Ombatthane Dikku Review: ಒಂದೇ ಒಂದು ಬ್ಯಾಗ್​ನಲ್ಲಿದೆ ಚಿತ್ರದ ರಹಸ್ಯ​, ಒಂಬತ್ತನೇ ದಿಕ್ಕಿನಲ್ಲಿ ಸಿಕ್ಕಿದೇನು ಗೊತ್ತಾ?

ಇನ್ನೂ ಇಂದು ಲೂಸ್ ಮಾದ ಯೋಗಿ ಅಭಿಮಾನಿಗಳ ಜೊತೆ ಕೂತು ಅನುಪಮಾ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದಾರೆ. ಈ ಹಿಂದೆ 'ಆ ಕರಾಳ ರಾತ್ರಿ', 'ಸರ್ಕಸ್', 'ಹಗ್ಗದ ಕೊನೆ'ಯಂಥಹಾ ಥ್ರಿಲ್ಲಿಂಗ್ ಸಿನಿಮಾಗಳನ್ನು ನಿರ್ದೇಶಿಸಿರುವ ದಯಾಳ್ ಪದ್ಮನಾಭ್ ಈ ಸಿನಿಮಾದಲ್ಲೂ ರಿಪೀಟ್ ಮಾಡಿದ್ದಾರೆ.

ಒಂಬತ್ತನೇ ದಿಕ್ಕು ಪೋಸ್ಟರ್​

ಒಂಬತ್ತನೇ ದಿಕ್ಕು ಪೋಸ್ಟರ್​

  • Share this:
ಕೊರೋನಾ(Corona) ಹೆಚ್ಚಿರುವ ಕಾರಣ ದೊಡ್ಡ ದೊಡ್ಡ ಸಿನಿಮಾಗಳೇ ರಿಲೀಸ್​ ದಿನಾಂಕವನ್ನು ಮುಂದೂಡಿದ್ದಾರೆ. ಕಲೆಕ್ಷನ್​ ಕಮ್ಮಿಯಾಗುತ್ತೆ ಅಂತ ದೊಡ್ಡ ಬಜೆಟ್(Budget)​ನ ಸಿನಿಮಾಗಳೇ ಹಿಂದೆ ಸರಿದಿವೆ. ಆದರೆ, ಒಂಬತ್ತನೇ ದಿಕ್ಕು(Obbatthane Dikku) ಕನ್ನಡ ಸಿನಿಮಾ ಧೈರ್ಯ ಮಾಡಿ ಇಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಲೂಸ್​ ಮಾದ(Loose Mada) ಯೋಗಿ ಅಭಿನಯದ ಸಿನಿಮಾ ಮೊದಲ ದಿನವೇ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾವನ್ನು ನಿರ್ದೇಶಕ ದಯಾಳ್​ ಪದ್ಮಬಾಭ್​. ಮೊದಲಿನಿಂದಲೂ ಥ್ರಿಲ್ಲರ್​(Thriller) ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ ದಯಾಳ್​(Dayal) ಈ ಬಾರಿಯೂ ಅದನ್ನೇ ಟ್ರೈ ಮಾಡಿದ್ದಾರೆ. ಈ ಸಿನಿಮಾ 2017ರಲ್ಲಿ ಬಿಡುಗಡೆಯಾದ ತಮಿಳಿನ 'ಕುರಂಗು ಬೊಮೈ' ಸಿನಿಮಾದ ರೀಮೇಕ್ 'ಒಂಬತ್ತನೇ ದಿಕ್ಕು'. ಇನ್ನೂ ಇಂದು ಲೂಸ್ ಮಾದ ಯೋಗಿ ಅಭಿಮಾನಿಗಳ ಜೊತೆ ಕೂತು ಅನುಪಮಾ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದಾರೆ. ಈ ಹಿಂದೆ 'ಆ ಕರಾಳ ರಾತ್ರಿ', 'ಸರ್ಕಸ್', 'ಹಗ್ಗದ ಕೊನೆ'ಯಂಥಹಾ ಥ್ರಿಲ್ಲಿಂಗ್ ಸಿನಿಮಾಗಳನ್ನು ನಿರ್ದೇಶಿಸಿರುವ ದಯಾಳ್ ಪದ್ಮನಾಭ್ ಈ ಸಿನಿಮಾದಲ್ಲೂ ರಿಪೀಟ್(Repeat) ಮಾಡಿದ್ದಾರೆ. ಸಿನಿಮಾ ಆರಂಭದಿಂದಲೂ ಕೊನೆಹಂತದ ವರೆಗೂ  ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗಿದ್ರೆ ಸಿನಿಮಾದ ಕಥೆ ಏನು? ಕಲಾವಿದರ ಅಭಿನಯ ಹೇಗಿದೆ? ಸಿನಿಮಾ ನೋಡಿದ ಪ್ರೇಕ್ಷಕ ಮಹಾಪ್ರಭುಗಳು  ಹೇಳಿದ್ದೇನು? ಇಲ್ಲಿದೆ ನೋಡಿ..

ಪುರಾತನ ವಿಗ್ರಹದ ಮೇಲೆ ನಿಲ್ಲುವ ಒಂಬತ್ತನೇ ದಿಕ್ಕು!

ಪುರಾತನ ದೇವಾಲಯದಲ್ಲಿನ ಕಾಲಬೈರವನ ವಿಗ್ರಹದ ಕಳವು, ಅದರ ವಿಲೇವಾರಿ, ವ್ಯಾಪಾರ, ದಾರಿತಪ್ಪಿದವರ ಧೈರ್ಯ, ಬದುಕೇ ದೊಡ್ಡದು ಅಂದುಕೊಂಡವರ ಬವಣೆಗಳ ಸುತ್ತ ಹರಡಿಕೊಂಡ ಕತೆ ಇದರಲ್ಲಿದೆ. ಒಬ್ಬ ಪರಮಕ್ರೂರಿ. ಎದುರಿಗಿದ್ದವರು ಯಾರೇ ಆಗಲಿ ಗುಂಡಿಕ್ಕಿ ಕೊಲ್ಲುವ ಕೋಪಿಷ್ಟ. ಇತ್ತ ನಾಯಕ ಚಿನ್ನ(ಯೋಗಿ) ಸರಳ, ಆದರೆ ಜವಾಬ್ದಾರಿಯುಳ್ಳ ಯುವಕ. ಕ್ಯಾಬ್ ಬ್ಯುಸಿನೆಸ್ ಮಾಡುತ್ತಿದ್ದಾನೆ. ಆದರೆ ಆತನಿಗೆ ತಂದೆಯೊಂದಿಗೆ ಸಣ್ಣ ತಿಕ್ಕಾಟವೂ ಇದೆ. ಚೆನ್ನನ ತಂದೆ ಸ್ಮಗ್ಲರ್ ಒಬ್ಬನ ಬಳಿ ಕೆಲಸ ಮಾಡುವುದು ಚೆನ್ನನಿಗೆ ಇಷ್ಟವಿಲ್ಲ. ಇದರ ನಡುವೆ ಚಿನ್ನನ ಪ್ರೇಮಕಥೆ. ಒಂದು ಕಪ್ಪು ಬ್ಯಾಗ್​.ಒಂದು ಕಾರ್​​. ಒಂದಕ್ಕೊಂದು ಲಿಂಕ್ ಹೀಗೆ ಇಡೀ ಚಿತ್ರ ಸಾಗುತ್ತದೆ.

ಇದನ್ನು ಓದಿ: ಹೋಗಪ್ಪ ಬೇಜಾರು.. ಫೆಬ್ರವರಿಯಲ್ಲೂ ಸ್ಟಾರ್​ ಸಿನಿಮಾ ಇಲ್ಲ, ವಿಕ್ರಾಂತ್​ ರೋಣ ರಿಲೀಸ್ ಡೇಟ್​ ಪೋಸ್ಟ್​ಪೋನ್​!

ಯೋಗಿ ಪರ್ಫಾಮೆನ್ಸ್​ ಹೇಗಿದೆ?

ಯೋಗಿಯ ಮಾಸ್ ಇಮೇಜಿಗೆ ಮೋಸ ಆಗದಂತೆ ದಯಾಳ್​ ತೋರಿಸಿದ್ದಾರೆ. ಇದ್ದಕ್ಕಂತಲೇ ಸಿನಿಮಾ ಮೂಲ ಕಥೆಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿದ್ದಾರೆ. ಎರಡು ದೃಶ್ಯಗಳ ಯೋಗಿ ಫ್ಯಾನ್ಸ್​ಗಳಿಗೋಸ್ಕರ ಹೇಳಿ ಮಾಡಿಸಲಾಗಿದೆ.  ಸಿನಿಮಾದ ಹಿನ್ನೆಲೆ ಸಂಗೀತ ಈ ಹಿಂದೆ ಯಾವುದೋ ಸಿನಿಮಾದಲ್ಲಿ ಕೇಳಿದ ಭಾಸವಾಗುತ್ತದೆ.  ಕೆಲವೇ ದಿನಗಳಲ್ಲಿ ನಡೆವ ಕತೆಯಾಗಿರುವ ಕಾರಣ ಹಾಡುಗಳಿಗೆ ಹೆಚ್ಚಿನ ಸ್ಪೇಸ್‌ ಕತೆಯಲ್ಲಿಲ್ಲ. ಒಂಬತ್ತನೇ ದಿಕ್ಕು ಅನೇಕ ಕಾರಣಗಳಿಗೆ ವಿಶೇಷ ಅನ್ನಿಸುತ್ತದೆ. ನಟನೆಯ ವಿಚಾರದಲ್ಲಿ ಇಲ್ಲಿರುವ ಎಲ್ಲರೂ ದೈತ್ಯರೇ. ನಾಯಕನಟ ಲೂಸ್‌ ಮಾದ ಯೋಗಿ ಹೇಳಿ ಕೇಳಿ ಸಹಜ ನಟ. ನಾಯಕಿ ನಾಯಕಿ ಅದಿತಿ ಪ್ರಭುದೇವಾ ತನ್ನ ಅದ್ಭುತ ನಟನೆಯಿಂದಲೇ ಫೇಮಸ್ಸಾಗಿರುವವರು. ಇಲ್ಲಿ ಕೂಡಾ ಒಬ್ಬರಿಗೊಬ್ಬರು ಪ್ರತಿಸ್ಪರ್ಧೆ ನೀಡುವಂತೆ ಅಭಿನಯಿಸಿದ್ದಾರೆ.

ಇದನ್ನು ಓದಿ: ಎಣ್ಣೆ ಏಟಲ್ಲಿ ಕಿರಿಕ್​ ಮಾಡಿದ್ರಾ ನಟ ರಕ್ಷಿತ್​? ಖಾಕಿಗೂ ಆವಾಜ್​ ಹಾಕಿದ್ರಂತೆ ಗಟ್ಟಿಮೇಳ ಸೀರಿಯಲ್​ ಟೀಂ

ದಯಾಳ್​ ನಿರ್ದೇಶನವೇ ಹೈಲೆಟ್​!

ಒಟ್ಟಾರೆಯಾಗಿ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಕನ್ನಡಕ್ಕೆ ಅಚ್ಚುಕಟ್ಟಾದ ಸಿನಿಮಾವೊಂದನ್ನು ನೀಡಿದ್ದಾರೆ. ಮೂಲ ಕತೆಯ ಆಶಯವನ್ನಷ್ಟೇ ಉಳಿಸಿಕೊಂಡು ಇಲ್ಲಿಗೆ ಬೇಕಿರುವ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಕೊರೋನಾ ಹೆಚ್ಚಿದ್ದರು ಸಿನಿಮಾ ರಿಲೀಸ್​ ಮಾಡಿ ಬೇರೆಯವರಿಗೆ ಹುಮ್ಮಸ್ಸು ನೋಡಿದ್ದಾರೆ.
Published by:Vasudeva M
First published: