕ್ ಚಿತ್ತ ಎತ್ತ ?
ಡೈರೆಕ್ಟರ್ ಶಶಾಂಕ್ ಲವ್-360 ಸಿನಿಮಾ ಗೆದ್ದ ಖುಷಿಯಲ್ಲಿಯೇ ಇದ್ದಾರೆ. ಆ ಬಳಿಕ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆನೂ ಅದೇ ಖುಷಿಯಲ್ಲಿಯೇ ಈಗ ಮಾತನಾಡಿದ್ದಾರೆ. ಹೌದು, ನಮ್ಮ ಸಿನಿಮಾ ಗೆದ್ದಿದೆ. ನನ್ನ ಮುಂದಿನ ಪ್ರಾಜೆಕ್ಟ್ ಪ್ಲಾನ್ ಆಗಿದೆ. ನಮ್ಮ ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ. ಈ ಚಿತ್ರದ ಹೆಸರು ಇನ್ನಷ್ಟೆ ಫೈನಲ್ ಆಗಬೇಕಿದೆ. ದಸರಾ ಹೊತ್ತಿಗೆ ಈ ಚಿತ್ರದ ಚಿತ್ರೀಕರಣ ಶುರು ಆಗುತ್ತದೆ.

ಡಾರ್ಲಿಂಗ್ ಕೃಷ್ಣ ಬಳಿಕ ಉಪ್ಪಿ ಸಿನಿಮಾ ಡೈರೆಕ್ಟ್ ಮಾಡ್ತೀನಿ
ನಿರ್ದೇಶಕ ಶಶಾಂಕ್ ಅವ್ರು ಡಾರ್ಲಿಂಗ್ ಕೃಷ್ಣ ಅಭಿನಯದ ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪ್ಪಿಗೂ ಸಿನಿಮಾ ಮಾಡಲಿದ್ದಾರೆ. ಆದರೆ ಅದಕ್ಕೆ ಇನ್ನೂ ಟೈಮ್ ಇದೆ. ಉಪ್ಪಿಯ ಡೈರೆಕ್ಷನ್ ಶುರು ಮಾಡಿದ್ದರಿಂದಲೇ ಈ ಪ್ರಾಜೆಕ್ಟ್ ಡಿಲೇ ಆಯಿತು.

ಆ ಗ್ಯಾಪ್ ಅಲ್ಲಿಯೇ ಲವ್ 360 ಸಿನಿಮಾ ಮಾಡಿದ್ದೇನೆ. ಇನ್ನೇನು ಎಲೆಕ್ಷನ್ ಬರುತ್ತದೆ. ಆಗ ಉಪ್ಪಿ ಪ್ರಜಾಕೀಯದ ಕೆಲಸದಲ್ಲಿ ಬ್ಯುಸಿ ಆಗ್ತಾರೆ. ಹಾಗಾಗಿಯೇ ಉಪ್ಪಿ ಪ್ರಾಜೆಕ್ಟ್ ಉಪ್ಪಿ ಫ್ರೀ ಆದ್ಮೇಲೆ ಶುರು ಆಗುತ್ತದೆ. ಅಷ್ಟರೊಳಗೆ ಡಾರ್ಲಿಂಗ್ ಕೃಷ್ಣ ಸಿನಿಮಾ ಮುಗಿಸಿಕೊಳ್ಳುತ್ತೇನೆ ಅಂತಲೇ ಡೈರೆಕ್ಟರ್ ಶಶಾಂಕ್ ವಿವರಿಸ್ತಾರೆ.
First published: