ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ (Britney Spears) ಅವರ ವೈಯಕ್ತಿಕ ಹಾಗೂ ವ್ಯವಹಾರಗಳನ್ನು 13 ವರ್ಷಗಳಿಂದ ನಿಯಂತ್ರಿಸಿದ ವಿವಾದಾತ್ಮಕ ನಿರ್ವಹಣೆಯನ್ನು ಕೊನೆಗೊಳಿಸಬೇಕೇ..? ಎಂಬ ಪ್ರಕರಣದ ವಿಚಾರಣೆಯ ದಿನಾಂಕವನ್ನು ಲಾಸ್ ಏಂಜಲೀಸ್ ನ್ಯಾಯಾಧೀಶರು (Los Angeles Superior Court Judge) ನಿಗದಿಪಡಿಸಿದ್ದಾರೆ. ಲಾಸ್ ಏಂಜಲೀಸ್ನ ಉನ್ನತ ನ್ಯಾಯಾಲಯ ನ್ಯಾಯಾಧೀಶರಾದ ಬ್ರೆಂಡಾ ಪೆನ್ನಿ ಗಾಯಕಿಯ $60 ಮಿಲಿಯನ್ ಆಸ್ತಿಯ ಮೇಲ್ವಿಚಾರಣೆ ಮಾಡುತ್ತಿದ್ದ ಆಕೆಯ ತಂದೆಯನ್ನು ಅಮಾನತುಗೊಳಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯು ಹದಗೆಟ್ಟಿದ್ದು, ಜೇಮಿ ಸ್ಪಿಯರ್ಸ್ ಅನ್ನು ಅಮಾನತುಗೊಳಿಸಬೇಕಾಗಿರುವ ಪರಿಸ್ಥಿತಿಯನ್ನುಂಟು ಮಾಡಿದ್ದು, ಈ ಅಮಾನತು ಈ ಕೂಡಲೇ ಜಾರಿಗೆ ಬರಲಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಮೂರು ಗಂಟೆಗಳ ಸುದೀರ್ಘ ವಿಚಾರಣೆಯ ಸಮಯದಲ್ಲಿ ಈ ತೀರ್ಮಾನ ಕೈಗೊಂಡಿರುವ ನ್ಯಾಯಾಧೀಶರಾದ ಬ್ರೆಂಡಾ ಪೆನ್ನಿ, ನವೆಂಬರ್ 12 ರಂದು ವಿಚಾರಣೆಯನ್ನು ನಿಗದಿಪಡಿಸಿದ್ದಾರೆ. 39ರ ಹರೆಯದ “ಸರ್ಕಸ್” ಗಾಯಕಿಗೆ ಈ ನಿರ್ಧಾರವು ವಿಜಯ ತಂದುಕೊಟ್ಟಿದ್ದು, ಕಾನೂನು ವ್ಯವಸ್ಥೆಗಳಿಂದ ಮುಕ್ತರಾಗಲು ಬ್ರಿಟ್ನಿ ಹಲವಾರು ವರ್ಷಗಳಿಂದ ಹೆಣಗಾಡುತ್ತಿದ್ದರು.
ವಿಚಾರಣೆಯ ಸಮಯದಲ್ಲಿ ಬ್ರಿಟ್ನಿಯ ಬದಲಾಗಿ ಆಕೆಯ ವಕೀಲರಾದ ಮ್ಯಾಥ್ಯೂ ರೋಸೆಂಗಾರ್ಟ್ ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಜೇಮಿ ಸ್ಪಿಯರ್ಸ್ ಬದಲಿಗೆ ಜಾನ್ ಜಾಬೆಲ್ರನ್ನು ಬ್ರಿಟ್ನಿಯವರ ಸ್ವತ್ತಿನ ತಾತ್ಕಾಲಿಕ ಮೇಲ್ವಿಚಾರಕರಾಗಿ ನಿಯೋಜಿಸಲಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಇದನ್ನೂ ಓದಿ: Britney Spears: ದೀರ್ಘಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಯುಎಸ್ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್
ನ್ಯಾಯಾಧೀಶರ ತೀರ್ಪು ಹೊರಬೀಳುತ್ತಿದ್ದಂತೆಯೇ ಲಾಸ್ ಏಂಜಲೀಸ್ ನ್ಯಾಯಾಲಯದ ಹೊರಗೆ ಜಮಾಯಿಸಿದ್ದ ಪಾಪ್ ಗಾಯಕಿಯ ಅಭಿಮಾನಿಗಳು ಖುಷಿಯಿಂದ ಕುಣಿದಾಡಿದ್ದಾರೆ. ಇದೇ ಸಂದರ್ಭದಲ್ಲಿ ಪಾಪ್ ಗಾಯಕ ಚೇರ್ ಟ್ವೀಟ್ ಮಾಡಿದ್ದು, “ನಾನು ಆಕೆಗಾಗಿ ಹೆಚ್ಚು ರೋಮಾಂಚನಗೊಂಡಿರುವೆ. ನಮ್ಮ ಸೂಪರ್ ಸ್ಟಾರ್ ಅನ್ನು ಆಶೀರ್ವದಿಸಿ” ಎಂದು ಬರೆದುಕೊಂಡಿದ್ದಾರೆ.
Thank God✨🌟✨
I’ve Talked & 🙏🏻🙏🏻‘d About This 4 YEARS👏🏼.
IM MORE THAN THRILLED 4 HER🎂‼️
BLESS OUR SUPER 🌟#FREEBRITNEY
— Cher (@cher) September 29, 2021
BRITNEY’S FATHER IS GONE #FreeBritney pic.twitter.com/6Ihgf8O52F
— 2000s (@PopCulture2000s) September 29, 2021
ಇದನ್ನೂ ಓದಿ: Daniel Craig ಅಭಿನಯದ No Time To Die ಸಿನಿಮಾದಲ್ಲಿ ಈ ಸಲ ಚುಂಬನದ ದೃಶ್ಯಗಳಿಗೆ ಕತ್ತರಿ ಹಾಕದ CBFC..!
ಗಾಯಕಿಯ ಫೋನ್ ಹಾಗೂ ಮಲಗುವ ಕೋಣೆಯ ಮೇಲೆ ಗಾಯಕಿ ತಂದೆಯ ಭದ್ರತಾ ಸಿಬ್ಬಂದಿ ಕಣ್ಣಿಟ್ಟಿದ್ದರು. ಇದರೊಂದಿಗೆ ಆಕೆಯ ಸಂಭಾಷಣೆಗಳನ್ನು ಟ್ರ್ಯಾಕ್ ಮಾಡಲಾಗುತ್ತಿತ್ತು ಎಂದು ಮಾಜಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಈ ಕುರಿತಾಗಿ ಜೇಮಿ ಸ್ಪಿಯರ್ಸ್ ವಾದಿಸಿದ್ದು ಸಂರಕ್ಷಕರಾಗಿ ಮಗಳ ಮೇಲೆ ತಮ್ಮ ಅಧಿಕಾರಗಳು ಪರಿಧಿಯಲ್ಲಿವೆ ಎಂದು ತಿಳಿಸಿದ್ದರು. ತಂದೆಯ ಸಂರಕ್ಷಣೆಯು ತನಗೆ ನಿಂದನೀಯ ಹಾಗೂ ಅವಮಾನಕರವಾಗಿದೆಯೆಂದು ಬ್ರಿಟ್ನಿ ತಿಳಿಸಿದ್ದಾರೆ. ಜೊತೆಗೆ ಬ್ರಿಟ್ನಿಯ ಪರವಾಗಿ ಸಾರ್ವಜನಿಕ ಬೆಂಬಲ ಕೂಡ ದೊರೆಯಿತು ಹಾಗೂ ಸ್ಪಿಯರ್ಸ್ ಮೇಲೆ ಹೇರಿದ್ದ ಕೆಲವೊಂದು ಷರತ್ತುಗಳನ್ನು ಸಡಿಲಗೊಳಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ