Yogi: 10 ನಿಮಿಷ ಕತೆ ಕೇಳಿ ಸಿನಿಮಾಗೆ ಓಕೆ ಎಂದ ಲೂಸ್​ ಮಾದ ಯೋಗಿ: ರಿಲೀಸ್​ ಆಯ್ತು ಟೈಟಲ್​ ಪೋಸ್ಟರ್​..!

Yogesh Starrer Akatakata Movie Title Poster: ಯೋಗಿ ಈಗ ಸಿನಿಮಾಗಳ ಆಯ್ಕೆ ಕುರಿತಾಗಿ ಸಖತ್ ಚೂಸಿಯಾಗಿದ್ದಾರೆ. ಸಿಕ್ಕ ಸಿಕ್ಕ ಚಿತ್ರಗಳಿಗೆ ಓಕೆ ಮಾಡುತ್ತಿಲ್ಲ. ಕತೆಯನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. ಇತ್ತೀಚೆಗಷ್ಟೆ ನಟ ಯೋಗೇಶ್​  ವಿಭಿನ್ನ ಕತೆಯ ಸಿನಿಮಾ ಒಂದಕ್ಕೆ ಓಕೆ ಮಾಡಿದ್ದು, ನಿನ್ನೆ ಅವರ ಹುಟ್ಟುಹಬ್ಬದಂದು ಅವರ ಟೈಟಲ್​ ಪೋಸ್ಟರ್ ರಿಲೀಸ್ ಆಗಿದೆ.  

Anitha E | news18-kannada
Updated:July 7, 2020, 9:22 AM IST
Yogi: 10 ನಿಮಿಷ ಕತೆ ಕೇಳಿ ಸಿನಿಮಾಗೆ ಓಕೆ ಎಂದ ಲೂಸ್​ ಮಾದ ಯೋಗಿ: ರಿಲೀಸ್​ ಆಯ್ತು ಟೈಟಲ್​ ಪೋಸ್ಟರ್​..!
ನಟ ಯೋಗಿ ಹಾಗೂ ನಿರ್ದೇಶಕ ನಾಗರಾಜ್ ಸೋಮಯಾಜಿ
  • Share this:
ದುನಿಯಾ ಸಿನಿಮಾದಲ್ಲಿ ಲೂಸ್​ ಮಾದ ಎಂಬ ಪಾತ್ರದ ಮೂಲಕವೇ ಪರಿಚಿತರಾದ ನಟ ಯೋಗೇಶ್​ ಈಗ ಲೂಸ್ ಮಾದ ಯೋಗಿ ಎಂದೇ ಬ್ರ್ಯಾಂಡ್​ ಆಗಿ ಹೋಗಿದ್ದಾರೆ. ವೃತ್ತಿ ಜೀವನದಲ್ಲಿ ಏರಿಳಿತಗಳನ್ನು ಕಂಡ ಯೋಗೇಶ್​ ಅವರಿಗೆ ಯಶಸ್ಸಿನಂತೆಯೇ ಸಾಲು ಸಾಲು ಸೋಲುಗಳು ಸಹ ಎದುರಾಗಿದ್ದವು. 

ಸಾಲು ಸಾಲು ಸೋಲನ್ನು ಕಂಡ ಯೋಗಿ ಕೆಲ ಸಮಯ ಬೆಳ್ಳಿತೆರೆಯಿಂದ ದೂರ ಇದ್ದರು. ಆಗಲೇ ಅವರು ಕಿರುತೆರೆಗೆ ಕಾರ್ಯಕ್ರಮದ ನಿರೂಪಕರಾಗಿ ಕಾಲಿಟ್ಟಿದ್ದು. ಆದರೆ ಅದಾದ ಕೆಲ ಸಮಯದ ನಂತರ ಕೊರೋನದಿಂದಾಗಿ ಲಾಕ್​ಡೌನ್​ ಆಯಿತು. ಆದರೆ ಈಗ ಯೋಗಿ  ಕೈತುಂಬ ಸಿನಿಮಾಗಳಿವೆ.

Here are the latest and cute photos of Sandalwood actor lose mada Yogi
ನಟ ಯೋಗೇಶ್​ ಅವರ ಕುಟುಂಬ


ಯೋಗಿ ಈಗ ಸಿನಿಮಾಗಳ ಆಯ್ಕೆ ಕುರಿತಾಗಿ ಸಖತ್ ಚೂಸಿಯಾಗಿದ್ದಾರೆ. ಸಿಕ್ಕ ಸಿಕ್ಕ ಚಿತ್ರಗಳಿಗೆ ಓಕೆ ಮಾಡುತ್ತಿಲ್ಲ. ಕತೆಯನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. ಇತ್ತೀಚೆಗಷ್ಟೆ ನಟ ಯೋಗೇಶ್​  ವಿಭಿನ್ನ ಕತೆಯ ಸಿನಿಮಾ ಒಂದಕ್ಕೆ ಓಕೆ ಮಾಡಿದ್ದು, ನಿನ್ನೆ ಅವರ ಹುಟ್ಟುಹಬ್ಬದಂದು ಅವರ ಟೈಟಲ್​ ಪೋಸ್ಟರ್ ರಿಲೀಸ್ ಆಗಿದೆ.

Loose Mada Yogi starrer new movie akatakata poster has been released on his birthday
ಅಕಟಕಟ ಸಿನಿಮಾದಲ್ಲಿ ನಟ ಯೋಗೇಶ್​


ನಾಗರಾಜ್​ ಸೋಮಯಾಜಿ ಅವರ ನಿರ್ದೇಶನದ ಮೊದಲ ಕಮರ್ಷಿಯಲ್​ ಚಿತ್ರ ಅಕಟಕಟ. ಈ ಹಿಂದೆ ದ ಬೆಸ್ಟ್ ಆ್ಯಕ್ಟರ್ ಕಿರುಚಿತ್ರವನ್ನು ನಿರ್ದೇಶಿಸಿರುವ ನಾಜರಾಜ್​, ಪುಕ್ಸಟ್ಟೆ ಲೈಫು  ಸಿನಿಮಾವನ್ನು ನಿರ್ಮಿಸಿದ್ದಾರೆ. ಆದರೆ ಇದು ರಿಲೀಸ್​ ಆಗಬೇಕಿದೆ. ಇದರರಲ್ಲಿ ಸಂಚಾರಿ ವಿಜಯ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕತೆ ಕೇಳಿದ 10 ನಿಮಿಷಕ್ಕೆ ಕಾಲ್​ ಶೀಟ್​ ಕೊಟ್ಟ ಯೋಗಿಅಕಟಕಟ ಸಿನಿಮಾದ ಕತೆಯನ್ನು ಕೇಳಿದ 10 ನಿಮಿಷಕ್ಕೆ ಯೋಗೇಶ್​ ಕಾಲ್​ ಶೀಟ್ ಕೊಟ್ಟಿದ್ದಾರಂತೆ. ಅಕಟಕಟ ಚಿತ್ರದ ಕಥಾವಸ್ತು ಮತ್ತು ನಿರೂಪಣೆ ಅಷ್ಟು ಸಖತ್ತಾಗಿದ್ದು, ತಾಜಾನದಿಂದ ಕೂಡಿದೆಯಂತೆ.

Here are the latest and cute photos of Sandalwood actor lose mada Yogi
ಮಗಳು ಹಾಗೂ ಪತ್ನಿ ಜತೆ ಯೋಗಿ


ಅಕಟಕಟ ಯೋಗಿಯವರ ವೃತ್ತಿ ಬದುಕಿನ ವಿಭಿನ್ನ ಮತ್ತು ವೈಶಿಷ್ಟ್ಯ ಭರಿತ ಅಂಶಗಳಿಂದ ಕೂಡಿರಲಿರೋ ಅಪ್ಪಟ ಕಮರ್ಷಿಯಲ್ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಕ್​ ಕ್ಲೈಂಬಿಂಗ್​-ಸೈಕ್ಲಿಂಗ್​ ಅಂತ ಬ್ಯುಸಿ ಇರುವ ದಿಗಂತ್​-ಐಂದ್ರಿತಾ ರೇ: ಇಲ್ಲಿವೆ ವಿಡಿಯೋಗಳು..!

ಟೈಟಲ್​ ಪೋಸ್ಟರ್​ ಹಾಗೂ ಸಿನಿಮಾ ಟೈಟಲ್​ ನೋಡಿಯೇ ಹೇಳಬಹುದು ಇದೊಂದು ಸೈಕಲಾಜಿಕಲ್​ ಥ್ರಿಲ್ಲರ್​ ಆಗಿರಲಿದೆ ಎಂದು. ಆದರೆ ಸಿನಿಮಾದ ಕುರಿತಾಗಿ ಯಾವುದೇ ಸುಳಿವು ನೀಡಿಲ್ಲ ಚಿತ್ರತಂಡ. ಸೌಂಡ್ ಆಫ್ ಅಬ್ನಾರ್ಮಲ್  ಸೋಲ್ ಆ್ಯಂಡ್​ ಮೈಂಡ್ ಅನ್ನೋ ಟ್ಯಾಗ್ ಲೈನ್ ಇರೋ ಅಕಟಕಟ ಚಿತ್ರದ ಪೋಸ್ಟರ್ ಆಸಕ್ತಿಕರವಾಗಿ ಕಾಣುತ್ತಿದೆ.

ಮೆದುಳಿಗೆ ಜೋಕಾಲಿಯಾಕಿ ಜೀಕುತ್ತಿರುವಂತೆ ಕಾಣ್ತಿರೋ ಪೋಸ್ಟರೊಳಗಿನ‌ ಚಿತ್ರ ಸಿನಿಮಾದ ಬಗ್ಗೆ ನಾನ ಬಗೆಯ ಊಹೆಗಳನ್ನ ಹುಟ್ಟಿಸುವಂತಿದೆ. ಕೊರೋನ ಭೀತಿ ಕಡಿಮೆಯಾಗಿ ಚಲನಚಿತ್ರ ಚಟುವಟಿಕೆಗಳು ಆರಂಭವಾದ  ನಂತರ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

Rakul Preet Singh: ರಾಕುಲ್​ ಪ್ರೀತ್​ ಸಿಂಗ್ ಕ್ಲಾಸಿ ಲುಕ್​ಗೆ ಅಭಿಮಾನಿಗಳು ಫಿದಾ..!



 

ಇದನ್ನೂ ಓದಿ: ದರ್ಶನ್​ ಚಿನ್ನದಂತ ಮನಸ್ಸಿರುವ ಮನುಷ್ಯ ಎಂದ ಪ್ರಣೀತಾ ಸುಭಾಷ್​..!
Published by: Anitha E
First published: July 7, 2020, 9:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading